For Quick Alerts
ALLOW NOTIFICATIONS  
For Daily Alerts

9-8-2019: ಶುಕ್ರವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯ�
|

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ.

horoscope

ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ನಾಳೆ ಯಾವೆಲ್ಲಾ ಘಟನೆಗಳು ನಡೆಯಬಹುದು?

ಮೇಷ (9 august 2019)

ಮೇಷ (9 august 2019)

ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತನ್ನು ನೆನಪಿಡಿ. ಹೊಸ ಪರಿಸರ ಅಥವಾ ಹೊಸ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯಿರಿ. ಬದಲಾವಣೆಗೆ ಅವಕಾಶ ಇರಲಿ. ಇದರಿಂದ ಮಹತ್ತರವಾದುದನ್ನು ಸಾಧಿಸಬಹುದು. ವ್ಯಾಜ್ಯಗಳು ಇದ್ದರೂ ಗೊಂದಲಕ್ಕೆ ಅವಕಾಶ ಬೇಡ. ಸ್ನೇಹಿತರ ಸೂಕ್ತವಾದ ಸಹಾಯದಿಂದ ಒತ್ತಡಗಳಿಗೆ ವಿರಾಮ ಹಾಕುವಿರಿ. ಮಕ್ಕಳ ಪ್ರಗತಿಯು ಮತ್ತು ಮೊಮ್ಮಕ್ಕಳ ತುಂಟತನವು ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುವುದು.9845743807 ಅದೃಷ್ಟ ಸಂಖ್ಯೆ:5

ವೃಷಭ

ವೃಷಭ

ಕೆಲಸದ ಸ್ಥಳದಲ್ಲಿ ಬಾಸ್‌ ಅನವಶ್ಯಕ ಕಿರಿಕಿರಿ ಎಬ್ಬಿಸಿದರೂ ರೇಗಾಟ ಮಾಡಬೇಡಿ. ಮೈಕೊಡವಿ ಬಾಸ್‌ ಮೆಚ್ಚುವಂತೆ ಕೆಲಸ ಮಾಡಿ. ಅದರಿಂದ ಪ್ರಶಂಸೆ ಪಡೆಯುವಿರಿ. ಅನ್ಯರೊಡನೆ ವಾದ ವಿವಾದದಿಂದ ದೂರವಿರಿ.ನಾಗಬನದಲ್ಲಿ ನಾಗರ ಕಲ್ಲುಗಳಿಗೆ ಅಕ್ಷ ತೆ ಮತ್ತು ಗರಿಕೆ ಏರಿಸಿ ಬನ್ನಿ. ಇದರಿಂದ ಜನ್ಮಸ್ಥ ರಾಹು ನಿಮಗೆ ನೆಮ್ಮದಿಯನ್ನು ನೀಡುವ ಸಾಧ್ಯತೆ ಇದೆ ಮತ್ತು ಗುರುವಿನ ಆಶೀರ್ವಾದವು ದೊರೆಯುವ ಸಾಧ್ಯತೆ ಇರುವುದು.9845743807 ಅದೃಷ್ಟ ಸಂಖ್ಯೆ:9

ಮಿಥುನ

ಮಿಥುನ

ಮುಂದಿನ ದಿನಗಳ ಪ್ರಮುಖ ಕಾರ್ಯ ಯೋಜನೆಗಳಿಗಾಗಿನ ಪೂರ್ವಭಾವಿ ಮಾತುಕತೆಗಳಿಗೆ ಸಕಾಲವಾಗಿದೆ. ನಿಮ್ಮ ಬಳಗದ ಸ್ನೇಹಿತರು ಮತ್ತು ಸಮಾನ ಮನಸ್ಕರೊಡನೆ ಕುಳಿತು ಚರ್ಚಿಸಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ನಿರ್ಧರಿಸಿ. ನೆರೆಹೊರೆಯವರಲ್ಲಿ ಹೆಚ್ಚಿನ ಮಾತುಕತೆಯಿರಲಿ ಹಾಗೂ ಅದು ಸ್ನೇಹಪೂರ್ಣವಾಗಿರಲಿ ಮತ್ತು ಸೌಜನ್ಯ ಪೂರಕವಾಗಿರಲಿ. ಆದರೆ ಎಲ್ಲರನ್ನೂ ಪೂರ್ತಿಯಾಗಿ ನಂಬದಿರಿ. ಸಲಹೆಗಳು ನಿಮ್ಮದು ತೀರ್ಮಾನ ನನ್ನದು ಎಂಬ ಧೋರಣೆ ಇರಲಿ.9845743807 ಅದೃಷ್ಟ ಸಂಖ್ಯೆ:6

ಕಟಕ

ಕಟಕ

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ನೀಡುತ್ತಿರುವುದು ನಿಮ್ಮ ಒಳ್ಳೆಯದಕ್ಕೆ. ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿ ಹೋಗುವ ನಿಮ್ಮ ಮನಸ್ಥಿತಿಯನ್ನು ಪರಿವರ್ತಿಸಿಕೊಳ್ಳಬೇಕಾಗಿದೆ. ಹಣದ ಉಳಿತಾಯದ ಬಗ್ಗೆ ಗಮನ ಹರಿಸಿ. ಪ್ರತ್ಯೇಕ ಪ್ರಕರಣಗಳಲ್ಲಿ ಸಿಹಿ ಮತ್ತು ಕಹಿ ಸುದ್ದಿಗಳೆರಡರ ಮಿಶ್ರಣ ಲಭ್ಯವಾಗಲಿದೆ. ನೀವು ಹಮ್ಮಿಕೊಳ್ಳಬೇಕೆಂದಿರುವ ಬೃಹತ್‌ ಯೋಜನೆಗೆ ಸರ್ಕಾರ ಅನುಮೋದನೆ ನೀಡುವ ಸಿಹಿ ಸುದ್ದಿ ಒಂದೆಡೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಹಣದ ಕೊರತೆಯು ಕಹಿ ಎನಿಸುವುದು.9845743807 ಅದೃಷ್ಟ ಸಂಖ್ಯೆ:8

ಸಿಂಹ

ಸಿಂಹ

ನಿಮ್ಮದೇ ಆದ ಮನೆ ರೂಪಿಸುವ ವಿಚಾರದಲ್ಲಿ ಮಹತ್ವದ ಬೆಳವಣಿಗೆಯೊಂದು ನಿಮಗೆ ಸಹಕಾರಿಯಾಗಲಿದೆ. ಆದರೆ ಅದಕ್ಕಾಗಿ ಸಾಲ ಮಾಡಬೇಕಾಗುವುದು. ಎಷ್ಟೇ ಶ್ರೀಮಂತಿಕೆ ಇದ್ದರೂ ಮನೆ ಕಟ್ಟುವ ವಿಚಾರದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಾಲ ಮಾಡುವರು.ಕಚೇರಿಯ ಆವರಣದಲ್ಲಿ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಸಂಚು ಬಯಲಾಗುವುದು. ಇದರಿಂದ ಬೇಸತ್ತ ನೀವು ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡುವ ತೀರ್ಮಾನ ಮಾಡುವಿರಿ. ಇದಕ್ಕಿಂತ ನೀವು ಬೇರೆಡೆಗೆ ವರ್ಗಾವಣೆ ಕೇಳುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ಅನೇಕ ದೊಡ್ಡ ಯೋಜನೆಗಳನ್ನು ನಿರ್ವಹಿಸಿ ಅಗಾಧವಾದುದನ್ನು ಸಂಪಾದಿಸಲು ಕಾಲಘಟ್ಟ ಸೂಕ್ತವಾಗಿದೆ. ಆದರೂ ಕಾಣದ ಯಾವುದೋ ಒಂದು ಕೈ ತಮ್ಮ ಪ್ರಗತಿಯನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ. ಗುರು ರಾಘವೇಂದ್ರರನ್ನು ಪಾಹಿ ಪ್ರಭೋ ಎಂದು ಪ್ರಾರ್ಥಿಸಿ.ಗೆಳೆಯರ ಬಳಿ ಸ್ನೇಹದಿಂದ ಇರುವುದು ಉತ್ತಮ. ಆದರೆ ಯಾರಿಗೂ ಸಾಲ ಕೊಡುವುದು ಕೊಡಿಸುವುದು ಮಾಡದಿರಿ. ನೀವೂ ಸಾಲ ಪಡೆಯದಿರಿ. ಮನೆಯ ಲೆಕ್ಕಪತ್ರ ಅಥವಾ ಕಡತಗಳ ವಿಚಾರ ವಿವಾದಗಳಿಗೆ ಕಾರಣವಾಗುವ ಸಂದರ್ಭ ಎದುರಾಗುವುದು.9845743807 ಅದೃಷ್ಟ ಸಂಖ್ಯೆ:7

ತುಲಾ

ತುಲಾ

ಸಾಮಾಜಿಕವಾಗಿ ವಿಶೇಷವಾದುದನ್ನು ಸಾಧಿಸಿ ಪ್ರಶಂಸೆ ಗಳಿಸಲು ಗ್ರಹಗಳು ಸಹಕಾರ ನೀಡುವವು. ಅಂತೆಯೇ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ನೆರವು ವಿವಿಧ ಮೂಲಗಳಿಂದ ಹರಿದು ಬರುವುದು.ಅವಸರದ ನಿರ್ಣಯ ತೆಗೆದುಕೊಂಡು ನಂತರ ಕೈ ಕೈ ಹಿಸುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕಾರ್ಯ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ಸ್ವಯಂಕೃತ ಅಪರಾಧದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ.9845743807 ಅದೃಷ್ಟ ಸಂಖ್ಯೆ:2

ವೃಶ್ಚಿಕ

ವೃಶ್ಚಿಕ

ವಿವೇಕದ ಮಾತುಗಳನ್ನು ಆಡಿದಾಗಲೂ ಅಹಂಕಾರ ತೋರುವ ಜನರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ. ಇದರಿಂದ ನಿಮ್ಮ ಕಾರ್ಯ ಸಾಧುವಾಗುವುದು. ಹಣಕಾಸಿನ ಸ್ಥಿತಿ ಸದ್ಯಕ್ಕೆ ಉತ್ತಮವಾಗಿರುವುದಿಲ್ಲ.ನಿಮ್ಮ ನಿರೀಕ್ಷೆಯನ್ನು ಮೀರಿ ಹೆಚ್ಚಿನ ಲಾಭ ಬರುವ ಉತ್ತಮ ಅವಕಾಶ ನಿಮಗೆ ದೊರೆಯಲಿದೆ. ಇದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ತಿಳಿಗೊಳ್ಳುವವು. ಗುರು ರಾಘವೇಂದ್ರ ಸ್ವಾಮಿಯ ಅಶೀರ್ವಾದ ಪಡೆಯಿರಿ ಮತ್ತು ಗುರು ಕಾಣಿಕೆ ಸಲ್ಲಿಸಿ.9845743807 ಅದೃಷ್ಟ ಸಂಖ್ಯೆ:1

ಧನುಸ್ಸು

ಧನುಸ್ಸು

ವಿನಾಕಾರಣ ನಿಮ್ಮ ಅಮೂಲ್ಯ ಸಮಯವನ್ನು ಹಾಳುಗೆಡಹುವ ಜನರು ನಿಮಗೆ ತಲೆನೋವು ತರುವ ಸಾಧ್ಯತೆ ಇದೆ. ಅವರನ್ನು ಜಾಣ್ಮೆಯಿಂದ ಸಾಗ ಹಾಕಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಆದರಗಳು ದೊರೆಯುವವು.ಪ್ರವಾಸದ ಸಂದರ್ಭದಲ್ಲಿ ನಡೆಸಿದ ಮಾತುಕತೆಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ನಿರ್ಲಕ್ಷಿಸಿ ಮತ್ತು ಅವರನ್ನು ದೂರ ಇಡಿ. ಬಹುದಿನದ ಬಯಕೆ ಈಡೇರುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ನೀಡಿ.9845743807 ಅದೃಷ್ಟ ಸಂಖ್ಯೆ:4

ಮಕರ

ಮಕರ

ವಾಯುಪ್ರಕೋಪ, ಇಲ್ಲವೆ ಮಿತಿ ಮೀರಿದ ಅಲರ್ಜಿ ತೊಂದರೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಇವೆ. ಆದಷ್ಟು ಊಟ ಉಪಚಾರಗಳಲ್ಲಿ ನಿಯಮ ಕಾಪಾಡಿಕೊಳ್ಳಿ.ಮಾತನಾಡುವುದು ಅನಿವಾರ್ಯ ಆದಾಗಲೂ ಮೌನದಿಂದ ಇರಲು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಸಾಕಷ್ಟು ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಕಡಿಮೆ ಆಗುವವು. ಪ್ರಯಾಣ ಕಾಲದಲ್ಲಿ ಎಚ್ಚರ ಇರಲಿ. ಸಾಧ್ಯವಾದಲ್ಲಿ 18 ಉದ್ದಿನಕಾಳನ್ನು ಜೇಬಿನಲ್ಲಿಟ್ಟುಕೊಳ್ಳಿ.9845743807 ಅದೃಷ್ಟ ಸಂಖ್ಯೆ:5

ಕುಂಭ

ಕುಂಭ

ಅನ್ಯರ ಮಾತು ಕೇಳಿ ನಿಮಗೆ ತೊಂದರೆ ಕೊಡುತ್ತಿರುವ ಮೇಲಧಿಕಾರಿಗೆ ತಪ್ಪಿನ ಅರಿವಾಗಲಿದೆ. ಈ ಬಗ್ಗೆ ಅವರು ನಿಮ್ಮ ಬಳಿ ಕ್ಷ ಮೆಯಾಚಿಸುವ ಸಾಧ್ಯತೆ ಇದೆ. ಹಾಗಂತ ನೀವು ಅಹಂಕಾರ ಪಡುವುದು ಸೂಕ್ತವಲ್ಲ. ಆಂಜನೇಯ ಸ್ವಾಮಿ ಮಂತ್ರ ಜಪಿಸಿ.ದೂರದ ಬೆಟ್ಟ ನುಣ್ಣಗೆ ಎಂಬುದು ತಿಳಿದಿದ್ದರೂ ಪುನಃ ಪುನಃ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಸೋಲನ್ನು ಅನುಭವಿಸುವಿರಿ. ಸದ್ಯದ ಪರಿಸ್ಥಿತಿಯಲ್ಲಿ ಈಗಿರುವ ಕೆಲಸವನ್ನೇ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:2

ಮೀನ

ಮೀನ

ನಿಮ್ಮ ಬುದ್ಧಿಮತ್ತೆ ಎಲ್ಲೆಡೆ ಚರ್ಚೆಗೆ ಒಳಪಡುವುದು ಮತ್ತು ಈ ವರ್ಚಸ್ಸಿನ ವಿಷಯದಲ್ಲಿ ಹಲವು ರೀತಿಯ ಸದವಕಾಶಗಳು ನಿಮಗೆ ಬರಲಿದ್ದು ನೀವು ಇನ್ನೂ ಎತ್ತರಕ್ಕೆ ಏರಲು ಅನುಕೂಲವಾಗುವುದು.ಪರರ ಮಾತುಗಳನ್ನು ಕೇಳಿಸಿಕೊಂಡು ಕ್ರಮ ಕೈಗೊಳ್ಳುವ ವಿಚಾರ ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಆದಷ್ಟು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಿ. ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope 9 August 2019

Know what astrology and the planets have in store for you today. Choose your zodiac sign and read the details..
Story first published: Friday, August 9, 2019, 10:37 [IST]
X
Desktop Bottom Promotion