Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

1. ಮೇಷ ರಾಶಿ
ಈ ವಾರ ನಿಮಗೆ ಅಷ್ಟು ಒಳ್ಳೆಯದಲ್ಲ, ಆದ್ದರಿಂದ ಯಾವುದೇ ಕೆಲಸ ಕಾರ್ಯ ಮಾಡುವಾಗ ಸ್ವಲ್ಪ ಎಚ್ಚರವಹಿಸಿ. ಅಫೀಸ್‌ನಲ್ಲಿ ಹೆಚ್ಚಿನ ಕೆಲಸಗಳ ಜವಾಬ್ದಾರಿ ಹೊರಬೇಕಾಗುತ್ತದೆ. ವ್ಯಾಪಾರಿಗಳು ನೋಡಿಕೊಂಡು ವ್ಯವಹಾರ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಿಮಗೆ ಬರುವ ಲಾಭ ನಿಮ್ಮ ಸ್ಪರ್ಧಿಗಳ ಪಾಲಾಗಬಹುದು. ಆದ್ದರಿಂದ ಕೆಲಸದ ಹೆಚ್ಚು ಗಮನ ಕೊಟ್ಟು ಮಾಡಬೇಕಾಗುತ್ತದೆ. ಈ ವಾರ ಸಣ್ಣ-ಪುಟ್ಟ ಲಾಭ ಬರಬಹುದು, ಆದರೆ ಎಚ್ಚರ ತಪ್ಪಿದರೆ ನಷ್ಟವೂ ಸಂಭವಿಸಬಹುದು. ಹಣದ ವಿಷಯದಲ್ಲಿ ಏರಳಿತ ಉಂಟಾಗಬಹುದು. ಹಣ ಬರುತ್ತದೆ, ಆದರೆ ಕೈಯಲ್ಲಿ ಉಳಿಯುವುದಿಲ್ಲ. ಈ ವಾರ ಸ್ವಲ್ಪ ಹೆಚ್ಚೇ ಖರ್ಚ ಮಾಡುವಿರಿ. ವೈಯಕ್ತಿಕ ಜೀವನದಲ್ಲಿ ಶಾಂತಿ ಇರಲಿದೆ. ಜೀವನ ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಉತ್ತಮವಾಗಿರುವುದು. ಆದರೂ ನೀವು ತುಂಬಾ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ, ಇಲ್ಲದಿದ್ದರೆ ವೈವಾಹಿಕ ಬದುಕಿನಲ್ಲಿ ಏರಳಿತ ಉಂಟಾಗಬಹುದು. ನೀವು ಮಾಡಬೇಕಾದ ಮಹತ್ವ ಪೂರ್ವ ಕಾರ್ಯದ ಕಡೆಗೆ ಗಮನ ಕೊಟ್ಟರೆ ಒಳ್ಳೆಯದು. ಹೆಚ್ಚಿನ ಕೆಲಸ ಹಾಗೂ ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಆರೋಗ್ಯದ ಕಡೆ ಗಮನ ನೀಡಿ.
ಅದೃಷ್ಟ ಬಣ್ಣ : ಕ್ರೀಮ್ (ಕೆನೆ ಬಣ್ಣ)
ಅದೃಷ್ಟದ ಸಂಖ್ಯೆ: 35
ಅದೃಷ್ಟದ ದಿನ: ಶುಕ್ರವಾರ

2 ವೃಷಭ
ಈ ವಾರ ನಿಮ್ಮ ಜೀವನದಲ್ಲಿ ಒಂದು ವಿಶೇಷ ಘಟನೆ ಸಂಭವಿಸಬಹುದು. ನಿಮ್ಮ ಪ್ರೇಮವನ್ನು ಪ್ರಸ್ತಾಪ ಮಾಡಲು ಅವಕಾಶ ಸಿಗುವುದರಿಂದ ನೀವು ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಬಹುದು. ನೀವು ಈ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಲು ಬಯಸಿದರೆ ತೆಗೆದುಕೊಳ್ಳಬಹುದು. ಏಕೆಂದರೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಕೆಲಸದ ಜಾಗದಲ್ಲಿ ಕೆಲವೊಂದು ಸವಾಲುಗಳು ಎದುರಾದರೂ ಅದನ್ನು ನಿಭಾಯಿಸುತ್ತೀರಿ. ಯಾವುದೇ ಹೊಸ ವ್ಯವಹಾರ ಪ್ರಾರಂಭಿಸಲು ಯೋಚಿಸುತ್ತಿದ್ದರೆ ಈ ವಾರ ಸಕಾಲವಾಗಿದ್ದು, ನಿಮ್ಮ ತಂದೆಯ ಬೆಂಬಲ ನಿಮಗಿರುವುದು. ಕೆಲಸದ ಜಾಗದಲ್ಲಿ ನಿಮ್ಮ ಕೆಲಸದ ವೈಖರಿಯಿಂದಾಗಿ ಮೇಲಾಧಿಕಾರಿಗಳ ಮೆಚ್ಚುಗೆ ಗಳಿಸುತ್ತೀರಿ. ನಿಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ. ಈ ವಾರ ಹೆಚ್ಚಿನ ಪರಿಶ್ರಮ ಹಾಕಿ ಕೆಲಸ ಮಾಡಬೇಕಾಗುವುದು. ಹಣಕಾಸಿನ ಬಗ್ಗೆ ಹೇಳುವುದಾದರೆ ಈ ವಾರ ಆರಂಭದ ದಿನಗಳು ಉತ್ತಮವಾಗಿದ್ದು ನಂತರ ಸ್ವಲ್ಪ ಖರ್ಚು ಹೆಚ್ಚಾಗಬಹುದು. ವಾರಾಂತ್ಯದಲ್ಲಿ ಸ್ವಲ್ಪ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ನಿಮ್ಮ ಸಂಗಾತಿ ಜತೆಗಿದ್ದ ಮನಸ್ತಾಪ ಈ ವಾರ ಅಂತ್ಯವಾಗಲಿದೆ. ಆರೋಗ್ಯದ ದೃಷ್ಟಿಯಿಂದ, ವಾರದ ಕೊನೆಯಲ್ಲಿ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳುವಸಾಧ್ಯತೆ ಇದೆ.
ಅದೃಷ್ಟ ಬಣ್ಣ : ಬಿಳಿ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ದಿನ: ಗುರುವಾರ

3 ಮಿಥುನ
ಕೆಲಸ ಕಾರ್ಯದಲ್ಲಿ ತೊಡಗಲು ಈ ವಾರ ಉತ್ತಮವಾಗಿದೆ. ಈ ವಾರ ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಮತ್ತಷ್ಟು ಸುಧಾರಿಸಲಿದೆ. ಕೆಲಸದ ಕಡೆ ಹೆಚ್ಚಿನ ಏಕಾಗ್ರತೆ ನೀಡಿದರೆ ಉತ್ತಮ ಫಲ ಸಿಗುತ್ತದೆ. ವ್ಯಾಪಾರಿಗಳಿಗೆ ಈ ವಾರ ಲಾಭ ದೊರೆಯಲಿದೆ. ಮೊದಲಿಗೆ ವ್ಯಾಪಾರ ಸ್ವಲ್ಪ ನಿಧಾನ ಗತಿಯಲ್ಲಿ ಸಾಗಿದರೂ ವಾರದ ಕೊನೆಯಲ್ಲಿ ಲಾಭ ಗಳಿಸುವಿರಿ. ಜೀವನದಲ್ಲಿ ಖುಷಿ ಹಾಗೂ ಶಾಂತಿ ಇರುತ್ತದೆ. ಕಷ್ಟದ ಸಮಯದಲ್ಲಿ ಕುಟುಂಬದ ಸಹಾಯ ನಿಮಗೆ ದೊರೆಯುತ್ತದೆ, ನೀವು ತೆಗೆದುಕೊಳ್ಳುವ ಮಹತ್ವವಾದ ನಿರ್ಣಯಗಳನ್ನುಅವರು ಬೆಂಬಲಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಕಲಹ ಬರಬಹುದು. ನಿಮ್ಮ ಸಮಸ್ಯೆಯಲ್ಲಿ ಮೂರನೇಯ ವ್ಯಕ್ತಿ ಮೂಗು ತೂರಿಸಲು ಅವಕಾಶಕೊಡಬೇಡಿ. ಮನೆಯ ವಿಷಯವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಪರಸ್ಪರ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು. ನೀವು ಹಠ, ಕೋಪ ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆಯದೇ ಆಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ನೀವು ಮಾಡಬೇಕಾದ ಕೆಲಸಗಳನ್ನು ಮಾಡಿ ಮುಗಿಸಲು ಹಣದ ತೊಂದರೆ ಉಂಟಾಗುವುದಿಲ್ಲ. ನಿಮ್ಮ ಮಾನಸಿಕ ಸ್ಥಿತಿ ಹಾಗೂ ಆರೋಗ್ಯ ಉತ್ತಮವಾಗಿದ್ದು, ಸಕಾರಾತ್ಮಕವಾದ ಶಕ್ತಿಯಿಂದ ಸುತ್ತುವರೆದಿರುವುದರಿಂದ ಈ ವಾರನಿಮಗೆ ಶುಭವಾರವಾಗಿದೆ.
ಅದೃಷ್ಟ ಬಣ್ಣ : ನೀಲಿ
ಅದೃಷ್ಟದ ಸಂಖ್ಯೆ: 28
ಅದೃಷ್ಟದ ದಿನ: ಸೋಮವಾರ

4 ಕರ್ಕ
ಈ ವಾರ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗುವಿರಿ ಹಾಗೂ ನಿಮ್ಮ ಕಾರ್ಯಗಳಿಗೆ ಪ್ರಶಂಸೆ, ಸನ್ಮಾನ ದೊರೆಯುವುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುವುದು. ನಿಮ್ಮ ಮಾನಸಿಕವಾಗಿಯೂ ಯಾವುದೇ ಸಂಕಟ ಎದುರಾಗುವುದಿಲ್ಲ. ನಿಮಗೆ ಲಾಭ ದೊರೆಯಲು ಒಳ್ಳೆಯ ಅವಕಾಶ ಕೂಡಿ ಬರಲಿದೆ. ನಿಮ್ಮ ವ್ಯಾಪಾರವನ್ನು ವೃದ್ಧಿಸಲು ತಕ್ಕ ಸಮಯವಾಗಿದೆ. ಆರಂಭದಲ್ಲಿ ನೀವು ಬಯಸಿದ ಫಲ ಸಿಗದೇ ಹೋಗಬಹುದು, ಆದರೆ ನೀವು ನಿರಾಸೆ ಪಡೆಯುವ ಅಗ್ಯತವಿಲ್ಲ. ಮೆಲ್ಲ-ಮೆಲ್ಲನೆ ಪರಿಸ್ಥಿತಿ ಸುಧಾರಿಸಿ ಬಯಸಿದ ಫಲ ಸಿಗುವುದು. ನೌಕರಿ ಮಾಡುತ್ತಿರುವವರಿಗೂ ಈ ವಾರ ಉತ್ತಮವಾಗಿದ್ದು, ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ. ಕೌಟಂಬಿಕ ಜೀವನದಲ್ಲಿ ಸ್ವಲ್ಪ ಜಾಗೂರೂಕತೆ ವಹಿಸುವುದು ಒಳ್ಳೆಯದು. ಮನೆಯ ಶಾಂತಿಗೆ ಭಂಗ ಉಂಟಾಗದಂತೆ ತಾಳ್ಮೆಯಿಂದ ವರ್ತಿಸಿ. ಹಣದ ದೃಷ್ಟಿಯಿಂದ ಈ ವಾರ ಉತ್ತಮವಾಗಿದ್ದು, ಭೂಮಿಯನ್ನು ಕೊಳ್ಳಲು ಅಥವಾ ಮಾರಾಟ ಮಾಡಲು ಪ್ರಯತ್ನಸಿದರೆ ಯಶಸ್ವಿಯಾಗುವುದು.
ಅದೃಷ್ಟ ಬಣ್ಣ : ಕಿತ್ತಳೆ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿನ: ಭಾನುವಾರ

5 ಸಿಂಹರಾಶಿ
ಆರ್ಥಿಕ ದೃಷ್ಟಿಯಲ್ಲಿ ಈ ವಾರ ಲಾಭದಾಯಕವಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಈ ವಾರ ಹಳೆಯ ಸಾಲವನ್ನು ತೀರಿಸುವಿರಿ. ವ್ಯಾಪಾರ ಅಥವಾ ಹೂಡಿಕೆಯಲ್ಲಿ ಲಾಭಗಳಿಸುವಿರಿ. ಈ ವಾರ ನಿಮ್ಮ ಆರೋಗ್ಯದ ಕಡೆಗೆ ಕಾಳಜಿ ನೀಡಿ. ದೀರ್ಘಕಾಲದಿಂದ ಕಾಡುತ್ತಿದ್ದ ಸೊಂಟ ನೋವಿನ ಸಮಸ್ಯೆ ಅಧಿಕವಾಗಬಹುದು, ವ್ಯಾಯಾಮ ಮಾಡಿ. ನಿದ್ದೆ ಕಡಿಮೆ ಮಾಡಬೇಡಿ, ನಿದ್ದೆ ಕಡಿಮೆಯಾದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕುಟುಂಬ ಜೀವನ ಸುಖಕರವಾಗಿರಲಿದೆ. ಮನೆಯ ಹಿರಿಯರ ಪ್ರೀತಿ, ಕಿರಿಯರ ಗೌರವ ಪಡೆಯುತ್ತಿರಿ. ಹಿರಿಯರ ಅಶೀರ್ವಾದದಿಂದ ನಿಮ್ಮ ಕಾರ್ಯದಲ್ಲಿ ಫಲ ಸಿಗುತ್ತದೆ, ಅವರ ಮಾರ್ಗದರ್ಶನ ಪಡೆಯುವುದರಿಂದ ಒಳಿತಾಗುವುದು. ಕಚೇರಿ ನೌಕರರಾಗಿದ್ದರೆ ಹೆಚ್ಚಿನ ಪರಿಶ್ರಮದಿಮದ ಕೆಲಸ ಮಾಡಿ, ಬಾಸ್ ಜತೆಗೆ ತರ್ಕ ಮಾಡಲು ಹೋಗದಿರಿ, ಸಮಧಾನದಿಂದ ವರ್ತಿಸಿ.
ಅದೃಷ್ಟ ಬಣ್ಣ : ಕೆಂಪು
ಅದೃಷ್ಟದ ಸಂಖ್ಯೆ: 39
ಅದೃಷ್ಟದ ದಿನ: ಬುಧವಾರ

6 ಕನ್ಯಾ
ವೈಯಕ್ತಿಕ ಜೀವನದಲ್ಲಿ ಈ ವಾರ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆ ಹೆಚ್ಚಾಗಬಹುದು, ಇದು ನಿಮ್ಮಿಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಬಹುದು. ನಿಮ್ಮಿಬ್ಬರ ಈ ವಿವಾದವು ಮನೆಯ ಶಾಂತಿಗೆ ಭಂಗ ತರುತ್ತದೆ, ಆದ್ದರಿಂದ ವಿಷಯವನ್ನು ಸಾಧ್ಯವಾದಷ್ಟು ನಿರ್ವಹಿಸಲು ಪ್ರಯತ್ನಿಸಿ. ನೀವು ಯೋಚಿಸಿ ಮಾತನಾಡಬೇಕು, ಇಲ್ಲದಿದ್ದರೆ ಕಲಹ ಹೆಚ್ಚಾಗುವುದು. ಇದರಿಂದ ಅಸಮಧಾನ ಉಂಟಾಗಿ ಯಾವುದೇ ಕೆಲಸದಲ್ಲಿ ಗಮನ ಕೊಡಲು ಸಾಧವಾಗುವುದಿಲ್ಲ. ಇನ್ನು ಪ್ರಣಯಿಗಳಿಗೆ ಈ ವಾರ ಅಷ್ಟೊಂದು ಸುಖಕರವಾಗಿಲ್ಲ, ಭೇಟಿಯಾಗಲು ಅವಕಾಶಗಳು ಕಡಿಮೆ ಇವೆ, ಇಬ್ಬರ ನಡುವೆ ಕಲಹ ಉಂಟಾಗುವ ಸಾಧ್ಯತೆ ಇರುವುದರಿಂದ ಸಮಧಾನದಿಂದ ವರ್ತಿಸಿ. ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ಅನೇಕ ದೂರುಗಳಿರುತ್ತದೆ, ನೀವು ಅವರನ್ನು ಮನವೊಲಿಸಿದರೆ ಎಲ್ಲವೂ ಸರಿಯಾದೀತು. ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ಅವಕಾಶವಿದೆ, ಆದರೆ ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ. ತೊಡಗಿರುವ ಕ್ಷೇತ್ರದಲ್ಲಿ ಫಲ ಸಿಗಲು ಹೆಚ್ಚು ಶ್ರಮ ಪಡಬೇಕು. ಮಾನಸಿಕ ಒತ್ತಡದಿಂದಾಗಿ ಗುರಿ ತಲುಪಲು ಕಷ್ಟವಾಗಬಹುದು. ಆದ್ದರಿಂದ ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೆಚ್ಚಿನ ಪರಿಶ್ರಮ ಹಾಕಿ.
ಅದೃಷ್ಟ ಬಣ್ಣ : ಹಳದಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿನ: ಶನಿವಾರ

7 ತುಲಾ
ಈ ವಾರ ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರಿ. ಕೆಲವು ತೊಡಕುಗಳು ಎದುರಾದರೂ ಸಮಸ್ಯೆಗಳು ಬಗೆಹರಿಸಲು ನಿಮ್ಮಿಂದ ಸಾಧ್ಯವಾಗುತ್ತದೆ. ನಿಮ್ಮ ಕೆಲಸ ಸಾಮರ್ಥ್ಯ ನೋಡಿ ಹಿಡಿಯರು ಕೂಡ ಪ್ರಭಾವಿತರಾಗುತ್ತಾರೆ, ಕಿರಿಯರು ನಿಮ್ಮನ್ನು ಹೊಗಳುತ್ತಾರೆ. ಈ ವಾರ ನಿಮ್ಮ ಕೆಲಸದಲ್ಲಿ ಕೆಲವು ಬದಲಾವಣೆಗಳಾಗಬಹುದು, ನೀವು ಅವುಗಳನ್ನು ಮುಕ್ತ ಹೃದಯದಿಂದ ಸ್ವೀಕರಿಸುತ್ತೀರಿ. ನಿಮ್ಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ನೀವು ಬ್ಯಾಂಕಿನಿಂದ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದರೆ, ಈ ವಾರ ನೀವು ಸಕಾರಾತ್ಮಕ ಉತ್ತರವನ್ನು ಪಡೆಯಬಹುದು. ಪ್ರಾರಂಭದಲ್ಲಿ ತೊಡಕು ಬಂದರೂ ನಂತರ ಫಲ ಸಿಗುವುದು. ಈ ವಾರ ಪ್ರಣಯ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ. ನಿಮ್ಮ ಆಯ್ಕೆ ಕುರಿತು ಪೋಷಕರಿಗೆ ಇಷ್ಟವಾಗುವುದಿಲ್ಲ, ಇದರಿಂದ ನಿಮಗೆ ನಿರಾಸೆಯಾಗಬಹುದು. ನಿಮ್ಮ ಪೋಷಕರ ಆಲೋಚನೆ, ನಿರ್ಧಾರ ಬದಲಾಗಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಈ ವಾರ ಸ್ವಲ್ಪ ಹಣಕಾಸಿನ ತೊಂದರೆ ಉಂಟಾಗಬಹುದು, ಲಾಭ ಬಂದರೂ ನಿಮ್ಮ ಕೈ ಸೇರಲು ವಿಳಂಬವಾಗಬಹುದು, ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ, ಆರೋಗ್ಯದ ಕಡೆ ಗಮನ ಕೊಡಿ.
ಅದೃಷ್ಟ ಬಣ್ಣ : ನೀಲಿ ಬಣ್ಣ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿನ: ಮಂಗಳವಾರ

8 ವೃಶ್ಚಿಕ
ಈ ವಾರ ನಿಮಗೆ ತುಂಬಾ ಒಳ್ಳೆಯದು. ನಿರುದ್ಯೋಗಿಗಳಿಗೆ ಜಾಬ್ ಆಫರ್ ಬರುವ ಸಾಧ್ಯತೆ ಇದೆ. ಕೆಲಸದ ನಿಮಿತ್ತ ಬೇರೆ ನಗರಕ್ಕೆ ಹೋಗಬೇಕಾಗಿ ಬರುವುದು, ಇದಕ್ಕಾಗಿ ನೀವು ಮಾನಸಿಕವಾಗಿ ಸಿದ್ಧರಾಗಿರಿ. ಇದರ ಜತೆಗೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು, ಅವುಗಳನ್ನು ಧೈರ್ಯದಿಂದ ಎದುರಿಸಿ. ಮಾನಸಿಕವಾಗಿ ಸ್ವಲ್ಪ ಅಧಿಕ ಒತ್ತಡ ಅನುಭವಿಸುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ, ಇಲ್ಲದಿದ್ದರೆ ನಿಮ್ಮ ಯೋಜನೆಗಳಿಗೆ ತೊಡಕು ಉಂಟಾಗುವುದು. ಹಣದ ದೃಷ್ಟಿಯಿಂದ ಈ ವಾರ ನಿಮಗೆ ಒಳ್ಳೆಯದು. ನೀವು ಇತ್ತೀಚೆಗೆ ದೊಡ್ಡ ಹೂಡಿಕೆ ಮಾಡಿದ್ದರೆ, ಈ ಅವಧಿಯಲ್ಲಿ ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬ ಜೀವನ ಸುಖಕರವಾಗಿರಲಿದೆ, ಜೀವನ ಸಂಗಾತಿಯೊಂದಿಗೆ ಬಾಂಧವ್ಯ ಉತ್ತಮವಾಗಿರಲಿದೆ.
ಅದೃಷ್ಟ ಬಣ್ಣ : ನೀಲಿ ಬಣ್ಣ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿನ: ಸೋಮವಾರ

9 ಧನು
ಈ ವಾರ ಕೆಲವು ವಿವಾವದಗಳು ನಿಮ್ಮನ್ನು ಸುತ್ತಿಕೊಳ್ಳಬಹುದು. ಪ್ರೀತಿಪಾತ್ರರ ಜೊತೆ ತಪ್ಪು ತಿಳುವಳಿಕೆ ಹೆಚ್ಚಾಗಬಹುದು. ನೀವು ಕೆಲಸದ ಕಡೆ ಗಮನ ನೀಡದಿದ್ದರೆ ಅನಗ್ಯತವಾಗಿ ತೊಂದರೆ ಸಿಕ್ಕಿಕೊಳ್ಳುತ್ತೀರಿ. ಇದರಿಂದಾಗಿ ಮಾಡಬೇಕಾದ ಕಾರ್ಯದ ಕಡೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಸ್ನೇಹಿತರ ಬೆಂಬಲ ನಿಮಗಿರುತ್ತದೆ. ಈ ವಾರ ಜೀವನದಲ್ಲಿ ದೊಡ್ಡ ಬದಲಾವಣೆಯೊಂದು ಕಾದಿದೆ. ನೀವು ಅವಾಹಿತರಾಗಿದ್ದರೆ ಪೋಷಕರು ನಿಮಗೆ ಒಬ್ಬ ವಿಶೇಷ ವ್ಯಕ್ತಿಯನ್ನು ಪರಿಚಯಿಸುತ್ತಾರೆ ಹಾಗಾಗಿ ನಿಮಗೆ ಜೀವನ ಸಂಗಾತಿ ಸಿಗುವ ಸಾಧ್ಯತೆ ಇದೆ. ವೈವಾಹಿಕ ಜೀವನ ಈ ವಾರ ಅಷ್ಟು ಸುಖಕರವಾಗಿರುವುದಿಲ್ಲ, ದಂಪತಿ ನಡುವೆ ಕಲಹ ಉಂಟಾಗಬಹುದು, ಮನಸ್ಸಿನಲ್ಲಿ ಅನುಮಾನಗಳು ಹುಟ್ಟಬಹುದು, ವೈವಾಹಿಕ ಸಮಸ್ಯೆಗಳನ್ನು ಸಂಗಾತಿ ಜತೆ ಮಾತನಾಡಿ ಬಗೆಹರಿಸಿಕೊಳ್ಳಬಹುದು. ಪ್ರೇಮಿಯೊಂದಿಗೆ ಪ್ರಾಮಾಣಿಕವಾಗಿರಿ, ನಿಮ್ಮ ಮನಸ್ಸಿನ ನೋವುಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದಾಗಿದೆ. ನಿಮ್ಮ ಕೆಲವೊಂದು ಪ್ರಶ್ನೆಗಳಿಗೆ ಅವರ ಬಳಿ ಉತ್ತರ ಪಡೆಯಬಹುದು. ಈ ವಾರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಕೆಲಸದ ಜಾಗದಲ್ಲಿ ಹೆಚ್ಚು ಪರಿಶ್ರಮದಿಂದ ಕೆಲಸ ಮಾಡಬೇಕಾಗುವುದು ಹಾಗೂ ನಿಮ್ಮ ಸಹದ್ಯೋಗಿಗಳ ಬಗ್ಗೆ ಅರಿತುಕೊಳ್ಳಲೂ ಸಾಧ್ಯವಾಗುತ್ತದೆ.
ಅದೃಷ್ಟ ಬಣ್ಣ : ಕಂದು
ಅದೃಷ್ಟದ ಸಂಖ್ಯೆ: 17
ಅದೃಷ್ಟದ ದಿನ: ಗುರುವಾರ

10 . ಮಕರ
ಮಕರ ರಾಶಿಯವರಿಗೆ ಈ ವಾರ ಕೆಲಸದ ಒತ್ತಡ ಅಧಿಕವಿರುತ್ತದೆ, ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಲು ಹೆಚ್ಚಿ ಶ್ರಮ ಹಾಕಿ ಮಾಡಬೇಕಾಗುತ್ತದೆ. ಕೆಲಸದ ಒತ್ತಡದಿಂದಾಗಿ ವೈಯಕ್ತಿಕ ಜೀವನದ ಕಡೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಕಷ್ಟಗಳು ಎದುರಾಗಬಹುದು, ನೀವು ಸಮಾಧಾನ ಚಿತ್ತದಿಂದ ವರ್ತಿಸಬೇಕಾಗುತ್ತದೆ. ನಿಮ್ಮ ಕಷ್ಟಕ್ಕೆ ಸಹದ್ಯೋಗಿಗಳು ನೆರವಾಗಲಿದ್ದಾರೆ. ಈ ವಾರ ವ್ಯಾಪಾರಿಗಳಿಗೆ ಮಿಶ್ರಫಲ. ಹೊಸ ವ್ಯವಹಾರ ಮಾಡುವುದಾದರೆ ಹಣಕಾಸಿನ ಪರಿಸ್ಥಿತಿ ನೋಡಿ ಮುಂದುವರೆಯುವುದು ಒಳ್ಳೆಯದು. ಕೌಟಂಬಿಕವಾಗಿ ಕೆಲ ಸಮಸ್ಯೆ ಎದುರಾಗಬಹುದು, ಮನೆ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಖರ್ಚು ಬರಬಹುದು. ಈ ವಾರ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿರುತ್ತೀರಿ. ಹೊಸ ವ್ಯಕ್ತಿಗಳನ್ನು ಭೇಟಿಯಾಗಿ ಸಮಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
ಅದೃಷ್ಟ ಬಣ್ಣ : ಕೆಂಪು
ಅದೃಷ್ಟದ ಸಂಖ್ಯೆ: 20
ಅದೃಷ್ಟದ ದಿನ: ಶುಕ್ರವಾರ

11ಕುಂಭ
ಅವಾಹಿತರಾಗಿದ್ದರೆ ಈ ವಾರ ನಿಮ್ಮ ಜೀವನದಲ್ಲಿ ಅಚ್ಚರಿಯ ಘಟನೆ ನಡೆಯಲಿದೆ. ನಿಮ್ಮ ಸ್ನೇಹಿತ/ಸ್ನೇಹಿತೆ ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂಬುವುದು ತಿಳಿಯುತ್ತದೆ. ನಿಮ್ಮ ನಿರ್ಧಾರ ಏನೇ ಆಗಿರಲಿ, ಅವರಸ ಪಡಬೇಡಿ, ನಿಧಾನಕ್ಕೆ ಆಲೋಚಿಸಿ ತೆಗೆದುಕೊಳ್ಳುವುದು ಒಳ್ಳೆಯದು. ಮದುವೆಯಾಗಿದ್ದರೆ ಸಂಗಾತಿಯೊಂದಿಗೆ ಪ್ರಯಾಣ ಮಾಡುವಿರಿ, ತುಂಬಾ ಸಮಯದ ಬಳಿಕ ಇಬ್ಬರು ಖುಷಿ-ಖುಷಿಯಾಗಿ ಕಳೆಯಲು ಸಮಯ ಸಿಗುತ್ತದೆ, ಇದರಿಂದ ನಿಮ್ಮಿಬ್ಬರ ಪ್ರೀತಿ ಮತ್ತಷ್ಟು ಹೆಚ್ಚಾಗುವುದು. ಕೆಲಸದ ಕ್ಷೇತ್ರದಲ್ಲಿ ಉತ್ತಮ ಫಲ ಸಿಗುವುದು. ಈ ವಾರ ವ್ಯಾಪಾರಿಗಳಿಗೆ ತುಂಬಾ ಒಳ್ಳೆಯದು. ಕಷ್ಟದ ಸಂದರ್ಭದಲ್ಲಿ ಸ್ನೇಹಿತರ ಬೆಂಬಲ ಸಿಗುವುದು.
ವಿದ್ಯಾರ್ಥಿಯಾಗಿದ್ದರೆ ಈ ವಾರ ಒಳ್ಳೆಯದಿದೆ, ನಿಮ್ಮ ಅಧ್ಯಯನಗಳು ನಿಯಮಿತ ವೇಗದಲ್ಲಿ ಪ್ರಗತಿಯಾಗುತ್ತವೆ. ಆರೋಗ್ಯ ಕೂಡ ಚೆನ್ನಾಗಿರುವುದರಿಂದ ಓದಿನ ಕಡೆ ಹೆಚ್ಚಿನ ಗಮನ ನೀಡಬಹುದು.
ಅದೃಷ್ಟ ಬಣ್ಣ : ಹಸಿರು
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿನ: ಮಂಗಳವಾರ

12 ಮೀನ
ಮೀನ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿದೆ. ವ್ಯವಹಾರದಲ್ಲಿ ಲಾಭ ದೊರೆಯಲಿದೆ, ಸಾಲವನ್ನು ಮರು ಪಾವತಿಸಲು ಸಾಧ್ಯವಾಗುತ್ತದೆ ಹಾಗೂ ಉಳಿತಾಯ ಕೂಡ ಮಾಡಬಹುದು. ಈ ವಾರ ಖರ್ಚುಗಳು ಸ್ವಲ್ಪ ಅಧಿಕವಾಗಿರುವುದರಿಂದ ಖರ್ಚಿನ ಮಿತಿಯ ಕಡೆಗೆ ಗಮನ ಹರಿಸಿ. ಕೆಲಸದ ಜಾಗದಲ್ಲಿ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ. ನಿಮ್ಮ ಸಹದ್ಯೋಗಿಗಳು ನಿಮಗೆ ಪೈಪೋಟಿ ನೀಡುವುದರಿಂದ ಬಾಸ್‌ನ ನಂಬಿಕೆ ಗಳಿಸಲು ಅದಿಕ ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಒಳ್ಳೆಯ ಅವಕಾಶಗಳು ಕೈಜಾರಬಹುದು. ವ್ಯಾಪಾರಿಗಳಾಗಿದ್ದರೆ ಈ ವಾರ ಯಾವುದೇ ಹೊಸ ವ್ಯವಹಾರಕ್ಕೆ ಕೈ ಹಾಕಿದರೆ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ನಿಮ್ಮ ಯೋಜನೆಗಳನ್ನು ತಡೆ ಹಿಡಿಯಿರಿ. ಮನೆಯಲ್ಲಿ ಖುಷಿ, ನೆಮ್ಮದಿಗಾಗಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು. ಈ ವಾರ ಸಣ್ಣ ಪುಟ್ಟ ಆರೋಗ್ಯ ತೊಂದರೆಗಳು ಕಾಣಿಸುವ ಸಾಧ್ಯತೆ ಇದೆ.
ಅದೃಷ್ಟ ಬಣ್ಣ : ಗುಲಾಬಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿನ: ಭಾನುವಾರ



Click it and Unblock the Notifications











