Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಸೆ. 13ಕ್ಕೆ ವಿಘ್ನರಾಜ ಸಂಕಷ್ಟಿ ಚತುರ್ಥಿ: ಕಷ್ಟ ನಿವಾರಣೆ ಈ ಶುಭ ಮುಹೂರ್ತದಲ್ಲಿ ಪೂಜೆ ಮಾಡಿ
ವಿಘ್ನ ನಿವಾರಕನನ್ನು ಪ್ರಾರ್ಥಿಸಿದರೆ ಖಂಡಿತ ನಮ್ಮ ಬದುಕಿನಲ್ಲಿರುವ ಎಲ್ಲಾ ವಿಘ್ನಗಳನ್ನು ದೂರ ಮಾಡಿ ಮನಸ್ಸಿಗೆ ನೆಮ್ಮದಿ, ಕುಟುಂಬದಲ್ಲಿ ಸಂತೋಷ ಎಲ್ಲವನ್ನೂ ನೀಡುತ್ತಾನೆ. ಹಿಂದೂ ಧರ್ಮದಲ್ಲಿ ಯಾವುದೇ ದೇವರಿಗೆ ಪೂಜೆ ಸಲ್ಲಿಸುವ ಮುನ್ನ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿದ ಬಳಿಕವಷ್ಟೇ ಪೂಜೆ ಮಾಡಲಾಗುವುದು, ಯಾವುದೇ ಶುಭ ಕಾರ್ಯ ಪ್ರಾರಮಭ ಮಾಡುವ ಮುನ್ನ ಗಣೇಶನಿಗೆ ಪೂಜೆ ಮಾಡಲಾಗುವುದು. ಗಣೇಶನ ಪೂಜೆಗೆ ಸಂಕಷ್ಟಿ ತುಂಬಾ ವಿಶೇಷವಾದ ದಿನ.

ಈ ತಿಂಗಳಿನಲ್ಲಿ ವಿಘ್ನರಾಜ ಸಂಕಷ್ಟಿ ಚತುರ್ಥಿ ಕೂಡ ಇದೆ. ಈ ತಿಂಗಳಿನಲ್ಲಿ ವಿಘ್ನರಾಜ ಸಂಕಷ್ಟಿ ಚತುರ್ಥಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಯಾವಾಗ, ಈ ಸಂಕಷ್ಟಿಯ ಮಹತ್ವವೇನು ಎಂದು ನೋಡೋಣ ಬನ್ನಿ:

ವಿಘ್ನರಾಜ ಸಂಕಷ್ಟಿ ಚತುರ್ಥಿ ಯಾವಾಗ?
ಪಂಚಾಂಗದ ಪ್ರಕಾರಶ್ವಿನ್ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯು ಮಂಗಳವಾರ, ಸೆಪ್ಟೆಂಬರ್ 13 ರಂದು ಬೆಳಗ್ಗೆ 10.37 ರಿಂದ ಪ್ರಾರಂಭವಾಗಿ ಮರುದಿನ ಸೆಪ್ಟೆಂಬರ್ 14 ರಂದು ಬೆಳಗ್ಗೆ 10.23 ಕ್ಕೆ ಕೊನೆಗೊಳ್ಳುತ್ತದೆ.
ಸಂಕಷ್ಟಿ ಆಚರಣೆ
ಈಗ ಚತುರ್ಥಿಯಂದು ಉಪವಾಸವಿದ್ದು ಗಣೇಶನನ್ನು ಆರಾಧಿಸಬೇಕು. . ಸಂಕಷ್ಟಿ ಚತುರ್ಥಿಯನ್ನು ಸೆಪ್ಟೆಂಬರ್ 13ರಂದು ಆಚರಿಸಲಾಗುವುದು.

ವಿಘ್ನರಾಜ ಸಂಕಷ್ಟಿ ಚತುರ್ಥಿ ಮುಹೂರ್ತ ಮತ್ತು ಯೋಗ
ಸಂಕಷ್ಟಿ ಚತುರ್ಥಿಯ ದಿನ ಬೆಳಗ್ಗೆ 07.37ರ ವರೆಗೆ ವೃದ್ಧಿ ಯೋಗವಿದ್ದು, ಬಳಿಕ ಧ್ರುವಯೋಗ ನಡೆಯಲಿದೆ. ಇವುಗಳಲ್ಲದೆ ಈ ದಿನ ಬಳಿಗ್ಗೆ 06:36 ರಿಂದ ಮರುದಿನ ಬೆಳಿಗ್ಗೆ 06.05 ರವರೆಗೆ ಸರ್ವಾರ್ಥ ಸಿದ್ಧಿ ಯೋಗ ಮತ್ತು ಅಮೃತ ಸಿದ್ಧಿ ಯೋಗವೂ ಇದೆ. ಈ ಸಮಯದಲ್ಲಿ ಪೂಜೆ ಮಾಡಬಹುದು.
ಈ ಶುಭ ಯೋಗಗಳಲ್ಲಿ ಗಣೇಶ, ವಿಘ್ನರಾಜನನ್ನು ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ತೊಂದರೆಗಳು ನಿವಾರಣೆಯಾಗುತ್ತವೆ. ಈ ದಿನ ಗಣೇಶನಿಗೆ ಮೋದಕ ಮತ್ತು ದೂರವನ್ನು ಅರ್ಪಿಸಲು ಮರೆಯಬೇಡಿ.

ವಿಘ್ನರಾಜ್ ಸಂಕಷ್ಟಿ ಚತುರ್ಥಿ 2022 ಚಂದ್ರೋದಯ ಸಮಯ
ಸೆಪ್ಟೆಂಬರ್ 13ರಂದು ರಾತ್ರಿ 08:26 ಕ್ಕೆ ಚಂದ್ರೋದಯವಾಗುತ್ತದೆ. ಉಪವಾಸ ಮಾಡುವವರು ಚಂದ್ರೋದಯದ ಸಮಯದಲ್ಲಿ ಚಂದ್ರನಿಗೆ ಆರ್ಘ್ಯ ಸಲ್ಲಿಸಿ ಪೂಜಿಸಿ,, ಉಪವಾಸವನ್ನು ಮುರಿಯಿರಿ.



Click it and Unblock the Notifications