Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ವಾಸ್ತು ಸಲಹೆ: ವಾಸ್ತುಶಾಸ್ತ್ರದ ಪ್ರಕಾರ ಜೀರಿಗೆಯನ್ನು ಹೀಗೆ ಬಳಸಿದರೆ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ
ಅಡುಗೆಮನೆಯ ಮಸಾಲೆ ಪದಾರ್ಥಗಳು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರ ಇಡುತ್ತದೆ ಎಂಬುದು ಗೊತ್ತು ಆದರೆ ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯ ಕೆಲವು ಮಸಾಲೆ ಪದಾರ್ಥಗಳು ಮನೆಯ ವಾಸ್ತು ಸಮಸ್ಯೆ ಹಾಗೂ ನಮ್ಮ ಕೆಲವು ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.

ಇಂಥಾ ಮಸಾಲೆ ಪದಾರ್ಥಗಳಲ್ಲಿ ಒಂದಾದ ಜೀರಿಗೆ ನಮ್ಮ ದೈನಂದಿನ ಜೀವನದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಜ್ಯೋತಿಶಾಸ್ತ್ರಜ್ಞರು ಹೇಳುತ್ತಾರೆ. ವಾಸ್ತುತಜ್ಞರು ಹೇಳುವ ಪ್ರಕಾರ ಜೀರಿಗೆಯನ್ನು ಈ ರೀತಿ ಬಳಸಿದರೆ ನಮ್ಮ ಆರ್ಥಿಕ ಸಮಸ್ಯೆ, ಕೆಲಸದ ಸಮಸ್ಯೆಗಳು ನಿವಾರಣೆಯಾಗುತ್ತದೆ. ದೇವಿ ಆಶೀರ್ವಾದ ನಮ್ ಮೇಲೆ ಸದಾ ಇರುತ್ತದೆ.

ಜೀರಿಗೆ ಈ ಗ್ರಹಗಳನ್ನು ಬಲಪಡಿಸುತ್ತದೆ
ವಾಸ್ತು ಶಾಸ್ತ್ರದಲ್ಲಿ ಜೀರಿಗೆ ರಾಹು-ಕೇತು ಗ್ರಹಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಈ ಗ್ರಹಗಳ ದುಷ್ಪರಿಣಾಮಗಳ ಕಾರಣದಿಂದಾಗಿ, ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ದುಃಖಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು-ಕೇತುಗಳ ಕೆಟ್ಟ ಸ್ಥಿತಿ ಇರುವವರು ಶನಿವಾರದಂದು ಜೀರಿಗೆಯನ್ನು ದಾನ ಮಾಡಬೇಕು.

ಲಕ್ಷ್ಮಿಯನ್ನು ಆಶೀರ್ವದಿಸುತ್ತಾಳೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಶುಕ್ರವಾರದಂದು ಲಕ್ಷ್ಮಿ ದೇವಿಯ ಮುಂದೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರಲ್ಲಿ ಒಂದು ಹಿಡಿ ಜೀರಿಗೆಯನ್ನು ಹಾಕಿ ಮತ್ತು ಅದರಲ್ಲಿ ಕೆಲವು ನಾಣ್ಯಗಳನ್ನು ಇಡಿ. ನಂತರ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ಜೀರಿಗೆ ಮತ್ತು ಹಣವನ್ನು ಸುತ್ತಿ ನೀವು ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಉಳಿಯುತ್ತದೆ, ಆರ್ಥಿಕವಾಗಿ ಸಬಲವಾಗಬಹುದು ಎಂದು ನಂಬಲಾಗಿದೆ.

ಋಣಾತ್ಮಕ ಶಕ್ತಿ ದೂರ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸ್ವಲ್ಪ ಜೀರಿಗೆಯನ್ನು ತೆಗೆದುಕೊಂಡು ಬೆಂಕಿಯಲ್ಲಿ ಹಾಕಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ಹರಡುತ್ತದೆ ಎಂದು ನಂಬಲಾಗಿದೆ.

ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಜೀರಿಗೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವಾರ ಬೆಳಿಗ್ಗೆ ಜೀರಿಗೆ ತಿಂದ ನಂತರ ಮನೆಯಿಂದ ಹೊರಡುವುದು ಯಾವುದೇ ಕೆಲಸದಲ್ಲಿ ಯಶಸ್ವಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಜೀರಿಗೆಯನ್ನು ಸೇವಿಸುವುದರಿಂದ ದೈನಂದಿನ ಜೀವನದಲ್ಲಿ ಸಾಮರಸ್ಯ ಮತ್ತು ಶಾಂತಿ ಉಳಿಯುತ್ತದೆ ಎಂದು ನಂಬಲಾಗಿದೆ. ಮಂಗಳವಾರದಂದು ಮೊಸರಿನಲ್ಲಿ ಜೀರಿಗೆಯನ್ನು ತಿನ್ನುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.



Click it and Unblock the Notifications
