Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Surya Gochar March 2023 : ಮಾರ್ಚ್ 15ಕ್ಕೆ ಮೀನ ರಾಶಿಯಲ್ಲಿ ಸೂರ್ಯ ಸಂಚಾರ: ದ್ವಾದಶಗಳ ಮೇಲೆ ಬೀರುವ ಪ್ರಭಾವವೇನು?
ಗ್ರಹಗಳ ಅಧಿಪತಿಯಾದ ಸೂರ್ಯ ಮಾರ್ಚ್ 15ಕ್ಕೆ ಮೀನ ರಾಶಿಗೆ ಸಂಚಾರವಾಗಿದೆ. ಈ ಸಂಚಾರ ಕೆಲವು ರಾಶಿಗಳ ಮೇಲೆ ಉತ್ತಮ ಪ್ರಭಾವ ಬೀರಿದರೆ ಇನ್ನು ಕೆಲವು ರಾಶಿಯವರು ಈ ಅವಧಿಯಲ್ಲಿ ಜಾಗ್ರತೆವಹಿಸಬೇಕಾಗಿದೆ.

ಈ ಸಂಚಾರ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಸೂರ್ಯ ಮೀನ ರಾಶಿಗೆ ಸಂಚರಿಸಿದಾಗ ಮೇಷ ರಾಶಿಯವರಲ್ಲಿ ಸೂರ್ಯ 12ನೇ ಮನೆಯಲ್ಲಿ ಇರಲಿದೆ. ಈ ಸಾಗಣೆ ನಿಮಗೆ ಅಷ್ಟೊಂದು ಅನುಕೂಲಕರವಲ್ಲ. ಈ ಅವಧಿಯಲ್ಲಿ ಕೆಲಸ ಸ್ಥಳಗಳಲ್ಲಿ ತೊಂದರೆ ಉಂಟಾಗಬಹುದು, ನೀವು ಅಹಂಕಾರದಿಂದ ವರ್ತಿಸದಿದ್ದರೆ ಒಳ್ಳೆಯದು, ಅಲ್ಲದೆ ಈ ಅವಧಿಯಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆ ಕೂಡ ಕಾಡಬಹುದು ಈ ಸಮಯದಲ್ಲಿ ನೀವು ದುರಹಂಕಾರವನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಕೂಡ ಬರಬಹುದು. ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಆರೋಗ್ಯದ ಬಗ್ಗೆಯೂ ಚಿಂತಿಸಬಹುದು.

ವೃಷಭ ರಾಶಿ
ಸೂರ್ಯನ ಈ ಸಂಚಾರ ನಿಮಗೆ ರಾಜಯೋಗ ನೀಡಲಿದೆ. ಸೂರ್ಯನು 11ನೇ ಮನೆಯಲ್ಲಿ ಇರುವಾಗ ನಿಮ್ಮ ಆದಾಯ ಹೆಚ್ಚಾಗಲಿದೆ. ಈ ಸಮಯದಲ್ಲಿ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಈ ಅವಧಿಯಲ್ಲಿ ಯಾವುದಾದರೂ ಹೊಸ ಕೆಲಸ ಪ್ರಾರಂಭಿಸಿದರೆ ಯಶಸ್ಸು ಕಾಣುವಿರಿ. ಮನೆಯಲ್ಲಿ ಖುಷಿ ಇರಲಿದೆ, ಆರೋಗ್ಯ ಚೆನ್ನಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಸೂರ್ಯನು 10ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಸೂರ್ಯ ಇರುವುದರಿಂದ ನಿಮಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಈ ಸಮಯದಲ್ಲಿ, ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಅನುಕೂಲಕರವಾಗಿರುತ್ತದೆ. ಈ ಸಂಕ್ರಮಣದ ಸಮಯದಲ್ಲಿ, ಹೃದ್ರೋಗದಿಂದ ಬಳಲುತ್ತಿರುವವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.

ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಸೂರ್ಯನು 9ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ನಿಮಗಿದೆ. ಈ ಅವಧಿಯಲ್ಲಿ ಅಪೂರ್ಣವಾಗಿದ್ದ ಕೆಲಸಗಳು ಪೂರ್ಣವಾಗುವುದು. ಈ ಅವಧಿಯಲ್ಲಿ ಕೆಲಸಕ್ಕಾಗಿ ಮಾಡುವ ಪ್ರಯಾಣದಿಂದ ಪ್ರಯೋಜನ ಪಡೆಯುವಿರಿ, ಈ ಅವಧಿಯಲ್ಲಿ ನಿಮಗೆ ಒಳ್ಳೆಯದಿದೆ.

ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ 8ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಸೂರ್ಯನ ಸಂಚಾರವು ನಿಮಗೆ ಶುಭ ಫಲಿತಾಂಸ ನೀಡುವುದಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ಹಣವನ್ನು ಸಾಲ ಪಡೆಯಬೇಡಿ. ಅಲ್ಲದೆ ನೀವು ಎಲ್ಲಿಯಾದರೂ ಹಣವನ್ನು ಹೂಡಿಕೆ ಮಾಡುವುದಾದರೆ ತುಂಬಾ ಎಚ್ಚರವಹಿಸಬೇಕು, ಇಲ್ಲದಿದ್ದರೆ ಮೋಸ ಹೋಗಬಹುದು. ಯಾರಿಗೂ ಸಾಲ ನೀಡಬೇಡಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ 7ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಆಡಬಹುದು, ಆದ್ದರಿಮದ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಈ ಅವಧಿಯಲ್ಲಿ ಅಹಂಕಾರ ಒಳ್ಲೆಯದಲ್ಲ. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಯಶಸ್ವಿಯಾಗಬಹುದು. ಸೂರ್ಯ ಮೀನ ರಾಶಿಯಲ್ಲಿರುವಾಗ ಯಾವುದೇ ದೊಡ್ಡ ಹಣದ ವ್ಯವಹಾರ ಮಾಡದಿರುವುದು ಒಳ್ಳೆಯದು.

ತುಲಾ ರಾಶಿ
ತುಲಾ ರಾಶಿಯವರಲ್ಲಿ ಸೂರ್ಯ 6ನೇ ಮನೆಯಲ್ಲಿ ಇರಲಿದೆ. ಸೂರ್ಯನ ಈ ಸ್ಥಾನ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ . ಈ ಅವಧಿಯಲ್ಲಿ ನೀವು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತೀರಿ. ನ್ಯಾಯಾಲಯದಲ್ಲಿ ಏನಾದರೂ ಕೇಸ್ ನಡೆಯುತ್ತಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಬಹುದು. ಈ ಅವಧಿಯಲ್ಲಿ ಹಣ ನಷ್ಟದ ಸಾಧ್ಯತೆ ಇದ್ದು ಹಣಕಾಸಿನ ವ್ಯವಹಾರಗಳ ಬಗ್ಗೆ ಜಾಗ್ರತೆ ಅದರಲ್ಲೂ ವ್ಯಾಪಾರಸ್ಥರು ವಿಶೇಷವಾಗಿ ಗಮನಹರಿಸಬೇಕಾಗಿದೆ.

ವೃಶ್ಚಿಕ ರಾಶಿ
ವೃಶ್ವಿಕ ರಾಶಿಯವರಲ್ಲಿ ಸೂರ್ಯ 5ನೇ ಮನೆಯಲ್ಲಿ ಇರಲಿದೆ. ಆದ್ದರಿಂದ ವೃಶ್ಚಿಕ ರಾಶಿಯ ವಿದ್ಯಾರ್ಥಿಗಳು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಷೇರು ಮಾರುಕಟ್ಟೆಯಿಂದ ಯಶಸ್ಸು ಪಡೆಯುವಿರಿ. ವ್ಯಾಪಾರಸ್ಥರು ಈ ಅವಧಿಯಲ್ಲಿ ಲಾಭವನ್ನು ಪಡೆಯುವಿರಿ. ಸೂರ್ಯನ ಈ ಸಂಚಾರದಿಂದ, ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನೀವು ಉದ್ಯೋಗವನ್ನು ಬದಲಾಯಿಸಲು ಇಚ್ಚಿಸಿದರೆ ಈ ಅವಧಿಯಲ್ಲಿ ಒಳ್ಳೆಯ ಅವಕಾಶ ದೊರೆಯಲಿದೆ. ಈ ಸಮಯದಲ್ಲಿ ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ಸಮಯ ಸೂಕ್ತವಲ್ಲ.

ಧನು ರಾಶಿ
ಧನು ರಾಶಿಯವರಲ್ಲಿ 4ನೇ ಮನೆಯಲ್ಲ ಇರಲಿದೆ. ಜ್ಯೋತಿಷ್ಯ ಪ್ರಕಾರ ಈ ಅವಧಿಯಲ್ಲಿ ಸೂರ್ಯ ಮಿಶ್ರಫಲಿತಾಂಶ ನೀಡುತ್ತಾನೆ. ಈ ಅವಧಿಯಲ್ಲಿ ಮಾನಸಿಕ ಒತ್ತಡ ಅಧಿಕ ಇರುತ್ತದೆ. ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯದ ಚಿಂತೆ ಕಾಡಬಹುದು. ಈ ಅವಧಿಯಲ್ಲಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಫಲ ಪಡೆಯಲು ಅಧಿಕ ಶ್ರಮಿಸಬೇಕಾಗುತ್ತದೆ.

ಮಕರ ರಾಶಿ
ಮಕರ ರಾಶಿಯವರಲ್ಲಿ ಸೂರ್ಯ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಸೂರ್ಯ 3ನೇ ಮನೆಯಲ್ಲಿ ಇರುವುದರಿಂದ ಈ ಅವಧಿಯಲ್ಲಿ ನಿಮ್ಮಲ್ಲಿ ಕೋಪ ಅಧಿಕವಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಒಡಹುಟ್ಟಿದವರೊಂದಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಆದಿತ್ಯ ಹರದಯ ಸ್ತೋತ್ರ ಪಠಿಸಿ.

ಕುಂಭ ರಾಶಿ
ಕುಂಭ ರಾಶಿಯಲ್ಲಿ ಸೂರ್ಯ 2ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಆಸ್ತಿ ವಿವಾದವಿದ್ದರೆ ಇತ್ಯರ್ಥಗೊಳಿಸಬಹುದು. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ನೀವು ಕೋಪವನ್ನು ನಿಯಂತ್ರಿಸಿದರೆ ಒಳ್ಳೆಯದು. ಕುಟುಂಬದ ಸದಸ್ಯರ ಜೊತೆಗೆ ಸಾಮರಸ್ಯ ಕಾಪಾಡಿ.

ಮೀನ ರಾಶಿ
ಸೂರ್ಯ ಮೀನ ರಾಶಿಗೆ ಸಂಚರಿಸಲಿದೆ. ವೃತ್ತಿಜೀವನದ ದೃಷ್ಟಿಯಿಂದ ನೋಡಿದರೆ ಈ ಸೂರ್ಯ ಸಂಚಾರ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಕೆಲಸದ ಸ್ಥಳದಲ್ಲಿ ದೊಡ್ಡ ಗೌರವ ಸಿಗಲಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತೀರಿ. ಈ ಅವಧಿಯಲ್ಲಿ ನಿಮಗೆ ಸ್ವಲ್ಪ ಅಹಂಕಾರ ಬರಬಹುದು, ಅಹಂಕಾರ ವರ್ತನೆ ತೋರದಿರುವುದು ಒಳ್ಳೆಯದು. ಈ ಅವಧಿಯಲ್ಲಿ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಒಟ್ಟಿನಲ್ಲಿ ಈ ಅವಧಿ ಅನುಕೂಲಕರವಾಗಿದೆ.



Click it and Unblock the Notifications
