Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2021 ವರ್ಷದ ಮೊದಲ ಸೂರ್ಯಗ್ರಹಣ 12 ರಾಶಿಗಳ ಮೇಲೆ ಬೀರುವ ಪ್ರಭಾವವೇನು?
ಜೂನ್ 10ರಂದು 2021ರ ಮೊದಲ ಸೂರ್ಯಗ್ರಹಣ. ಪ್ರತಿಯೊಂದು ಗ್ರಹಣವು ವ್ಯಕ್ತಿಯ ರಾಶಿಯ ಮೇಲೆ ತುಂಬಾನೇ ಪ್ರಭಾವ ಬೀರುವುದು ಎಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ವರ್ಷ ಒಟ್ಟು ನಾಲ್ಕು ಗ್ರಹಣಗಳಿವೆ, 2 ಸೂರ್ಯ ಗ್ರಹಣ, 2 ಚಂದ್ರಗ್ರಹಣ. ರಕ್ತ ಚಂದ್ರಗ್ರಹಣ ಸಂಭವಿಸಿದ 15 ದಿನದ ಒಳಗಾಗಿ ಸೂರ್ಯಗ್ರಹಣ ಬಂದಿದೆ. ಈ ಬಾರಿಯ ಸೂರ್ಯಗ್ರಹಣದಲ್ಲಿ ಬೆಂಕಿಯ ಉಂಗುರ ಕೂಡ ಗೋಚರಿಸಲಿರುವುದು ವಿಶೇಷ.
ಜೂ. 10ರ ಸೂರ್ಯಗ್ರಹಣ ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂದು ನೋಡುವುದಾದರೆ:

ಮೇಷ ರಾಶಿ:
ಈ ಅವಧಿಯಲ್ಲಿ ಮೇಷ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯಬಹುದು. ವಿದೇಶ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರ ಮಾಡುವವರು ಲಾಭವನ್ನು ಪಡೆಯಬಹುದು. ವೃತ್ತಿಜೀವನಕ್ಕೆ ಸಂಬಂಧಿಸಿದ ಹೊಸ ಅವಕಾಶಗಳು ಕೈಗೆ ಬರುತ್ತವೆ. ಅದೇ ಸಮಯದಲ್ಲಿ, ಆರೋಗ್ಯದ ಬಗ್ಗೆ ಅಸಡ್ಡೆ ಮಾಡದಂತೆ ನಿಮಗೆ ಸೂಚಿಸಲಾಗಿದೆ. ನಿಮ್ಮ ಆಹಾರಕ್ರಮದ ಬಗ್ಗೆ ಎಚ್ಚರವಹಿಸಿ. ಮಾನಸಿಕ ಒತ್ತಡವನ್ನು ತೆಗೆದುಕೊಳ್ಳಬೇಡಿ, ತಾಳ್ಮೆಯಿಂದಿರಿ.

ವೃಷಭ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಯಾವುದೇ ರೀತಿಯ ನಕಾರಾತ್ಮಕತೆಯನ್ನು ತಪ್ಪಿಸಿ. ಮುಂಬರುವ ಸಮಯದಲ್ಲಿ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಈ ಅವಧಿಯಲ್ಲಿ ಪ್ರಯಾಣಿಸದಿರುವುದು ಉತ್ತಮ. ಅದೃಷ್ಟ ನಿಮ್ಮ ಬೆಂಬಲಕ್ಕೆ ಇರುವುದು.

ಮಿಥುನ ರಾಶಿ
ಈ ರಾಶಿಚಕ್ರದ ಜನರು ಉತ್ತಮ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಕೆಲಸದ ಕ್ಷೇತ್ರದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ನಿಮ್ಮ ಮಾತನ್ನು ನಿಯಂತ್ರಿಸಲು ನಿಮಗೆ ಸೂಚಿಸಲಾಗಿದೆ, ನಿಮ್ಮ ಮಾತುಗಳಿಂದ ಮತ್ತೊಬ್ಬರ ಭಾವನೆಗಳನ್ನು ನೋಯಿಸಬೇಡಿ.

ಕರ್ಕ ರಾಶಿ
ಕರ್ಕ ರಾಶಿಯವರ ಮೇಲೆ ಸೂರ್ಯಗ್ರಹಣದ ಪರಿಣಾಮವಿಲ್ಲ. ನೀವು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಿ ಹಾಗೂ ನಿಮ್ಮ ಕೆಲಸ ಕಾರ್ಯದತ್ತ ಗಮನ ಹರಿಸುವುದು ಉತ್ತಮ.

ಸಿಂಹ ರಾಶಿ
ಸಿಂಹ ರಾಶಿಯವರು ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಯೋಜನೆಗಳನ್ನು ರೂಪಿಸಲು ಸೂಚಿಸಲಾಗಿದೆ. ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಬಯಸಿದರೆ, ಅದಕ್ಕೂ ಮೊದಲು ಸರಿಯಾದ ಸಂಶೋಧನೆ ಮಾಡಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ.

ಕನ್ಯಾ ರಾಶಿ
ಕನ್ಯಾರಾಶಿಯವರಿಗೆ ಈ ಸಮಯ ವಿಶೇಷವಾಗಿರುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಈ ಅವಧಿಯಲ್ಲಿ ಆಪ್ತ ಸ್ನೇಹಿತರಿಂದ ಬೆಂಬಲ ಸಿಗುತ್ತದೆ.

ತುಲಾ ರಾಶಿ
ಸೂರ್ಯಗ್ರಹಣದ ಪರಿಣಾಮದಿಂದ ತುಲಾ ರಾಶಿಯವರು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ನೀವು ಮನೆಯ ಹಿರಿಯರ ಸಲಹೆ ಕೇಳುವುದು ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ಬಾಕಿ ಇರುವ ಕೆಲಸವೂ ಪೂರ್ಣಗೊಳ್ಳುತ್ತದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಅವಧಿಯೂ ವಿಶೇಷವಾಗಿರುವುದಿಲ್ಲ. ಈ ಅವಧಿಯಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ, ಉಳಿತಾಯದಲ್ಲಿ ವಿಫಲರಾಗುತ್ತೀರಿ. ಚಿಕ್ಕ-ಪುಟ್ಟ ವಿಷಯಕ್ಕೆ ಕೋಪಗೊಳ್ಳುವುದನ್ನು ತಪ್ಪಿಸಿ, ತಾಳ್ಮೆಯಿಂದಿರುವುದು ಒಳ್ಳೆಯದು. ಪ್ರತಿದಿನ ಧ್ಯಾನ ಮಾಡಿ.

ಧನು ರಾಶಿ
ಧನು ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದು. ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನಹರಿಸಲು ನಿಮಗೆ ಸೂಚಿಸಲಾಗಿದೆ. ಇದರಿಂದ ಆರ್ಥಿಕ ಲಾಭ ಹೆಚ್ಚುವುದು.

ಮಕರ ರಾಶಿ
ಮಕರ ರಾಶಿಯವರು ಸೋಮಾರಿತನವನ್ನು ಬಿಡುವಂತೆ ಸೂಚಿಸಲಾಗಿದೆ. ಇಂದು ಬೇಡ ನಾಳೆ ಎಂದು ಕೆಲಸವನ್ನು ಮುಂದೂಡುವ ನಿಮ್ಮ ಅಭ್ಯಾಸದಿಂದಾಗಿ, ನೀವು ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಈ ಅವಧಿಯಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಅದು ಕೈ ತಪ್ಪಲು ಬಿಡಬೇಡಿ. ಮನೆಯ ಸದಸ್ಯರ ಸಂಪೂರ್ಣ ಬೆಂಬಲ ಇರುತ್ತದೆ.

ಕುಂಭ ರಾಶಿ
ಕುಂಭ ರಾಶಿಯವರ ಮೇಲೆ ಸೂರ್ಯಗ್ರಹಣದ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಈ ರಾಶಿಚಕ್ರದ ಜನರು ಕೆಲವು ವಿಷಯಗಳಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ, ವ್ಯವಹಾರ ಅಥವಾ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹೊಸ ಕೌಶಲ್ಯ ಕಲಿಯಲು ಪ್ರಯತ್ನಿಸಿ.

ಮೀನ ರಾಶಿ
ಈ ಸೂರ್ಯಗ್ರಹಣವು ಮೀನ ರಾಶಿಯವರಿಗೆ ಅನುಕೂಲಕರ ಪರಿಣಾಮ ಬೀರುವುದು. ಆದರೆ ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ನಿಗಾವಹಿಸಲು ನಿಮಗೆ ಸೂಚಿಸಲಾಗಿದೆ. ನಿಮ್ಮ ಬಾಕಿಯುಳಿದಿರುವ ಕೆಲಸವೂ ಪೂರ್ಣಗೊಳ್ಳುತ್ತದೆ.



Click it and Unblock the Notifications