Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈದಿಕ ಶಾಸ್ತ್ರದ ಪ್ರಕಾರ ಮಕರ ಸಂಕ್ರಾಂತಿಯ ಮಹತ್ವವೇನು?
ವೈದಿಕ ಶಾಸ್ತ್ರದ ಪ್ರಕಾರ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಸೂರ್ಯ ಒಂದು ರಾಶಿಯಲ್ಲಿ 30 ದಿನಗಳ ಕಾಲ ಇದ್ದು ನಂತರ ತನ್ನ ಸ್ಥಾನ ಬದಲಾಯಿಸುತ್ತದೆ, ವರ್ಷದಲ್ಲಿ 12 ಸಂಕ್ರಾಂತಿಗಳಿವೆ, ಅವುಗಳಲ್ಲಿ ಮಕರ ಸಂಕ್ರಾಂತಿ ತುಂಬಾನೇ ವಿಶೇಷವಾದದ್ದು.

ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಉತ್ತರಾಯಣ ಕಾಲ ಪ್ರಾರಂಭವಾಗುವುದು. ಉತ್ತರಾಯಣ ಕಾಲದಲ್ಲಿ ಮರಣವೊಂದಿದರೆ ಸ್ವರ್ಗಕ್ಕೆ ಹೋಗುತ್ತಾರೆ ಎಂಬುವುದು ನಂಬಿಕೆ.
ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲ ವಾಗಿರುತ್ತದೆ. ಈ ಪರ್ವಕಾಲದಲ್ಲಿ ನಾವು ಮಾಡುವ ದಾನ ಮತ್ತು ಪುಣ್ಯಕರ್ಮಗಳಿಗೆ ತುಂಬಾನೇ ಮಹತ್ವವಿದೆ, ಇದರಿಂದ ನಮಗೆ ತುಂಬಾನೇ ಒಳ್ಳೆಯ ಫಲ ಸಿಗುವುದು.
ಮಹಾಭಾರತ ಕತೆಯಲ್ಲಿ ಪಿತಾಮಹಾ ಭೀಷ್ಮ ಉತ್ತರಾಯಣ ಕಾಲದವರೆಗೆ ಕಾದು ನಂತರ ದೇಹ ತ್ಯಾಗ ಮಾಡಿದರು. ವೈದಿಕವಾಗಿ ಮಕರ ಸಂಕ್ರಾಂತಿಗೆ ತುಂಬಾನೇ ಮಹತ್ವವಿದೆ.
ಇದು ಸುಗ್ಗಿಯ ಕಾಲ
ಈ ಸಮಯದಲ್ಲಿ ಸೂರ್ಯ ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುತ್ತಾನೆ. ಈ ಪವಿತ್ರ ದಿನವನ್ನು ಮಕರ ಸಂಕ್ರಾಂತಿಯೆಂದು ಆಚರಿಸಲಾಗುವುದು. ಮಕರ ರಾಶಿಯ ಅಧಿಪತಿ ಶನಿ, ಸೂರ್ಯ ಸೂರ್ಯ ತನ್ನ ಮಗ ಅಧಿಪತಿಯಾಗಿರುವ ಮಕರ ರಾಶಿಗೆ ಪ್ರವೇಶಿಸುವುದು. .
ಈ ಸಮಯದಲ್ಲಿ ಬೆಳೆದ ಪೈರುಗಳು ಕೊಯ್ಲುಗೆ ರೆಡಿಯಾಗಿರುತ್ತೆ, ಬೆಳೆದ ಬೆಳಗಳನ್ನು ಮನೆಗೆ ತಂದು ರೈತ ಸಂಭ್ರಮಿಸುತ್ತಾನೆ. ರೈತನ ಸಂಭ್ರಮದ ಕಾಲವೇ ಮಕರ ಸಂಕ್ರಾಂತಿ.
ಆಯುರ್ವೇದದಲ್ಲೂ ಮಕರ ಸಂಕ್ರಾಂತಿಗೆ ತುಂಬಾನೇ ಪ್ರಾಮುಖ್ಯತೆ ಇದೆ
ಹಿಂದೂ ಪುರಾಣಗಳ ಪ್ರಕಾರ ಮಕರ ಸಂಕ್ರಾಂತಿಯ ದಿನದಂದು ರಾಕ್ಷಸರನ್ನು ಸಂಹಾರ ಮಾಡಿದೆ ಎಂದು ಹೇಳಲಾಗುವುದು, ನಂತರ ಅವರ ತಲೆಗಳನ್ನು ಪರ್ವತದ ಅಡಿಯಲ್ಲಿ ಹೂತು ಹಾಕಲಾಯಿತು ಎಂದು ಹೇಳಲಾಗುವುದು. ನಕಾರಾತ್ಮಕ ಶಕ್ತಿ ಎಲ್ಲಾ ಹೋಗಿ ಸಮೃದ್ಧಿಯ ಸಂಕೇತವಾಗಿದೆ ಮಕರ ಸಂಕ್ರಾಂತಿ.
ಆಯುರ್ವೇದ ಪ್ರಕಾರ ಧ್ಯಾನಕ್ಕೆ ಅತ್ಯುತ್ತಮವಾದ ಸಮಯವಾಗಿದೆ. ಈ ಸಮಯದಲ್ಲಿ ತುಂಬಾ ಚೈತನ್ಯದಿಂದ ತುಂಬಿರುತ್ತದೆ.
ಬೆಳಗಿನ ಸಂಪ್ರದಾಯ
ಮಕರ ಸಂಕ್ರಾಂತಿಯ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿದರೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಸ್ನಾನದ ನೀರಿಗೆ ಸ್ವಲ್ಪ ಎಳ್ಳು ಮಿಕ್ಸ್ ಮಾಡಿದರೆ ಒಳ್ಳೆಯದು. ಸ್ನಾನದ ನಂತರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ ಗಾಯತ್ರಿ ಮಂತ್ರ ಪಠಿಸಿ. ಇದರಿಂದ ಪಾಸಿಟಿವ್ ಶಕ್ತಿಯ ಸಂಚಲನವಾಗುವುದು, ನಿಮ್ಮ ದೇಹದಲ್ಲಿ ಹಿಸ ಚೈತನ್ಯ ತುಂಬುವುದು.
ಸಂಕ್ರಾಂತಿಯಂದು ಯಾವ ದೇವರನ್ನು ಪೂಜಿಸಲಾಗುವುದು?
ಮಕರ ಸಂಕ್ರಾಂತಿಯಂದು ಸೂರ್ಯ ದೇವನನ್ನು ಪೂಜಿಸಲಾಗುವುದು. ಇಡೀ ಲೋಕಕ್ಕೆ ಚೈತನ್ಯ ತುಂಬುವುದು ಸೂರ್ಯ ರಶ್ಮಿ, ಸೂರ್ಯ ಬೆಳಕು ಇಲ್ಲದಿದ್ದರೆ ಇಡೀ ಲೋಕದಲ್ಲಿ ಕತ್ತಲೆ ಆವರಸಿಉವುದು, ಯಾವುದೇ ಪ್ರಾಣಿಗಳು ಜೀವಿಸುವುದು ಕಷ್ಟವಾಗುವುದು. ಆದ್ದರಿಂದ ಜೀವಕುಲಕ್ಕೆ ಸೂರ್ಯನ ಬೆಳಕು ತುಂಬಾನೇ ಅವಶ್ಯಕ.
ಮಕರ ಸಂಕ್ರಾಂತಿಯ ವಿಶೇಷಗಳು
ಮಕರ ಸಂಕ್ರಾಂತಿ ಸುಗ್ಗಿಯ ಕಾಲವಾಗಿರುವುದರಿಂದ ಬೆಳೆದ ಬೆಳಗಳಿಂದ ವಿಶೇಷ ತಿನಿಸುಗಳನ್ನು ತಯಾರಿಸಲಾಗುವುದು. ಕರ್ನಾಟಕದಲ್ಲಿ ಎಳ್ಳು-ಬೆಲ್ಲ ತಯಾರಿಸಿ ಸವಿಯಲಾಗುವುದು. ಇದರ ಜೊತೆಗೆ ಸಿಹಿ ತಿಂಡಿಗಳನ್ನೂ ಮಾಡಲಾಗುವುದು. ಆಂಧ್ರದಲ್ಲೂ ವಿಶೇಷ ತಿನಿಸುಗಳನ್ನು ಮಾಡಲಾಗುವುದು. ತಮಿಳುನಾಡಿನಲ್ಲಿ ಪೊಂಗಲ್ ಮಾಡಲಾಗುವುದು. ಇನ್ನು ಕೆಲವು ಖಿಚಡಿ ತಯಾರಿಸಲಾಗುವುದು. ಹೀಗೆ ಬೆಳೆದ ಬೆಳೆಗಳಿಂದ ವಿಶೇಷ ತಿನಿಸುಗಳನ್ನು ತಯಾರಿಸಲಾಗುವುದು.
ಗಾಳಿಪಟ
ಸುಗ್ಗಿಯ ಹಬ್ಬದ ಮತ್ತೊಂದು ವಿಶೇಷವೆಂದರೆ ಗಾಳಿಪಟ ಹಾರಿಸಲಾಗುವುದು. ಕೆಲವು ಕಡೆ ಗಾಳಿಪಟ ಹಬ್ಬವನ್ನೇ ಆಚರಿಸಲಾಗುವುದು. ಗಾಳಿಪಟ ಆಟ ಆಡುವುದು ಆರೋಗ್ಯಕ್ಕೂ ಒಳ್ಳೆಯದು. ಸೂರ್ಯೋದಯದ ಸಮಯದಲ್ಲಿ ಸೂರ್ಯನ ರಶ್ಮಿಗಳು ಮುತ್ತಿಕ್ಕುವಾಗ ಈ ಗಾಳಿಪಟ ಆಚರಿಸಲಾಗುವುದು, ಅಲ್ಲದೆ ಸೂರ್ಯಾಸ್ತದ ಸಮಯದಲ್ಲೂ ಈ ಆಟವನ್ನು ಆಡಲಾಗುವುದು.
ಎಲ್ಲರೂ ಒಂದಾಗಿ ಆಡುವುದರಿಂದ ಮನಸ್ಸಿಗೆ ತುಂಬಾನೇ ಖುಷಿ. ರೈತರು ಹೊಲದಲ್ಲಿ ಕೆಲಸ ಮಾಡಿ ಅವರಿಗೂ ಸ್ವಲ್ಪ ವಿಶ್ರಾಂತಿ ಹಾಗೂ ಮನರಂಜನೆ ಬೇಕಾಗುತ್ತದೆ. ಈ ಸಂಕ್ರಾಂತಿ ಹಬ್ಬದಲ್ಲಿ ಆಡುವ ಗಾಳಿಪಟದ ಆಟ ಸಕತ್ ಮನರಂಜನೆ ನೀಡುತ್ತದೆ.
ಸಂಕ್ರಾಂತಿಯಲ್ಲಿ ಎಳ್ಳಿನ ಮಹತ್ವ
ಈ ಹಬ್ಬದಲ್ಲಿ ಎಳ್ಳು ಇರಲೇಬೇಕು, ಎಳ್ಳು ಮನಸ್ಸು ಹಾಗೂ ದೇಹವನ್ನು ಶುದ್ಧ ಮಾಡುತ್ತದೆ, ಅಲ್ಲದೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.



Click it and Unblock the Notifications













