Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ರಾಮ ನವಮಿ 2023: ಈ ವರ್ಷ ರಾಮ ನವಮಿ ಯಾವಾಗ? ಈ ದಿನ ತಪ್ಪದೆ ಈ ರಾಮ ರಕ್ಷಾ ಸ್ತೋತ್ರ ಪಠಿಸಿ
ಈ ಮಾರ್ಚ್ ತಿಂಗಳಿನಲ್ಲಿ ಹಬ್ಬವೋ ಹಬ್ಬಗಳು, ಬಣ್ಣದ ಓಕುಳಿಯಲ್ಲಿ ಕುಣಿದು ಕುಪ್ಪಳಿಸಿದ ಕೆಲಚವೇ ದಿನಗಳಲ್ಲಿ ಯುಗಾದಿ ಸಂಭ್ರಮ. ಬೇವು ಬೆಲ್ಲ ಸವಿದು ಹೊಸ ವರ್ಷವನ್ನು ಸ್ವಾಗತಿಸಿ, ಕೆಲವೇ ದಿನಗಳಲ್ಲಿ ರಾಮನವಮಿ ಸಡಗರ. ಹಾಗಾಗಿ ಈ ತಿಂಗಳು ಪೂರ್ತಿ ಸಡಗರ-ಸಂಭ್ರಮದಿಂದ ಕಳೆಯುವ ಸಮಯ ಅಲ್ವಾ?

ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀ ರಾಮನ ಜನ್ಮ ದಿನವನ್ನು ರಾಮ ನವಮಿಯೆಂದು ಆಚರಿಸಲಾಗುವುದು. ಈ ವರ್ಷ ರಾಮ ನವಮಿ ಯಾವಾಗ? ಪೂಜೆಗೆ ಶುಭ ಮುಹೂರ್ತ ಯಾವಾಗ ಎಂದು ತಿಳಿಯೋಣ ಬನ್ನಿ:

ರಾಮ ನವಮಿ ದಿನಾಂಕ ಹಾಗೂ ಪೂಜೆಗೆ ಶುಭ ಸಮಯ
ರಾಮ ನವಮಿಯನ್ನು ಈ ವರ್ಷ ಮಾರ್ಚ್ 30ರಂದು ಆಚರಿಸಲಾಗುವುದು.
ರಾಮ ನವಮಿ ತಿಥಿ ಪ್ರಾರಂಭ: ಮಾರ್ಚ್ 29 ರಾತ್ರಿ 09:07ಕ್ಕೆ
ರಾಮ ನವಮಿ ತಿಥಿ ಮುಕ್ತಾಯ: ಮಾರ್ಚ್ 30 ರಾತ್ರಿ 11:30ಕ್ಕೆ

ಅತ್ಯಂತ ಪವಿತ್ರವಾದ ದಿನ
ಶ್ರೀರಾಮ ಮಾನವ ರೂಪವೆತ್ತಿ ಭೂಮಿಗೆ ಬಂದ ಪವಿತ್ರ ದಿನವನ್ನು ಶ್ರೀರಾಮ ನವಮಿಯೆಂದು ಆಚರಿಸಲಾಗುವುದು. ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಸದ ಹುಣ್ಣಿಮೆಯಂದು ಶ್ರೀರಾಮ ನವಮಿ ಆಚರಿಸಲಾಗುವುದು.
ಈ ದಿನವನ್ನು ದೇಶದಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು
ಒಳ್ಳೆಯದಕ್ಕೇ ಜಯ ಎಂಬುವುದರ ಸಂಕೇತ
ರಾಕ್ಷಸ ಗುಣ, ಕೆಟ್ಟತನ ಬಾಳುವುದಿಲ್ಲ ಅಂಥವರ ಸಂಹಾರಕ್ಕಾಗಿ ಯುಗ ಪುರುಷ ಜನ್ಮ ತಾಳುತ್ತಾನೆ ಎಂಬುವುದರ ಆಶಯವಾಗಿ ಶ್ರೀರಾಮ ನವಮಿ ಆಚರಿಸಲಾಗುವುದು.
ಶ್ರೀರಾಮನನ್ನು ಶ್ರೀವಿಷ್ಣುವಿನ 7ನೇ ಅವತಾರ ಎಂದು ಕರೆಯಲಾಗುವುದು. ಶ್ರೀ ರಾಮನನ್ನು ಆದರ್ಶ ಪುರುಷೋತ್ತಮ ಎಂದು ಪೂಜಿಸಲಾಗುವುದು.

ಉಪವಾಸ ವ್ರತ
ರಾಮ ನವಮಿಯಂದು ಭಕ್ತರು ಉಪವಾಸವಿದ್ದು, ರಾಮನ ಮಂತ್ರಗಳನ್ನು ಹೇಳುತ್ತಾ ರಾಮ ನವಮಿಯನ್ನಯ ಆಚರಿಸಲಾಗುವುದು.
ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ವಿಶೇಷ ಪೂಜೆ
ಅಯೋಧ್ಯೆಯಯಲ್ಲಿ ಸಾವಿರಾರು ಲಕ್ಷ ದೀಪಗಳನ್ನು ಬೆಳಗಲಾಗುವುದು. ಈ ದಿನ ಜನರು ರಾಮ, ಸೀತಾದೇವಿ, ಹನುಮಂತ, ಲಕ್ಷ್ಮಣನ ವೇಷ ಧರಿಸಿ ರಥಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಈ ದಿನದಂದು ಅಯೋಧ್ಯೆಯ ವಿವಿಧ ಕಡೆ ವಿಶೇಷ ಪೂಜೆ ಮಾಡಲಾಗುವುದು.

ಈ ದಿನ ಈ ರಕ್ಷಾ ಸ್ತೋತ್ರ ಪಠಿಸಿ
ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ
ಆರ್ತಾನಾಮಾರ್ತಿಹಂತಾರಂ ಬೀತಾನಂ ಭೀತಿನಾಶಂ
ದ್ವಿಷದಾಂ ಕಾಲದಂಡಂ ಚ ರಾಮಚಂದ್ರಂ ನಮಾಮ್ಯಹಂ
ನಮಃ ಕೋದಂಡಹಸ್ತಾಯ ಸಂಧೀಕೃತಶರಾಯ ಚ
ಖಂಡಿತಾಲಿಲದೈತ್ಯಾಯ ರಾಮಾಯಾಪನ್ನಿವಾರಿಣೇ
ಅಗ್ರತಃ ಬೃಷ್ಠತಶ್ಚೈವ ಪಾರ್ಶ್ವತಶ್ಚ ಮಹಾಬಲೌ.
ಆಕರ್ಣಪೂರ್ಣಧನ್ವಾನೌ ರಕ್ಷೇತಾಂ ರಾಮ ಲಕ್ಷ್ಮಣ್
ಸನ್ನದ್ಧ ಕವಚೀ ಖಡ್ಗೀ ಚಾಪಬಾಣಧರೋ ಯುವಾ
ಗಚ್ಚನ್ ಮಮಾಗ್ತೋ ನಿತ್ಯಂ ರಾಮಃ ಪಾತು ಸಲಕ್ಷಣಃ
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಯ ನಾಥಯ ಸೀತಾಯಾಃ ಪತಯೇ ನಮಃ



Click it and Unblock the Notifications