ಸಣ್ಣ ಮನಸ್ಸಿನ ನಕಾರಾತ್ಮಕ ವ್ಯಕ್ತಿಗಳ ಜತೆ ಏಕೆ ಚರ್ಚೆ ಮತ್ತು ವಾದ ಮಾಡಬಾರದು ಗೊತ್ತೆ?

ಒಮ್ಮೆ ಹೀಗೆಯೇ ಯೋಚಿಸಿ. ನೀವು ಯಾರೊಂದಿಗೆಲ್ಲ ಜಗಳವಾಡುತ್ತೀರಿ? ಮನೆಯಲ್ಲಿ ಗಂಡನ ಜೊತೆ, ಅಪ್ಪ ಅಮ್ಮ ಜೊತೆ, ಮಕ್ಕಳ ಜೊತೆ, ಸ್ನೇಹಿತರ ಜೊತೆ ಹೀಗೆ ಜಗಳವಾಡುವುದು ಸರ್ವೇಸಾಮಾನ್ಯ. ಮನುಷ್ಯನಾಗಿ ಹುಟ್ಟಿದ ಮೇಲೆ ಮರದ ಹಾಗೆ ಮೌನವಾಗಿ ಇರೋಕೆ ಆಗಲ್ಲ ಅಲ್ವೇ? ಜಗಳ ನಂತರ ಹೊಂದಾಣಿಕೆ ಮಾಡಿಕೊಳ್ಳುವುದು ಇದೆಲ್ಲಾ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಬಾರಿ ನಡೆದೇ ನಡೆಯುತ್ತದೆ. ಆದರೆ ಯಾಕಾಗಿ ಜಗಳವಾಡಿದ್ದೀರಿ? ಯಾರೊಂದಿಗೆ ಜಗಳವಾಡಿದ್ದೀರಿ ಎಂಬುದು ಬಹಳ ಮುಖ್ಯ ಸಂಗತಿಯಾಗುತ್ತದೆ.

small minders

ಹೌದು, ಜಗಳಕ್ಕೂ ಒಂದು ರೂಪುರೇಷೆ ಇರಬೇಕು. ಜಗಳ ವಿಕೋಪಕ್ಕೆ ಯಾವತ್ತೂ ತಿರುಗಬಾರದು. ಹೋರಾಟ ಮಾಡುವಾಗ ಎಂತಹ ಮನಸ್ಸಿನ ವ್ಯಕ್ತಿಯೊಂದಿಗೆ ಹೋರಾಡುತ್ತಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಸಣ್ಣ ಮನಸ್ಸಿನ ವ್ಯಕ್ತಿಗಳೊಂದಿಗೆ ಜಗಳಕ್ಕಿಳಿದರೆ ಅದರಿಂದ ಏನೂ ಲಾಭವಿಲ್ಲ. ವ್ಯರ್ಥ ಜಗಳ ನಿಮ್ಮ ಮನಃಶಾಂತಿಯನ್ನೇ ಕದಡುತ್ತದೆ ಎಂಬುದು ನಿಮ್ಮ ಅರಿವಿನಲ್ಲಿ ಇರಬೇಕು. ಸಣ್ಣ ಮನಸ್ಸಿನವರೊಂದಿಗೆ ಯಾಕೆ ಜಗಳವಾಡಬಾರದು ಗೊತ್ತಾ? ಮುಂದೆ ಓದಿ.

1. ಸಣ್ಣ ಜಗಳಗಳು ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತದೆ

1. ಸಣ್ಣ ಜಗಳಗಳು ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತದೆ

ಯಾವುದೇ ಕೆಲಸವಿಲ್ಲದ ವ್ಯಕ್ತಿಗಳೊಂದಿಗೆ ವಿನಾಕಾರಣ ಜಗಳವಾಡಬೇಡಿ. ಯಾಕೆಂದರೆ ಅವರದ್ದು ಸಣ್ಣಮನಸ್ಥಿತಿ ಎಂಬುದು ನಿಮಗೆ ತಿಳಿದಿರಲಿ. ಶಾಂತವಾಗಿರುವುದು ಮತ್ತು ಸ್ವಯಂ ಅರಿವಿರುವವರಂತೆ ವರ್ತಿಸಿದರೆ ನಿಮ್ಮ ಘನತೆಗೆ ಒಳ್ಳೆಯದು. ಕೆಲವು ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಂಡು ತೆರೆದ ಮನಸ್ಸಿನಿಂದ ಇದ್ದರೆ ನಿಮಗೇ ಒಳ್ಳೆಯದು. ಅಷ್ಟೇನೂ ಮುಖ್ಯವಲ್ಲದ ವಿಚಾರಕ್ಕೆ ವಿನಾಕಾರಣ ಶಾಂತಿಯನ್ನು ಕಳೆದುಕೊಳ್ಳುವುದರಿಂದಾಗಿ ನಿಮ್ಮ ಮಾನಸಿಕ ಮತ್ತು ದೈಹಿಕ ಜೊತೆಗೆ ನಿಮ್ಮ ಸಂಬಂಧಗಳು, ನಿಮ್ಮ ಕನಸುಗಳು ಎಲ್ಲವೂ ಕೂಡ ವ್ಯಯವಾಗುತ್ತದೆ. ಇಂತಹ ಜಗಳಗಳು ನಿಮ್ಮ ಶಕ್ತಿಯನ್ನು ಕುಗ್ಗಿಸುವ ಮೂರ್ಖತನದ ಪರಮಾವಧಿಯಂತೆಯೇ ಸರಿ.

2. ನಿಮ್ಮ ಬಗ್ಗೆ ವದಂತಿ ಮಾಡುವವರ ಜೊತೆಗೆ ಜಗಳ ಕಾಯುವುದನ್ನು ನಿಲ್ಲಿಸಿ

2. ನಿಮ್ಮ ಬಗ್ಗೆ ವದಂತಿ ಮಾಡುವವರ ಜೊತೆಗೆ ಜಗಳ ಕಾಯುವುದನ್ನು ನಿಲ್ಲಿಸಿ

3. ಅಸೂಯೆಯಿಂದ ನಿಮ್ಮ ಬಗ್ಗೆ ಗಾಸಿಪ್ ಮಾಡುವವರ ಜೊತೆ ಜಗಳ ಮಾಡಬೇಡಿ

3. ಅಸೂಯೆಯಿಂದ ನಿಮ್ಮ ಬಗ್ಗೆ ಗಾಸಿಪ್ ಮಾಡುವವರ ಜೊತೆ ಜಗಳ ಮಾಡಬೇಡಿ

ನಕಾರಾತ್ಮಕವಾಗಿ ನಿಮ್ಮ ಬಗ್ಗೆ ವದಂತಿ ಮಾಡುವವರ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರ ಎಂದರೆ ಅವರ ಮನಸ್ಥಿತಿ. ವದಂತಿ ಹಬ್ಬಿಸುವವರು ಖಂಡಿತ ನಿಮ್ಮ ಬಗ್ಗೆ ಅಸೂಯೆ ಹೊಂದಿರುವವರಾಗಿರುತ್ತಾರೆ. ನಿಮ್ಮಿಂದಾಗಿ ಅವರು ಅಭದ್ರತೆಯ ಭಾವನೆ ಹೊಂದುತ್ತಿರಬಹುದು. ವದಂತಿಯ ಮೂಲಕ ಅವರು ಅವರ ಅಭದ್ರತೆಯನ್ನ ಮತ್ತು ದುರ್ಬಲತೆಯನ್ನು ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ ಎಂಬುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಅಳಿಸುವ ಮೂಲಕ ಇತರರ ಹೋಲಿಕೆಯಲ್ಲಿ ಅವರು ಉತ್ತಮರಾಗಿರುವುದಕ್ಕೆ ಅವರು ಯತ್ನಿಸುತ್ತಾರೆ.ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಸೂಕ್ಷ್ಮವಾಗಿ ವರ್ತಿಸಬೇಕು. ತಾಳ್ಮೆಯಿಂದ, ಸಹಾನುಭೂತಿಯಿಂದ ಮತ್ತು ಮುಖಾಮುಖಿಯಿಲ್ಲದ ರೀತಿಯಲ್ಲಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸುವುದು ಒಳಿತೇ ಹೊರತು ಅವರೊಂದಿಗೆ ವ್ಯರ್ಥ ಜಗಳ ಸಲ್ಲದು. ನಿಮ್ಮ ಕೆಲಸಗಳು ಇತರರಿಗೆ ಒಪ್ಪಿಗೆಯಾಗುವವರೆಗೆ ಸ್ವಲ್ಪ ಸಮಯಕ್ಕೆ ಅವಕಾಶಕೊಡಿ. ಹಿಂದೆಮುಂದೆ ಯೋಚಿಸದೆ ಜಗಳವಾಡಿದರೆ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇರುತ್ತದೆ.

4. ನಿಮ್ಮ ಪ್ರೀತಿಪಾತ್ರರ ಗಮನವನ್ನು ನಿಮ್ಮೆಡೆ ಸೆಳೆಯುವುದಕ್ಕಾಗಿ ಜಗಳ ಮಾಡಬೇಡಿ

4. ನಿಮ್ಮ ಪ್ರೀತಿಪಾತ್ರರ ಗಮನವನ್ನು ನಿಮ್ಮೆಡೆ ಸೆಳೆಯುವುದಕ್ಕಾಗಿ ಜಗಳ ಮಾಡಬೇಡಿ

ನಿಮ್ಮ ಪ್ರೀತಿಯನ್ನು ಮತ್ತು ಗಮನವನ್ನು ಮುಕ್ತವಾಗಿರಿಸದೇ ನಿಮ್ಮವರೊಂದಿಗೆ ಜಗಳವಾಡಿದರೆ ಅವರು ನಿಮ್ಮನ್ನ ನೋಡುತ್ತಾರೆ, ಕಾಳಜಿ ತೆಗೆದುಕೊಳ್ಳುತ್ತಾರೆ ಎಂಬುದು ತಪ್ಪು ಭಾವನೆ. ಯಾರದ್ದೋ ಪ್ರೀತಿಯನ್ನು ಪಡೆಯುವುದಕ್ಕಾಗಿ ಅಥವಾ ಸ್ನೇಹವನ್ನು ಗಿಟ್ಟಿಸುವುದಕ್ಕಾಗಿ ಅನಗತ್ಯವಾಗಿರುವ ಜಗಳವನ್ನು ಮಾಡಲು ಹೋಗಬೇಡಿ. ಯಾವುದೇ ಪ್ರೀತಿಯನ್ನು ಕೂಡ ಹೋರಾಟದ ಮೂಲಕ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಂತಹ ಜಗಳಗಳು ಒತ್ತಡವನ್ನು, ಅಭದ್ರತೆಯನ್ನು, ಸ್ವಯಂ ಸೋಲುವ ಭೀತಿಯನ್ನು ಹೆಚ್ಚಿಸುತ್ತದೆಯೇ ಹೊರತು ನಿಮ್ಮವರ ಪ್ರೀತಿಯನ್ನು ನಿಮಗೆ ಗಳಿಸಿಕೊಡುವುದಿಲ್ಲ. ನಿಮ್ಮ ಪ್ರೀತಿಪಾತ್ರರ ಸಣ್ಣಸಣ್ಣ ವಿಚಾರಗಳನ್ನು ಕಾಳಜಿಯಿಂದ ನೋಡಿಕೊಳ್ಳುವುದು ಮತ್ತು ಅವರ ನಿರೀಕ್ಷೆಯೇ ಇಲ್ಲದೆ ನೀವು ಅವರ ಬೇಡಿಕೆಯನ್ನು ಪೂರೈಸುವುದನ್ನು ಕಲಿತರೆ ಹೆಚ್ಚು ಸಂತೋಷದಿಂದ ಇರಬಹುದು.ಆರೋಗ್ಯಕರ ಜೀವನ ಶೈಲಿಗೆ ಅಷ್ಟ ಸಲಹೆಗಳು

5. ಸಾರ್ವಜನಿಕ ನಿರೀಕ್ಷೆಗಳನ್ನು ತಲುಪುವುದಕ್ಕಾಗಿ ಜಗಳ ಮಾಡಬೇಡಿ

5. ಸಾರ್ವಜನಿಕ ನಿರೀಕ್ಷೆಗಳನ್ನು ತಲುಪುವುದಕ್ಕಾಗಿ ಜಗಳ ಮಾಡಬೇಡಿ

ನಾವು ಒಂದಷ್ಟು ನಿಯಮಗಳಿರುವ ಸಮಾಜದಲ್ಲಿ ಬದುಕುತ್ತಿದ್ದೇವೆ ಅಲ್ಲವೇ? ಅದೆಷ್ಟೋ ಸಂದರ್ಭದಲ್ಲಿ ಸಮಾಜದ ನಿರೀಕ್ಷೆಗಳನ್ನು ತಲುಪದ ಕೆಲವು ನಮ್ಮದೇ ಆಯ್ಕೆಯಲ್ಲಿ ನಮ್ಮಿಚ್ಛೆಯಂತೆ ಬದುಕುವುದಕ್ಕೆ ನಾವು ಭಯಪಡುತ್ತೇವೆ. ಕೆಲವೊಮ್ಮೆ ನೀವು ನಿಮ್ಮ ಜೀವನವನ್ನು ಪ್ರೀತಿಸುತ್ತಿಲ್ಲ ಎಂದು ಅಂದುಕೊಂಡಿದ್ದೀರಾ? ಉದಾಹರಣೆಗೆ ಏನನ್ನೋ ಕಳೆದುಕೊಂಡ ಭಾವನೆ, ಹಾಗಿದ್ದರೆ ಚೆನ್ನಾಗಿರುತ್ತಿತ್ತು, ಹೀಗಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ನಿಮ್ಮನ್ನ ಕಾಡಿದ್ದು ಇದಿಯಾ? ನಿಮ್ಮ ಬಗ್ಗೆ ನಿಮಗೆ ಗೊತ್ತಿರುವಷ್ಟು ಖಂಡಿತ ಮತ್ತೊಬ್ಬರಿಗೆ ಗೊತ್ತಿರುವುದಕ್ಕೆ ಸಾಧ್ಯವಿಲ್ಲ. ನೀವು ಹೇಗೆ ಬದುಕಬೇಕು ಎಂಬುದು ನಿಮ್ಮ ಸ್ವಂತ ಆಯ್ಕೆಯಾಗಿರಬೇಕು. ಸಾರ್ವಜನಿಕ ನಿರೀಕ್ಷೆಗಳನ್ನು ತಲುಪುದಕ್ಕಾಗಿ ಇನ್ನೊಬ್ಬರೊಂದಿಗೆ ಜಗಳವಾಡಿದರೆ ನೀವು ಸಮಾಜದಲ್ಲಿ ಏನನ್ನೂ ಸಾಧಿಸಲಾರಿರಿ. ನಿಮ್ಮ ಜೀವನ ಅದ್ಭುತವಾಗಿರಬೇಕು ಎಂದಾದಲ್ಲಿ ನಿಮ್ಮ ಇಚ್ಛೆಗಳಿಗೆ ಬೆಲೆ ಕೊಟ್ಟು ಬದುಕುವುದು ಒಳ್ಳೆಯದು.

6. ನಿಮ್ಮ ಹಕ್ಕುಗಳಿಗಾಗಿ ಮೂರ್ಖರೊಂದಿಗೆ ಹೋರಾಡಬೇಡಿ

6. ನಿಮ್ಮ ಹಕ್ಕುಗಳಿಗಾಗಿ ಮೂರ್ಖರೊಂದಿಗೆ ಹೋರಾಡಬೇಡಿ

ಕೆಲವು ಮೂರ್ಖ ವ್ಯಕ್ತಿಗಳು ತಮ್ಮದೇ ತಪ್ಪುಗಳಿಗೆ ಮತ್ತೊಬ್ಬರನ್ನು ದೂರುತ್ತಾರೆ. ಅವರು ತಾವು ಯಾವಾಗಲೂ ಸರಿ, ಮತ್ತೊಬ್ಬರು ಯಾವಾಗಲೂ ತಪ್ಪು ಎಂದೇ ಭಾವಿಸುತ್ತಾರೆ. ಅಂತವರು ಹೆಚ್ಚಾಗಿ ಸಿಟ್ಟಿಗೆ ಒಳಗಾಗುತ್ತಾರೆ ಮತ್ತು ಆಕ್ರಮಣಶೀಲ ಸ್ವಭಾವವನ್ನು ಹೊಂದಿರುತ್ತಾರೆ. ಇತರರ ಅಗತ್ಯತೆಯನ್ನು ಯಾವಾಗಲೂ ಅವರು ಅರ್ಥೈಸಿಕೊಳ್ಳುವುದೇ ಇಲ್ಲ. ಇತರರ ಭಾವನೆಗಳಿಗೆ ಅವರ ಬಳಿ ಬೆಲೆಯೇ ಇರುವುದಿಲ್ಲ. ಇಂತಹ ವ್ಯಕ್ತಿಗಳೊಂದಿಗೆ ನಿಮ್ಮ ಯೋಚನಾಲಹರಿಯನ್ನು ಹೇಳಿ ಅರ್ಥೈಸುವುದು ಅಷ್ಟು ಸುಲಭವಲ್ಲ. ನಿಮ್ಮ ಹಕ್ಕುಗಳಿಗಾಗಿ ಇಂತಹವರ ಬಳಿ ಜಗಳವಾಡಿದರೆ ನಿಮ್ಮ ಮನಸ್ಸೇ ಕದಡಿದಂತಾಗುತ್ತದೆ. ಇಂತಹವರನ್ನು ನಿರ್ಲಕ್ಷಿಸುವುದೇ ಒಳ್ಳೆಯದು.

7. ನಿಮ್ಮ ಕನಸುಗಳೊಂದಿಗೆ ಹೋರಾಡಿ ಮತ್ತು ಉತ್ತಮ ಮನುಷ್ಯರಾಗಿ

7. ನಿಮ್ಮ ಕನಸುಗಳೊಂದಿಗೆ ಹೋರಾಡಿ ಮತ್ತು ಉತ್ತಮ ಮನುಷ್ಯರಾಗಿ

ಶಸ್ಸಿನ ಸೂತ್ರಗಳಲ್ಲಿ ಒಂದು ಕನಸುಗಳು. ಕನಸುಗಳು ನಿಮ್ಮ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಪರಿವರ್ತಿಸುತ್ತದೆ. ನಿಮಗೆ ಸಿಗುವ ಪ್ರತಿ ಅವಕಾಶದಲ್ಲೂ ಕೂಡ ನಿಮ್ಮ ಕನಸನ್ನು ಬೆನ್ನಟ್ಟಿ ಸಾಗಬೇಕು. ಯಾರೊಂದಿಗೋ ಸಣ್ಣಪುಟ್ಟ ಜಗಳ ಮಾಡುತ್ತಾ ಕಾಲಹರಣ ಮಾಡುವ ಬದಲು ನಿಮ್ಮ ಕನಸುಗಳನ್ನು ಸಾಕಾರಗೊಳಿಸುವುದಕ್ಕೆ ನಿಮ್ಮ ಶಕ್ತಿಯ ಪ್ರಯೋಗ ಮಾಡಿ. ನಕಾರಾತ್ಮಕವಾಗಿರುವಾಗ ಧನಾತ್ಮಕ ವಿಚಾರಗಳಿಗೆ ಗಮನ ಹರಿಸುವುದು ಅಷ್ಟು ಸುಲಭದ ವಿಷಯವಲ್ಲ. ಆದರೆ ಹೆಚ್ಚಿನ ಸಂದರ್ಭದಲ್ಲಿ ನಿಮ್ಮನ್ನ ನಿಮ್ಮ ಗುರಿಯಿಂದ ಹಿಂದೆ ಸರಿಯುವಂತೆ ಮಾಡುವುದು ನಿಮ್ಮ ಶಾಂತಿಯ ಕೊರತೆ ನಿಮ್ಮ ಉತ್ತಮ ಶಕ್ತಿಯ ದುರ್ಬಳಕೆ. ಯಾವ ದಿನ ಸಣ್ಣಪುಟ್ಟ ಜಗಳವನ್ನು ನೀವು ತ್ಯಜಿಸುತ್ತೀರೋ ಆ ದಿನವೇ ನಿಮ್ಮ ಯಶಸ್ಸಿನ ಹಾದಿ ಪ್ರಾರಂಭವಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ.

English summary

Never Fight with Small Minded People

Stop fighting with those who have nothing else to fight, because they have small minds.Don't sweat the small stuff. Become quiet and self aware .Learn to keep your peace by ignoring the differences and agreeing to disagree Keep an open mind .For to lose your peace for things which hardly matter in the long run is stupidity which harms your mental and physical health ,your relationships and depletes your energy to follow your dreams
X
Desktop Bottom Promotion