Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಆರೋಗ್ಯಕರ ಜೀವನ ಶೈಲಿಗೆ ಅಷ್ಟ ಸಲಹೆಗಳು
ಇಂದು ಆಧುನಿಕ ಜೀವನ ಶೈಲಿಯು ವೇಗವಾಗಿ ಸಾಗುತ್ತಿದ್ದು ಹಾಗೂ ಅಷ್ಟೇ ತಲೆ ನೋವಿಂದ ಕೂಡಿದೆ. ಹೆಚ್ಚಿನವರು ಇದರ ಪರಿಣಾಮದ ಕುರಿತು ಆಲೋಚನೆ ಮಾಡಿರುವುದಿಲ್ಲ. ಆರೋಗ್ಯದಲ್ಲಿ ಉಂಟಾಗುವ ಅನೇಕ ರೀತಿಯ ಸಮಸ್ಯೆಗೆ ಕೂಡ ಇದು ಪ್ರಮುಖ ಪಾತ್ರ ವಹಿಸುತ್ತದೆ, ಎಂಬುದು ಇನ್ನೊಂದು ಆತಂಕಕಾರಿ ವಿಷಯವಾಗಿದೆ. ಅದು ಯಾವುದೇ ರೀತಿಯಲ್ಲಿ ಇರಬಹುದು, ಕೆಲಸದ ಒತ್ತಡ, ಓದುವುದು, ಯಾವುದೇ ಇರಲಿ, ಹಲವಾರು ರೀತಿಯ ಒತ್ತಡದಿಂದ ಅಥವಾ ಸಮಸ್ಯೆಯಿಂದ ನಾವು ಪ್ರತಿ ದಿನ ಬಳಲುತ್ತೇವೆ.
ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯ ಒತ್ತಡಗಳು ದಿನಾ ಸಂಭವಿಸುತ್ತಿದ್ದು, ಕೆಲವೊಮ್ಮೆ ಅದನ್ನು ನಿಭಾಯಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ಆಹಾರವನ್ನು ನೀವು ದಿನಾ ನಿತ್ಯ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುವುದರ ಜೊತೆಗೆ, ಇಂತಹ ಒತ್ತಡದಿಂದ ದೂರ ಇರಬಹುದು. ಆದ್ದರಿಂದ ನಾವು ಪ್ರತಿ ದಿನವೂ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇ ಬೇಕು.
ಆನಾರೋಗ್ಯದ ಮೂಲ ಕಾರಣವೆ ಆಹಾರ, ಉತ್ತಮ ಆಹಾರ ಆರೋಗ್ಯವನ್ನು ಪೋಷಿಸಿದರೆ. ಆರೋಗ್ಯಕರ ಜೀವನ ನಮ್ಮದು. ಉತ್ತಮ ಆಹಾರ ಸೇವನೆಯಿಂದ ಬಹುಪಾಲು ಆಹಾರ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು. ಇಲ್ಲಿದೆ ಕೆಲವು ಆರೋಗ್ಯಕರ ಜೀವನಕ್ಕೆ ಅಷ್ಟ ಸಲಹೆಗಳು. ನೀರಿನ ಕುರಿತು ಕಟ್ಟುಕಥೆ: ನಂಬಿದರೆ ನಂಬಿ, ಬಿಟ್ಟರೆ ಬಿಡಿ!
ಪ್ರತಿದಿನ ಮುಂಜಾನೆ ಎದ್ದು ತಪ್ಪದೆ ನೀರು ಸೇವಿಸಿ

ಮುಂಜಾನೆ ನೀರು ಹಾಕಿದರೆ ಮಾತ್ರ ಗಿಡಗಳು ಆರೋಗ್ಯಯುತವಾಗಿ ಬೆಳೆಯುತ್ತವೆ ಎನ್ನುತ್ತಾರೆ, ಅಂತೆಯೇ ಇದರಿಂದ ಮನುಷ್ಯನು ಹೊರತೇನಲ್ಲ ಪ್ರತಿದಿನ ಮುಂಜಾನೆ ತಪ್ಪದೆ ನೀರು ಸೇವಿಸಿದರೆ ಆರೋಗ್ಯಕರ ಹಾಗು ಸುಂದರ ಮತ್ತು ಆಕರ್ಷಕ ದೇಹ ನಮ್ಮದಾಗುತ್ತೆ. ಮನುಷ್ಯನ ಆರೋಗ್ಯಕಾರಿಬೆಳವಣಿಗೆಗೆ ನೀರು ಅತ್ಯವಶ್ಯಕ. ತೂಕ ಕಡಿಮೆಗೊಳಿಸುತ್ತದೆ, ತ್ವಚೆ ಕಾಂತಿಯುತವಾಗಿ ಇರುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಪ್ರತಿ ಜೀವಕೋಶದ ಭಾಗಗಳು ನಯವಾಗಿ ಮತ್ತು ಸರಿಯಾಗಿ ಕಾರ್ಯ ನಿರ್ವಹಿಸಲು ನೀರಿನ ಅಗತ್ಯವಿದೆ. ದಿನ ಆರಂಭವಾಗುತ್ತಿದ್ದಂತೆ ಈ ಚಟುವಟಿಕೆಯಿಂದ ನಿಮ್ಮ ದಿನ ಆರಂಭವಾಗಲಿ.
ದಿನಕ್ಕೆ 2 ಅಥವಾ 3 ಕಾರ್ಯಗಳನ್ನು ಪೂರ್ಣಗೊಳಿಸವ ಯೋಜನೆ ರೂಪಿಸಿಕೊಳ್ಳಿ
ಉತ್ತಮ ರೀತಿಯಲ್ಲಿ ಆರೋಗ್ಯ ಉಳಿಯಲು ಧನಾತ್ಮಕ ಚಿಂತನೆ ಮುಖ್ಯ.ಉದಾಹರಣೆಗೆ ನಿಮ್ಮ ಮನಸ್ಸಿನಲ್ಲಿ2 ಅಥವಾ 3 ಕಾರ್ಯಗಳನ್ನು ಪೂರ್ಣಗೊಳಿಸುವ ಯೋಜನೆ ರೂಪಿಸಿಕೊಂಡು ಸಕಾರಾತ್ಮಕ ಮುನ್ನುಗಿ.ಕಾರ್ಯಗಳನ್ನು ಪೂರ್ಣಗೊಳಿಸಿ.ಉದಾಹರಣೆಗೆ ವ್ಯಾಯಾಮ, ಒಳ್ಳೆಯ ನಿದ್ದೆ, ಮುಂತಾದವು. ಪ್ರತಿ ರಾತ್ರಿ ನೀವು ಮಲಗಲು ಹೋಗುವಾಗ ಇವತ್ತು ನೀವು ಮಾಡಿರುವ ಸಾಧನೆ ಬಗ್ಗೆ ಮೌಲ್ಯಮಾಪನ ಮಾಡಿಕೊಳ್ಳಿ. ಸಕಾರಾತ್ಮಕತೆ ಮೈಗೂಡಿಸಿಗೊಂಡು ಧನಾತ್ಮಕ ಚಿಂತನೆಯಿಂದ ನಿಮಗೆ ದೈಹಿಕ ಹಾಗು ಮಾನಸಿಕ ಶಾಂತಿ ನೆಮ್ಮದಿ ನಿಮ್ಮದಾಗುತ್ತದೆ ಅಲ್ಲದೆ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.
ಬೆಳಗಿನ ನಡಿಗೆಯ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡಿ
ತಜ್ಞರ ಪ್ರಕಾರ, ಎಲ್ಲರು ದಿನಕ್ಕೆ ಕನಿಷ್ಠ 30-40 ನಿಮಿಷ ಕೆಲವು ವ್ಯಾಯಾಮಗಳನ್ನು ಮಾಡಬೇಕು ಎಂದು ಹೇಳುತ್ತಾರೆ. ನೀವು ಆರೋಗ್ಯಕರ ಹಾಗು ದೈಹಿಕವಾಗಿ ಮಾನಸಿಕವಾಗಿ ಸುಂದರವಾಗಿ ಕಾಣಲು ವ್ಯಾಯಾಮ ಮಾಡುವುದು ಅವಶ್ಯಕ. ಆರೋಗ್ಯಕರ ಜೀವನಶೈಲಿ ಸಾಧಿಸಲು ನೀವು ವ್ಯಾಯಾಮಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸುವುದು ಬಹಳ ಮುಖ್ಯ. ಯೋಗ ಮತ್ತು ಇತರ ಜಿಮ್, ನೃತ್ಯ, ಕೆಲವು ಜಾಗಿಂಗ್ ಆಯ್ಕೆ ಮಾಡಿಕೊಳ್ಳಬಹುದು ನೀವು ಸುಲಭವಾಗಿ ಈ ತಂತ್ರಗಳನ್ನು ಉಪಯೋಗಿಸಿ ಆರೋಗ್ಯವಾಗಿ ಮಾನಸಿಕವಾಗಿ ದೈಹಿಕವಾಗಿ ಸುಂದರವಾಗಿ ಕಾಣಬಹುದು.
ಕೆಲಸದ ವೇಳೆಯಲ್ಲಿ ಮಧ್ಯೆ ಮಧ್ಯೆ ಒಂದು ವಿರಾಮವನ್ನು ತೆಗೆದುಕೊಳ್ಳಿ
ಸತತವಾಗಿ ಕಣ್ಣು ನಿಮ್ಮ ಲ್ಯಾಪ್ ಟಾಪ್ ಸ್ಕ್ರೀನ್ ನತ್ತ ದಿಟ್ಟಿಸುತ್ತಿದ್ದರೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂತಹ ಸಮಯದಲ್ಲಿ ನಡುವೆ ವಿರಾಮ ತೆಗೆದುಕೊ೦ಡರೆ ಸುಸ್ತಾಗುವುದಿಲ್ಲ, ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ಸೊ೦ಟ ಹಾಗೂ ಬೆನ್ನು ನೋವು ಕಾಣಿಸುವುದಿಲ್ಲ, ಕಣ್ಣಿಗೆ ಆಯಾಸವಾಗುವುದಿಲ್ಲ ಹಾಗು ತಲೆ ನೋವಿನಿ೦ದ ತಪ್ಪಿಸಿಕೊಳ್ಳಬಹುದು.
ನಿಮಗೆ ನೀವೇ ಶಿಕ್ಷಣವನ್ನ ನೀಡಿ
ಒಬ್ಬ ಜ್ಞಾನಿಯು ಒಮ್ಮೆ ಶಿಕ್ಷಣದ ಬಗ್ಗೆ ಹೀಗೆ ಹೇಳಿದಾರೆ. ವಿದ್ಯೆಗೆ ವಿನಯವೇ ಭೂಷಣ ಎಂದು. .ಶಿಕ್ಷಣವನ್ನು ಮಗು ತಾಯಿಯ ಗರ್ಭದಲ್ಲಿರುವಾಗಲೇ ಕಲಿಯುತ್ತದಂತೆ. ಶಿಕ್ಷಣವೆಂದರೆ ಸೃಜನಶೀಲತೆ ಕಲಿಯುವುದು, ಓದುವುದು, ಬರೆಯುವುದು ಇತ್ಯಾದಿ. ನಿಮ್ಮ ಮೆಚ್ಚಿನ ಪುಸ್ತಕಗಳು, ನಿಯತಕಾಲಿಕೆಗಳು, ಕಾದಂಬರಿಗಳು, ಪತ್ರಿಕೆ, ಓದುವುದುರಿಂದ ಜ್ಞಾನ ಹೆಚ್ಚುತ್ತದೆ. ಜೀವನದ ಬಗ್ಗೆ ನಂಬಿಕೆ ಧೈರ್ಯ ಸ್ಫೂರ್ತಿಯನ್ನು ಬೆಳೆಸುತ್ತದೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ದೇಹ ಮತ್ತು ತ್ವಚೆಯ ಆರೋಗ್ಯ ವೃದ್ಧಿಸುವ ಟಾಪ್ ಫುಡ್!
ನಿಮ್ಮ ಸುತ್ತಮುತ್ತಲ್ಲಿನ ಪರಿಸರವನ್ನ ಸ್ವಚ್ಛ ಮಾಡಿ
ಆರೋಗ್ಯಕರ ಮತ್ತು ಸುಂದರ ಜೀವನಕ್ಕೆ ಪರಿಸರವನ್ನ ಉಳಿಸುವುದು ತುಂಬಾ ಮುಖ್ಯ. ಕೇವಲ ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಮಾಡಿದರೆ ಅಷ್ಟೇ ಸಾಕಾಗುವುದಿಲ್ಲ. ಪರಿಸರವನ್ನು ಉಳಿಸುವ ಕಾರ್ಯವನ್ನ ಮಾಡಬೇಕು ಮರ- ಗಿಡ ಉತ್ತಮ ಗಾಳಿ ವಾತಾವರಣವಿದ್ದರೆ ಆರೋಗ್ಯ ತನ್ನಷ್ಟಕ್ಕೆ ವೃದ್ಧಯಾಗುತ್ತೆ. ನಮ್ಮ ಸುತ್ತ- ಮುತ್ತಲ್ಲಿನ ಪರಿಸರ ಅಂದರೆ ಕಚೇರಿಯಲ್ಲಿ, ಶಾಲಾ - ಕಾಲೇಜು, ಮುಂತಾದ ಜಾಗಗಳಲ್ಲಿ ಸ್ವಚ್ಛತೆಯನ್ನ ಕಾಪಾಡಬೇಕು ಇದರಿಂದ ಉತ್ತಮ ಆರೋಗ್ಯ ಜೀವನವನ್ನು ರೂಪಿಸಿಕೊಳ್ಳಬಹುದು.
ಅಗ್ಗ ಮತ್ತು ಪರಿಣಾಮಕಾರಿ ಆಯ್ಕೆ:- ಇಂಟರ್ನೆಟ್ ಬ್ರೌಸಿಂಗ್
ನೀವು ಸರಳ ರೀತಿಯಲ್ಲಿ ಆರೋಗ್ಯಕರ ಮತ್ತು ಸುಂದರ ಜೀವನವನ್ನು ಇಂಟರ್ನೆಟ್ ಬ್ರೌಸಿಂಗ್ ಮೂಲಕ ಅಭಿವೃದ್ಧಸಿಕೊಳ್ಳಬಹುದು. ಮನರಂಜನೆಯ ಉದ್ದೇಶಕ್ಕಾಗಿ ಇಂಟರ್ನೆಟ್ ಬಳಕೆ ಮಾಡುವುದಕ್ಕಿಂತ, ನೀವು ವಿವಿಧ ಆನ್ಲೈನ್ ಟ್ಯುಟೋರಿಯಲ್ ಮತ್ತು ಸಂಶೋಧನೆಗಳು ಪರಿಶೀಲಿಸಲು ಬಳಸಬಹುದು. ಖಂಡಿತವಾಗಿಯೂ ಇದು ನಿಮ್ಮ ಸಾಮರ್ಥ್ಯ ಮತ್ತು ಜ್ಞಾನವನ್ನು ವೃದ್ಧಿಸಲು ನೆರವಾಗುತ್ತದೆ. ಆರೋಗ್ಯಕರ ಜೀವನ ಶೈಲಿಯನ್ನು ಈ ರೀತಿಯಲ್ಲಿ ಅಭಿವೃದ್ಧಿಸಿಪಡಿಸಿಕೊಳ್ಳಬಹುದು.
ಅತಿಯಾದ ನಿದ್ದೆಯನ್ನು ತಪ್ಪಿಸಿ
ನಿದ್ದೆಯು ಮಾನವನ ಆರೋಗ್ಯಕ್ಕೆ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಸಮರ್ಪಕ ನಿದ್ದೆ ದೊರೆಯದೇ ಇದ್ದರೆ ಹಾರ್ಮೋನುಗಳು, ಮಾನಸಿಕ ಒತ್ತಡ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಕುಂಟಿತಗೊಳಿಸುತ್ತದೆ. ಸರಿಯಾದ ನಿದ್ರೆ ನಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಉತ್ತಮ ಫಲಿತಾಂಶ ನೀಡುತ್ತದೆ. ನಮ್ಮ ದೇಹ ಇಡೀ ದಿನ ಕಳೆದುಕೊಂಡ ಶಕ್ತಿಯನ್ನು ಪುನಃ ಸಂಗ್ರಹಿಸಲು ಸಮಯದ ಅಗತ್ಯವಿದೆ. ಕನಿಷ್ಠಪಕ್ಷ 7-8 ಗಂಟೆಗಳ ಕಾಲ ನಿಯಮಿತವಾಗಿ ನಿದ್ದೆಯನ್ನು ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
















