Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಯಾವ ರಾಶಿಗಳಿಗೆ ಹೇಗೆಲ್ಲಾ ಹಾನಿಕಾರಕ ಭಾವನಾತ್ಮಕ ಗುಣ ಇರುತ್ತೆ
ಭಾವನೆಗಳು ಸಂಬಂಧದ ಅವಿಭಾಜ್ಯ ಅಂಗವಾಗಿದೆ, ಅದರಲ್ಲೂ ವಿಶೇಷವಾಗಿ ಒಂದು ಪ್ರಣಯ ಸಂಬಂಧಗಳಲ್ಲಿ ಬಹಳ ಮುಖ್ಯವಾದ ವಿಷಯ. ಕೆಲವರು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಇನ್ನೂ ಕೆಲವರು ಭಾವನಾತ್ಮಕ ಅಭಿವ್ಯಕ್ತಿಯ ಮೂಲ ಕಲ್ಪನೆಯನ್ನೇ ಹೊಂದಿರುವುದಿಲ್ಲ.

ಆದಾಗ್ಯೂ, ಸಂಬಂಧದಲ್ಲಿ ತಮ್ಮ ಮಿತಿಯನ್ನು ಮರೆತು, ಸಂಬಂಧಗಳಲ್ಲಿ ಅಗತ್ಯವಾದ ಭಾವನಾತ್ಮಕ ಬುದ್ಧಿವಂತಿಕೆಯ ಕೊರತೆಯನ್ನೂ ಹೊಂದಿರುವ ಜನರಿದ್ದಾರೆ. ವ್ಯಕ್ತಿಯು ತಮ್ಮ ಭಾವನಾತ್ಮಕ ಸ್ಥಿತಿಯನ್ನು ಅರಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು ಮತ್ತು ಒಬ್ಬರ ಭಾವನೆಗಳ ತೀವ್ರತೆಯ ಮೇಲೆ ಹಿಡಿತ ಸಾಧಿಸುವುದು, ಅಥವಾ ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಯಾವಾಗಲೂ ಅತ್ಯಂತ ಮುಖ್ಯ.
ಹಾನಿಕಾರಕ ಭಾವನಾತ್ಮಕ ಅಭ್ಯಾಸಗಳನ್ನು ನಿವಾರಿಸುವುದು ಅಥವಾ ಅದರಿಂದ ಹೊರಬರುವುದು ಯಾವಾಗಲೂ ಕಷ್ಟಕರ, ಅದಕ್ಕಿಂತ ಹೆಚ್ಚಾಗಿ ಅಂತಹ ಹಾನಿಕಾರಕ ಭಾವನಾತ್ಮಕ ಅಭ್ಯಾಸಗಳನ್ನು ಗುರುತಿಸುವುದು ಕೂಡ ಹೆಚ್ಚು ಸವಾಲಿನ ಸಂಗತಿಯಾಗಿದೆ. ಆದ್ದರಿಂದ, ಸಂಬಂಧದಲ್ಲಿ ವ್ಯಕ್ತಿಯು ಹೊಂದಬಹುದಾದ ವಿಷಕಾರಿ ಭಾವನಾತ್ಮಕ ನಡವಳಿಕೆಯನ್ನು ಎತ್ತಿ ತೋರಿಸುವಲ್ಲಿ ರಾಶಿಚಕ್ರ ಚಿಹ್ನೆಗಳು ನಿರ್ಣಾಯಕ ಪಾತ್ರವಹಿಸುತ್ತವೆ.
ಬಲವಾದ ಸಂಪರ್ಕವನ್ನು ಹಾಳುಮಾಡುವ ಭಾವನಾತ್ಮಕ ಅಭ್ಯಾಸಗಳ ಬಗ್ಗೆ ಎಲ್ಲರೂ ಬಹಳಷ್ಟು ಹೇಳಬಹುದು. ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಸಂಬಂಧದಲ್ಲಿ ಅತ್ಯಂತ ಹಾನಿಕಾರಕ ಭಾವನಾತ್ಮಕ ಅಭ್ಯಾಸಗಳು ಯಾವವು ಎಂಬುದು ಈ ಕೆಳಗಿನಂತಿವೆ.

ಮೇಷ ರಾಶಿ
ಮೇಷ ರಾಶಿಯವರು ಅತ್ಯಂತ ಹಠಾತ್ ಪ್ರವೃತ್ತಿಯನ್ನು ಹೊಂದಿದ್ದೀರಿ, ನಿಮ್ಮ ಈ ನಡವಳಿಕೆಯನ್ನು ನಿಮ್ಮ ಪ್ರಣಯ ಸಂಬಂಧದಿಂದ ಎಷ್ಟೇ ದೂರವಿರಿಸಲು ನೀವು ಪ್ರಯತ್ನಿಸಿದರೂ, ಅದು ಅದರ ಮಾರ್ಗವನ್ನು ಕಂಡುಕೊಳ್ಳುತ್ತದೆ ಮತ್ತು ನಿಮ್ಮ ಜೀವನದಲ್ಲಿ ಹರಿದಾಡುತ್ತದೆ. ನೀವು ಬಲವಾದ ವ್ಯಕ್ತಿತ್ವವನ್ನು ಹೊಂದಿದ್ದರೂ ಕೂಡ, ಸಮಸ್ಯೆಗಳನ್ನು ನಿಭಾಯಿಸಲು ಮತ್ತು ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವಾಗ, ನೀವು ನಿಮ್ಮ ಹಠಾತ್ ಪ್ರವೃತ್ತಿಯನ್ನು ಬಿಟ್ಟು ಎಲ್ಲಾ ಸಮಯದಲ್ಲೂ ಬಲವಾಗಿರಲು ಪ್ರಯತ್ನಿಸಿ. ಈ ಅಭ್ಯಾಸವನ್ನು ನೀವು ತೊಡೆದುಹಾಕಲು ಮತ್ತು ನಿಮ್ಮ ಸಂಗಾತಿ ಅದನ್ನು ಬೆಳೆಸಿದಾಗ ಸಮಸ್ಯೆಗಳನ್ನು ಚರ್ಚಿಸುವುದು ಬಹಳ ಮುಖ್ಯ.

ವೃಷಭ ರಾಶಿ
ವೃಷಭ ರಾಶಿಯವರಿಗೆ ನೀವು ಎಲ್ಲಾ ಇತರ ರಾಶಿಚಕ್ರಗಳಿಗಿಂತ ಅತ್ಯಂತ ಸಮತೋಲಿತ ಸ್ವಭಾವ ಹೊಂದಿರುವವರು, ಆದರೆ ನಿಮಗೆ ನಿಮ್ಮ ಸ್ವಂತಿಕೆಯ ಬಗ್ಗೆ ನಂಬಿಕೆಯಲ್ಲಿ ಸಮಸ್ಯೆಯಿದೆ. ನೀವು ಜೀವನದಲ್ಲಿ ಬಹಳ ಪ್ರಾಯೋಗಿಕವಾಗಿರುವಾಗ, ನಿಮ್ಮ ಪ್ರಾಯೋಗಿಕ ನಡವಳಿಕೆಯು ನಿಮ್ಮಲ್ಲಿ ಸ್ವಾಭಾವಿಕ ಅಪನಂಬಿಕೆಯನ್ನು ಬೆಳೆಸುತ್ತದೆ, ಅದು ಸ್ಥಿರವಾದ ವೈಫಲ್ಯಗಳಿಗೆ ಕಾರಣವಾಗುತ್ತದೆ. ಹೇಗಾದರೂ ವಿಫಲಗೊಳ್ಳುತ್ತದೆ ಎಂದು ನೀವು ಭಾವಿಸಿ,ಸಂಬಂಧವನ್ನು ಮುಂದಕ್ಕೆ ಸಾಗಿಸುವ ವಿಶ್ವಾಸ ನಿಮಗೆ ಇರುವುದಿಲ್ಲ. ಈ ನಕಾರಾತ್ಮಕತೆಯನ್ನು ನೀವು ತೊಡೆದುಹಾಕಿ, ಜನರಿಗೆ ಅನುಮಾನದ ಲಾಭವನ್ನು ನೀಡದಿರುವುದು ಬಹಳ ಮುಖ್ಯ.

ಮಿಥುನ ರಾಶಿ
ಮಿಥುನ ರಾಶಿಯವರು, ನಿಮ್ಮ ಚಿಹ್ನೆಯ ಪ್ರಕಾರ ನೀವು ಸಂಘರ್ಷದ ವ್ಯಕ್ತಿತ್ವವನ್ನು ಹೊಂದಿದ್ದೀರಿ. ಒಂದೆಡೆ, ನೀವು ನಿರಾತಂಕ, ಆಕರ್ಷಕವಾಗಿ ಮತ್ತು ಹರ್ಷಚಿತ್ತದಿಂದ ಇದ್ದರೆ, ಇನ್ನೊಂದು ಬದಿಯಲ್ಲಿ ನೀವು ತೊಂದರೆಗೀಡಾಗಿದ್ದೀರಿ ಮತ್ತು ಪ್ರಕ್ಷುಬ್ಧರಾಗಿದ್ದೀರಿ. ನಿಮ್ಮ ವ್ಯಕ್ತಿತ್ವಗಳಲ್ಲಿನ ಹಠಾತ್ ಬದಲಾವಣೆಯೊಂದಿಗೆ, ನೀವು ಮುಂದುವರಿಯುವುದು ಯಾವಾಗಲೂ ಕಷ್ಟ. ನೀವು ದೀರ್ಘಕಾಲದವರೆಗೆ, ಕೆಲವೊಮ್ಮೆ ಅಗತ್ಯಕ್ಕಿಂದ ಹೆಚ್ಚಾಗಿ ಒಂದು ಸಮಸ್ಯೆಯ ಬಗ್ಗೆ ಯೋಚಿಸುತ್ತೀರಿ ಯೋಚಿಸುತ್ತೀರಿ. ಆದ್ದರಿಂದ, ನಿಮ್ಮ ಹಿಂದಿನ ದಿನಗಳ ಬಗ್ಗೆ ಯೋಚಿಸದೇ ನಿಮ್ಮ ಮುಂದಿನ ಉತ್ತಮ ಭವಿಷ್ಯದ ಬಗ್ಗೆ ಯೋಚಿಸುವ ಸಮಯ ಇದು.

ಕರ್ಕ ರಾಶಿ
ಕರ್ಕ ರಾಶಿಯವರು- ನೀವು ಆಳವಾಗಿ ಮತ್ತು ಪ್ರಾಮಾಣಿಕವಾಗಿ ಅನುಭವಿಸುವ ಸಾಮರ್ಥ್ಯವನ್ನು ಹೊಂದಿದ್ದೀರಿ. ಭಾವನಾತ್ಮಕ ಕಾಳಜಿ ಮತ್ತು ಪರಾನುಭೂತಿಯಲ್ಲಿ ಆಳವಾಗಿ ಬೇರೂರಿರುವುದು ನಿಮ್ಮ ಉತ್ತಮ ವ್ಯಕ್ತಿತ್ವದ ಲಕ್ಷಣವಾಗಿದ್ದರೂ, ನೀವು ಅಭದ್ರತೆಯ ನಕಾರಾತ್ಮಕ ಗುಣಗಳನ್ನು ಸಹ ಹೊಂದಿದ್ದೀರಿ. ನಿಮ್ಮ ಸುತ್ತಲಿನ ಇತರ ಜನರೊಂದಿಗೆ ನೀವು ನಿರಂತರವಾಗಿ ನಿಮ್ಮನ್ನು ಹೋಲಿಸಿಕೊಳ್ಳುತ್ತೀರಿ, ಅದು ನಿಮಗೆ ಕಡಿಮೆ ಪ್ರಾಮುಖ್ಯತೆಯನ್ನು ನೀಡುತ್ತದೆ. ನಿಮ್ಮ ಸ್ವಂತ ಪ್ರಾಮುಖ್ಯತೆಯನ್ನು ನೀವು ಅರಿತುಕೊಳ್ಳಲು ಇದು ಸರಿಯಾದ ಸಮಯ ಮತ್ತು ನಿಮ್ಮ ಬಗ್ಗೆ ತೀರ್ಪು ನೀಡಲು ಇತರನ್ನು ಅವಲಂಬಿಸಬೇಡಿ.

ಸಿಂಹ ರಾಶಿ
ಸಿಂಹ ರಾಶಿಯವರು- ನೀವು, ನಿಮ್ಮ ಬಗ್ಗೆ ಜನರಿಂದ ದೊರೆಯುವ ಗಮನ ಮತ್ತು ಪ್ರೀತಿಯನ್ನು ಹೆಚ್ಚು ಇಷ್ಟಪಡುತ್ತೀರಿ ಆದರೆ ಇತರರಿಗೆ ಅದೇ ರೀತಿ ನೀಡುವಾಗ ನೀವು ಸ್ವಲ್ಪ ಸೋಮಾರಿಯಾಗುತ್ತೀರಿ. ಸಮಸ್ಯೆಗಳು ಎದುರಾದಾಗ, ಅವುಗಳನ್ನು ಪರಿಹರಿಸುವ ಬದಲು, ನೀವು ಅವುಗಳ ಬಗ್ಗೆ ಹೆಚ್ಚು ಯೋಚಿಸುತ್ತೀರಿ ಮತ್ತು ಎಂದಿಗೂ ಮುಂದುವರೆಯಲು ಯೋಚಿಸುವುದಿಲ್ಲ. ಇದು ನಿಮ್ಮನ್ನು ಸ್ವಾನುಕಂಪ ಮತ್ತು ಖಿನ್ನತೆ/ ನಿರಾಕರಣೆಗೆ ಒಳಪಡಿಸುತ್ತದೆ. ನಿಮಗಾಗಿ ಕೆಲಸಗಳು ಮಾಡಲಾಗುವಂತೆ, ಸಂಬಂಧದಲ್ಲಿ ಕೂಡ ನೀವು ಅದೇ ರೀತಿ ಮಾಡಬೇಕಾಗುತ್ತದೆ. ಇದು ಆರೋಗ್ಯಕರ ಸಂಬಂಧದ ಏಕೈಕ ಕೀಲಿಯಾಗಿದೆ.

ಕನ್ಯಾ ರಾಶಿ
ಕನ್ಯಾರಾಶಿಯವರು- ನೀವು ಜೀವನದ ಬಗ್ಗೆ ತುಂಬಾ ಪ್ರಾಯೋಗಿಕರಾಗಿದ್ದೀರಿ. ನೀವು ಜೀವನವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತೀರಿ ಎಂದರೆ, ನಿಮ್ಮ ಬಗ್ಗೆ ನಿಮಗೆ ಎಂದಿಗೂ ಒಳ್ಳೆಯ ಭಾವನೆ ಮೂಡುವುದಿಲ್ಲ, ನಿಮ್ಮಲ್ಲಿ ತಪ್ಪಿತಸ್ಥ ಎಂಬ ಭಾವನೆಯು ಯಾವಾಗಲೂ ಇರುತ್ತದೆ, ಅದು ನಿಮಗೆ ಇನ್ನಷ್ಟು ಉತ್ತಮವಾಗಬೇಕು ಹಾಗೂ ಇನ್ನೂ ಹೆಚ್ಚು ಪ್ರಯತ್ನಿಸಬೇಕು ಎಂಬ ಭಾವನೆಯನ್ನು ನೀಡುತ್ತದೆ. ನಿಮ್ಮ ಬಗ್ಗೆ ಮತ್ತು ನೀವು ಮಾಡುವ ಕೆಲಸದ ಬಗ್ಗೆ ನೀವು ತುಂಬಾ ವಿಮರ್ಶಾತ್ಮಕರಾಗುವ ಸಾಧ್ಯತೆಯಿದೆ. ನಿಮ್ಮನ್ನು ಕಡಿಮೆ ಮೌಲ್ಯಮಾಪನ ಮಾಡುವುದನ್ನು ನೀವು ಮೊದಲು ನಿಲ್ಲಿಸಬೇಕು, ಇಲ್ಲದಿದ್ದರೆ ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಗೊಂದಲ ಮಾತ್ರ ಇನ್ನಷ್ಟು ಹೆಚ್ಚಿಸುತ್ತೀರಿ.

ತುಲಾ ರಾಶಿ
ತುಲಾ ರಾಶಿಯವರು - ನೀವು ಅನೇಕ ವಿಚಾರಗಳನ್ನು ಹೊಂದಿರಬಹುದು ಆದರೆ ಸಂಬಂಧದಲ್ಲಿ ನೀವು ಮಾಡಬೇಕಾದ ಆಯ್ಕೆಗಳ ಬಗ್ಗೆ ನೀವು ಎಂದಿಗೂ ನಿರ್ಣಾಯಕವಾಗಿರುವುದಿಲ್ಲ. ನಿಮ್ಮ ಡೋಲಾಯಮಾನವಾದ ಸ್ವಭಾವವು ನಿಮ್ಮ ಅಧಿಕಾರ ಮತ್ತು ಸವಲತ್ತುಗಳನ್ನು ಕಸಿದುಕೊಂಡು ನಿಮ್ಮ ಸಂಗಾತಿಯೇ ನಿಮ್ಮ ಬಾಸ್ (ಮುಖ್ಯಸ್ಥನನ್ನಾಗಿ) ನ್ನಾಗಿ ಮಾಡುತ್ತದೆ. ಆರೋಗ್ಯಕರ ಸಂಬಂಧವು ಸಮತೋಲಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ ಆದರೆ ನಿಮ್ಮ ವ್ಯಕ್ತಿತ್ವದಿಂದ, ಘರ್ಷಣೆಗಳು ಉಂಟಾಗಬಹುದು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು- ನಿಮ್ಮನ್ನು ಇತರರು ತಪ್ಪಾಗಿಯೇ ಅರ್ಥೈಸಿಕೊಳ್ಳುತ್ತಾರೆ. ನೀವು ಆತಂಕವಿಲ್ಲದ, ನಿಶ್ಚಿಂತೆಯ ವ್ಯಕ್ತಿ ಎಂದು ಹಲವರು ನಂಬಿದ್ದರೂ, ನೀವು ನಿಜವಾಗಿಯೂ ಬಹಳಷ್ಟು ಭಾವನೆಗಳನ್ನು ಹೊಂದಿದ್ದೀರಿ ಆದರೆ ಅದನ್ನು ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಇದು ನಿಷ್ಕ್ರಿಯ-ಆಕ್ರಮಣಕಾರಿ ಸ್ವಭಾವಕ್ಕೆ ಕಾರಣವಾಗುತ್ತದೆ. ಅದರ ಬಗ್ಗೆ ಮಾತನಾಡುವ ಅಥವಾ ಅಸಮಾಧಾನವನ್ನು ವ್ಯಕ್ತಪಡಿಸುವ ಬದಲು, ನೀವು ಬದಲಾಗುವ ಮನಸ್ಥಿತಿ (ಮೂಡಿ) ಆಗುತ್ತೀರಿ, ಮತ್ತು ನಿಮ್ಮ ಸಂಗಾತಿಯನ್ನು ಗೊಂದಲಗೊಳಿಸುತ್ತೀರಿ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೊಡ್ಡ ಅಂತರವನ್ನು ಉಂಟುಮಾಡಬಹುದು. ಆದ್ದರಿಂದ ನೀವು ಅದನ್ನು ಮಾತನಾಡುವುದು ಮತ್ತು ಅನಗತ್ಯ ತಪ್ಪುಗ್ರಹಿಕೆಯನ್ನು ಬಿಡುವುದು ಅವಶ್ಯಕ.

ಮಕರ ರಾಶಿ
ಮಕರ ರಾಶಿಯವರು- ಪ್ರತಿಯೊಬ್ಬರೂ ನಿಮ್ಮ ಮಾನದಂದಗಳನ್ನು ಪೂರೈಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ನೀವು ಪರಿಪೂರ್ಣತಾವಾದಿಯಾಗಿರುವುದರಿಂದ, ನಿಮ್ಮ ಸಂಗಾತಿ ಅದೇ ರೀತಿ ಇಲ್ಲದ ಕಾರಣ ನೀವು ಯಾವಾಗಲೂ ಕೋಪಗೊಳ್ಳುತ್ತೀರಿ. ನಿಮ್ಮ ಸುತ್ತಲೂ ಶಿಸ್ತು ಮತ್ತು ನಿಯಂತ್ರಣವನ್ನು ನೀವು ಬಯಸುತ್ತೀರಿ. ನೀವು ಅದನ್ನು ಒಬ್ಬ ವ್ಯಕ್ತಿಯಲ್ಲಿ ಕಾಣದಿದ್ದಾಗ ಇನ್ನೊಬ್ಬರಲ್ಲಿ ಅದನ್ನು ಕಂಡುಕೊಳ್ಳಲು ಹೋಗುತ್ತೀರಿ. ಯಾವುದೇ ಸಹಾನುಭೂತಿಯಿಲ್ಲದೆ ನಿಮ್ಮನ್ನು ಶಾಂತವಾಗಿರಿಸುವಿರಿ.

ಕುಂಭ ರಾಶಿ
ಕುಂಭ ರಾಶಿಯವರು- ನೀವು ಹೆಚ್ಚು ಬುದ್ಧಿಜೀವಿ ಮತ್ತು ನಿಮ್ಮ ಸ್ವಾತಂತ್ರ್ಯವನ್ನು ತುಂಬಾ ಪ್ರೀತಿಸುತ್ತೀರಿ. ನೀವು ಏಕಾಂಗಿಯಾಗಿರುವುದನ್ನು ಆನಂದಿಸುತ್ತೀರಿ ಅದು ಕೆಲವೊಮ್ಮೆ ನಿಮ್ಮಲ್ಲಿ ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ. ನೀವು ಕೋಪಗೊಂಡಾಗ ಅಥವಾ ಅಸಮಾಧಾನಗೊಂಡಾಗ, ಅದನ್ನು ಹೊರಹಾಕುವ ಬದಲು, ನೀವೇ ಪ್ರತ್ಯೇಕವಾಗಿರುವಿರಿ. ಇದು ಪರಿಹಾರಗಳನ್ನು ಕಂಡುಹಿಡಿಯುವುದಕ್ಕೆ ಮತ್ತು ಆರೋಗ್ಯಕರ ಸಂಬಂಧಕ್ಕೆ ತೊಡಕಾಗುತ್ತದೆ. ನಿಮ್ಮ ಸಂಗಾತಿಯಿಂದ ನಿಮ್ಮನ್ನು ದೂರವಿಡುವ ಬದಲು ಅವರೊಂದಿಗೇ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಯಾವಾಗಲೂ ಉತ್ತಮ ಆಯ್ಕೆಯಾಗಿದೆ.

ಮೀನ ರಾಶಿ
ಮೀನ ರಾಶಿಯವರು- ನೀವು ಸ್ನೇಹಪರ ವ್ಯಕ್ತಿ, ಜನರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತೀರಿ. ಆದರೆ ಕೆಲವೊಮ್ಮೆ ಎಲ್ಲಾ ಸಹಾಯ ಪ್ರಕ್ರಿಯೆಯಲ್ಲಿ, ಇತರರು ನಿಮ್ಮನ್ನು ಮರೆತುಬಿಡಬಹುದು. ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡುವುದು ಎಷ್ಟು ಮುಖ್ಯವೋ, ನೀವೂ ಸಹ ನಿಮಗೆ ಸಹಾಯ ಮಾಡುವುದು ಅಷ್ಟೇ ಮುಖ್ಯ. ನಿಮ್ಮ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು, ಇಲ್ಲದಿದ್ದರೆ ನೀವು ಯಾವಾಗಲೂ ಅಪೂರ್ಣ ಮತ್ತು ಇತರರಿಂದ ಪ್ರೀತಿಯನ್ನು ಸ್ವೀಕರಿಸಲು ಅಸಮರ್ಥರಾಗುತ್ತೀರಿ.



Click it and Unblock the Notifications











