For Quick Alerts
ALLOW NOTIFICATIONS  
For Daily Alerts

ಯಾವ ರಾಶಿ ಹೇಗೆ ಹಣ ಉಳಿಸಬೇಕು? ಇಲ್ಲಿದೆ ಟಿಪ್ಸ್

|

ಎಷ್ಟೇ ಗಳಿಸಿದರೂ ಸಾಕು ಎನ್ನುವ ಪದ ಬಳಸದೇ ಇರುವ ಏಕೈಕ ವಸ್ತು ಅಥವಾ ಅಸ್ತ್ರ ಎಂದರೆ ಅದು ಹಣ!. ನಮ್ಮ ಜೀವನದ ಬಹುತೇಕ ಸಮಯವನ್ನು ನಾವು ಹಣ ಗಳಿಸುವುದಕ್ಕೇ, ವ್ಯಯಿಸುವುದಕ್ಕೆ, ಯಾವ-ಯಾವ ಮೂಲಗಳಿಂದ ಹಣವನ್ನು ಗಳಿಸಬಹುದು ಮತ್ತು ನಾವೂ ಸಾಕಷ್ಟು ಹಣವಂತರಾದರೇ ಹೇಗೆಲ್ಲಾ ಜೀವಿಸಬಹುದು ಎಂದು ಕನಸುಕಾಣುವುದರಲ್ಲೇ ಕಳೆದಿರುತ್ತೆವೆ, ಹೌದಲ್ಲವೇ?.

Money Saving Advice Based On Zodiac Sign

ಆದರೆ ಪ್ರತಿಯೊಬ್ಬರು ತಾವು ಗಳಿಸಿದ ಹಣವನ್ನು ತಮ್ಮದೇ ಆದ ಆಸಕ್ತಿಯ ವಿಷಯಗಳ ಮೇಲೆ ವ್ಯಯಿಸುತ್ತಾರೆ. ಪ್ರವಾಸ, ಕೂಡಿಡುವುದು, ಆಭರಣ, ಮನೆ-ಕಾರು ಖರೀದಿ ಹೀಗೆ ಭಿನ್ನವಾಗಿರುತ್ತದೆ. ಆದರೆ ನಿಮಗೆ ಗೊತ್ತೆ, ನಾವು ಹೇಗೆ, ಎಷ್ಟು ಹಣ ಗಳಿಸುತ್ತವೆ ಹಾಗೂ ಯಾವ ರೀತಿ ವ್ಯಯಿಸುತ್ತೇವೆ ಎಂಬೆಲ್ಲಾ ಅಂಶಗಳು ನಮ್ಮ ರಾಶಿಗೆ ಅನುಗುಣವಾಗಿರುತ್ತದೆ ಎಂದು. ನಾವು ಯಾವ ರಾಶಿಗೆ ಸೇರಿದ್ದೇವೆ ಎಂಬ ಆಧಾರದಲ್ಲಿ ನಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ನಮ್ಮ ರಾಶಿ ತಿಳಿಸಿಕೊಡಲಿದೆ. ನಿಮ್ಮ ರಾಶಿ ಯಾವುದು? ಇದು ನಿಮ್ಮ ಹಣಕಾಸಿನ ಬಗ್ಗೆ ಏನನ್ನು ಸೂಚಿಸುತ್ತದೆ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಹಣದ ವಿಷಯದಲ್ಲಿ ಸಾಮಾನ್ಯ ಅಪಾಯಕಾರಿ ಪರಿಸ್ಥಿತಿಯಲ್ಲೇ ಇರುತ್ತಾರೆ. ಇವರ ಹಠಾತ್ ನಿರ್ಧಾರಗಳಿಂದಾಗಿ ಎಡವಟ್ಟೇ ಹೆಚ್ಚು. ಇವರು ಆರ್ಥಿಕವಾಗಿ ಅಷ್ಟೇನೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲ. ಇವರು ಕ್ಷಣಿಕ ಆಕರ್ಷಣೆಗೆ ಹೆಚ್ಚು ಒಳಗಾಗುತ್ತಾರೆ. ಹೊಸ ಬಟ್ಟೆ, ಕಾರು, ವಸ್ತುಗಳನ್ನು ಖರೀದಿಸುವಲ್ಲಿ ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇವರು ತಮ್ಮ ಗಳಿಕೆಯ ಸಾಮರ್ಥ್ಯವನ್ನು ಚೆನ್ನಾಗಿ ಅರಿತವರಾಗಿರುತ್ತಾರೆ ಮತ್ತು ಆ ಬಗ್ಗೆ ವಿಶ್ವಾಸ ಹೊಂದಿರುತ್ತಾರೆ. ಹಣ ಉಳಿತಾಯದ ವಿಚಾರದಲ್ಲಿ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸುತ್ತಾರೆ ಮತ್ತು ಈ ಗುರಿ ತಲುಪಿದಾಗ ಅವರಿಗೆ ಅವರೇ ಪ್ರತಿಫಲವನ್ನು ಪಡೆಯುತ್ತಾರೆ. ಭವಿಷ್ಯದಲ್ಲಿ ಹೆಚ್ಚಿನ ಲಾಭ ಗಳಿಸಲು, ಉಳಿತಾಯ ಮಾಡಲು ಹಣ ದ ವಿಷಯದಲ್ಲಿ ತೆಗೆದುಕೊಳ್ಳುವ ದಿಢೀರ್ ನಿರ್ಧಾರಗಳನ್ನು ಇವರು ನಿಯಂತ್ರಿಸಬೇಕಿದೆ ಹಾಗೂ ಹಣ ವ್ಯಯಿಸುವ ಕಲೆಯನ್ನು ಕಲಿಯಬೇಕಿದೆ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರು ಹುಟ್ಟು ಅತ್ಯುತ್ತಮ ಹಣದ ವ್ಯವಸ್ಥಾಪಕರು. ಹೊಸ ಬಟ್ಟೆ ಮತ್ತು ಆಭರಣಗಳಂಥ ವಿಷಯಗಳಿಗೆ ಎಷ್ಟು ಪ್ರಾತಿನಿಧ್ಯ ನೀಡಬೇಕೆಂಬ ಸ್ಪಷ್ಟವಾದ ಚಿತ್ರಣ ಇವರಿಗಿರುತ್ತದೆ, ಮತ್ತು ಇದನ್ನು ಆನಂದಿಸುತ್ತಾರೆ. ಇವರು ಜವಾಬ್ದಾರಿ, ವಿಶ್ವಾಸಾರ್ಹತೆಗೆ ಹೆಚ್ಚು ಒಲವು ತೋರುತ್ತಾರೆ. ಈ ಲಕ್ಷಣಗಳು ಹಣವನ್ನು ಉಳಿಸುವಲ್ಲಿ ಮತ್ತು ಭವಿಷ್ಯದ ಯೋಜನೆಗಳಲ್ಲಿ ಅವರು ಉತ್ತಮರು ಎಂಬುದನ್ನು ಸೂಚಿಸುತ್ತದೆ. ಆದರೆ, ಇವರು ಐಷಾರಾಮಿಗೆ ಖರ್ಚು ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ, ಏಕೆಂದರೆ ಇಂದು ಖರ್ಚು ಮಾಡಿದ ಹಣವನ್ನು ನಾಳೆ ಮತ್ತೆ ಖರ್ಚು ಮಾಡಲಾಗುವುದಿಲ್ಲ.

ಮಿಥುನ ರಾಶಿ

ಮಿಥುನ ರಾಶಿ

ಚಂಚಲ ಸ್ವಭಾವ ಮತ್ತು ಅನಿರೀಕ್ಷಿತ ನಡವಳಿಕೆಯಿಂದಾಗಿ ಇವರ ಹಣಕಾಸಿನ ನಿರ್ವಹಣೆ ಸಹ ಸ್ವಲ್ಪ ಅಸ್ಥಿರವಾಗಿರುತ್ತದೆ. ಇವರು ಹಣ ಸಂಪಾದಿಸುವುದರಲ್ಲಿ ಅತ್ಯುತ್ತಮರು. ಅಲ್ಲದೇ ಉತ್ತಮ ಸಂವಹನಕಾರರು ಮತ್ತು ಜನರೊಂದಿಗೆ ಬಹಳ ಸುಲಭವಾಗಿ ಬೆರೆಯುತ್ತಾರೆ. ಆದರೆ ಗಳಿಸಿದ ಹಣವನ್ನು ಉಳಿಸುವುದು ಸಂಪೂರ್ಣವಾಗಿ ಭಿನ್ನರು. ಹಣವನ್ನು ತಮ್ಮ ಉಳಿತಾಯ ಖಾತೆ ಅಥವಾ ನಿವೃತ್ತಿ ಖಾತೆಗಳಿಗೆ ನಿಯಮಿತವಾಗಿ ಸ್ವಯಂಚಾಲಿತ ವರ್ಗಾವಣೆ ಮಾಡುವ ಮೂಲಕ ಹಣವನ್ನು ಗಳಿಸುವ ಉಳಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕಿದೆ. ಸಾಧ್ಯವಾದಷ್ಟು ದಿಢೀರ್ ಖರ್ಚನ್ನು ತಗ್ಗಿಸಬೇಕಾಗುತ್ತದೆ.

ಕರ್ಕ ರಾಶಿ

ಕರ್ಕ ರಾಶಿ

ಈ ನಿರ್ದಿಷ್ಟ ರಾಶಿಯವರಿಗೆ ಹಣಕಾಸು ನಿರ್ವಹಣೆಯ ಬಗ್ಗೆ ಸಲಹೆಗಳ ಅಗತ್ಯವೇ ಇಲ್ಲ. ಕಾರಣ ಇವರು ಉತ್ತಮ ಕೆಲಸಗಾರರು, ಭವಿಷ್ಯಕ್ಕಾಗಿ ಹಣವನ್ನು ಉಳಿಸುವಲ್ಲಿ ಬಹಳ ಆಸಕ್ತಿ ಉಳ್ಳವರು ಮತ್ತು ಇವರ ಹೂಡಿಕೆಗಳು ಹೇಗೆ ಏರುತ್ತಿದೆ ಎಂಬುದನ್ನು ನೋಡಲು ಉತ್ಸುಕರಾಗಿರುತ್ತಾರೆ. ಇವರು ತಮ್ಮ ಮನೆ ಮತ್ತು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಹಾಗೂ ಗೌರವಿಸುತ್ತಾರೆ. ಭವಿಷ್ಯದ ಜವಾಬ್ದಾರಿಗಳನ್ನು ಪೂರೈಸಲು ಅಗತ್ಯ ಹಣವನ್ನು ಉಳಿಸಿರುವುದರಿಂದ ಹೆಚ್ಚು ಸುರಕ್ಷಿತವೆಂದು ನೆಮ್ಮದಿಯಿಂದ ಇರುತ್ತಾರೆ. ಇವರ ರಾಶಿಯ ಸಂಕೇತ ಏಡಿಯೇ ಸೂಚಿಸುವಂತೆ, ಇವರು ತಮ್ಮ ಆರ್ಥಿಕ ಸ್ಥಿರತೆಯ ಬಗ್ಗೆ ಮಾತ್ರವಲ್ಲದೆ ತಮ್ಮ ಸುತ್ತಲಿನ ಇತರರ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಇವರು ಮಾಡಬೇಕಿರುವುದು ತಮ್ಮ ಹಣವನ್ನು ಹೇಗೆ ವೃದ್ಧಿಸಬೇಕು ಎಂಬುದನ್ನು, ಅದರ ಸಂಪನ್ಮೂಲಗಳನ್ನು ಹುಡುಕುವ ಬಗ್ಗೆ ಹೆಚ್ಚು ಚಿಂತೆ ಮಾಡುವುದನ್ನು ನಿಲ್ಲಿಸಬೇಕು ಮತ್ತು ಸ್ವಂತ ಆರೈಕೆಗೆ ಹೆಚ್ಚು ಗಮನ ಕೊಡಬೇಕು.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ಆಕ್ರಮಣಕಾರಿ ಉದ್ಯಮಶೀಲತೆಯ ಗುಣ ಹೊಂದಿರುವವರು. ಇವರು ಬಹಳ ಮಹತ್ವಾಕಾಂಕ್ಷೆ ಮತ್ತು ಸೃಜನಶೀಲರಾಗಿರುವ ಕಾರಣ ಹಣ ಸಂಪಾದಿಸುವುದು ಅಷ್ಟು ಕಷ್ಟವಾಗುವುದಿಲ್ಲ. ಜೀವನದ ಸಣ್ಣ-ಸಣ್ಣ ವಿಷಯಗಳನ್ನು ಆನಂದಿಸುತ್ತಾರೆ ಮತ್ತು ದುಬಾರಿ ಅಭಿರುಚಿಗಳನ್ನು ಹೊಂದಿರುತ್ತಾರೆ. ಇತ್ತೀಚಿನ ಪ್ರವೃತ್ತಿಗಳು ಮತ್ತು ಜೀವನಶೈಲಿಗಳನ್ನು ಇಷ್ಟಪಡುವ ಇವರನ್ನು ದಿಢೀರ್ ಖರ್ಚಿನಿಂದ ದೂರವಿರಿಸುವುದು ಸ್ವಲ್ಪ ಕಷ್ಟಸಾಧ್ಯವೇ. ಈ ಗುಣ ಒಂದು ರೀತಿಯಲ್ಲಿ ಜೀವನದಲ್ಲಿ ಅತ್ಯುತ್ತಮ ವಸ್ತುಗಳನ್ನು ಹೊಂದಲು ಸಹಾಯ ಮಾಡುತ್ತದೆ ಮತ್ತು ಅಗ್ಗದ ವಸ್ತುಗಳಿಗೆ ಖರ್ಚು ಮಾಡುವುದನ್ನು ತಡೆಯುತ್ತದೆ. ಆದರೂ ಜೀವನದ ಆಸೆಗಳನ್ನು ಪೂರೈಸುವಲ್ಲಿ ಮಾಡುವ ಖರ್ಚು ಹಾಗೂ ಉಳಿತಾಯದೆಡೆಗೆ ಸಮತೋಲನವನ್ನು ಸಾಧಿಸುವುದು ಮುಖ್ಯ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ಕಠಿಣ ಪರಿಶ್ರಮಿಗಳು, ಬಹಳ ವ್ಯವಹಾರಿಗಳು ಮತ್ತು ಜಾಗರೂಕರಾಗಿರುವುದರಿಂದ ಇವರ ಹಣಕಾಸು ನಿರ್ವಹಣೆ ಉತ್ತಮವಾಗಿಯೇ ಇರುತ್ತದೆ. ಹಣವನ್ನು ಹೇಗೆ ಉಳಿಸಬೇಕೆಂಬುದನ್ನು ಅವರಿಗೆ ಯಾರೂ ಹೇಳುವ ಅಗತ್ಯವೇ ಇಲ್ಲ. ಅವರು ಪ್ರಚೋದನೆಯಿಂದಾಗಿ ಹಣವನ್ನು ವ್ಯಯಿಸುವವರಲ್ಲ, ಇವರ ಆಯ್ಕೆ ಉತ್ತಮವಾಗಿಯೇ ಇರಬೇಕು, ಉತ್ತಮವಾದುದನ್ನೇ ಖರೀದಿಸಬೇಕು ಎಂದು ಬಯಸುತ್ತಾರೆ. ಆದರೆ ಆರಾಮದಾಯಕ ಜೀವನಕ್ಕೆ ಕೆಲವೊಮ್ಮೆ ಖರ್ಚು ಮಾಡುವುದು ಒಳ್ಳೆಯದೇ ಎಂಬುದನ್ನು ಇವರು ನೆನಪಿನಲ್ಲಿಡಬೇಕು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ಗಳಿಸುವುದು ಹಾಗೂ ಖರ್ಚು ಮಾಡುವುದು ಎರಡನ್ನೂ ಸಮಪ್ರಮಾಣದಲ್ಲಿಯೇ ಮಾಡುತ್ತಾರೆ. ಮನರಂಜನೆ ಅಥವಾ ಅವರ ಸಾಮಾಜಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಇವರು ಇಷ್ಟಪಡುತ್ತಾರೆ. ಈ ಪ್ರವೃತ್ತಿ ಕೆಲವೊಮ್ಮೆ ನಿಮ್ಮನ್ನು ಹಾಳು ಮಾಡಬಹದು. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಲು ಪ್ರಯತ್ನಿಸುವಾಗ ನಿಮ್ಮ ಗುರಿಗಳ ಬಗ್ಗೆ ನೆನಪಿಡಿ. ಹಣ ಉಳಿಸುವ ಬಗ್ಗೆ ನೀವು ಮಾಡುವ ಚಿಂತನೆ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಖರ್ಚು ಮಾಡಿದ ನಂತರ ಚಿಂತಿಸಿ ಫಲವಿಲ್ಲ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಹಣಕಾಸಿನ ವಿಷಯದಲ್ಲಿ ವೃಶ್ಚಿಕ ರಾಶಿಯವರು ಉತ್ತಮ ನಿಯಂತ್ರಣವನ್ನು ಹೊಂದಿರುತ್ತಾರೆ. ಖರೀದಿ ಅಥವಾ ಹೂಡಿಕೆ ಮಾಡುವ ಮೊದಲು ಸಾಕಷ್ಟು ಸಂಶೋಧನೆ ನಡೆಸಿ ನಂತರ ಹಣ ಹೂಡುತ್ತಾರೆ. ಖರೀದಿಸಬೇಕೆಂದು ಬಲವಾಗಿ ಭಾವಿಸಿದಾಗ ಇವರು ಖರೀದಿಗೆ ಮುಂದಾಗುತ್ತಾರೆ. ಹೆಚ್ಚಿನ ಬಾರಿ ಇವರ ಈ ಪ್ರವೃತ್ತಿಗಳು ಯಶಸ್ವಿಯಾಗಿರುತ್ತದೆ, ಆದ್ದರಿಂದ ಇವರ ಬಹುತೇಕ ಹೂಡಿಕೆಗಳು ಉತ್ತಮ ನಿರ್ಧಾರವೇ ಆಗಿರುತ್ತದೆ. ಆದರೆ, ಇವರ ರಹಸ್ಯ ಸ್ವಭಾವದಿಂದ ಹಣ ಮತ್ತು ಹೂಡಿಕೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಸವಾಲಾಗಿ ಪರಿಣಮಿಸುತ್ತದೆ. ತುಲಾ ರಾಶಿಯವರು ಉಳಿತಾಯ ಮತ್ತು ಖರ್ಚಿನ ನಡುವೆ ಸಮತೋಲನಕ್ಕೆ ಹೆಸರುವಾಸಿಯಾಗಿರುತ್ತಾರೆ.

ಧನು ರಾಶಿ

ಧನು ರಾಶಿ

ಗುರುಗ್ರಹದಿಂದ ಆಳಲ್ಪಡುವ ಧನು ರಾಶಿಯವರಿಗೆ ಹಣ ಬರುವುದು ಕಷ್ಟವೇನಲ್ಲ. ಆದರೆ ಇವರ ಅಸಹನೆಯಿಂದಾಗಿ ಕೆಲವು ಭಾರಿ ಅತಿಯಾದ ಖರ್ಚಿಗೆ ಕಾರಣವಾಗಬಹುದು ಮತ್ತು ಹಣದ ವಿಷಯದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಯಾವುದೇ ಖರೀದಿಗೂ ಮುನ್ನ ಕೊಂಚ ಸಂಶೋಧನೆ ನಡೆಸಿದರೆ ಹಣವನ್ನು ಉಳಿಸಬಹುದು.

ಮಕರ ರಾಶಿ

ಮಕರ ರಾಶಿ

ವೃಷಭ ರಾಶಿಯವರಂತೆ, ಮಕರ ರಾಶಿಯವರು ಸಹ ಉತ್ತಮ ಹಣ ವ್ಯವಸ್ಥಾಪಕರು. ಹಣದ ವಿಷಯದಲ್ಲಿ ಬಹಳ ಶಿಸ್ತುಬದ್ಧ ಮತ್ತು ಸಂಘಟಿತವಾಗಿರುತ್ತಾರೆ. ಆದರೆ ಇತರರು ಸಹ ತಮ್ಮಂತೆ ಹಣ ಖರ್ಚು, ಉಳಿತಾಯ ಮಾಡುವ ಮಾದರಿಯನ್ನು ಅನುಸರಿದೇ ಇದ್ದರೆ ಇದನ್ನು ನೀವು ತೀರ್ಮಾನಿಸುವ ಕೆಲಸ ಮಾಡಬೇಡಿ. ಇವರು ಯಾವುದೇ ಪ್ರಲೋಭನೆಗೆ ಒಳಗಾದೇ ಹಠಾತ್ ಖರೀದಿಗೆ ಒಳಗಾಗುವುದಿಲ್ಲ, ಆದ್ದರಿಂದ ಉಳಿತಾಯ ಚೆನ್ನಾಗಿಯೇ ಮಾಡುತ್ತಾರೆ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ಹಣದ ವಿಷಯದಲ್ಲಿ ತುಂಬಾ ಉದಾರರಾಗಿರುವ ಕಾರಣ ಇವರನ್ನು ಹೆಚ್ಚಾಗಿ ತೊಂದರೆಗೆ ಸಿಲುಕಿಸುತ್ತದೆ. ದಾನ ಅಥವಾ ದೇಣಿಗೆ ಪಡೆಯುವ, ನೀಡುವ ಮೊದಲು ತಮ್ಮ ಹಣಕಾಸಿನ ವಿಷಯದಲ್ಲಿ ಇನ್ನೂ ಸಾಕಷ್ಟು ಸಂಘಟಿತರಾಗಬೇಕಿದೆ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯನ್ನು ನೆಪ್ಚೂನ್ ಆಳುತ್ತಿದೆ. ಆದ್ದರಿಂದ ಇವರು ಹಣವನ್ನು ಉಳಿಸುವುದು ಅತ್ಯಂತ ಕಷ್ಟಕರ. ಇವರು ಕೋಮಲ ಹೃದಯದವರಾಗಿದ್ದು, ವಿತ್ತೀಯ ಲಾಭಗಳಿಗಿಂತ ಜೀವನದ ಆಳ ಅರ್ಥಗಳನ್ನು ಹುಡುಕಲು ಯತ್ನಿಸುತ್ತಾರೆ. ಇವರು ಹಣಕಾಸನ್ನು ನಿರ್ವಹಿಸಲು ವೃತ್ತಿಪರರನ್ನು ನೇಮಿಸಿಕೊಳ್ಳುವ ಮೂಲಕ ಲಾಭ ಪಡೆಯಬಹುದು.

ಪ್ರತಿಯೊಂದು ರಾಶಿಯು ತನ್ನದೇ ಆದ ಸಾಮರ್ಥ್ಯ,ದೌರ್ಬಲ್ಯವನ್ನು ಹೊಂದಿದೆ. ನೀವು ಇವುಗಳನ್ನು ಅರಿತು ಲಾಭ ಮಾಡಿಕೊಳ್ಳಲು ಸಾಧ್ಯವಾದರೆ ಪ್ರಯತ್ನಿಸಿ. ಇದರ ಪಾಲನೆ ನಂತರ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯುತ್ತಿರುವುದನ್ನು ನೀವೇ ಗಮನಿಸಿ.

English summary

Money Saving Advice Based On Zodiac Sign

Have you got to a point where you do not have to talk about money? Have you earned it just enough? Well, the fact is that we can never stop talking about money because it never feels like enough. We spend our entire life earning money, spending it, find avenues to increase it and in some cases dream for it. The fact is that we all like to spend it differently or you can say we all use it differently.
Story first published: Wednesday, September 18, 2019, 15:17 [IST]
X
Desktop Bottom Promotion