Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಜ್ಯೇಷ್ಠ ಪೂರ್ಣಿಮಾ ವ್ರತ 2021: ಪೂಜಾ ವಿಧಿ ಹಾಗೂ ಈ ದಿನದ ವಿಶೇಷವೇನು?
ಹಿಂದೂ ಧರ್ಮದಲ್ಲಿ ಜ್ಯೇಷ್ಠ ಮಾಸವೇ ತುಂಬಾ ವಿಶೇಷವಾದದ್ದು. ಈ ತಿಂಗಳಿನಲ್ಲಿ ಗಂಗಾ ದಸರಾ, ನಿರ್ಜಲ ಏಕಾದಶಿ ಹೀಗೆ ಅನೇಕ ವಿಶೇಷ ದಿನಗಳಿವೆ, ಅದರಲ್ಲೊಂದು ಜ್ಯೇಷ್ಠ ಪೂರ್ಣಿಮಾ. ಈ ವರ್ಷ ಜ್ಯೇಷ್ಠ ಪೂರ್ಣಿಮಾ ಜೂನ್ 24ರಂದು ಬಂದಿದೆ. ಜ್ಯೇಷ್ಠ ಪೂರ್ಣಿಮಾ ದಿನ ವಿಷ್ಣು ಹಾಗೂ ಶಿವನನ್ನು ಪೂಜಿಸಲಾಗುವುದು. ಈ ದಿನ ಪವಿತ್ರ ನದಿಯಲ್ಲಿ ಅಥವಾ ಸ್ನಾನದ ನೀರಿನಲ್ಲಿ ಗಂಗಾಜಲ ಹಾಕಿ ಸ್ನಾನ ಮಾಡಿ ಉಪವಾಸವಿದ್ದು ವಿಷ್ಣುವಿನ ಆರಾಧನೆ ಮಾಡಲಾಗುವುದು.
ಈ ದಿನದ ವಿಶೇಷತೆ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೋಡಿ.

ಜ್ಯೇಷ್ಠ ಪೂರ್ಣಿಮಾ ವ್ರತ 2021: ದಿನಾಂಕ ಮತ್ತು ಸಮಯ
ಪೂರ್ಣಿಮಾ ಪ್ರಾರಂಭ: ಜೂನ್ 23, ಮುಂಜಾನೆ 02:02ಕ್ಕೆ
ಪೂರ್ಣಿಮಾ ಮುಕ್ತಾಯ: ಜೂನ್ 24 ಮಧ್ಯಾಹ್ನ 10:39ರವರೆಗೆ
ಸೂರ್ಯೋದಯ: ಬೆಳಗ್ಗೆ 06:25ಕ್ಕೆ
ಸೂರ್ಯಾಸ್ತ: ಸಂಜೆ 06:16ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತ 2021: ಶುಭ ಮುಹೂರ್ತ
ಬ್ರಹ್ಮ ಮುಹೂರ್ತ ಬೆಳಗ್ಗೆ 04:48ರಿಂದ 05:36ರವರೆಗೆ
ಅಭಿಜಿತ್ ಮುಹೂರ್ತ ಬೆಳಗ್ಗೆ 11:57ರಿಂದ ಮಧ್ಯಾಹ್ನ 12:44ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06:05ರವರೆಗೆ 06:29ರವರೆಗೆ
ಅಮೃತ ಕಾಲ ರಾತ್ರಿ 11:26ರಿಂದ 12:52ರವರೆಗೆ
ರವಿ ಯೋಗ ಜೂನ್ 25, 06:25ರಿಂದ 7:41ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತದ ಮಹತ್ವ
ಇದು ತುಂಬಾ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣು ಹಾಗೂ ಶಿವನ ಭಕ್ತರು ಉಪವಾಸವಿದ್ದು ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಶುಭ ಫಲ ಉಂಟಾಗುವುದು ಹಾಗೂ ಪಾಪಗಳಿಂದ ಮುಕ್ತಿ ಸಿಗುವುದು ಎಂಬ ನಂಬಿಕೆ ಇದೆ. ಈ ದಿನ ಅಗ್ಯತವಿರುವವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು.

ಪೂಜಾ ವಿಧಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಬೇಕು.
* ವಿಷ್ಣು ಹಾಗೂ ಶಿವನನ್ನು ಆರಾಧಿಸಬೇಕು.
* ವಿಷ್ಣುವಿಗೆ ತುಳಸಿಯನ್ನು ಶಿವನಿಗೆ ಬಿಲ್ವೆ ಪತ್ರೆಯನ್ನು ಅರ್ಪಿಸಬೇಕು.
* ಕೆಲವರು ಉಪವಾಸ ಮಾಡಿದರೆ, ಇನ್ನು ಕೆಲವರು ಈ ದಿನದಂದು ಸಾತ್ವಿಕ ಆಹರಗಳನ್ನಷ್ಟೇ ಸೇವಿಸುತ್ತಾರೆ.
* ಚಂದ್ರನಿಗೆ ಹಾಲು ಮತ್ತು ಜೇನಿನಿಂದ ಆರ್ಘ್ಯ ಸಲ್ಲಿಸಬೇಕು.
* ವಿಷ್ಣು ಲಕ್ಷ್ಮಿ ಜೊತೆಗೆ ಆಲದ ಮರದಲ್ಲಿ ನೆಲೆಸಿರುತ್ತಾನೆ ನಂಬಿಕೆ ಇದೆ, ಆದ್ದರಿಂದ ಈ ದಿನ ಆಲದ ಮರಕ್ಕೆ ನೀರು ಹಾಗೂ ಹಾಲು ಅರ್ಪಿಸಲಾಗುವುದು.
ಈ ರೀತಿ ಜ್ಯೇಷ್ಠ ಪೂರ್ಣಿಮಾ ಆಚರಿಸಿದರೆ ಅವರ ಬದುಕಿನಲ್ಲಿ ಸಂತೋಷ, ಸಮೃದ್ಧಿ ನೆಲೆಸುವುದು.



Click it and Unblock the Notifications
