ಆತ್ಮೀಯರ ಸಾವಿನ ಆಘಾತದಿಂದ ಹೊರಬರುವುದು ಹೇಗೆ?

ಆತ್ಮೀಯರ, ಮನಸ್ಸಿಗೆ ತುಂಬಾ ಹತ್ತಿರವಾದವರ ಸಾವಿನ ಸುದ್ದಿ ಎಂಥಾ ಆತ್ಮಬಲಶಾಲಿಗಳನ್ನೂ, ಗಟ್ಟಿಗರನ್ನೂ, ನಿಶ್ಚಲ ಮನಸ್ಸುಳ್ಳವರನ್ನೂ ಸಹ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಂದಿಸಿಬಿಡುತ್ತದೆ. ನಾವೆಷ್ಟೇ ಮಾನಸಿಕವಾಗಿ ದೃಢವಾಗಿದ್ದರೂ ದಿನದಿಂದ ದಿನಕ್ಕೆ ನೋವು ನಮ್ಮನ್ನು ಮಾನಸಿಕವಾಗಿ ಕಗ್ಗಿಸುತ್ತಾ ಇರುತ್ತದೆ.

ಇಂಥಾ ದುಃಖಕರ ನೋವು ನಾವು ಹಿಂದೆ ಎಂದೂ ಜೀವನದಲ್ಲಿ ಅನುಭವಿಸಿರುವುದಿಲ್ಲ ಆದ ಕಾರಣ ಇದನ್ನು ನಿಭಾಯಿಸುವುದು ಸಾಕಷ್ಟು ಕಷ್ಟವೇ ಆಗುತ್ತದೆ.

ಹಲವರು ಇದನ್ನು ನಿಭಾಯಿಸಲು ಸಾಧ್ಯವಾಗದೇ ತಪ್ಪು ನಿರ್ಧಾರಗಳನ್ನೂ ತೆಗೆದುಕೊಳ್ಳುವುದುಂಟು.

ಆತ್ಮೀಯರ ಸಾವನ್ನು ನಾವು ಹೇಗೆ ಸ್ವೀಕರಿಸಬೇಕು ಹಾಗೂ ನಿಭಾಯಿಸಬೇಕು ಎಂದು ಕೆಲವು ಸಲಹೆಗಳನ್ನು ನಿಮಗಿಲ್ಲಿ ನೀಡಿದ್ದೇವೆ:

ನಾವು ಹೇಗೆ ಭಾವಿಸುತ್ತೇನೆ?

ನಾವು ಹೇಗೆ ಭಾವಿಸುತ್ತೇನೆ?

* ಇದ್ದಕ್ಕಿಂದ್ದಂತೆ ಸಾವಿನ ಸುದ್ದಿ ನಮಗೆ ಮಾನಸಿಕವಾಗಿ ಸಾಕಷ್ಟು ಆಘಾತವನ್ನು ನೀಡುತ್ತದೆ ನಿಜ. ಆದರೆ, ಏನಾಯಿತು ಎಂಬುದನ್ನು ಅರ್ಥಮಾಡಿಕೊಂಡು ಸತ್ಯಾಂಶವನ್ನು ಅರಗಿಸಿಕೊಳ್ಳಲು ಮತ್ತು ಚೇತರಿಸಿಕೊಳ್ಳಲು ನಿಮಗೆ ಸಮಯ ಬೇಕಾಗುತ್ತದೆ.

*ಪ್ರತಿಯೊಬ್ಬರೂ ವಿಭಿನ್ನವಾಗಿ ಪ್ರತಿಕ್ರಿಯಿಸಿದರೂ, ದುಃಖದ ಉತ್ತುಂಗದಿಂದ ಹಂತ ಹಂತವಾಗಿ ಹೋಗುತ್ತೇವೆ. ಈ ಹಂತಗಳು ಆಘಾತ, ಅಪರಾಧ ಭಾವನ (ಗಿಲ್ಟಿ), ವಿಷಾದ, ಕೋಪ, ಆತಂಕ, ಖಿನ್ನತೆ, ಅಸಹಾಯಕತೆ ಮತ್ತು ಅಂತಿಮವಾಗಿ ಸ್ವೀಕಾರದಂಥ ಹಂತವನ್ನು ತಲುಪುತ್ತೇವೆ.

* ಅದರಲ್ಲೂ ಹದಿಹರೆಯದವರಾಗಿ ಇಂಥಾ ಸಂದರ್ಭವನ್ನು ಎದುರಿಸುವುದು ಕಷ್ಟ ಮತ್ತು ಇದು ಭಾವನಾತ್ಮಕವಾಗಿ ತೀರಾ ಕಾಡುವ ಸಮಯವಾಗಿರುತ್ತದೆ. ಆತ್ಮೀಯರು ಇನ್ನು ಮುಂದೆ ಇಲ್ಲದಿರುವಾಗ ನಿಮ್ಮ ಜಗತ್ತು ಶೂನ್ಯ ಎನಿಸಬಹುದು, ಏನೂ ಬೇಡ ಎನಿಸಬಹುದು, ಎಲ್ಲವೂ ನಿಮ್ಮ ಮೇಲೆ ಅಪ್ಪಳಿಸುತ್ತಿದೆ ಎಂದು ಭಾವಿಸಬಹುದು.

* ಒಂಟಿತನದ ಭಾವನೆಗಳು ಕಾಡಬಹುದು, ನೀವು ಒಂಟಿಯಾಗಿರಬೇಕು ಎನಿಸುತ್ತದೆ ಮತ್ತು ನಿಮ್ಮ ಎಲ್ಲಾ ಸ್ನೇಹಿತರಿಂದ ದೂರವಿರಲು ನೀವು ಬಯಸಬಹುದು. ಆದರೂ ಸಾವಿನ ಬಗ್ಗೆ ಜನರು ವಿಭಿನ್ನವಾಗಿ, ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.

ಇಲ್ಲಗಳನ್ನು ಎದುರಿಸಲು ನಾವು ಏನು ಮಾಡಬಹುದು?

ಇಲ್ಲಗಳನ್ನು ಎದುರಿಸಲು ನಾವು ಏನು ಮಾಡಬಹುದು?

* ನೀವು ಮಾಡಬಹುದಾದ ಒಂದು ಉತ್ತಮ ಕೆಲಸವೆಂದರೆ ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳುವುದು. ನಿಮ್ಮ ಮನಸ್ಸಿನ ನೋವನ್ನು ಯಾವುದೇ ಪ್ರಕಾರದಿಂದ ಹೊರಹಾಕಿ. ನಿಮಗೆ ನೀವೇ ಹೇಳಿಕೊಳ್ಳುತ್ತೀರೋ, ನಿಮ್ಮ ಆತ್ಮೀಯರ ಬಳಿ ನಿಮ್ಮ ನೋವನ್ನು ತೋಡಿಕೊಳ್ಳುತ್ತೀರೊ ಅದು ನಿಮ್ಮ ಆಯ್ಕೆ. ಆದರೆ ಮನಸ್ಸಿನ ನೋವನ್ನು ಹೊರಹಾಕುವುದು ಕಡ್ಡಾಯ.

* ನೀವು ಹೊಂದಿರುವ ಯಾವುದೇ ನೋವಿನ ಭಾವನೆಗಳನ್ನು ಮೃದುಗೊಳಿಸಲು ಮಾತನಾಡುವುದು, ನೋವನ್ನು ಹಂಚಿಕೊಳ್ಳುವುದು ಸಹಾಯ ಮಾಡುತ್ತದೆ.

* ನೀವು ದುಃಖವನ್ನು ಅನುಭವಿಸಿ, ತಡೆಯುವ ಪ್ರಯತ್ನ ಮಾಡಬೇಡಿ. ಈ ಪರಿಸ್ಥಿತಿಯಲ್ಲಿ ದುಃಖವಾಗುವುದು ಸಹಜ ಮತ್ತು ಉದ್ವೇಗವನ್ನು ಬಿಡುಗಡೆ ಮಾಡುವುದರಿಂದ, ಅಳುವುದರಿಂದ ನಿಜಕ್ಕೂ ಸಹಾಯಕವಾಗುತ್ತದೆ.

* ಚೆನ್ನಾಗಿ ನಿದ್ರೆ ಮಾಡಿ. ದುಃಖದಿಂದ ಉಂಟಾದ ಭಾವನಾತ್ಮಕ ಒತ್ತಡದಿಂದ ಚೇತರಿಸಿಕೊಳ್ಳಲು ನಿದ್ರೆ ಅತ್ಯಗತ್ಯ. ನಿದ್ರೆ ಮಾಡಿ ಎಂದು ಹೇಳುವುದು ಸುಲಭ ಆದರೆ, ಸಾವಿನ ಮನೆಯಲ್ಲಿ ನಿದ್ರೆ ಮಾಡಲು ಕಷ್ಟ ಎನ್ನಬಹುದು. ನಿಮಗೆ ನಿಜವಾಗಲೂ ಮಲಗಲು ಕಷ್ಟವಾಗುತ್ತಿದ್ದರೆ ಮಾಸಿಕ ವೈದ್ಯರು ಅಥವಾ ಸ್ಲೀಪ್ ಅಡ್ವೈಸರ್ ಸಲಹೆ ಪಡೆಯಿರಿ.

* ನಿಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಹಿಂದಿನಂತೆ ಮುಂದುವರಿಸಿ. ನಿಮ್ಮನ್ನು ನೀವು ಹೆಚ್ಚು ಕೆಲಸಗಳಲ್ಲಿ ಬ್ಯುಸಿ ಆಗಿಟ್ಟುಕೊಳ್ಳಿ. ಕಾರ್ಯನಿರತವಾಗಿಸುವುದರಿಂದ ನಕಾರಾತ್ಮಕ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ದೂರವಿರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮನಸ್ಸನ್ನು ಖಿನ್ನತೆಗೆ ಒಳಗಾಗದಂತೆ ಮಾಡುತ್ತದೆ.

* ಸ್ನೇಹಿತರೊಂದಿಗೆ ಬೆರೆಯುವುದರಿಂದ ನಿಮ್ಮ ಮನಸ್ಸನ್ನು ಸಾವಿನ ವಿಷಯಗಳಿಂದ ದೂರವಿರಿಸುತ್ತದೆ ಮತ್ತು ನಿಮ್ಮನ್ನು ಹುರಿದುಂಬಿಸುತ್ತದೆ. ನೀವು ತುಂಬಾ ಬೆರೆಯುವ ಮನಸ್ಥಿತಿಯಲ್ಲಿ ಇಲ್ಲದಿದ್ದರೂ ಸಹ ಜನರೊಂದಿಗೆ ಬೆರೆಯುವುದು, ಮಾತನಾಡುವುದು ಪ್ರಯೋಜನಕಾರಿಯಾಗಲಿದೆ.

* ಎಲ್ಲಕ್ಕೂ ಸಮಯವೇ ಮದ್ದು ಎಂಬುದನ್ನು ನೆನಪಿಡಿ! ಸಾವಿನ ನಂತರದ ಮೊದಲ ದಿನಗಳು ಮತ್ತು ತಿಂಗಳುಗಳಲ್ಲಿ ನಿಮ್ಮ ದುಃಖದ ಭಾವನೆಗಳನ್ನು ನೀವು ಅನುಭವಿಸಬಹುದು, ಆದರೆ ಕಾಲಾನಂತರದಲ್ಲಿ ಅದು ಸುಲಭವಾಗುತ್ತದೆ.

ಯಾರೊಂದಿಗೆ ಮಾತನಾಡಬಹುದು?

ಯಾರೊಂದಿಗೆ ಮಾತನಾಡಬಹುದು?

ನಿಮ್ಮ ಆತ್ಮೀಯರನ್ನು ಕಳೆದುಕೊಂಡ ನಂತರ ನಾವು ಮಾಡುವ ದೊಡ್ಡ ತಪ್ಪೆಂದರೆ ನಮ್ಮನ್ನು ನಾವು ಪ್ರತ್ಯೇಕಿಸುವುದು, ಏಕಾಂಗಿಯಾಗುವುದು ಮತ್ತು ಯಾರೊಂದಿಗೂ ಮಾತನಾಡದಿರುವುದು. ಆದರೆ ನೀವು ಮಾತನಾಡಬಹುದಾದ ಹಲವಾರು ಜನರಿದ್ದಾರೆ:

* ನಿಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರ ಜತೆ ಮುಕ್ತವಾಗಿ ಮಾತನಾಡಿ, ಅವರು ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ನಿಮ್ಮ ಮನಸ್ಸಿನಿಂದ ನೋವು ನಿವಾರಣೆಯಾಗಲು ಸಹಾಯ ಮಾಡುತ್ತಾರೆ.

* ನೀವು ಭಾವನೆಗಳನ್ನು ನಿವಾರಿಸಲು ಕಷ್ಟವಾದರೆ ವೈದ್ಯರನ್ನು ಭೇಟಿ ಮಾಡಿ. ಸ್ವಲ್ಪ ಸಮಯದ ನಂತರವೂ ನಿಮಗೆ ಮಾನಸಿಕ ಸ್ಥಿಮಿತ ಇಲ್ಲವಾದರೆ ಚಿಕಿತ್ಸೆ ಅಗತ್ಯ. ನಿಮ್ಮ ವೈದ್ಯರ ಬಳಿ ಎಷ್ಟು ಸಾಧ್ಯವೋ ಅಷ್ಟು ಮುಕ್ತರಾಗಿರಿ.

* ಸಾವಿನ ಆಘಾತ ನಿಮ್ಮ ಶಿಕ್ಷಣ, ಉದ್ಯೋಗ, ಮನೆಯ ಕೆಲಸಗಳು, ದೈನದಿಂನ ಕೆಲಸಗಳ ಮೇಲೆ ದೀರ್ಘ ಕಾಲ ಪ್ರಭಾವ ಬೀಳದಂತೆ ನೋಡಿಕೊಳ್ಳಿ. ನಿಮ್ಮ ಆರೋಗ್ಯ ಹಾಗೂ ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆಯೂ ನೀವು ಈ ಸಮಯದಲ್ಲಿ ಯೋಚಿಸಬೇಕಿದೆ ನೆನಪಿಡಿ.

English summary

How to Deal With the Death of Someone Close to You in Kannada

Here we are discussing about How to Deal With the Death of Someone Close to You in Kannada. During the grieving process you will feel a number of emotions which you may have never experienced before. You need time to adjust and recover from what has happened. Read more.
Story first published: Monday, July 5, 2021, 19:30 [IST]
X
Desktop Bottom Promotion