Govardhan Puja 2022 : ಈ ವರ್ಷ ದೀಪಾವಳಿಯ ಮರುದಿನವಲ್ಲ ಗೋವರ್ಧನ ಪೂಜೆ!

ಪ್ರತಿ ವರ್ಷ ಗೋವರ್ಧನ ಪೂಜೆಯನ್ನು ದೀಪಾವಳಿಯಾದ ಎರಡನೇ ದಿನ ಆಚರಿಸಲಾಗುವುದು, ಆದರೆ ಈ ವರ್ಷ ದೀಪಾವಳಿಯಾದ ಮಾರನೇಯ ದಿನ ಸೂರ್ಯಗ್ರಹಣ ಇರುವುದರಿಂದ ಗೋವರ್ಧನ ಪೂಜೆಯನ್ನು ಎರಡನೇ ದಿನವಲ್ಲ ಮೂರನೇ ದಿನ ಆಚರಿಸಲಾಗುವುದು.

Govardhan Puja 2022

ಹಿಂದೂ ಧರ್ಮದಲ್ಲಿ ಗೋವರ್ಧನ ಪೂಜೆಗೆ ತುಂಬಾನೇ ಮಹತ್ವವಿದೆ. ಈ ವರ್ಷದಲ್ಲಿ ದೀಪಾವಳಿಯನ್ನುಅಕ್ಟೋಬರ್ 24ರಂದು ಆಚರಿಸಲಾಗುವುದು. ಅಕ್ಟೋಬರ್‌ 25ಕ್ಕೆ ಸೂರ್ಯಗ್ರಹಣವಿದೆ ಹಾಗಾಗಿ ದೀಪಾವಳಿಯ ಮೂರನೇ ದಿನದಂದು ಅಂದರೆ ಅಕ್ಟೋಬರ್ 26 ರಂದು ಆಚರಿಸಲಾಗುತ್ತದೆ.

ಸೂತಕ ಕಾಲದಲ್ಲಿ ಶುಭ ಕಾರ್ಯ ನಡೆಸಬಾರದು

ಸೂತಕ ಕಾಲದಲ್ಲಿ ಶುಭ ಕಾರ್ಯ ನಡೆಸಬಾರದು

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯಗ್ರಹಣವು 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ, ಅದು ಸೂರ್ಯಗ್ರಹಣ ಮುಗಿದ ನಂತರ ಮಾತ್ರ ಕೊನೆಗೊಳ್ಳುತ್ತದೆ. ಇದನ್ನು ಸೂತಕ ಅವಧಿ ಎಂದು ಕರೆಯಲಾಗುವುದು. ಈ ಅವಧಿಯಲ್ಲಿ ದೇಗುಲಗಳ ಬಾಗಿಲು ಮುಚ್ಚಲಾಗುವುದು, ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ಕಾರಣದಿಂದಾಗಿ ಗೋವರ್ಧನ ಪೂಜೆಯನ್ನು ಅಕ್ಟೋಬರ್‌ 26ರಂದು ಆಚರಿಸಲಾಗುವುದು.

ಶ್ರೀಕೃಷ್ಣ ಹಾಗೂ ಗೋ ಪೂಜೆಯ ಮಹತ್ವ

ಶ್ರೀಕೃಷ್ಣ ಹಾಗೂ ಗೋ ಪೂಜೆಯ ಮಹತ್ವ

ಗೋವರ್ಧನ ಪೂಜೆಯ ದಿನದಂದು ಶ್ರೀಕೃಷ್ಣನಿಗೆ ಹಾಗೂ ಗೋಗಳಿಗೆ ಪೂಜೆ ಮಾಡಲಾಗುವುದು. ಈ ದಿನ ಶ್ರೀಕೃಷ್ಣನಿಗೆ ವಿವಿಧ ರೀತಿಯ ಖಾದ್ಯಗಳನ್ನು ಅರ್ಪಿಸಲಾಗುತ್ತದೆ. ಆದ್ದರಿಂದ ಗೋವರ್ಧನ ಪೂಜೆಯನ್ನು ಅನ್ನಕೂಟ ಪೂಜೆ ಎಂದೂ ಕರೆಯುತ್ತಾರೆ. ಈ ದಿನದಂದು ಹಸು ಮತ್ತು ಕೃಷ್ಣನನ್ನು ಪೂಜಿಸುವುದರಿಂದ ಆರ್ಥಿಕ ತೊಂದರೆಗಳು ದೂರವಾಗುತ್ತವೆ ಮತ್ತು ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಗೋವರ್ಧನ ಪೂಜೆಯ ಹಿಂದಿರುವ ಪೌರಾಣಿಕ ಕತೆ

ಗೋವರ್ಧನ ಪೂಜೆಯ ಹಿಂದಿರುವ ಪೌರಾಣಿಕ ಕತೆ

ವೃಂದಾವನದ ಜನರು ಇಂದ್ರಯಜ್ಞಕ್ಕೆ ಸಿದ್ಧರಾಗುತ್ತಿದ್ದರು. ಇದನ್ನು ತಿಳಿದ ಶ್ರೀ ಕೃಷ್ಣ ಪರಮಾತ್ಮನನ್ನು ಇಂದ್ರನನ್ನು ಪೂಜಿಸುವುದನ್ನು ಬಿಟ್ಟು ಅವರು ಗೋವರ್ಧನ ಗಿರಿಯನ್ನು ಆರಾಧಿಸಬೇಕೆಂದು ಸೂಚಿಸಿದನು. ಅದರಂತೆ ವೃಂದಾವನದ ಜನರು ಗೋವರ್ಧನ ಗಿರಿಯನ್ನು ಪೂಜಿಸಲು ನಿಶ್ಚಿಯಿಸಿದರು. ಇದರಿಂದ ಕೋಪಗೊಂಡ ಇಂದ್ರನು ಕೋಪದಿಂದ ಭಾರಿ ಮಳೆ ಸುರಿಸಲು ಮೋಡಗಳಿಗೆ ಆಜ್ಞಾಪಿಸಿದನು. ಆಗ ಕೃಷ್ಣನು ತನ್ನ ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ವೃಂದಾವನದ ಎಲ್ಲ ನಿವಾಸಿಗಳಿಗೆ ಅದರ ಕೆಳಗೆ ಆಶ್ರಯ ನೀಡಿದನು.

ಇದರಿಂದಾಗಿ ಇಂದ್ರನಿಗೆ ತಾನು ಮಾಡಿದ ಅರಿವಾಗಿ ಕೃಷ್ಣನ ಬಳಿ ಬಂದು ಕ್ಷಮೆ ಯಾಚಿಸಿದ. ದೇವೋತ್ತಮನಿಗೆ ಶರಣಾಗಿ ಭಕ್ತಿಯಿಂದ ಸೇವೆ ಸಲ್ಲಿಸುವ ಭಕ್ತರು ಎಲ್ಲ ಹೊಣೆಗಾರಿಕೆಯಿಂದ ಮುಕ್ತರು ಮತ್ತು ಅವರು ಲೌಕಿಕ ಅನುಕೂಲಕ್ಕಾಗಿ ಯಾವ ದೇವತೆಯನ್ನೂ ಪೂಜಿಸುವ ಅಗತ್ಯ ಇಲ್ಲ ಎನ್ನುವ ಅಂಶವನ್ನು ಕೃಷ್ಣನು ಹೇಳಿದನು. ಇದು ಗೋವರ್ಧನ ಲೀಲೆ ಎಂದು ಪ್ರಸಿದ್ಧಿಯಾಗಿದೆ.

ಪೂಜಾ ವಿಧಾನ

ಪೂಜಾ ವಿಧಾನ

* ಗೋವರ್ಧನ ಪೂಜೆಯ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪಾದದ ದಿನದಂದು ಆಚರಿಸಲಾಗುವುದು. ಈ ದಿನದಂದು ಮೈಗೆ ಎಣ್ಣೆ ಹಚ್ಚಿ ನಂತರ ಸ್ನಾನ ಮಾಡಲಾಗುವುದು.

* ಇದರ ನಂತರ, ಮನೆಯ ಮುಖ್ಯ ಬಾಗಿಲಲ್ಲಿ ಗೋವಿನ ಸಗಣಿಯಿಂದ ಸಾಂಕೇತಿಕ ಗೋವರ್ಧನ ಪರ್ವತವನ್ನು ಮಾಡಬೇಕು, ಅದರ ಮಧ್ಯದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಇರಿಸಬೇಕು.

* ನಂತರ ಗೋವರ್ಧನ ಪರ್ವತ ಮತ್ತು ಗೋವಿನ ಸಗಣಿಯಿಂದ ಮಾಡಿದ ಶ್ರೀಕೃಷ್ಣನಿಗೆ ವಿವಿಧ ರೀತಿಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಲಾಗುವುದು.

ಅನ್ನಕೂಟ ಉತ್ಸವ

ಅನ್ನಕೂಟ ಉತ್ಸವ

ಪೂಜೆಯ ವಿಧಾನ ಭಕ್ತರು ಧಾನ್ಯ ಮತ್ತು ತುಪ್ಪದ (ಅನ್ನ, ದಾಲ್, ಹಲ್ವ, ಪಕೋಡ, ಪೂರಿ ಇತ್ಯಾದಿ) ವಿವಿಧ ತಿನಿಸುಗಳನ್ನು ಮತ್ತು ಹಾಲಿನ ಖಾದ್ಯಗಳನ್ನು (ಸಿಹಿ ಅನ್ನ, ಪೊಂಗಲ್, ರಬ್ಡಿ, ಸಂದೇಶ್, ರಸಗುಲ್ಲ, ಲಡ್ಡು ಇತ್ಯಾದಿ) ತಯಾರಿಸಿ, ಅವುಗಳನ್ನು ಬೆಟ್ಟದಂತೆ ಜೋಡಿಸಿ ಭಗವಂತನಿಗೆ ಅರ್ಪಿಸುತ್ತಾರೆ. ಅನಂತರ ಆ ತಿನಿಸುಗಳನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಗುವುದು. ಇದನ್ನು ಅನ್ನಕೂಟ ಉತ್ಸವ ಎಂದೂ ಕರೆಯುತ್ತಾರೆ.

* ಈ ದಿನ ಇಂದ್ರ, ವರುಣ, ಅಗ್ನಿಯನ್ನು ಪೂಜಿಸಲಾಗುವುದು.

* ನಂತರ ಗೋವರ್ಧನ ಬೆಟ್ಟದ ಕತೆಯನ್ನು ಕೇಳಲಾಗುವುದು. ಅದಾದ ಬಳಿಕ ಬ್ರಾಹ್ಮಣರಿಗೆ ದಾನ ಮತ್ತು ದಕ್ಷಿಣೆ ನೀಡಿ ಎಲ್ಲರಿಗೆ ಪ್ರಸಾದವನ್ನು ಹಂಚಲಾಗುವುದು.

ಗೋ ಪೂಜೆ

ಗೋವರ್ಧನ ಪೂಜೆಯಂದು ಭಕ್ತರು ಗೋವುಗಳನ್ನೂ ಪೂಜಿಸುತ್ತಾರೆ. ಕೃಷ್ಣನು ಗೋವುಗಳ ಸಂರಕ್ಷಕ, ಗೋಪಾಲ. ವಿಷ್ಣು ಪುರಾಣದಲ್ಲಿ ಕೃಷ್ಣನ ಕುರಿತು ನಮೋ ಬ್ರಾಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯ ಚ ಅಂದರೆ ಇಲ್ಲಿ ಕೃಷ್ಣನನ್ನು ಗೋವುಗಳ ಮತ್ತು ಬ್ರಾಹ್ಮಣರ ಹಿತಚಿಂತಕ ಎಂದು ವರ್ಣಿಸಲಾಗಿದೆ. ಸಂಜೆ ಗೋವುಗಳನ್ನು ಅಲಂಕರಿಸಿ ಅವುಗಳಿಗೆ ಪೂಜೆ ಸಲ್ಲಿಸಿ ಅವುಗಳನ್ನು ಗೋವುಗಳನ್ನು ಮುಂದಿಟ್ಟುಕೊಂಡು ಭಕ್ತರು ಗೋವರ್ಧನ ಗಿರಿಯ ಪ್ರದಕ್ಷಿಣೆ ಮಾಡುವರು.

English summary

Govardhan Puja 2022 Date, History, Shubh Muhurat, Puja Vidhi, Samagri, Rituals and Significance in kannada

Govardhan Puja 2022 Date, History, Shubh Muhurat, Puja Vidhi, Samagri, Rituals and Significance in kannada
X
Desktop Bottom Promotion