For Quick Alerts
ALLOW NOTIFICATIONS  
For Daily Alerts

ತಾಯಿಯ ಒಳ ಉಡುಪು ಗೊತ್ತಿಲ್ಲದೇ ಧರಿಸಿದ ಬಾಲಕಿಗೆ ಕೊನೆಗೆ ಏನಾಯಿತು ಗೊತ್ತೇ?

|

ಸ್ವಚ್ಛತೆ ಎನ್ನುವುದು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುವುದು. ಅದರಲ್ಲೂ ನಮ್ಮ ದೇಹದ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಪ್ರಮುಖವಾಗಿ ನಮ್ಮ ಜನನೇಂದ್ರೀಯದ ಭಾಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ಸೋಂಕು ಬರಬಹುದು. ಇದರಿಂದಾಗಿ ನಾವು ಬೇರೆಯವರ ಬಟ್ಟೆಗಳನ್ನು ಬಳಸ ಬಾರದು. ಅದರಲ್ಲೂ ಮುಖ್ಯವಾಗಿ ಒಳ ಉಡುಪುಗಳನ್ನು ಬಳಸಲೇಬಾರದು. ಒಳಉಡುಪುಗಳನ್ನು ಬೇರೆಯವರಿಂದ ಬಳಸಿದರೆ ಅದು ಸೋಂಕಿಗೆ ಪ್ರಮುಖ ಕಾರಣವಾಗುತ್ತದೆ. ಇಷ್ಟು ಮಾತ್ರವಲ್ಲದೆ ಕೆಲವೊಂದು ಲೈಂಗಿಕ ರೋಗಗಳು ಕೂಡ ಇದರ ಮೂಲಕ ಹಬ್ಬಬಹುದು.

ಚೀನಾದ ಝೆಜಿಯಾಂಗ್ ಪ್ರಾಂತ್ಯದ 12ರ ಹರೆಯದ ಬಾಲಕಿಯೊಬ್ಬಳ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಈ ಬಾಲಕಿಯು ನಿರಂತರವಾಗಿ ವಾಂತಿ ಮಾಡಿಕೊಳ್ಳುತ್ತಿದ್ದರು ಮತ್ತು ಹೊಟ್ಟೆ ನೋವಿನ ಸಹಿತ ಆಕೆಗೆ ತೀವ್ರ ಜ್ವರ ಕೂಡ ಕಾಡುತ್ತಲಿತ್ತು. ಕಳೆದ 15 ದಿನಗಳಿಂದ ಆಕೆ ಈ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವರದಿಗಳು ಹೇಳಿವೆ. ಆಕೆಯ ಪರಿಸ್ಥಿತಿಯು ಮತ್ತಷ್ಟು ಕೆಟ್ಟ ಪರಿಣಾಮ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು.

irl’s bychance Weard Mum’s Underwear

ವೈದ್ಯರು ಬಾಲಕಿಯನ್ನು ಪರೀಕ್ಷೆ ಮಾಡಿದ ವೇಳೆ ಅವರಿಗೆ ಶ್ರೋಣಿಯ ಸೋಂಕಿನ ಸಮಸ್ಯೆಯು ಕಂಡುಬಂದಿದೆ. ಇದರಿಂದಾಗಿ ಹೈಡ್ರೊಸಲ್ಪಿಂಕ್ಸ್ ಎನ್ನುವ ಪರಿಸ್ಥಿತಿಯು ನಿರ್ಮಾಣವಾಗಿ ಫಾಲೋಪಿಯನ್ ಟ್ಯೂಬ್ ಗಳು ನೀರಿನಿಂದ ತುಂಬಿದ್ದವು. ಒಂದು ಫಾಲೋಪಿಯನ್ ಟ್ಯೂಬ್ ಗೆ ತುಂಬಾ ಹಾನಿ ಉಂಟಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯು ಇಷ್ಟು ಸಣ್ಣ ಹುಡುಗಿಗೆ ಹೇಗೆ ಬಂತು ಎಂದು ವೈದ್ಯರಿಗೆ ಕೂಡ ಅಚ್ಚರಿಯಾಗಿದೆ. ಹಲವಾರು ಜನರೊಂದಿಗೆ ಲೈಂಗಿಕ ಕ್ರಿಯೆ ಅಥವಾ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ರೀತಿಯ ಪರಿಸ್ಥಿತಿ ಬರುವುದು. ಆದರೆ ಇಲ್ಲಿ ಆಕೆ ತುಂಬಾ ಸಣ್ಣ ವಯಸ್ಸಿನ ಬಾಲಕಿಯಾಗಿದ್ದಳು ಮತ್ತು ಯಾವುದೇ ಲೈಂಗಿಕ ಕ್ರಿಯೆಯಲ್ಲೂ ತೊಡಗಿರಲಿಲ್ಲ.

ಬಾಲಕಿಯು ಎರಡು ವರ್ಷಗಳ ಮೊದಲು ಋತುಚಕ್ರಕ್ಕೆ ಒಳಗಾಗಿದ್ದರೂ ಯಾವುದೇ ರೀತಿಯ ಟ್ಯಾಪನ್ ಅಥವಾ ಸ್ಯಾನಿಟರಿ ಪ್ಯಾಡ್ ನ್ನು ಬಳಸುತ್ತಿರಲಿಲ್ಲ ಎಂದು ಆಕೆ ಹೇಳಿದ್ದಾಳೆ. ವೈದ್ಯರು ಆಕೆಯ ಜೀವನ ಶೈಲಿಯನ್ನು ವಿವರವಾಗಿ ತಿಳಿದುಕೊಂಡ ವೇಳೆ ಈ ಸಮಸ್ಯೆಗೆ ಕಾರಣ ಏನು ಎಂದು ಅವರಿಗೆ ತಿಳಿದುಬಂದಿದೆ. ಬಾಲಕಿಯು ತಾಯಿಯ ಒಳ ಉಡುಪನ್ನು ಧರಿಸುತ್ತಿದ್ದಳು.

ಒಳಉಡುಪನ್ನು ಒಂದೇ ಕಪಾಟಿನಲ್ಲಿ ಇಟ್ಟಿರುತ್ತಿದ್ದ ಕಾರಣದಿಂದಾಗಿ ತಾಯಿ ಮತ್ತು ಮಗಳು ಯಾವಾಗಲೂ ಒಳ ಉಡುಪನ್ನು ಬದಲಿಸಿಕೊಂಡು ಧರಿಸುತ್ತಿದ್ದರು. ತನಗೆ ಈ ಮೊದಲು ಯೋನಿನಾಳದ ಉರಿಯೂತ ಕಂಡುಬಂದಿತ್ತು ಎಂದು ಬಾಲಕಿಯ ತಾಯಿ ವೈದ್ಯರ ಮುಂದೆ ಹೇಳಿಕೊಂಡಿದ್ದಾರೆ. ತಾಯಿಗೆ ಯೋನಿನಾಳದ ಉರಿಯೂತ ಇದ್ದ ಪರಿಣಾಮವಾಗಿ ಮಗಳು ಆಕೆ ಒಳಉಡುಪನ್ನು ಧರಿಸಿದ ಕಾರಣದಿಂದಾಗಿ ಈ ಸಮಸ್ಯೆಯು ಬಂದಿದೆ ಎಂದು ವೈದ್ಯರು ನಿರ್ಧರಿಸಿದರು.

ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಬಾಲಕಿಯನ್ನು ಒಳಪಡಿಸಲಾಯಿತು. ಈ ವೇಳೆ ವೈದ್ಯರು ಬಲದ ಫಾಲೋಪಿಯನ್ ಟ್ಯೂಬ್ ಮತ್ತು ಬಲದ ಅಂಡಾಶಯವನ್ನು ತೆಗೆದಿದ್ದಾರೆ. ಫಾಲೋಪಿಯನ್ ನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ಸಮಸ್ಯೆ ತೀವ್ರವಾಗಿದ್ದ ಕಾರಣದಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

English summary

Girl’s bychance Weard Mum’s Underwear!what happen after then?

A young girl from Zhejiang Province, China was reportedly suffering from vomiting. She had severe fever along with other symptoms like abdominal pain. When doctors examined her, they found out that she had an inflamed fallopian tube after she got infected from wearing her mum's underwear. Her condition was so severe that one of the fallopian tubes had to be removed.
Story first published: Friday, August 2, 2019, 10:55 [IST]
X
Desktop Bottom Promotion