Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಗೆ ಇಂಥಾ ಕನಸುಗಳು ಬಂದರೆ ಶೀಘ್ರದಲ್ಲೇ ನೀವು ಹಣವಂತರಾಗುತ್ತೀರಿ
ಜೀವನದಲ್ಲಿ ಮುಂದೆ ಬರಲು, ಯಶಸ್ಸು ಸಾಧಿಸಲು ಕನಸುಗಳ ಬೆನ್ನತ್ತಿ ಹೋಗಬೇಕು ಎನ್ನುತ್ತಾರೆ, ಆದರೆ ಕನಸುಗಳೇ ನಮ್ಮ ಯಶಸ್ಸಿನ ಮುನ್ಸೂಚನೆಯನ್ನು ನೀಡಿದರೆ ಹೇಗಿರುತ್ತದೆ, ಊಹೆಯೇ ಚೆನ್ನಾಗಿದೆ ಅಲ್ಲವೇ.
ಹೌದು, ಪ್ರತಿಯೊಬ್ಬರಿಗೂ ನಿತ್ಯ ಅಥವಾ ಆಗಾಗ್ಗೆ ಕನಸುಗಳು ಬೀಳುವುದನ್ನು ಕೇಳಿರುತ್ತೇವೆ ಅಥವಾ ನಾವೇ ಸ್ವತಃ ಅನುಭವಿಸಿರುತ್ತೇವೆ. ಆದರೆ ಕೆಲವು ನಂಬಿಕೆಗಳ ಪ್ರಕಾರ ಈ ಕನಸುಗಳು ನಮ್ಮ ಮುಂದಿನ ಜೀವನದ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದರೆ ನೀವು ನಂಬಲೇಬೇಕು. ಏಕೆಂದರೆ ಹಲವರ ಜೀವನದಲ್ಲಿ ಇದು ನಿಜವಾಗಿರುವುದು ಅಷ್ಟೇ ಸತ್ಯ.
ಇನ್ನೂ ಆಸಕ್ತಿಕರ ಎಂದರೆ, ಜೀವನದಲ್ಲಿ ಅದೃಷ್ಟ ಹೊಂದಲು, ಆರ್ಥಿಕವಾಗಿ ಸಬಲರಾಗಲು, ಲಕ್ಷ್ಮಿ ದೇವಿಯ ಕಟಾಕ್ಷ ಹೊಂದುವಂಥ ಕೆಲವು ಕನಸುಗಳು ನಮ್ಮ ಯಶಸ್ಸಿನ ಬಗ್ಗೆ ಮೊದಲೇ ಸೂಚನೆ ನೀಡುತ್ತದೆಯಂತೆ, ಇಂಥಾ ಕನಸುಗಳು ಬಂದರೆ ನಾವೇ ಬಹಳ ಅದೃಷ್ಟವಂತರಂತೆ. ಎಂಥಾ ಕನಸುಗಳು ಬಂದರೆ ಯಾವ ಅದೃಷ್ಟ ನಮ್ಮದಾಗುತ್ತದೆ? ನಿಮಗೂ ಕುತೂಹಲ ಇದೆಯೇ ಮುಂದೆ ಓದಿ:

1. ಕನಸಲ್ಲಿ ದೇವರು
ನಿಮ್ಮ ಕನಸಿನಲ್ಲಿ ಯಾವುದೇ ದೇವಾನು ದೇವತೆಗಳು ಬಂದರೆ ಅಕ್ಷರಶಃ ನೀವು ಅದೃಷ್ಟವಂತರೇ ಸರಿ. ಏಕೆಂದರೆ ಕನಸಿನಲ್ಲಿ ದೇವರು ಬರುವಂಥ ಅದೃಷ್ಟ ನಿಮ್ಮದಾದರೆ ಜತೆಗೆ ಇದು ನಿಮ್ಮ ಮುಂದಿನ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವ ಜತೆಗೆ ಸಂಪತ್ತು ಸಹ ನಿಮ್ಮದಾಗುತ್ತದೆ ಎಂಬುದು ಇದರ ಮುನ್ಸೂಚನೆಯಂತೆ.

2. ಮಹಿಳೆ/ಯುವತಿ ನೃತ್ಯ
ನಿಮ್ಮ ಕನಸಿನಲ್ಲಿ ಮಹಿಳೆ ಅಥವಾ ಯುವತಿ ನೃತ್ಯ ಮಾಡುವಂತೆ ಬಂದರೆ ಅದು ನಿಮ್ಮ ಅದೃಷ್ಟ ಅಂದುಕೊಳ್ಳಿ. ಏಕೆಂದರೆ ಇಂಥಾ ದೃಶ್ಯವನ್ನು ಕನಸಿನಲ್ಲಿ ನೋಡುವುದು ಸಹ ಸಂಪತ್ತನ್ನು ಪಡೆಯುವ ಸೂಚನೆಯಾಗಿದೆ.

3. ಕಿಂಗ್‌ಫಿಶರ್ ಅಥವಾ ಕ್ರೇನ್ ಪಕ್ಷಿ
ನಿಮ್ಮ ಕನಸಿನಲ್ಲಿ ಕಿಂಗ್‌ಫಿಶರ್ ಹಕ್ಕಿ ಅಥವಾ ಕ್ರೇನ್ ಪಕ್ಷಿ ಬಂದರೆ ಈದೇನು ವಿಚಿತ್ರ ಎಂದುಕೊಳ್ಳಬೇಡಿ, ಇದು ನಿಮ್ಮ ಅದೃಷ್ಟವಂತೆ. ಈ ಪಕ್ಷಿ ನಿಮ್ಮ ಕನಸಿನಲ್ಲಿ ಬರುವ ಮೂಲಕ ನೀವು ಶೀಘ್ರದಲ್ಲೇ ಉತ್ತಮ ಗೌರವ ಮತ್ತು ಸಂಪತ್ತನ್ನು ಗಳಿಸುತ್ತೀರಿ ಎಂಬುದು ಸೂಚನೆ.

4. ಕದಂಬ ವೃಕ್ಷ
ಕೃಷ್ಣನ ಪ್ರಿಯವಾದ ಮರ ಕದಂಬ ವೃಕ್ಷ ನಿಮ್ಮ ಕನಸಿನಲ್ಲಿ ಬಂದಿದ್ದೇ ಆದರೆ ನೀವೆ ಸಂಪನ್ನರು ನೋಡಿ. ಏಕೆಂದರೆ ಕದಂಬ ವೃಕ್ಷ ನಿಮ್ಮ ಕನಸಿನಲ್ಲಿ ಬಂದರೆ ಸಂಪತ್ತು, ಉತ್ತಮ ಆರೋಗ್ಯ ಮತ್ತು ಗೌರವ ನಿಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ.

5. ನೆಲ್ಲಿಕಾಯಿ ಮರ, ಕಮಲ ಹೂ ಮತ್ತು ಕಿವಿಯೋಲೆಗಳನ್ನು ಧರಿಸುವುದು
ನಿಮ್ಮ ಕನಸಿನಲ್ಲಿ ನೆಲ್ಲಿಕಾಯಿ ಮರ ಅಥವಾ ಕಮಲದ ಹೂವನ್ನು ನೋಡಿದರೆ, ಇನ್ನೂ ವಿಶೇಷವೆಂದರೆ ಕಿವಿಯೋಲೆ ಧರಿಸುವ ಕನಸು ನಿಮ್ಮದಾದರೆ ಕೆಲವೇ ದಿನಗಳಲ್ಲಿ ನೀವು ಹಣವನ್ನು ಪಡೆಯಲಿದ್ದೀರಿ ಎಂದು ಇದು ಸೂಚಿಸುತ್ತದೆ.

6. ರೈತನ ಕನಸು
ತನ್ನ ಹೊಲದಲ್ಲಿ ಕೆಲಸ ಮಾಡುವ ರೈತನ ಬಗ್ಗೆ ಕನಸು ಕಾಣುವುದರಿಂದ ನೀವು ಯಾವುದೇ ಅಪರಿಚಿತರ ಮೂಲದಿಂದ ಸಂಪತ್ತನ್ನು ಪಡೆಯುತ್ತೀರಿ ಎಂದು ಸೂಚಿಸುತ್ತದೆ.

7. ಚಿನ್ನ, ಉಂಗುರ, ಅರಮನೆ, ಹಸು ಹಾಲು
ಇಲ್ಲಿ ನಿಮಗೆ ಕನಸಿನಲ್ಲಿ ಚಿನ್ನವನ್ನು ನೋಡುವುದು, ಉಂಗುರವನ್ನು ಧರಿಸಿರುವುದನ್ನು ನೋಡುವುದು, ಅರಮನೆಯನ್ನು ಕಾಣುವುದು ಮತ್ತು ಹಸುವಿನಿಂದ ಹಾಲು ಕರೆಯುವುದನ್ನು ನೋಡುವುದು ಬಹಳಷ್ಟು ಸಂಪತ್ತನ್ನು ಪಡೆಯುವುದನ್ನು ಸಹ ಸೂಚಿಸುತ್ತದೆ.

8. ಬಿಳಿ ಕುದುರೆ
ನಿಮ್ಮ ಕನಸಿನಲ್ಲಿ ಬಿಳಿ ಕುದುರೆಯನ್ನು ನೋಡುವುದು ನಿಮ್ಮ ಭವಿಷ್ಯ ತುಂಬಾ ಸಂತೋಷದಾಯಕವಾಗಿರುತ್ತದೆ ಮತ್ತು ಸಂಪತ್ತನ್ನು ಪಡೆಯುವಿರಿ ಎಂಬುದನ್ನು ಸೂಚಿಸುತ್ತದೆ.

9. ಆನೆ, ಹಸು ಮತ್ತು ತುಪ್ಪ
ನಿಮ್ಮ ಕನಸಿನಲ್ಲಿ ಆನೆಯನ್ನು ನೋಡುವುದರಿಂದ ಮತ್ತು ಹಸುವಿನ ಬಗ್ಗೆ ಕನಸು ಕಾಣುವುದನ್ನು ಸಹ ಬಹಳ ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂಥಾ ಕನಸು ಬಿದ್ದವರು ಸಂಪತ್ತು, ವೈಭವ ಮತ್ತು ಭವ್ಯತೆಯನ್ನು ಪಡೆಯುತ್ತಾರೆ ಎನ್ನಲಾಗುತ್ತದೆ.

10. ಹಣ್ಣಿನ ಮರ, ಇಲಿ, ಏಡಿ, ಹೆಡೆ ಎತ್ತಿದ ಹಾವು
ಸಂಪೂರ್ಣ ಹಣ್ಣುಗಳಿಂದಲೇ ತುಂಬಿರುವ ಮರ, ಇಲಿಗಳು, ಕಪ್ಪು ಬಣ್ಣದ ಏಡಿ, ಹೆಡೆ ಬಿಚ್ಚಿದ ಹಾವಿನ ಕನಸು ಕಾಣುವುದು ಸಂಪತ್ತು ಮತ್ತು ಶ್ರೀಮಂತಿಕೆಯನ್ನು ಸೂಚಿಸುತ್ತದೆ.

11. ಸತ್ತ ಹಕ್ಕಿ, ಗಿಳಿ
ನಿಮ್ಮ ಕನಸಿನಲ್ಲಿ ಸತ್ತ ಹಕ್ಕಿಯನ್ನು ನೋಡಿದರೆ, ಚಿಂತಿಸಬೇಡಿ, ಇದು ಒಳ್ಳೆಯ ಸಂಕೇತ. ಅಲ್ಲದೆ ಕನಸಿನಲ್ಲಿ ಗಿಳಿಯನ್ನು ನೋಡುವುದು ಸಹ ಹಣವನ್ನು ಸ್ವೀಕರಿಸುವ ಬಲವಾದ ಸೂಚನೆಯಾಗಿದೆ.

12. ಮುಂಗುಸಿ
ನಿಮ್ಮ ಕನಸಿನಲ್ಲಿ ಮುಂಗುಸಿ ಬಂದರೆ ಭಯಬೇಡ, ನಿಮಗೆ ಎಂಥಾ ಲಾಭವಿದೆ ಗೊತ್ತಾ. ಕನಸಲ್ಲಿ ಮುಂಗುಸಿಯನ್ನು ನೋಡಿದರೆ ವಜ್ರಗಳು ಮತ್ತು ಆಭರಣಗಳು ಯಾವುದೋ ಮೂಲದಿಂದ ನಿಮ್ಮದಾಗುತ್ತದೆಯಂತೆ.

13. ಜೇನುಗೂಡು, ಇರುವೆ, ಮರ ಹತ್ತುವುದು, ಪರ್ವತ
ನಿಮ್ಮ ಕನಸಿನಲ್ಲಿ ಜೇನುನೊಣಗಳಿರುವ ಜೇನುಗೂಡು, ಬಿಳಿ ಇರುವೆಗಳು, ಪರ್ವತ ಏರುವುದು ಮತ್ತು ನೀವೇ ಮರ ಹತ್ತುವುದನ್ನು ನೋಡಿದರೆ ಅದು ನಿಮಗೆ ಶೀಘ್ರದಲ್ಲೇ ಹಣ ಮತ್ತು ಸಂಪತ್ತಿನ ಸಂಪಾದನೆಯಾಗುತ್ತದೆ ಎಂಬುದರ ಮುನ್ಸೂಚನೆ ಆಗಿರುತ್ತದೆ.



Click it and Unblock the Notifications


