For Quick Alerts
ALLOW NOTIFICATIONS  
For Daily Alerts

Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

|

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 4ರ ರಾಶಿಫಲ ನೋಡೋಣ:

ಸಂವತ್ಸರ: ಶುಭಕೃತ್
ಆಯನ: ದಕ್ಷಿಣಾಯಣ
ಋತು: ಹೇಮಂತ
ಮಾಸ: ಮಾಘ
ಪಕ್ಷ: ಶುಕ್ಲಪಕ್ಷ
ತಿಥಿ: ಪೂರ್ಣಿಮೆ
ನಕ್ಷತ್ರ: 09:16ರವರೆಗೆ ಪುನರ್ವಸು ನಂತರ ಪುಷ್ಯಾ
ರಾಹುಕಾಲ: ಬೆಳಗ್ಗೆ 09:40ರಿಂದ 11:07ರವರೆಗೆ

ಮೇಷ ರಾಶಿ

ಮೇಷ ರಾಶಿ

ನೀವು ಇಂದು ಏನಾದರೂ ಖರೀದಿ ಮಾಡುವುದಾದರೆ ನಿಮ್ಮ ಬಜೆಟ್ ಅನ್ನು ನೀವು ಮನಸ್ಸಿನಲ್ಲಿಟ್ಟು ಮಾಡಿ. ಯೋಚಿಸದೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಮನೆಯ ಸದಸ್ಯರೊಂದಿಗೆ ಮನಸ್ತಾಪ ಬರಬಹುದು. ಅಂತಹ ಪರಿಸ್ಥಿತಿಯಲ್ಲಿ, ಶಾಂತ ಮನಸ್ಸಿನಿಂದ ನಿಮ್ಮ ಅಭಿಪ್ರಾಯ ಅವರಿಗೆ ಹೇಳಿ. ಕೋಪ ಮತ್ತು ಆತುರವನ್ನು ತಪ್ಪಿಸಿ. ನಿಮ್ಮ ಯಾವುದೇ ಕೆಲಸವು ಅಪೂರ್ಣವಾಗಿದ್ದರೆ, ನೀವು ಮೇಲಧಿಕಾರಿಯ ಕೋಪವನ್ನು ಎದುರಿಸಬೇಕಾಗುತ್ತದೆ. ವ್ಯಾಪಾರಸ್ಥರಿಗೆ ತಕ್ಕ ಲಾಭ ದೊರೆಯಲಿದೆ. ಆರೋಗ್ಯದ ಕಡೆಯೂ ಗಮನ ಹರಿಸಬೇಕಾಗಿದೆ.

ಅದೃಷ್ಟದ ಬಣ್ಣ: ಮರೂನ್

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಸಂಜೆ 6:05 ರಿಂದ 8:45 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಇಂದು ನೀವು ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ನಿಮ್ಮ ಈ ಪ್ರಯಾಣವು ತುಂಬಾ ಆಯಾಸದಾಯಕವಾಗಿರುತ್ತದೆ. ನೀವು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಂದು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ಪ್ರಮುಖ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ.ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ಮಾಡಬೇಡಿ.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 19

ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಕೆಲವು ದಿನಗಳಿಂದ ಅತಿಯಾದ ಕೆಲಸದ ಒತ್ತಡವಿದ್ದರೆ ವಿಶ್ರಾಂತಿ ಕಡೆಗೆ ಗಮನ ನೀಡಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಆದರೆ ನೀವು ಹಣದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಮನೆಯ ವಾತಾವರಣ ಶಾಂತವಾಗಿರುತ್ತದೆ. ಪೋಷಕರ ಬೆಂಬಲ ಸಿಗಲಿದೆ. ಅಣ್ಣನೊಂದಿಗಿನ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು. ನೀವು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅನ್ನು ದೀರ್ಘಕಾಲದವರೆಗೆ ಬಳಸುತ್ತಿದ್ದರೆ ಕಣ್ಣಿನ ಆರೈಕೆ ಕಡೆಗೆ ಗಮನ ನೀಡಿ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಸಣ್ಣ ವಿಚಾರಕ್ಕೆ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಿ ಮನೆಯ ಶಾಂತಿಗೆ ಭಂಗ ಉಂಟಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ. ನೀವು ದೊಡ್ಡ ವ್ಯವಹಾರವನ್ನು ಮಾಡಲು ಹೊರಟಿದ್ದರೆ ಅಡೆತಡೆಗಳು ಉಂಟಾಗಬಹುದು.

ಆರೋಗ್ಯವಾಗಿರಲು ನೀವು ಕೋಪ ಮತ್ತು ಒತ್ತಡದಿಂದ ದೂರವಿರಬೇಕು.

ಅದೃಷ್ಟದ ಬಣ್ಣ: ಕೆನೆ

ಅದೃಷ್ಟದ ಸಂಖ್ಯೆ: 6

ಅದೃಷ್ಟದ ಸಮಯ: ಬೆಳಿಗ್ಗೆ 7:50 ರಿಂದ ರಾತ್ರಿ 8:18 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಇಂದು ನಿಮ್ಮ ಮನಸ್ಸಿನಲ್ಲಿ ಯಾವುದೋ ಆಲೋಚನೆಯಿಂದಾಗಿ ನಕಾರಾತ್ಮಕತೆಯನ್ನು ಸಹ ಅನುಭವಿಸುವಿರಿ. ಹಳೆಯ ವಿಷಯಗಳನ್ನು ಮರೆತು ಹೊಸ ಪ್ರಾರಂಭವನ್ನು ಮಾಡಲು ಪ್ರಯತ್ನಿಸಿ. ಸಾಧ್ಯವಾದರೆ, ನಿಮ್ಮ ಮನಸ್ಸನ್ನು ಹತ್ತಿರವಿರುವ ಯಾರೊಂದಿಗಾದರೂ ಹಂಚಿಕೊಳ್ಳಿ. ಇಂದು ಹಣದ ವಿಷಯದಲ್ಲಿ ಮಿಶ್ರ ಫಲಿತಾಂಶ ಇರುತ್ತದೆ. ನಿಮ್ಮ ಆದಾಯ ಉತ್ತಮವಾಗಿರುತ್ತದೆ. ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ನೀವು ಇತ್ತೀಚೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ಇಂದು ನಿಮಗೆ ಮಂಗಳಕರವಾಗಿರುತ್ತದೆ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 4

ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:55 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಇಂದು ದಿನದ ಆರಂಭವು ತುಂಬಾ ಚೆನ್ನಾಗಿರಲಿದೆ. ಕಚೇರಿಯಲ್ಲಿ ನಿಮ್ಮ ಶ್ರಮ ಮತ್ತು ಉತ್ಸಾಹವನ್ನು ನೋಡಿ ಬಾಸ್ ತುಂಬಾ ಪ್ರಭಾವಿತರಾಗಬಹುದು. ಶೀಘ್ರದಲ್ಲೇ ನೀವು ಅದರ ಸರಿಯಾದ ಪ್ರಯೋಜನವನ್ನು ಪಡೆಯುತ್ತೀರಿ. ಉದ್ಯಮಿಗಳು ಇಂದು ಉತ್ತಮ ಪರಿಹಾರವನ್ನು ಪಡೆಯಬಹುದು. ನೀವು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯುತ್ತೀರಿ. ಮನೆಯ ವಾತಾವರಣವು ಹರ್ಷದಿಂದ ಕೂಡಿರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಗಾಢ ಕೆಂಪು

ಅದೃಷ್ಟದ ಸಂಖ್ಯೆ: 17

ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ 2:30 ರವರೆಗೆ

ತುಲಾ ರಾಶಿ

ತುಲಾ ರಾಶಿ

ಷೇರುಪೇಟೆಯಲ್ಲಿ ಕೆಲಸ ಮಾಡುವವರು ಇಂದು ಜಾಗರೂಕರಾಗಿರಬೇಕು. ಇಂದು ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯೋಗಿಗಳಿಗೆ ಸಾಮಾನ್ಯ ದಿನವನ್ನು ನಿರೀಕ್ಷಿಸಲಾಗಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಅಂತರ ಹೆಚ್ಚಾಗಬಹುದು. ಇಂದು ನೀವು ಭಾವನಾತ್ಮಕವಾಗಿ ತುಂಬಾ ದುರ್ಬಲರಾಗುತ್ತೀರಿ. ಇಂದು ಹಣದ ವಿಷಯದಲ್ಲಿ ಏರಿಳಿತಗಳು ಉಂಟಾಗುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಿ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 29

ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇಂದು ನಿಮಗೆ ತುಂಬಾ ವಿಶೇಷವಾಗಿರುತ್ತದೆ. ಅವಾಹಿತರು ಉತ್ತಮ ಮದುವೆಯ ಪ್ರಸ್ತಾಪವನ್ನು ಪಡೆಯಬಹುದು. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಯಾವುದೇ ಬೆಲೆಬಾಳುವ ವಸ್ತುವನ್ನು ಖರೀದಿಸಲು ಬಯಸಿದರೆ, ಅದಕ್ಕೆ ಇಂದು ಉತ್ತಮ ದಿನವಲ್ಲ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ನಿಮಗೆ ಸಂಬಂಧಿಸಿದ ರಹಸ್ಯ ವಿಷಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ವ್ಯಾಪಾರಿಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವುದನ್ನು ತಪ್ಪಿಸಬೇಕು. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 40

ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ

ಧನು ರಾಶಿ

ಧನು ರಾಶಿ

ಕೆಲಸದ ವಿಷಯದಲ್ಲಿ ಇಂದು ಬಹಳ ಶುಭ ದಿನ. ವ್ಯಾಪಾರಸ್ಥರು ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಯೋಚಿಸುತ್ತಿದ್ದರೆ, ಇಂದು ನಿಮಗೆ ಉತ್ತಮ ಅವಕಾಶ ಸಿಗುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರುತ್ತದೆ. ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ಸಮಯ: ಬೆಳಿಗ್ಗೆ 9 ರಿಂದ ರಾತ್ರಿ 8 ರವರೆಗೆ

ಮಕರ ರಾಶಿ

ಮಕರ ರಾಶಿ

ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ, ನಿಮ್ಮ ಆರ್ಥಿಕ ಪ್ರಯತ್ನ ಯಶಸ್ವಿಯಾಗಬಹುದು. ನಿರುದ್ಯೋಗಿಗಳಿಗೆ ಅಪೇಕ್ಷಿತ ಉದ್ಯೋಗ ಸಿಗುವ ಬಲವಾದ ಸಾಧ್ಯತೆಯಿದೆ. ಇಂದು ಉದ್ಯಮಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ. ಇದ್ದಕ್ಕಿದ್ದಂತೆ ನಿಮಗೆ ಒಳ್ಳೆಯ ಅವಕಾಶ ಸಿಗಬಹುದು. ಆರೋಗ್ಯದಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 12

ಅದೃಷ್ಟದ ಸಮಯ: ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12:50 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಯಾವುದೇ ನ್ಯಾಯಾಲಯದ ಪ್ರಕರಣ ನಡೆಯುತ್ತಿದ್ದರೆ, ನಿರ್ಧಾರವು ನಿಮ್ಮ ಪರವಾಗಿ ಬರಬಹುದು. ಕಚೇರಿಯಲ್ಲಿ ನಿಮಗೆ ಕೆಲವು ಹೊಸ ಜವಾಬ್ದಾರಿಗಳನ್ನು ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಅತ್ಯುತ್ತಮವಾದದ್ದನ್ನು ನೀಡಬೇಕು. ವ್ಯಾಪಾರಸ್ಥರು ಇಂದು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ನೀವು ಕಾನೂನಿನ ಗೋಜಿಗೆ ಸಿಲುಕಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೂ ದುಂದು ವೆಚ್ಚ ಮಾಡದೇ ಇದ್ದರೆ ಉತ್ತಮ. ಆರೋಗ್ಯದ ವಿಷಯದಲ್ಲಿ, ದಿನವು ಮಿಫಲ

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದ ಸಂಖ್ಯೆ: 10

ಅದೃಷ್ಟದ ಸಮಯ: ಮಧ್ಯಾಹ್ನ 1:55 ರಿಂದ ಸಂಜೆ 6:50 ರವರೆಗೆ

ಮೀನ ರಾಶಿ

ಮೀನ ರಾಶಿ

ಪ್ರೇಮಿಗಳಿಗೆ ವಿಶೇಷವಾದ ದಿನವಾಗಿರುತ್ತೆ, ಈ ರಾಶಿಯ ವಿವಾಹಿತರ ಜೀವನವೂ ಸಂತೋಷದಿಂದ ಕೂಡಿರುತ್ತದೆ ನೀವು ಮಗುವಿನ ಕಡೆಯಿಂದ ಸಂತೋಷವನ್ನು ಪಡೆಯುತ್ತೀರಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳ ಸಹಾರ ದೊರೆಯಲಿದೆ. ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಕಠಿಣ ಪರಿಶ್ರಮದ ಹೊರತಾಗಿಯೂ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯದಿದ್ದರೆ, ನೀವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು.

ಅದೃಷ್ಟದ ಬಣ್ಣ: ತಿಳಿ ಗುಲಾಬಿ

ಅದೃಷ್ಟದ ಸಂಖ್ಯೆ: 34

ಅದೃಷ್ಟದ ಸಮಯ: ಬೆಳಿಗ್ಗೆ 5:25 ರಿಂದ ಮಧ್ಯಾಹ್ನ 2:15 ರವರೆಗೆ

Read more about: dina bhavishya
English summary

Dina Bhavishya -4 February 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 4 February 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Friday, February 3, 2023, 23:50 [IST]
X
Desktop Bottom Promotion