ಬುಧವಾರದ ದಿನ ಭವಿಷ್ಯ: 11 ಮಾರ್ಚ್‌ 2020

ಇಂದು ಸಾಮಾನ್ಯವಾಗಿ ಎಲ್ಲರೂ ಕೆಲಸದ ಒತ್ತಡದಲ್ಲಿಯೇ ಮುಳುಗಿರುತ್ತಾರೆ. ಈ ಒತ್ತಡದ ಬದುಕಿನ ನಡುವೆಯೂ ಯಾವೆಲ್ಲಾ ಬದಲಾವಣೆಯನ್ನು ನಾವು ಕಾಣಬಹುದು? ಹೊಸದಾದ ಯಾವ ತಿರುವು ನಮ್ಮನ್ನು ಆಕರ್ಷಿಸಲಿದೆ? ಎನ್ನುವುದನ್ನು ಅರಿಯಬೇಕೆಂದುಕೊಂಡಿದ್ದರೆ ಇಂದಿನ ರಾಶಿ ಭವಿಷ್ಯವನ್ನು ಅರಿಯಿರಿ...

Dina Bhavishya 11 Mar 2020

ಸಂವತ್ಸರ: ವಿಕಾರಿನಾಮ

ಆಯನ: ಉತ್ತರಾಯನ

ಋತು: ಶಿಶಿರ

ಮಾಸ: ಫಲ್ಗುಣ

ಪಕ್ಷ: ಕೃಷ್ಣ

ತಿಥಿ: ದ್ವಿತಿಯಾ

ನಕ್ಷತ್ರ: ಹಸ್ತಾ

ರಾಹುಕಾಲ: ಮಧ್ಯಾಹ್ನ 12.31 ರಿಂದ 2.00 ರವರೆಗೆ

ಗುಳಿಕಕಾಲ: ಬೆಳಿಗ್ಗೆ 11.02 ರಿಂದ ಮಧ್ಯಾಹ್ನ 12.31 ರವರೆಗೆ

ಯಮಗಂಡಕಾಲ: ಬೆಳಿಗ್ಗೆ 8.04 ರಿಂದ 9.33 ರವರೆಗೆ

ದುರ್ಮುಹೂರ್ತ: ಮಧ್ಯಾಹ್ನ 12.07 ರಿಂದ 12.55 ರವರೆಗೆ

ಸೂರ್ಯೋದಯ: ಬೆಳಿಗ್ಗೆ 6.35

ಸೂರ್ಯಾಸ್ತ: ಸಂಜೆ 6.27

ಮೇಷ ರಾಶಿ

ಮೇಷ ರಾಶಿ

ಇಂದು ನಿಮ್ಮ ಅದೃಷ್ಟ ಬಲವಾಗಿರುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಹೆಚ್ಚಿದ ಆತ್ಮವಿಶ್ವಾಸವು ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಮಾತ್ರವಲ್ಲ ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ನೀವೇ ತೆಗೆದುಕೊಳ್ಳುವ ನಿರ್ಧಾರಗಳು ಇತರರಿಗಿಂತ ಹೆಚ್ಚು ಮುಖ್ಯವಾಗಿರುತ್ತದೆ. ಪ್ರಣಯ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಲಾಂಗ್ ಡ್ರೈವ್ ಆನಂದಿಸುವಿರಿ. ಒಬ್ಬಂಟಿಯಾಗಿರುವವರು ಪ್ರೀತಿಯ ಪ್ರಸ್ತಾಪ ಪಡೆದರೆ ನಿರ್ಲಕ್ಷಿಸಬೇಡಿ. ಇಂದು ಆರ್ಥಿಕ ರಂಗದಲ್ಲಿ ಉತ್ತಮ ದಿನವಾಗಲಿದೆ. ತಂದೆಯಿಂದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ.

ಅದೃಷ್ಟ ಬಣ್ಣ: ಕಡು ಹಸಿರು

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಮಕ್ಕಳಿಂದ ಸಂತೋಷ ಸಿಗಬಹುದು. ಅವರ ಪ್ರಗತಿಯನ್ನು ನೋಡಿ ಮನಸ್ಸು ಸಂತೋಷವಾಗುತ್ತದೆ. ಕೆಲಸದಲ್ಲಿ ದಿನವು ಸಲಿಕಾರಾತ್ಮಕ ಫತಾಂಶಗಳನ್ನು ನೀಡುತ್ತದೆ. ನೀವು ವೇತನ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದರೆ ಇಂದು ಒಳ್ಳೆಯ ಸುದ್ದಿ ಪಡೆಯಬಹುದು. ವ್ಯಾಪಾರಸ್ಥರು ತಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ನಿಮ್ಮ ಸೃಜನಶೀಲತೆ ಮತ್ತು ಕಠಿಣ ಪರಿಶ್ರಮವು ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ, ಅಗತ್ಯವಿದ್ದರೆ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಕಿರಿಯ ಸಹೋದರ ಅಥವಾ ಸಹೋದರಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ. ದಾಂಪತ್ಯ ಜೀವನದಲ್ಲಿಯೂ ಸಂತೋಷ ಮತ್ತು ಶಾಂತಿ ಉಳಿಯುತ್ತದೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದರೆ ಹಣದ ಬಗ್ಗೆ ಹೆಚ್ಚು ಚಿಂತೆ ಮಾಡುವುದನ್ನು ತಪ್ಪಿಸಿ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 27

ಅದೃಷ್ಟ ಸಮಯ: ಮಧ್ಯಾಹ್ನ 2:15 ರಿಂದ 7:20 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಯಾವುದೇ ಹಣಕಾಸಿನ ಪ್ರಯತ್ನಗಳು ವಿಫಲವಾದರೆ ನಿರಾಶೆಯಾಗಬಹುದು. ಹಣಕಾಸಿನ ತೊಂದರೆಯಿಂದಾಗಿ ಇಂದು ಕೆಲವು ಸಮಸ್ಯೆಗಳಿರಬಹುದು. ನಾಳೆಯ ಬಗ್ಗೆ ಯೋಚಿಸುತ್ತಾ, ಇಂದು ನಿಮ್ಮನ್ನು ನಾಶಪಡಿಸಬೇಡಿ, ಇಂದಿನ ಸಮಯವನ್ನು ಆನಂದಿಸಿ. ಭವಿಷ್ಯವನ್ನು ಉತ್ತಮಗೊಳಿಸಲು ಯೋಜನೆಗಳನ್ನು ರೂಪಿಸಿ. ಸಾಧ್ಯವಾದರೆ, ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿ. ಹಣಕ್ಕೆ ಸಂಬಂಧಿಸಿದಂತೆ ದೀರ್ಘಾವಧಿಯವರೆಗೆ ಯೋಜಿಸಿದರೆ ಖಂಡಿತವಾಗಿಯೂ ಲಾಭ ಪಡೆಯುತ್ತೀರಿ. ಕೆಲಸದಲ್ಲಿ ಇಂದು ಸಾಮಾನ್ಯವಾಗಲಿದೆ. ಉನ್ನತ ಅಧಿಕಾರಿಗಳ ಪ್ರಶಂಸೆ ಮತ್ತು ಬೆಂಬಲವನ್ನು ಪಡೆಯಲು ಬಯಸಿದರೆ ಹೆಚ್ಚು ಶ್ರಮಿಸಬೇಕು. ನಿಮ್ಮ ಆಲೋಚನೆಗಳು ಉತ್ತಮವಾಗಿದ್ದರೆ, ನಿಮ್ಮ ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಸಂಜೆ 4 ರಿಂದ 9:30 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ನಿಷ್ಪ್ರಯೋಜಕ ಚರ್ಚೆ ಮತ್ತು ಗೊಂದಲಗಳಿಂದ ದೂರವಿರುವುದು ಒಳ್ಳೆಯದು. ಸಾಧ್ಯವಾದರೆ ಸೇರದಂತಹ ಜನರನ್ನು ನಿರ್ಲಕ್ಷಿಸಿ, ಏಕೆಂದರೆ ಈ ಜನರು ನಿಮಗಾಗಿ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಬಹುದು. ನೀವು ಜಾಗರೂಕರಾಗಿರಿ ಮತ್ತು ನಿಮ್ಮ ಸುತ್ತ ನಡೆಯುತ್ತಿರುವ ಎಲ್ಲದರ ಮೇಲೆ ನಿಗಾ ಇರಿಸಿ. ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಲು ನಿಮಗೆ ಸಾಧ್ಯವಾಗುತ್ತದೆ, ಇದರಿಂದ ನಿಮ್ಮ ಉನ್ನತ ಅಧಿಕಾರಿಗಳು ತುಂಬಾ ಸಂತೋಷ ಮತ್ತು ತೃಪ್ತರಾಗುತ್ತಾರೆ. ನೀವು ವ್ಯಾಪಾರ ಮಾಡಿದರೆ ಇಂದು ನೀವು ಯಾವುದೇ ಹೊಸ ಕೆಲಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ಓಡಬೇಕಾಗಬಹುದು, ಆದರೆ ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುತ್ತೀರಿ. ಇಂದು ಆರ್ಥಿಕ ರಂಗದಲ್ಲಿ ಮಿಶ್ರ ದಿನವಾಗಲಿದೆ. ಬಯಸದೆ ಕೆಲವು ದೊಡ್ಡ ಖರ್ಚುಗಳನ್ನು ಮಾಡಬೇಕಾಗಬಹುದು.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 16

ಅದೃಷ್ಟ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಇಂದು ಕಚೇರಿಯಲ್ಲಿ ನಿಮಗೆ ತುಂಬಾ ಕಷ್ಟಕರವಾದ ಕಾರ್ಯಗಳನ್ನು ನಿಯೋಜಿಸಬಹುದು. ಸಮಯದ ಕೊರತೆಯನ್ನು ಹೊಂದಿರಬಹುದು, ಅದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಆದರೂ ಶಾಂತ ಮನಸ್ಸಿನಿಂದ ಕೆಲಸವನ್ನು ಮಾಡಲು ಪ್ರಯತ್ನಿಸಿದರೆ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಹಾಯವನ್ನು ನಿರೀಕ್ಷಿಸಬಹುದು. ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನವಾಗಲಿದೆ. ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಉತ್ತಮ ದಿನವಲ್ಲ. ಹಣದ ವಿಷಯದಲ್ಲಿ ಏರಿಳಿತಗಳಿರುತ್ತವೆ. ಇಂದು ಪಡೆಯಲಿದ್ದ ಆರ್ಥಿಕ ಲಾಭ ಇನ್ನೂ ಸ್ವಲ್ಪ ಸಮಯದವರೆಗೆ ಮುಂದೂಡಬಹುದು.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 28

ಅದೃಷ್ಟ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ

ಕನ್ಯಾ ರಾಶಿ

ಕನ್ಯಾ ರಾಶಿ

ಇಂದು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಒಂದು ಸಣ್ಣ ಸಮಸ್ಯೆ ಇದ್ದರೂ ತಕ್ಷಣ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿ. ಕೆಲಸದಲ್ಲಿ ಇಂದು ಕೆಲವು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ವಿಶೇಷವಾಗಿ ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ಉದ್ಯೋಗಿಗಳಿಗೆ ಬಹಳ ಶುಭವಾಗಲಿದೆ. ನಿಮ್ಮ ಸಾಮರ್ಥ್ಯಗಳನ್ನು ಗುರುತಿಸಿ ಉನ್ನತ ಅಧಿಕಾರಿಗಳು ಹೊಸ ಹುದ್ದೆ ನೀಡಬಹುದು. ಇಂದು ವಿಶ್ರಾಂತಿಗಾಗಿ ಹೆಚ್ಚು ಖರ್ಚು ಮಾಡಬಹುದು. ನೀವು ಹೊಸ ಆಸ್ತಿಯನ್ನು ಖರೀದಿಸಿದರೆ, ಮುಂಬರುವ ಸಮಯದಲ್ಲಿ ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತೀರಿ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 15

ಅದೃಷ್ಟ ಸಮಯ: ಮಧ್ಯಾಹ್ನ 2: 45: 6

ತುಲಾ ರಾಶಿ

ತುಲಾ ರಾಶಿ

ಪ್ರಣಯ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಸಂಗಾತಿಗೆ ಯಾವುದೇ ವಿಷಯವನ್ನು ಶಾಂತಿ ಮತ್ತು ಪ್ರೀತಿಯಿಂದ ವಿವರಿಸಲು ಪ್ರಯತ್ನಿಸಿ. ಕೋಪಗೊಳ್ಳುವ ಮೂಲಕ ಮಾತನ್ನು ಹೆಚ್ಚಿಸಬೇಡಿ, ದಂಪತಿಗಳು ಅನಗತ್ಯ ವಿಷಯಗಳ ಬಗ್ಗೆ ಪರಸ್ಪರ ಜಗಳವಾಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನಿಮ್ಮ ದಿನವು ನಿಷ್ಪ್ರಯೋಜಕವಾಗುತ್ತದೆ. ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ಸಮಯ ಇದು, ಆದ್ದರಿಂದ ಕೆಲಸದ ಮೇಲೆ ಸಾಧ್ಯವಾದಷ್ಟು ಗಮನಹರಿಸಿ. ನೀವು ಇಂದು ಆರ್ಥಿಕವಾಗಿ ಹೆಚ್ಚು ಸುರಕ್ಷಿತರಾಗಿರುತ್ತೀರಿ. ಯಾವುದೇ ಹಳೆಯ ಹೂಡಿಕೆಯಿಂದ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಪಡೆಯುವ ಸಾಧ್ಯತೆಯಿದೆ. ಕಚೇರಿಯಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಮೇಲಧಿಕಾರಿಗಳೊಂದಿಗೆ ಮಾತನಾಡುವ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು.

ಅದೃಷ್ಟ ಬಣ್ಣ: ಆಕಾಶ

ಅದೃಷ್ಟ ಸಂಖ್ಯೆ: 23

ಅದೃಷ್ಟ ಸಮಯ: ಮಧ್ಯಾಹ್ನ 12 ರಿಂದ ಸಂಜೆ 5:15 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಹಣದ ವಿಷಯದಲ್ಲಿ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಇಂದು ಹೆಚ್ಚು ಖರ್ಚು ಮಾಡಿದರೆ ನಿಮ್ಮ ಆರ್ಥಿಕ ಸ್ಥಿತಿ ಸ್ಥಿರವಾಗಿಡಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಂದು ಉನ್ನತ ಅಧಿಕಾರಿಗಳ ಸಲಹೆಯಿಂದ ದೊಡ್ಡ ಲಾಭ ಪಡೆಯಬಹುದು. ಯಾವುದೇ ಕಷ್ಟಕರ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವ ಸಾಧ್ಯತೆಯಿದೆ. ವ್ಯಾಪಾರ ಮಾಡಿದರೆ ಇಂದು ದೊಡ್ಡ ಲಾಭ ಪಡೆಯಬಹುದು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ವ್ಯವಹಾರವು ವೇಗವಾಗಿ ಬೆಳೆಯುತ್ತದೆ. ಭವಿಷ್ಯದಲ್ಲಿ ಸರಿಯಾದ ಪ್ರಯೋಜನಗಳನ್ನು ಪಡೆಯುತ್ತೀರಿ. ಇಂದು ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಗಾಢ ಹಳದಿ

ಅದೃಷ್ಟ ಸಂಖ್ಯೆ: 17

ಅದೃಷ್ಟ ಸಮಯ: ಸಂಜೆ 6 ರಿಂದ 10:20

ಧನು ರಾಶಿ

ಧನು ರಾಶಿ

ಸ್ವಲ್ಪ ಸಮಯದಿಂದ ದೊಡ್ಡ ಖರೀದಿ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಇಂದು ಶುಭ ದಿನವಾಗಿದೆ. ಇಂದು ನಿಮ್ಮ ಸಂತೋಷದಿಂದ ಶಾಪಿಂಗ್ ಮಾಡಬಹುದು. ಹಣದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಏಕೆಂದರೆ, ನೀವು ಎಚ್ಚರಿಕೆಯಿಂದ ಯೋಚಿಸಿದ ನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಭವಿಷ್ಯದಲ್ಲಿಯೂ ಇದರ ಲಾಭವನ್ನು ನೀವು ಪಡೆಯುತ್ತೀರಿ. ನಿಮ್ಮ ಸ್ವಂತ ಸಣ್ಣ ಉದ್ಯಮವನ್ನು ಪ್ರಾರಂಭಿಸಲು ಬಯಸಿದರೆ ಇಂದು ಪ್ರಮುಖ ವ್ಯಕ್ತಿಯೊಂದಿಗೆ ಸಂವಾದ ನಡೆಸಬಹುದು. ಆದರೂ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮಾಡುತ್ತಿರುವುದು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ವಿಶೇಷವಾಗಿ ಇಂದು ತಂದೆ ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ಆರೋಗ್ಯವು ಉತ್ತಮವಾಗಿರುತ್ತದೆ. ಇಂದು ಮಾನಸಿಕವಾಗಿ ಉತ್ತಮವಾಗಿರುತ್ತೀರಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಸಂಜೆ 4:35 ರಿಂದ 7:20 ರವರೆಗೆ

ಮಕರ ರಾಶಿ

ಮಕರ ರಾಶಿ

ಇಂದು ತುಂಬಾ ಸಮತೋಲನದಲ್ಲಿರಬೇಕು. ಪರಿಸ್ಥಿತಿಯು ನಿಮ್ಮನ್ನು ಎಷ್ಟೇ ಪ್ರಚೋದಿಸಿದರೂ ಎಚ್ಚರದಿಂದಿರಿ, ವಿಶೇಷವಾಗಿ ಮನೆಯ ಯಾವುದೇ ಸದಸ್ಯರೊಂದಿಗೆ ವಾದ ಮಾಡದಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಮನೆಯ ಶಾಂತಿಗೆ ಭಂಗವಾಗಬಹುದು. ಹಿರಿಯರನ್ನು ಎಚ್ಚರಿಕೆಯಿಂದ ಆಲಿಸಿ, ಅವರು ನಿಮ್ಮ ಒಳ್ಳೆಯದನ್ನು ಬಯಸುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಇಂದು ಕಚೇರಿಯಲ್ಲಿ ಹೆಚ್ಚು ಚಾಟ್ ಮಾಡಬೇಡಿ. ನಿಮ್ಮ ಬಾಸ್ ಮನಸ್ಥಿತಿ ಇಂದು ತುಂಬಾ ಬಿಸಿಯಾಗಿರುತ್ತದೆ. ವ್ಯಾಪಾರಿಗಳಿಗೆ ಇಂದು ಉತ್ತಮ ಅವಕಾಶವಿರಬಹುದು. ಉತ್ತಮ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಇಂದು, ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಪ್ರಮುಖ ವಿಷಯಗಳತ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ಇಂದು ಆರೋಗ್ಯದ ವಿಷಯದಲ್ಲಿ ಏನಾದರೂ ತೊಂದರೆ ಉಂಟಾಗುತ್ತದೆ. ಹೊರಗಿನ ಆಹಾರ ಸೇವಿಸುವುದನ್ನು ತಪ್ಪಿಸಿ.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಮಧ್ಯಾಹ್ನ 2 ರಿಂದ 4:20

ಕುಂಭ ರಾಶಿ

ಕುಂಭ ರಾಶಿ

ಇಂದು ನಿಮ್ಮ ಮಾತುಗಳಿಗೆ ಹೆಚ್ಚು ಗಮನ ಹರಿಸಬೇಕು, ವಿಶೇಷವಾಗಿ ಸ್ನೇಹಿತರ ನಡುವೆ ತಮಾಷೆಯಾಗಿ ಏನನ್ನೂ ಹೇಳಬೇಡಿ ಅದು ಚರ್ಚೆಗೆ ಕಾರಣವಾಗುತ್ತದೆ. ನಿಮ್ಮ ಮುಂದೆ ಅಂತಹ ಪರಿಸ್ಥಿತಿ ಎದುರಾದರೆ, ನಿಮ್ಮ ತಪ್ಪನ್ನು ಒಪ್ಪಿಕೊಂಡು ವಿಷಯವನ್ನು ಅಲ್ಲಿಯೇ ಕೊನೆಗೊಳಿಸಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ಅಮೂಲ್ಯ ಸಮಯವನ್ನು ನಿಷ್ಪ್ರಯೋಜಕ ವಿಷಯಗಳಲ್ಲಿ ವ್ಯರ್ಥ ಮಾಡುತ್ತೀರಿ. ಹಣದ ವಿಚಾರದಲ್ಲಿ ಇಂದು ಪ್ರಯೋಜನಕಾರಿಯಾಗಲಿದೆ. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ, ಇದರಿಂದಾಗಿ ನೀವು ಸಾಕಷ್ಟು ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಇಂದು ಮನೆಯ ವಾತಾವರಣ ಉದ್ವಿಗ್ನವಾಗಿರುತ್ತದೆ. ಕುಟುಂಬ ಸದಸ್ಯರ ನಡುವಿನ ಪರಸ್ಪರ ಹೊಂದಾಣಿಕೆ ಹದಗೆಡಬಹುದು. ಕೆಲಸದಲ್ಲಿ ಇಂದು ಜಾಗರೂಕರಾಗಿರಬೇಕು. ಸಹೋದ್ಯೋಗಿಗಳನ್ನು ಅತಿಯಾಗಿ ನಂಬುವುದನ್ನು ತಪ್ಪಿಸಿ. ಆರೋಗ್ಯ ವಿಷಯಗಳು ಇಂದು ಉತ್ತಮವಾಗುವುದಿಲ್ಲ. ಸಾಕಷ್ಟು ದಣಿಯುವಿರಿ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 11

ಅದೃಷ್ಟ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ

ಮೀನ ರಾಶಿ

ಮೀನ ರಾಶಿ

ವ್ಯಾಪಾರಸ್ಥರು ಇಂದು ಸವಾಲಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ವಿರೋಧಿಗಳು ನಿಮಗೆ ಕಠಿಣ ಹೋರಾಟ ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಎಲ್ಲ ಕೆಲಸಗಳನ್ನು ಕಠಿಣ ಪರಿಶ್ರಮ ಮತ್ತು ಸೃಜನಶೀಲತೆಯಿಂದ ಮಾಡುವುದು ಉತ್ತಮ. ಇಂದು ಹೆಚ್ಚು ಖರ್ಚುಗಳಿಂದ ನಿಮ್ಮ ಒತ್ತಡ ಹೆಚ್ಚುತ್ತದೆ. ಅದೇ ರೀತಿ ಆದಾಯಕ್ಕಿಂತ ಹೆಚ್ಚಿನ ಖರ್ಚುಗಳಿದ್ದರೆ ಶೀಘ್ರದಲ್ಲೇ ದೊಡ್ಡ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಪ್ರಣಯ ಜೀವನವು ಉತ್ತಮವಾಗಿರುತ್ತದೆ, ಇಂದು ನಿಮ್ಮ ಸಂಗಾತಿಯ ವಿಭಿನ್ನ ರೂಪವನ್ನು ನೋಡುತ್ತೀರಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 28

ಅದೃಷ್ಟ ಸಮಯ: ಬೆಳಿಗ್ಗೆ 5:05 ರಿಂದ 3:10 ರವರೆಗೆ

ವಂಶಪಾರಂಪರ್ಯ ಕೇರಳದ ಪ್ರಧಾನ ತಾಂತ್ರಿಕ್

ಶ್ರೀನಿವಾಸ್ ಗುರೂಜಿ

ಹಸ್ತಸಾಮುದ್ರಿಕ, ಜಾತಕ, ಸಾಲಾವಳಿ, ವಾಸ್ತುತಜ್ಞರು

ಜ್ಯೋತಿಷ್ಯದಲ್ಲಿ 21 ವರ್ಷಗಳ ಅನುಭವ

ಸಂಸಾರ ಕಲಹ, ವಿವಾಹ ವಿಚ್ಛೇದನ, ಹಣಕಾಸು, ಆರೋಗ್ಯ ಬಾದೆ, ಪ್ರೇಮ ವಿಚಾರ, ವೃತ್ತಿ, ವ್ಯಾಪಾರ ಇನ್ನೂ ಯಾವುದೇ ಸಮಸ್ಯೆಗಳಿಗೆ ಶ್ರೀಗುರು ಸಾಯಿಬಾಬಾ ಅನುಗ್ರಹದಿಂದ (ಅತಿ ಶೀಘ್ರದಲ್ಲಿ)

(ಏಳು ದಿನಗಳಲ್ಲಿ )

ಶೇಕಡ ನೂರರಷ್ಟು ಪರಿಹಾರ ಶತಸಿದ್ಧ

ಭೇಟಿ ಕೊಡಿ : ಸದ್ಗುರು ಶ್ರೀ ಸಾಯಿ ಆಸ್ಟ್ರೋ ಸೆಂಟರ್

ಮನೆ ನಂಬರ್-37, 27 ನೇ ಕ್ರಾಸ್, 12ನೇ ಮೈನ್, ಸಿಂಡಿಕೇಟ್ ಬ್ಯಾಂಕ್ ಎದುರು, ವಾಸುದೇವ್, ಅಡಿಗಾಸ್ ಹೋಟೆಲ್ ಹತ್ತಿರ, ಜಯನಗರ ನಾಲ್ಕನೇ ಬ್ಲಾಕ್, ಬೆಂಗಳೂರು

ಮೊಬೈಲ್ ಸಂಖ್ಯೆ 9986623344

English summary

Dina Bhavishya 11 Mar 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Wednesday, March 11, 2020, 4:00 [IST]
X
Desktop Bottom Promotion