Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರವಾರದ ದಿನ ಭವಿಷ್ಯ (13-09-2019)
ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ. ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ.

ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ನಾಳೆ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್
ನಿಮ್ಮ ಅಸಭ್ಯ ವರ್ತನೆ ಹಾಗೂ ಭಾಷೆಯಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ವಿವಾದದಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ಕೆಲಸದ ವಿಷಯದಲ್ಲಿ ಈ ವರ್ತನೆ ಇನ್ನಷ್ಟು ತೊಂದರೆಯನ್ನು ಉಂಟುಮಾಡಬಹುದು. ಕುಟುಂಬದವರು ಸಹ ನಿಮ್ಮ ವರ್ತನೆಯನ್ನು ಸಹಿಸುವುದಿಲ್ಲ. ಮಕ್ಕಳು ಕೆಲಸದ ವಿಷಯದಲ್ಲಿ ಕಠಿಣ ಧೋರಣೆ ಹೊಂದಬಹುದು. ಪೋಷಕರ ಆರೋಗ್ಯದ ಕುರಿತು ಕಾಳಜಿಯನ್ನು ತೋರಿ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಅತಿಯಾಗಿ ಖರ್ಚು ಮಾಡುವ ನಿಮ್ಮ ಸ್ವಭಾವದಿಂದ ಹಣದ ಬಜೆಟ್ ಅಲ್ಲಿ ತೊಂದರೆಗೆ ಒಳಗಾಗಬಹುದು. ನಿದ್ರಾಹೀನತೆಯಿಂದ ಬಳಲುತ್ತಿದ್ದವರು ಜಾಗ್ರತರಾಗಿರಬೇಕು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ನಂಬರ್: 8
ಅದೃಷ್ಟದ ಸಮಯ: ಮಧ್ಯಾಹ್ನ 3:30 ರಿಂದ ರಾತ್ರಿ 10:00ರ ವರೆಗೆ.

ವೃಷಭ ರಾಶಿ: 20 ಏಪ್ರಿಲ್ -20 ಮೇ
ನೀವು ಸಕಾರಾತ್ಮಕ ಚಿಂತನೆಯನ್ನು ಹೊಂದಿದ್ದರೆ ನಿಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಕುಟುಂಬದಲ್ಲೂ ಅನುಕೂಲಕರ ಸ್ಥಿತಿಯನ್ನು ಅನುಭವಿಸುವಿರಿ. ಹತ್ತಿರದ ಸಂಬಂಧಿಗಳಿಗೆ ಸಹಾಯ ಮಾಡುವ ಸಾಧ್ಯತೆಗಳಿವೆ. ಪಾಲಕರ ಆರೋಗ್ಯದಲ್ಲಿ ಚೇತರಿಕೆ ಉಂಟಾಗುವುದು. ಅದು ನಿಮ್ಮ ಸಂತೋಷಕ್ಕೆ ಕಾರಣವಾಗುವುದು. ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧೆ ಹಾಗೂ ಒತ್ತಡದ ಮನೋಭಾವವನ್ನು ಹೊಂದಿರುತ್ತಾರೆ. ಹಣಕಾಸಿನ ವಿಷಯದಲ್ಲಿ ಲಾಭ ಉಂಟಾಗುವುದು. ಅದು ನಿಮ್ಮ ಹಿಂದಿನ ಸಾಲಗಳನ್ನು ತೀರಿಸುವಲ್ಲಿ ಸಹಕಾರಿಯಾಗುವುದು. ಕುಟುಂಬದಲ್ಲಿ ಸಂಗಾತಿಯ ಸಹಕಾರ ದೊರೆಯುವುದು. ದಿನದ ಆರಂಭವನ್ನು ಯೋಗದೊಂದಿಗೆ ಪ್ರಾರಂಭಿಸಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ನಂಬರ್: 2
ಅದೃಷ್ಟದ ಸಮಯ: ಸಂಜೆ 4:00 ರಿಂದ ರಾತ್ರಿ 10:45ರ ವರೆಗೆ.

ಮಿಥುನ ರಾಶಿ: 21 ಮೇ -20 ಜೂನ್
ಇಂದು ನೀವು ಆರ್ಥಿಕ ಬಿಕ್ಕಟ್ಟಿನಿಂದ ದೂರ ನಿಲ್ಲುವಿರಿ. ನೂತನ ಹೂಡಿಕೆಗೆ ಉತ್ತಮವಾದ ಸಮಯ. ಯಾವುದೇ ಮಹತ್ತರವಾದ ಕೆಲಸವನ್ನು ಕೈಗೊಳ್ಳುವ ಮೊದಲು ಪಾಲಕರ ಸಲಹೆ ಪಡೆಯುವುದನ್ನು ಮರೆಯದಿರಿ. ಕಾನೂನಾತ್ಮಕ ಸಮಸ್ಯೆ ಎದುರಿಸುತ್ತಿರುವವರು ಸಮಸ್ಯೆಯಿಂದ ಮುಕ್ತಿ ಹೊಂದುವರು. ಪ್ರಮುಖ ವಿಷಯದಲ್ಲಿ ಶಾಂತ ಪ್ರವೃತ್ತಿಯನ್ನು ತೋರುವುದು ಸೂಕ್ತ. ಸಂಗಾತಿ ಕೆಲವು ವಿಷಯಗಳಿಗೆ ಅಸಮಧಾನವನ್ನು ವ್ಯಕ್ತಪಡಿಸಬಹುದು. ಕೆಲಸದ ವಿಷಯದಲ್ಲಿ ಇಂದು ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಸಂಜೆಯ ಹೊತ್ತಿಗೆ ಆಯಾಸದಿಂದ ವಿಶ್ರಾಂತಿ ಪಡೆಯಲು ಮನಸ್ಸು ಮಾಡುವಿರಿ. ಸಂಬಂಧದಲ್ಲಿ ಇರುವವರು ವಿಶೇಷ ಕ್ಷಣಗಳನ್ನು ಅನುಭವಿಸುವರು.
ಅದೃಷ್ಟದ ಬಣ್ಣ: ತಿಳಿ ಹಸಿರು
ಅದೃಷ್ಟದ ನಂಬರ್: 12
ಅದೃಷ್ಟದ ಸಮಯ: ಮುಂಜಾನೆ 11:00 ರಿಂದ ಮಧ್ಯಾಹ್ನ 3:00ರ ವರೆಗೆ.

ಕರ್ಕ ರಾಶಿ: 21 ಜೂನ್ 22 ಜುಲೈ
ಇಂದು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಕಾಶಮಾನವಾದ ದಿನವಾಗಲಿದೆ. ಮಕ್ಕಳ ಸಾಧನೆಯಿಂದ ಪೋಷಕರು ಅತ್ಯಂತ ಹೆಮ್ಮೆಯನ್ನು ವ್ಯಕ್ತಪಡಿಸುವರು. ಕೆಲವರು ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಲು ಯೋಜಿಸುವರು. ಕುಟುಂಬದವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಮುಂದಾಗಿ. ಸಂಗಾತಿಯಿಂದ ಉತ್ತಮ ಬೆಂಬಲ ಸಿಗುವುದು. ನವವಿವಾಹಿತರು ಸಹ ತಮ್ಮ ಸಂಬಂಧಗಳ ವಿಷಯದಲ್ಲಿ ಹೊಂದಾಣಿಕೆಯನ್ನು ಅನುಸರಿಸುವರು. ನಿಮ್ಮ ಬುದ್ಧಿವಂತಿಕೆಯನ್ನು ಕಂಡು ಸಹೋದ್ಯೋಗಿಗಳು ಅಸೂಯೆಯನ್ನು ವ್ಯಕ್ತಪಡಿಸುವರು. ವೈಯಕ್ತಿಕ ಮತ್ತು ವೃತ್ತಿ ಪರ ಜೀವನದಲ್ಲಿ ಸಮತೋಲನವನ್ನು ತಂದುಕೊಳ್ಳಬೇಕು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 36
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ರಾತ್ರಿ 8:00ರ ವರೆಗೆ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್
ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಇಂದು ನೀವು ಎದುರಿಸಬೇಕಾಗುವುದು. ನಿಮ್ಮ ಕೆಲವು ಪ್ರಮುಖ ಕೆಲಸ ಕಾರ್ಯಗಳು ಉತ್ತಮವಾಗಿ ಸಾಗುವುದು. ಹಿಂದಿನ ಹೂಡಿಕೆಯಿಂದ ಲಾಭ ಉಂಟಾಗುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮ ಸ್ಥಿತಿಯಲ್ಲಿ ಇರುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮಾತನಾಡುವ ಮುನ್ನ ಎರಡು ಬಾರಿ ಯೋಚಿಸಿ. ಸಂಗಾತಿಗೆ ವಿಶೇಷ ಭಾವನೆ ಮೂಡಲು ನೀವು ಕೆಲವು ಯೋಜನೆಯನ್ನು ಕೈಗೊಳ್ಳುವಿರಿ. ಸ್ನೇಹಿತರೊಂದಿಗೆ ಒಂದಿಷ್ಟು ಸಮಯ ಕಳೆಯುವುದರಿಂದ ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಹೊಸ ವಾಹನ ಖರೀದಿಸುವ ಸಾಧ್ಯತೆಯಿದೆ. ಆರೋಗ್ಯವಾಗಿರಲು ಸಾಕಷ್ಟು ನೀರನ್ನು ಕುಡಿಯಿರಿ.
ಅದೃಷ್ಟದ ಬಣ್ಣ: ತಿಳಿ ನೀಲಿ
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಮುಂಜಾನೆ 4:00 ರಿಂದ ಮಧ್ಯಾಹ್ನ 12:20ರ ವರೆಗೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್
ಇಂದು ನಿಮಗೆ ತೆವಳುವ ದಿನ ಎನ್ನಬಹುದು. ನಿಮ್ಮ ಸಂಗಾತಿಯ ಕೆಲವು ವರ್ತನೆಯು ನಿಮ್ಮನ್ನು ಕೆರಳಿಸುವಂತೆ ಮಾಡುವುದು. ವಿಷಯಗಳು ಕಲ್ಪನೆಗೂ ಮೀರಿಸುವುದರಿಂದ ದೃಢವಾದ ನಿರ್ಧಾರ ಕೈಗೊಳ್ಳಲು ಮುಂದಾಗಬೇಕು. ನವ ವಿವಾಹಿತರಿಗೆ ಉತ್ತಮ ಸಮಯ. ಕುಟುಂಬದವರೊಂದಿಗೆ ಸಣ್ಣ ಪ್ರವಾಸ ಕೈಗೊಂಡರೆ ಮಾನಸಿಕ ನೆಮ್ಮದಿ ದೊರೆಯುವುದು. ಮೂರನೇ ವ್ಯಕ್ತಿಗಳಿಂದ ನಿರೀಕ್ಷೆಯನ್ನು ಇಟ್ಟುಕೊಳ್ಳದಿರಿ. ಅದು ನಿಮಗೆ ಬೇಸರವನ್ನು ಉಂಟುಮಾಡುವುದು. ನಿಮ್ಮ ಉದಾರ ಗುಣವನ್ನು ಇತರರು ದುರುಪಯೋಗ ಪಡಿಸಿಕೊಳ್ಳಬಹುದು. ನೀವು ದೇವರಲ್ಲಿ ನಂಬಿಕೆ ಹಾಗೂ ಭಕ್ತಿಯನ್ನು ಇರಿಸಿ
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಮಧ್ಯಾಹ್ನ 3:30 ರಿಂದ ರಾತ್ರಿ 8:00ರ ವರೆಗೆ.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್
ಸಂಬಂಧದ ವಿಷಯದಲ್ಲಿ ಆತಂಕವನ್ನು ಅನುಭವಿಸುವ ಸಾಧ್ಯತೆಗಳಿವೆ. ಸಂಗಾತಿಯ ಬೆಂಬಲದಿಂದ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವಿರಿ. ಆರ್ಥಿಕವಾಗಿ ಇಂದು ಕಷ್ಟದ ದಿನ. ನೀವು ನಿಮ್ಮ ಖರ್ಚಿನಲ್ಲಿ ಹಿಡಿತವನ್ನು ಸಾಧಿಸಬೇಕು. ಸುತ್ತಮುತ್ತಲಿನ ಜನರಿಂದ ಏನನ್ನೂ ನಿರೀಕ್ಷಿಸದಿರಿ. ಕೆಲಸದ ವಿಷಯದಲ್ಲಿ ಎಲ್ಲವೂ ಸವಾಲಿನಂತೆ ಇರುತ್ತದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಸಣ್ಣ ತಪ್ಪಿನ ಬಗ್ಗೆ ಸಿಟ್ಟಾಗಬಹುದು. ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಲು ಬಯಸುವರು. ಆರೋಗ್ಯದಲ್ಲಿನ ಸುಧಾರಣೆ ನಿಮಗೆ ನಿರಾಳತೆಯನ್ನು ನೀಡುವುದು.
ಅದೃಷ್ಟದ ಬಣ್ಣ: ಕ್ರೀಮ್
ಅದೃಷ್ಟದ ಸಂಖ್ಯೆ: 17
ಅದೃಷ್ಟದ ಸಮಯ: ಮುಂಜಾನೆ 9:30 ರಿಂದ ಸಂಜೆ 6:00ರ ವರೆಗೆ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್
ಉದ್ಯಮಿಗಳಿಗೆ ಇಂದು ಉತ್ತಮವಾದ ದಿನ. ವ್ಯವಹಾರಗಳಿಗೆ ಹೊಸ ಯೋಜನೆಯನ್ನು ಆಯೋಜಿಸುವಿರಿ. ಹಣಕಾಸಿನ ವಿಷಯದಲ್ಲಿ ಸುಧಾರಣೆ ಕಾಣುವಿರಿ. ಸಾಲದಿಂದ ಮುಕ್ತಿ ದೊರೆಯುವುದು. ಹೂಡಿಕೆಗೆ ಮುಂದಾಗುವ ಮೊದಲು ಎರಡು ಬಾರಿ ಯೋಚಿಸಿ. ಪಾಲಕರ ಆರೋಗ್ಯದ ಬಗ್ಗೆ ಗಮನ ನೀಡುವುದು ಅಗತ್ಯ. ಆಪ್ತರೊಂದಿಗೆ ಸಮಯ ಕಳೆಯುವುದರಿಂದ ಒಂದಿಷ್ಟು ಸಂತೋಷವನ್ನು ಅನುಭವಿಸುವಿರಿ. ನಿಮ್ಮ ಕೆಲಸಕ್ಕೆ ಸಮಯ ನೀಡುವ ಹಾಗೆ ಸಂಬಂಧಗಳಿಗೂ ಸೂಕ್ತ ಸಮಯ ನೀಡಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಮಧ್ಯಾಹ್ನ 1:15ರಿಂದ ಸಂಜೆ 7:20ರ ವರೆಗೆ.

ಧನು ರಾಶಿ: 22 ನವೆಂಬರ್-21 ಡಿಸೆಂಬರ್
ಇಂದು ನೀವು ದೂರದ ಪ್ರಯಾಣ ಅಥವಾ ಯೋಜನೆಯನ್ನು ಕೈಗೊಂಡಿದ್ದರೆ ಅದನ್ನು ಕೈ ಬಿಡುವುದು ಉತ್ತಮ. ಹಣಕಾಸಿನ ವಿಷಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾಗುವುದು. ಅನುಭವಿ ವ್ಯಕ್ತಿಗಳಿಂದ ಸೂಕ್ತ ಸಲಹೆ ಹಾಗೂ ಯೋಜನೆಯನ್ನು ಪಡೆದುಕೊಳ್ಳಿ. ನಿಮ್ಮ ವೈಯಕ್ತಿಕ ಸಮಸ್ಯೆಯಿಂದಾಗಿ ವೃತ್ತಿ ಜೀವನವನ್ನು ಹಾಳುಮಾಡಿಕೊಳ್ಳದಿರಿ. ಆಭರಣ ವ್ಯಾಪಾರಿಗಳಿ ಭಾರಿ ಮೊತ್ತದ ಲಾಭ ಉಂಟಾಗುವುದು. ಆಹಾರದ ಅಗತ್ಯ ಇರುವವರಿಗೆ ಅನ್ನ ದಾನ ಮಾಡಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಮುಂಜಾನೆ 10:00 ರಿಂದ ಸಂಜೆ 4:50ರ ವರೆಗೆ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ
ಹಿಂದೆ ನಡೆದ ಸಂಗತಿಯ ಬಗ್ಗೆ ಇಂದು ಯೋಚಿಸುವುದನ್ನು ತಪ್ಪಿಸಿ. ಇದರಿಂದ ನಿಮ್ಮ ಸಮಯ ಹಾಗೂ ಮಾನಸಿಕ ನೆಮ್ಮದಿ ಎರಡೂ ಹಾಳಾಗುವುದು. ನಿಮ್ಮ ಕೆಲಸವನ್ನು ನಿರ್ವಹಿಸಲು ನಿಮಗೆ ಒಂದಿಷ್ಟು ತೊಡಕು ಉಂಟಾಗುವುದು. ತಾಳ್ಮೆಯಿಂದ ಕೆಲಸವನ್ನು ನಿರ್ವಹಿಸಬೇಕಾಗುವುದು. ನೀವು ನಿಮ್ಮ ಸಂಗಾತಿಯೊಂದಿಗೆ ಸೌಹಾರ್ದಯುತವಾದ ಚರ್ಚೆ ನಡೆಸಿ. ಅದು ನಿಮಗೆ ದಿನವಿಡೀ ಸಂತೋಷದಿಂದ ಇರುವ ಭಾವನೆ ನೀಡುವುದು. ಕುಟುಂಬದಲ್ಲಿ ಉಂಟಾಗುವ ಕೆಲವು ಗೊಂದಲವು ನಿರಾಸೆಯನ್ನು ಮಾಡುವುದು. ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯುವುದು. ಕೆಲವು ಅನಗತ್ಯ ಸಂಗತಿಗಳ ಬಗ್ಗೆ ನಿರ್ಲಕ್ಷ್ಯ ತೋರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪೋಷಕರ ನಿರೀಕ್ಷೆಯಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವರು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಮಧ್ಯಾಹ್ನ 1:00ರಿಂದ ಮಧ್ಯಾಹ್ನ 3:00ರ ವರೆಗೆ.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ
ನಿಮ್ಮ ಪ್ರಮುಖ ವಿಚಾರಗಳಿಗೆ ಹಾಗೂ ಕೆಲಸ ಕಾರ್ಯಗಳಿಗೆ ಪೋಷಕರು ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುವರು. ಕೆಲವು ಸಂಗತಿಗೆ ಸಂಬಂಧಿಸಿದಂತೆ ವಿವಾದಕ್ಕೆ ಒಳಗಾಗಬಹುದು. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವಂತಹ ನಕಾರಾತ್ಮಕ ಸಂಗತಿಯಿಂದ ಆದಷ್ಟು ದೂರವಿರಿ. ಅಧಿಕ ರಕ್ತದೊತ್ತಡ ಅನುಭವಿಸುತ್ತಿರುವವರು ಒತ್ತಡದ ಸ್ಥಿತಿಯಿಂದ ದೂರ ಇರಲು ಪ್ರಯತ್ನಿಸಬೇಕು. ನೀವು ಕೈಗೊಳ್ಳುವ ನಿರ್ಧಾರಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ಯೋಜಿಸಬೇಕು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಮುಂಜಾನೆ 7:00 ರಿಂದ ಸಂಜೆ 5:00ರ ವರೆಗೆ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್
ಇದೀಗ ನೀವು ನಿಮ್ಮ ಕುಟುಂಬಕ್ಕೆ ಸಮಯವನ್ನು ನೀಡಬೇಕು. ಆಗ ಸಾಕಷ್ಟು ಆಹ್ಲಾದವನ್ನು ಪಡೆದುಕೊಳ್ಳುವಿರಿ. ಒಡ ಹುಟ್ಟಿದವರು ತಪ್ಪು ಗ್ರಹಿಕೆಯಿಂದ ದೂರ ಉಳಿದುಕೊಳ್ಳುವರು. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಸುಗಮವಾದ ದಿನ. ಒಳ್ಳೆಯ ಸುದ್ದಿಯನ್ನು ಇಂದು ನೀವು ಕೇಳುವಿರಿ. ಸಂಜೆಯ ವೇಳೆಗೆ ಒಂದಿಷ್ಟು ಲಾಭದಾಯಕ ಪರಿಸ್ಥಿತಿಯನ್ನು ಪಡೆದುಕೊಳ್ಳುವಿರಿ. ಹೂಡಿಕೆಗೆ ಉತ್ತಮ ಸಮಯ. ಅದೃಷ್ಟವು ನಿಮ್ಮ ಹಿಂದೆ ಬರುವುದು. ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರಬೇಕು ಅದು ನಿಮ್ಮ ಭವಿಷ್ಯವನ್ನು ಅಭಿವೃದ್ಧಿ ಪಡಿಸುವುದು. ದಿನದ ಆರಂಭವನ್ನು ಯೋಗ ಮತ್ತು ಧ್ಯಾನದಿಂದ ಆರಂಭಿಸಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 4:00 ರಿಂದ ರಾತ್ರಿ 8:45ರ ವರೆಗೆ.



Click it and Unblock the Notifications











