For Quick Alerts
ALLOW NOTIFICATIONS  
For Daily Alerts

ಮಂಗಳವಾರದ ದಿನ ಭವಿಷ್ಯ (3-12-2019)

|

ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು. ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

Dina Bhavishya

ಸಂವತ್ಸರ: ವಿಕಾರಿನಾಮ
ಆಯನ: ದಕ್ಷಿಣಾಯನ
ಋತು: ಹೇಮಂತ
ಮಾಸ: ಮಾರ್ಗಶಿರ
ಪಕ್ಷ: ಶುಕ್ಲ
ತಿಥಿ: ಸಪ್ತಮಿ
ನಕ್ಷತ್ರ: ಧನಿಷ್ಠ
ರಾಹುಕಾಲ: ಮಧ್ಯಾಹ್ನ 2.47ರಿಂದ 4.06ರವರೆಗೆ
ಯಮಗಂಡಕಾಲ: ಬೆಳಿಗ್ಗೆ 9.34ರಿಂದ 10.52ರವೆರೆಗೆ
ಗುಳಿಕಕಾಲ: ಮಧ್ಯಾಹ್ನ 12.11ರಿಂದ 1.29 ರವೆರೆಗೆ
ದುರ್ಮುಹೂರ್ತ: ಬೆಳಿಗ್ಗೆ 9.03ರಿಂದ 9.453ರವರೆಗೆ ಹಾಗೂ ಬೆಳಿಗ್ಗೆ 10.50ರಿಂದ 11.44ರವರೆಗೆ
ಸೂರ್ಯೋದಯ: ಬೆಳಿಗ್ಗೆ 6.58
ಸೂರ್ಯಾಸ್ತ: ಸಂಜೆ 5.24

ಮೇಷ ರಾಶಿ

ಮೇಷ ರಾಶಿ

ಇತರರ ಮಾತುಗಳಿಂದ ಪ್ರಭಾವಿತರಾಗಬೇಡಿ. ನಿಮಗೆ ಯಾವುದು ಒಳ್ಳೆಯದು ಮತ್ತು ಕೆಟ್ಟದು ಎಂದು ತಿಳಿದಿದೆ ಎಂಬುದನ್ನು ಬಲವಾಗಿ ನಂಬಿರಿ. ಇಂದು ಕೆಲವರು ನಿಮ್ಮ ಕಿರಿಕಿರಿಗೆ ಕಾರಣವಾಗಬಹುದು. ಅಂತಹ ಜನರನ್ನು ನಿರ್ಲಕ್ಷಿಸುವುದು ಉತ್ತಮ, ಏಕೆಂದರೆ ಅವರು ನಿಮ್ಮ ಗುರಿಯಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಬಹುದು. ನೀವು ಇಂದು ತುಂಬಾ ಜಾಗರೂಕರಾಗಿರಬೇಕು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ ಮತ್ತು ಸಂಗಾತಿಯಿಂದ ನಿಮಗೆ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ. ಪ್ರಣಯ ಜೀವನದಲ್ಲಿಯೂ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಸಂಗಾತಿಯೊಂದಿಗೆ ಸಾಕಷ್ಟು ಮೋಜು ಮಾಡುವ ಅವಕಾಶವಿದೆ. ಇಂದು ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ಮಾಡಿ. ಹೊಸ ಮತ್ತು ಸೃಜನಶೀಲವಾದದ್ದನ್ನು ರಚಿಸಲು ಒಳ್ಳೆಯ ದಿನ. ಆರೋಗ್ಯದ ದೃಷ್ಟಿಯಿಂದ ತುಂಬಾ ಆಯಾಸದ ದಿನವಾಗಿರುತ್ತದೆ. ನಿಮ್ಮ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಬೇಕು.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 11

ಅದೃಷ್ಟ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 3:30 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಕೆಲಸದಲ್ಲಿ ದಿನವು ತುಂಬಾ ಒಳ್ಳೆಯದಾಗಿರಲಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿ, ಹಿರಿಯರು ಮತ್ತು ಸಹೋದ್ಯೋಗಿಗಳಿಂದ ಮೆಚ್ಚುಗೆ ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಇಂದು ನೀವು ವಿಭಿನ್ನ ರೀತಿಯ ಪ್ರಣಯವನ್ನು ಅನುಭವಿಸುವಿರಿ. ಸಂಗಾತಿಯೊಂದಿಗೆ ಇರುವುದು ನಿಮಗೆ ತುಂಬಾ ಸಂತೋಷವಾಗುತ್ತದೆ. ದಿನದ ಎರಡನೇ ಭಾಗದಲ್ಲಿ ನಿಮ್ಮ ಆಪ್ತರು ಅಥವಾ ಕುಟುಂಬದೊಂದಿಗೆ ಸಾಕಷ್ಟು ಮೋಜಿನ ಸಮಯವನ್ನು ಕಳೆಯುತ್ತೀರಿ. ಪ್ರಣಯ ಜೀವನದಲ್ಲಿ ವಿಷಯಗಳು ನಿಮ್ಮ ಪರವಾಗಿರುತ್ತವೆ. ಇಂದು ನೀವು ಪ್ರೀತಿಯ ಪ್ರಸ್ತಾಪವನ್ನು ಪಡೆಯುವ ಸಾಧ್ಯತೆಯಿದೆ. ದಿನ ಮುಂದುವರೆದಂತೆ ಹಣಕಾಸಿ ಸ್ಥಿತಿ ಸುಧಾರಿಸುತ್ತದೆ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ವ್ಯಾಪಾರ ಮಾಡಿದರೆ ಇಂದು ದೊಡ್ಡ ಲಾಭವನ್ನು ಪಡೆಯಬಹುದು.

ಅದೃಷ್ಟ ಬಣ್ಣ: ಗಾಢ ಕೆಂಪು

ಅದೃಷ್ಟ ಸಂಖ್ಯೆ: 26

ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 4:00 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಇಂದು ಹಣದ ವಿಚಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಯದ ಹೆಚ್ಚಳವು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ಕೆಲಸದಲ್ಲಿ ದಿನವು ಸವಾಲಾಗಿರುತ್ತದೆ. ಅನಗತ್ಯ ವಿವಾದಗಳಲ್ಲಿ ಸಿಲುಕುವ ಮೂಲಕ ಕೆಲಸದ ಬಗ್ಗೆ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲವಾದ್ದರಿಂದ ಕೋಪವನ್ನು ನಿಯಂತ್ರಿಸಬೇಕು. ಇಂದು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಮಗುವಿನ ಕಡೆಯಿಂದ ಸಂತೋಷ ಸಿಗುತ್ತದೆ. ನೀವು ವ್ಯಾಪಾರ ಮಾಡಿದರೆ ಇಂದು ನೀವು ಬಹಳ ದೂರ ಪ್ರಯಾಣಿಸಬೇಕಾಗಬಹುದು. ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ತಿಳಿ ಹಸಿರು

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಸಂಜೆ 4:00 ರಿಂದ 6:00 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ನಿಮ್ಮ ಕೆಲವು ಅಭ್ಯಾಸಗಳು ನಿಮ್ಮನ್ನು ಇಂದು ತೊಂದರೆಗೆ ಸಿಲುಕಿಸುತ್ತದೆ. ಈ ಕಾರಣದಿಂದಾಗಿಯೇ ನೀವು ವಿವಾದಗಳಲ್ಲಿ ಸಿಲುಕುತ್ತೀರಿ. ಕೆಲಸದ ಹೊರೆ ಮತ್ತು ಕುಟುಂಬದಲ್ಲಿನ ವ್ಯತ್ಯಾಸಗಳು ಸಹ ಒತ್ತಡಕ್ಕೆ ಕಾರಣವಾಗಬಹುದು. ನೀವು ಸಾಕಷ್ಟು ಕಿರಿಕಿರಿ ಅನುಭವಿಸಬಹುದು. ಇಂದು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ ಇಲ್ಲದಿದ್ದರೆ ಮುಂದೆ ನೀವು ವಿಷಾದಿಸಬೇಕಾಗಬಹುದು. ಮನಸ್ಸಿನಲ್ಲಿ ಯಾವುದಾದರೂ ವಿಷಯದ ಬಗ್ಗೆ ಸಂದಿಗ್ಧತೆ ಇದ್ದರೆ ಸಂಗಾತಿಯೊಂದಿಗೆ ಹಂಚಿಕೊಳ್ಳಿ ಇದು ನಿಮಗೆ ಪರಿಹಾರ ನೀಡುತ್ತದೆ. ಪರಸ್ಪರ ಹೆಚ್ಚು ಸಮಯ ಕಳೆಯಿರಿ. ಹಣದ ದೃಷ್ಟಿಯಿಂದ ದಿನ ಉತ್ತಮವಾಗಿರುತ್ತದೆ. ಇಂದು ನೀವು ಕೆಲವು ಹೊಸ ಆರ್ಥಿಕ ಯೋಜನೆಗಳನ್ನು ಮಾಡಬಹುದು. ಧನಾತ್ಮಕವಾಗಿ ಯೋಚಿಸಿ ಹಾಗೂ ಅದರಂತೆ ಶ್ರಮಿಸಿದರೆ ಪ್ರತಿ ಪ್ರಯತ್ನದಲ್ಲೂ ಯಶಸ್ಸನ್ನು ಪಡೆಯುತ್ತೀರಿ.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 22

ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 1:00 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಕಳೆದ ಕೆಲವು ದಿನಗಳಿಂದ ಕೆಲಸದಲ್ಲಿನ ನಿಮ್ಮ ಪ್ರಯತ್ನಗಳು ನಿರಂತರವಾಗಿ ವಿಫಲವಾಗುತ್ತಿದ್ದವು, ಈ ಕಾರಣದಿಂದಾಗಿ ನಿಮ್ಮ ಸ್ಥೈರ್ಯ ಗಮನಾರ್ಹವಾಗಿ ಕುಸಿದಿದೆ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದೃಷ್ಟವು ಇಂದು ನಿಮ್ಮನ್ನು ಬೆಂಬಲಿಸುತ್ತದೆ. ಇಂದು ಗ್ರಹಗಳ ಚಲನೆಯು ದೊಡ್ಡ ಯಶಸ್ಸಿನತ್ತ ಸಾಗುತ್ತಿದೆ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಇಂದು ಜೀವನ ಸಂಗಾತಿಯ ಮನಸ್ಥಿತಿ ಸರಿಯಾಗಿರುವುದಿಲ್ಲ. ಅವರಿಗೆ ಸುಳ್ಳು ಹೇಳುವುದನ್ನು ತಪ್ಪಿಸುವುದು ಉತ್ತಮ, ಇಲ್ಲದಿದ್ದರೆ ನಿಮ್ಮಿಬ್ಬರ ನಡುವಿನ ವ್ಯತ್ಯಾಸಗಳು ಹೆಚ್ಚಾಗಬಹುದು. ಹಣದ ವಿಷಯದಲ್ಲಿ ಜಾಗರೂಕರಾಗಿರಿ. ಖರ್ಚು ಮಾಡುವ ಮೊದಲು ನಿಮ್ಮ ಬಜೆಟ್ ಅನ್ನು ನೆನಪಿನಲ್ಲಿಡಿ. ಇಂದು ಸ್ನೇಹಿತರೊಂದಿಗೆ ಮೋಜಿನ ದಿನವನ್ನು ಕಳೆಸುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ. ಸಮತೋಲಿತ ಆಹಾರದೊಂದಿಗೆ ಸ್ವಲ್ಪ ವ್ಯಾಯಾಮ ಮಾಡಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 6:00 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ವೈವಾಹಿತ ಜೀವನವು ಉತ್ತಮವಾಗಿರುತ್ತದೆ. ಇಂದು ಕೆಲವು ಪ್ರಣಯ ಕ್ಷಣಗಳನ್ನು ಪರಸ್ಪರ ಕಳೆಯುತ್ತೀರಿ. ಕುಟುಂಬ ಸದಸ್ಯರೊಂದಿಗಿನ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ನಿಮ್ಮ ಒತ್ತಡ ಹೆಚ್ಚಾಗಬಹುದು. ಆದರೆ ನೀವು ಪರಿಸ್ಥಿತಿಯನ್ನು ಸುಧಾರಿಸಬಹುದು. ಮಧ್ಯಾಹ್ನದ ನಂತರ ಆರ್ಥಿಕ ಲಾಭ ಇರುತ್ತದೆ. ಪ್ರೀತಿಯ ವಿಷಯದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವ ಅವಶ್ಯಕತೆಯಿದೆ. ನಿಮ್ಮ ಸಂಗಾತಿಯ ಬಗ್ಗೆ ಕೇಳಿದ ವಿಷಯಗಳನ್ನು ಕುರುಡಾಗಿ ನಂಬಬೇಡಿ, ಇಲ್ಲವಾದಲ್ಲಿ ಇದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆರೋಗ್ಯ ವಿಷಯಗಳು ಇಂದು ಉತ್ತಮವಾಗಿರುತ್ತವೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 9

ಅದೃಷ್ಟ ಸಮಯ: ಮಧ್ಯಾಹ್ನ 2:30 ರಿಂದ 7:30 ರವರೆಗೆ

ತುಲಾ ರಾಶಿ

ತುಲಾ ರಾಶಿ

ಹಣದ ದೃಷ್ಟಿಯಿಂದ ದಿನ ಶುಭವಾಗಿದೆ. ಇಂದು ನೀವು ಯಾವುದೇ ದೊಡ್ಡ ಲಾಭವನ್ನು ಪಡೆಯಬಹುದು. ಆದರೂ, ಯಾವುದೇ ನಷ್ಟವಾಗದಂತೆ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಅತಿಯಾದ ಕೆಲಸವನ್ನು ತಪ್ಪಿಸಿ, ಏಕೆಂದರೆ ಅದು ನಿಮಗೆ ಒತ್ತಡ ಮತ್ತು ಆಯಾಸವನ್ನು ನೀಡುತ್ತದೆ. ಬಾಕಿ ಇರುವ ಕಾರ್ಯಗಳನ್ನು ನಿಧಾನವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಇದು ನಿಮ್ಮ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಬಹುದು. ನಿಮ್ಮ ಸಂಗಾತಿಯ ಕೆಟ್ಟ ಮನಸ್ಥಿತಿಯಿಂದಾಗಿ ಪ್ರಣಯ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ವಿಷಯಗಳನ್ನು ಇನ್ನಷ್ಟು ಹದಗೆಡಿಸುವಂಥ ಯಾವುದೇ ವಿಷಯಗಳನ್ನು ಹೇಳುವುದನ್ನು ತಪ್ಪಿಸಿ. ಯೋಜಿತ ರೀತಿಯಲ್ಲಿ ಕೆಲಸ ಮಾಡಿ. ಮಧ್ಯಾಹ್ನದ ನಂತರ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಮಾನಸಿಕ ಶಕ್ತಿಯನ್ನು ಪಡೆಯಲು ಧ್ಯಾನ ಮತ್ತು ಯೋಗ ಮಾಡಿ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಬೆಳಿಗ್ಗೆ 7:00 ರಿಂದ 8:45 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇಂದು ನಿಮಗೆ ಒತ್ತಡದ ದಿನವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ನಿರಾಶೆಗೊಳ್ಳುವಿರಿ. ಆರ್ಥಿಕವಾಗಿ ದಿನ ಉತ್ತಮವಾಗಿಲ್ಲ. ಮನರಂಜನೆ ಮತ್ತು ಐಷಾರಾಮಿ ವಿಷಯಗಳಿಗಾಗಿ ಹೆಚ್ಚು ಖರ್ಚು ಮಾಡಬೇಡಿ. ಇಂದು ಮಾತು ಮತ್ತು ನಡವಳಿಕೆಯನ್ನು ಸಮತೋಲನಗೊಳಿಸಿ. ಯಾವುದೇ ತಪ್ಪು ಮತ್ತು ಅನಿವಾರ್ಯವಲ್ಲದ ವಿಷಯಗಳಿಂದ ನಿಮ್ಮನ್ನು ದೂರವಿಡಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಕುಟುಂಬಕ್ಕೆ ಯಾವುದರ ಬಗ್ಗೆಯೂ ಒತ್ತಡ ಹೇರಬೇಡಿ. ಆರೋಗ್ಯದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಸಂಜೆ 5:25 ರಿಂದ 9:00 ರವರೆಗೆ

ಧನು ರಾಶಿ

ಧನು ರಾಶಿ

ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಇದ್ದಕ್ಕಿದ್ದಂತೆ ದೊಡ್ಡ ಆರ್ಥಿಕ ಲಾಭವು ಹಣದ ಸಮಸ್ಯೆಯನ್ನು ಪರಿಹರಿಸುತ್ತದೆ. ಇಂದು ಕೆಲವು ಮನೆಯ ವಿಷಯಗಳು ಹಾಗೂ ಮಕ್ಕಳ ಬಗ್ಗೆ ಚಿಂತೆ ಮಾಡುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ಒತ್ತಡವು ನಿಮ್ಮ ಮಾನಸಿಕ ಶಾಂತಿಗೆ ಭಂಗ ತರುವ ಕಾರಣ ಇಂದು ತಾಳ್ಮೆ ಮತ್ತು ಶಾಂತತೆಯಿಂದ ಕೆಲಸ ಮಾಡಿ. ವ್ಯಾಪಾರಸ್ಥರಾಗಿದ್ದರೆ ಇಂದು ಯಾವುದೇ ದೊಡ್ಡ ವಹಿವಾಟು ನಡೆಸುವಾಗ ಜಾಗರೂಕರಾಗಿರಿ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ನಿಮ್ಮ ಸಂಗಾತಿಯ ಬಗ್ಗೆ ಹೆಚ್ಚು ಗಮನ ಹರಿಸಿ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಸಂಜೆ 4:00 ರಿಂದ ರಾತ್ರಿ 8:00 ರವರೆಗೆ

ಮಕರ ರಾಶಿ

ಮಕರ ರಾಶಿ

ದಿನವು ನಿಮಗೆ ತುಂಬಾ ರೋಮಾಂಚನಕಾರಿಯಾಗಿರಲಿದೆ. ನಿಮ್ಮ ಆಯ ಸ್ಥಳದಲ್ಲಿ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗಬಹುದು. ವಿವಾಹಿತರಾಗಿದ್ದರೆ ಸಂಗಾತಿಯೊಂದಿಗೆ ಶಾಂತ ದಿನವನ್ನು ಕಳೆಯುತ್ತೀರಿ. ಆರ್ಥಿಕವಾಗಿ ಇಂದು ಸಾಮಾನ್ಯ ದಿನವಾಗಲಿದೆ. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡುತ್ತೀರಿ. ಸ್ವಲ್ಪ ಸಮಯದವರೆಗೆ ನೀವು ತುಂಬಾ ಚಿಂತೆ ಮಾಡುತ್ತಿದ್ದರೆ ಮತ್ತು ಯಾವುದಾದರೂ ವಿಷಯದ ಬಗ್ಗೆ ಚಡಪಡಿಸುತ್ತಿದ್ದರೆ ಇಂದು ಸಮಸ್ಯೆಯನ್ನು ಪರಿಹರಿಸುವ ಬಲವಾದ ಸಾಧ್ಯತೆಯಿದೆ. ಅನಗತ್ಯವಾಗಿ ಚಿಂತೆ ಮಾಡುವುದು ನಿಮ್ಮ ಈ ದಿನವನ್ನು ಹಾಳುಮಾಡುವುದಲ್ಲದೆ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಸಮಯವನ್ನು ಚೆನ್ನಾಗಿ ಬಳಸಿಕೊಂಡರೆ ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಬಹುದು. ಕೆಲಸದ ಸ್ಥಳದಲ್ಲಿರುವುದು ಅನುಕೂಲಕರವಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ಇಂದು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅದೃಷ್ಟ ಬಣ್ಣ: ಗಾಢ ಹಸಿರು

ಅದೃಷ್ಟ ಸಂಖ್ಯೆ: 3

ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 4:30 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಇಂದು ನೀವು ಮಾನಸಿಕವಾಗಿ ಬಲಶಾಲಿ ಮತ್ತು ತೃಪ್ತಿರಾಗಿರುವಿರಿ. ಸಂಗಾತಿಯ ಪ್ರೀತಿಯ ನಡವಳಿಕೆಯು ದಿನವನ್ನು ಆನಂದಮಯವಾಗಿಸುತ್ತದೆ. ದಂಪತಿಗಳಿಗೆ ಇದು ವಿಶೇಷವಾಗಿರುತ್ತದೆ. ಬಾಕಿ ಉಳಿದ ಯಾವುದೇ ಪ್ರಮುಖ ಕೆಲಸ ಇಂದು ಪೂರ್ಣಗೊಳ್ಳುವ ಬಲವಾದ ಸಾಧ್ಯತೆಯಿದೆ. ಕಚೇರಿಯಲ್ಲಿ ಚಾಟ್ ಮಾಡುವುದನ್ನು ತಪ್ಪಿಸಿ, ಇದು ನಿಮಗೆ ತೊಂದರೆಯಾಗಬಹುದು. ಇಂದು ಸಮಯಕ್ಕೆ ಸರಿಯಾಗಿ ಕಚೇರಿಯನ್ನು ತಲುಪಲು ಪ್ರಯತ್ನಿಸಿ. ಉಳಿದ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದರ ಮೂಲಕ ನಿರಾಳರಾಗುತ್ತೀರಿ. ಹಣಕಾಸಿನ ವಿಷಯಗಳಲ್ಲಿ ನಿಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಂಡರೆ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಹೊಸ ಹೂಡಿಕೆಗೆ ಇಂದು ಉತ್ತಮ ದಿನ.

ಅದೃಷ್ಟ ಬಣ್ಣ: ತಿಳಿ ನೀಲಿ

ಅದೃಷ್ಟ ಸಂಖ್ಯೆ: 21

ಅದೃಷ್ಟ ಸಮಯ: ಸಂಜೆ 6:00 ರಿಂದ 9:30 ರವರೆಗೆ

ಮೀನ ರಾಶಿ

ಮೀನ ರಾಶಿ

ಪ್ರೀತಿಯ ವಿಷಯದಲ್ಲಿ ಇಂದು ಅದ್ಭುತ ದಿನವಾಗಿರುತ್ತದೆ. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನೀವು ಬಯಸುತ್ತೀರಿ. ಹಿಂದೆ ಪಡೆದಿದ್ದ ಸಾಲ ಇಂದು ಹಿಂದಿರುಗಿಸಲು ಸಾಧ್ಯವಾಗುತ್ತದೆ. ನೀವು ವ್ಯಾಪಾರಸ್ಥರಾಗಿದ್ದರೆ ಪಾಲುದಾರನು ನಿಮ್ಮನ್ನು ಮೋಸಗೊಳಿಸುವುದರಿಂದ ಪಾಲುದಾರಿಕೆ ವ್ಯವಹಾರಕ್ಕೆ ಹೋಗುವುದನ್ನು ತಪ್ಪಿಸಿ. ಇಂದು ವಿದ್ಯಾರ್ಥಿಗಳಿಗೆ ಬಹಳ ಶುಭ ದಿನ. ನೀವು ಇಂದು ಕೆಲವು ಉತ್ತಮ ಯಶಸ್ಸನ್ನು ಪಡೆಯಬಹುದು. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕೆಲವು ಪ್ರಭಾವಿ ವ್ಯಕ್ತಿಗಳ ಬೆಂಬಲ ಇಂದು ನಿಮ್ಮ ಉತ್ಸಾಹವನ್ನು ದ್ವಿಗುಣಗೊಳಿಸುತ್ತದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ 9:00 ರವರೆಗೆ

English summary

Daily Horoscope 03 Dec 2019 In Kannada

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Monday, December 2, 2019, 17:55 [IST]
X
Desktop Bottom Promotion