Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಜೀವನದಲ್ಲಿ ಮುಂದಾಗುವ ಅನಾಹುತದ ಮುನ್ಸೂಚನೆಗಳು ಇವೇ ನೋಡಿ
ಜ್ಯೋತಿಷ್ಯದ ಪ್ರಕಾರ, ನಕಾರಾತ್ಮಕ ಶಕ್ತಿ ಅಥವಾ ತೊಂದರೆಗಳು ವ್ಯಕ್ತಿಯ ಜೀವನದಲ್ಲಿ ಬರುವ ಮೊದಲು ಅನೇಕ ಸೂಚನೆಗಳನ್ನು ನೀಡುತ್ತವೆ. ಈ ಮೂಲಕ ನಾವು ನಮಗೆ ಮುಂದೆ ಯಾವುದೋ ಅನಾಹುತ ಅಗಲಿದೆ ಎಂಬುದನ್ನು ಅರಿತುಕೊಳ್ಳಬಹುದು ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ, ಅನಾಹುತದ ಮುನ್ಸೂಚನೆ ನೀಡುವ ಲಕ್ಷಣಗಳು ಯಾವುವು ಎಂಬುದನ್ನು ತಿಳ್ಕೋಬೇಕಾ? ಹಾಗಾದ್ರೆ ಈ ಲೇಖನ ಕೊನೆತನಕ ಓದಿ. ಈ ಚಿಹ್ನೆಗಳು ನಿಮ್ಮ ಮನೆಯಲ್ಲೂ ಕಂಡುಬಂದರೆ, ನಿಮ್ಮ ಜೀವನದಲ್ಲಿ ತೊಂದರೆಗಳು ಬರಲಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ಜೀವನದಲ್ಲಿ ತೊಂದರೆಗಳು ಸಂಭವಿಸುತ್ತವೆ ಎನ್ನುವ ಮುನ್ಸೂಚನೆಗಳನ್ನು ಈ ಕೆಳಗೆ ನೀಡಲಾಗಿದೆ:

ಗೂಬೆ ಕೂಗುವುದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ಅಥವಾ ಮನೆಯ ಸದಸ್ಯರು ಗೂಬೆ ಕೂಗುವುದನ್ನು ಪದೇ ಪದೇ ಕೇಳುತ್ತಿದ್ದರೆ ಅಥವಾ ಗೂಬೆ ನಿಮ್ಮ ಮನೆಯ ಸುತ್ತಮುತ್ತ ಕುಳಿತು ಅಳುತ್ತಿದ್ದರೆ, ಈ ಚಿಹ್ನೆಯನ್ನು ಅಮಂಗಳಕರವೆಂದು ಪರಿಗಣಿಸಲಾಗುವುದು. ಇದು ಮುಂದಾಗುವ ಅನಾಹುತದ ಸೂಚನೆಯಾಗಿರಬಹುದು. ಅಂದರೆ ಮುಂದಿನ ದಿನಗಳಲ್ಲಿ ಆ ಮನೆಯ ಯಾರಾದರೂ ಸಾಯಬಹುದು ಎಂಬ ನಂಬಿಕೆಯೂ ಇದೆ.

ಕೆಂಪು ಇರುವೆಗಳ ಗೋಚರತೆ
ಮನೆಯಲ್ಲಿ ಇದ್ದಕ್ಕಿದ್ದಂತೆ ಕೆಂಪು ಇರುವೆಗಳು ಕಾಣಿಸಿಕೊಂಡರೆ, ಈ ಲಕ್ಷಣವೂ ಸಹ ಒಳ್ಳೆಯದಲ್ಲ ಎಂದು ನಂಬಲಾಗಿದೆ. ಇದರರ್ಥ ಭವಿಷ್ಯದಲ್ಲಿ ಅದು ಆ ಮನೆಯ ಸದಸ್ಯರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಜೊತೆಗೆ ಹಣದ ನಷ್ಟವನ್ನು ಸೂಚಿಸುತ್ತದೆ. ಅದ್ದರಿಂದ ಮನೆಯಲ್ಲಿ ಏನಾದರೂ ಇಂತಹ ಇರುವೆಗಳು ಕಾಣಿಸಿಕೊಂಡರೆ ಮುಂಜಾಗ್ರತೆ ತೆಗೆದುಕೊಳ್ಳುವುದು ಉತ್ತಮವಾಗಿದೆ.

ತುಳಸಿ ಗಿಡ ಆಗಾಗ ಒಣಗುವುದು
ಧಾರ್ಮಿಕ ನಂಬಿಕೆಯ ಪ್ರಕಾರ, ತುಳಸಿ ಗಿಡ ಮನೆಯ ಸಮೃದ್ಧಿಯ ಸಂಕೇತ. ಕೆಲವೊಮ್ಮೆ ಅತಿಯಾದ ಬಿಸಿಲಿನಿಂದ ತುಳಸಿ ಗಿಡ ಒಣಗುವುದು ಸಾಮಾನ್ಯ. ಅದರೆ, ಎಷ್ಟು ಆರೈಕೆ ಮಾಡಿದರೂ, ಮನೆಯಲ್ಲಿ ತುಳಸಿ ಗಿಡವು ಮತ್ತೆ ಮತ್ತೆ ಒಣಗುತ್ತಿದ್ದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂದರ್ಥ. ತುಳಸಿ ಗಿಡ ಆಗಾಗ್ಗೆ ಒಣಗುವುದು ಜೀವನದಲ್ಲಿ ನಡೆಯಬಹುದಾದ ಕೆಲವು ಕೆಟ್ಟ ಘಟನೆಗಳ ಸಂಕೇತವಾಗಿದೆ.

ಮನೆಗೆ ಈ ಸಣ್ಣ ಪ್ರಾಣಿಗಳ ಆಗಮನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಲಿ, ಜೇನುನೊಣ, ಗೆದ್ದಲು ಅಥವಾ ಯಾವುದೇ ರೀತಿಯ ಸೂಕ್ಷ್ಮ ಜೀವಿಗಳು ನಿಮ್ಮ ಮನೆಗೆ ಏಕಾಏಕಿ ಬಂದರೆ, ಅದು ಒಳ್ಳೆಯ ಶಕುನ ಎಂದು ಪರಿಗಣಿಸಲಾಗುವುದಿಲ್ಲ. ಇವುಗಳ ಆಗಮನವೂ ಮನೆಯಲ್ಲಿ ನಡೆಯಬಹುದಾದ ಅನಾಹುತ ಅಥವಾ ನಕಾರಾತ್ಮಕ ವಿಚಾರಗಳ ಬಗ್ಗೆ ಮುನ್ಸೂಚನೆ ನೀಡುವುದು ಎಂಬ ನಂಬಿಕೆಯಿದೆ.

ಈ ವಸ್ತುಗಳ ಒಡೆಯುವಿಕೆ
ಇದನ್ನು ಸಾಮಾನ್ಯವಾಗಿ ಹೆಚ್ಚಿನವರು ಕೇಳಿರುತ್ತಾರೆ. ನಂಬಿಕೆಯ ಪ್ರಕಾರ, ಮನೆಯಲ್ಲಿ ಕನ್ನಡಿ, ಹಾಸಿಗೆ, ಕುರ್ಚಿ, ಟೇಬಲ್ ಮುಂತಾದ ಕೆಲವು ವಸ್ತುಗಳು ಇದ್ದಕ್ಕಿದ್ದಂತೆ ಒಡೆದರೆ, ಒಳ್ಳೆಯ ಲಕ್ಷಣಗಳಲ್ಲ. ಇಂತಹ ಘಟನೆಗಳು ಭವಿಷ್ಯದಲ್ಲಿ ಬರಬಹುದಾದ ಕೆಲವು ತೊಂದರೆಗಳನ್ನು ಸೂಚಿಸುತ್ತವೆ. ಇಂತಹ ಘಟನೆಗಳು ಏನಾದರೂ ಸಂಭವಿಸಿದಲ್ಲಿ ತಕ್ಷಣ ಜ್ಯೋತಿಷ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಉಪಾಯವಾಗಿದೆ.



Click it and Unblock the Notifications
