Just In
Don't Miss
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Technology
ಶಿಯೋಮಿ 'ರೆಡ್ಮಿ ಕೆ30' ಸ್ಮಾರ್ಟ್ಫೋನ್ ಬಿಡುಗಡೆ!.ಬೆಲೆ ಎಷ್ಟು?.ಫೀಚರ್ಸ್ ಏನು?
- Automobiles
ಮೊದಲ ಬಾರಿಗೆ ಪ್ರದರ್ಶಿತವಾದ ಹೊಸ ತಲೆಮಾರಿನ ಪಜೆರೊ ಸ್ಪೋರ್ಟ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
29-3-2019-ಶುಕ್ರವಾರದ ದಿನ ಭವಿಷ್ಯ
ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ತರವಾದುದು.ನದಿ, ನದಿ ದೇವತೆ, ಶಾರದೆ, ವಾಗ್ದೇವತೆ, ವಿದ್ಯಾಧಿದೇವತೆ, ಜ್ಞಾನದೇವತೆ. ಹೀಗೆ ಹಲವಾರು ಸ್ವರೂಪಗಳಲ್ಲಿ ಸರಸ್ವತಿಯು ಪರಿಚಿತಳು. ಬ್ರಹ್ಮನ ಮಗಳೆಂದೂ, ಬ್ರಹ್ಮನ ಸೃಷ್ಟಿಯಾದ ವೇದಗಳಿಗೆ ಅಧಿದೇವತೆಯೆಂದೂ, ವೇದಮಾತೆಯೆಂದೂ ಸರಸ್ವತಿಯನ್ನು ಸ್ತುತಿಸಲಾಗಿದೆ.
ಬ್ರಹ್ಮನ ಮಗಳು ಎಂಬ ಪರಿಕಲ್ಪನೆಯನ್ನು ಮೀರಿ, ಸರಸ್ವತಿಗೆ 'ಬ್ರಹ್ಮನ ಶಕ್ತಿ'ಎಂಬ ಸ್ವರೂಪವೂ ಬೆಳೆದು ಬಂದಿದೆ.'ಸರಸ್ವತಿ'ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ರೂಪವೆಂದರೆ, ಚತುರ್ಭುಜಗಳು, ಎರಡು ಕೈಗಳಲ್ಲಿ ವೀಣೆ, ಇನ್ನೊಂದರಲ್ಲಿ ಅಕ್ಷಮಾಲೆ, ನಾಲ್ಕನೆಯದರಲ್ಲಿ ಪುಸ್ತಕ. ಬಿಳಿ ತಾವರೆಯ ಮೇಲೆ ಅಥವ ಬಂಡೆಯ ಮೇಲೆ ಆಸೀನಳಾಗಿರುವ ಶ್ವೇತವಸ್ತ್ರ ಧಾರಿಣಿ, ಶುಭ್ರವರ್ಣದ ಧವಳಕೀರ್ತಿಯ ಸರಸ್ವತಿ ಚಿತ್ರ. ವಿದ್ಯಾಸರಸ್ವತಿ ಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807

ಮೇಷ( 29 ಮಾರ್ಚ್ 2019)
ನಿಮಗೆ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಆಸಕ್ತಿ. ಅಂತೆಯೆ ಈ ದಿನದ ರಾಜಕೀಯ ವಿದ್ಯಮಾನಗಳು ನಿಮಗೆ ಸಹಾಯ ಮಾಡುವವು. ಜನರು ನಿಮ್ಮನ್ನು ಗುರುತಿಸಿ ಆರಾಧಿಸುವರು. ಹಣ ನೀರಿನಂತೆ ಖರ್ಚಾಗುವುದು.ಹೆಚ್ಚಿನ ಲವಲವಿಕೆ ಹಾಗೂ ಮುತುವರ್ಜಿ ಪ್ರದರ್ಶಿಸಿ ಕಾರ್ಯ ಸಾಫಲ್ಯತೆ ಹೊಂದುವಿರಿ. ಮಕ್ಕಳು ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಕೊಡುವುದರಿಂದ ಆಂತರಿಕವಾಗಿ ಹೆಚ್ಚು ಆನಂದಿತರಾಗುವಿರಿ. ಆರೋಗ್ಯದ ಕಡೆ ಗಮನ ಹರಿಸಿ. 9845743807 ಅದೃಷ್ಟ ಸಂಖ್ಯೆ:2

ವೃಷಭ
ಜನರ ಬಳಿ ಮಾತನಾಡುವಾಗ ಬೇಕಾಬಿಟ್ಟಿ ಮನ ಬಂದಂತೆ ಮಾತನಾಡದಿರಿ. ಹಿತಶತ್ರುಗಳು ನಿಮ್ಮನ್ನು ಮಣಿಸಲು ಹೊಂಚು ಹಾಕಿರುವರು. ಆದಷ್ಟು ಕುಲದೇವರನ್ನು ಆರಾಧನೆ ಮಾಡಿ. ಇದರಿಂದ ನೆಮ್ಮದಿ ಕಾಣುವಿರಿ. ಕೃಷಿಕರಿಗೆ ಭೂಮಿಯ ಸೃಜನಾತ್ಮಕ ಕಾರ್ಯ ಯೋಜನೆಗಳಲ್ಲಿ ಇತರೆ ರೈತರ ಬೆಂಬಲ ದೊರೆಯುವುದು. ಕೆಲವರು ಜಮೀನು, ಆಸ್ತಿ ಖರೀದಿಸಲು ಮುಂದಾಗುವರು. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವರು.9845743807
ಅದೃಷ್ಟ ಸಂಖ್ಯೆ:4

ಮಿಥುನ
ಬರೀ ಬೊಗಳೆ ಮಾತಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ಸ್ವಾರ್ಥ ಜೀವನ ಎಂದೂ ಉನ್ನತಮಟ್ಟಕ್ಕೆ ಏರುವುದಿಲ್ಲ. ಹೃದಯ ವೈಶಾಲ್ಯತೆಯನ್ನು ಬೆಳಸಿಕೊಂಡು ನಿಮ್ಮ ಸುತ್ತಮುತ್ತಲಿನ ಜನಕ್ಕೆ ಸಹಾಯಹಸ್ತ ನೀಡಿ.ನಿಮ್ಮ ಎದುರೇ ಎದುರಾಳಿಗಳನ್ನು ಹೊಗಳುವ ಧೂರ್ತರ ಮೇಲೆ ಕಿಡಿಕಾರದಿರಿ. ಸಹನೆಯಿಂದ ಒಳಿತಾಗುವುದು ಮತ್ತು ಇದರಿಂದ ಒಂದು ದೊಡ್ಡ ಪಾಠ ಕಲಿಯುವಿರಿ. ನಿಮ್ಮ ಕೈಲಿ ಆದರೆ ಕೆಲಸಗಳನ್ನು ಒಪ್ಪಿಕೊಳ್ಳಿ. ಇಲ್ಲವೆ ನಯವಾಗಿ ತಿರಸ್ಕರಿಸಿ. 9845743807 ಅದೃಷ್ಟ ಸಂಖ್ಯೆ:5

ಕಟಕ
ಮ್ಯಾನೇಜ್‌ಮೆಂಟ್‌ಗೆ ಸಂಬಂಧಪಟ್ಟಂತೆ ಉತ್ತಮ ಸಂವಹನಶೀಲರಾದ ನೀವು ಪ್ರಮುಖ ಕಾರ್ಯಾಗಾರದಲ್ಲಿ ಕೇಂದ್ರಬಿಂದುವಾಗುವಿರಿ. ನಿಮ್ಮ ಮಾತುಕತೆ ಮತ್ತು ವಿಚಾರ ಲಹರಿಯ ಪ್ರಭಾವದಿಂದ ಜನರು ನಿಮ್ಮತ್ತ ಆಕರ್ಷಿತರಾಗುವರು.ಮಕ್ಕಳು ಜೀವನಾನುಭವದ ಕೊರತೆಯಿಂದ ಕೆಲ ತಪ್ಪುಗಳನ್ನು ಮಾಡುವರು. ಹಾಗಂತ ಅವರ ಮೇಲೆ ಹೆಚ್ಚು ಕೋಪಗೊಳ್ಳದೆ ಶಾಂತ ರೀತಿಯಿಂದ ಅವರನ್ನು ತಿದ್ದಲು ಪ್ರಯತ್ನಿಸಿ. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವರು.9845743807 ಅದೃಷ್ಟ ಸಂಖ್ಯೆ:4

ಸಿಂಹ
ಕಿರಿಕಿರಿಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಆದರೆ ಅದನ್ನು ಎದುರಿಸಿ ಅದರೊಂದಿಗೆ ಸ್ನೇಹ ಸಂಪರ್ಕ ಬೆಳೆಸಿಕೊಂಡಲ್ಲಿ ಮನಸ್ಸಿಗೆ ಹರ್ಷವುಂಟಾಗುವುದು. ಮನಸ್ಸನ್ನು ಗೊಂದಲಕ್ಕೆ ಈಡು ಮಾಡುವಂತಹ ಅಸಹಜ ಪ್ರೇಮ ಪ್ರಕರಣಗಳಿಂದ ದೂರ ಇರುವುದು ಒಳ್ಳೆಯದು. ಸದ್ಯಕ್ಕೆ ಗ್ರಹಬಲ ಇಲ್ಲದೆ ಇರುವುದರಿಂದ ಮನೆಯ ಹಿರಿಯರಿಂದ ಈ ಬಗ್ಗೆ ವಿರೋಧ ವ್ಯಕ್ತವಾಗುವ ಸಂಭವ ಇದೆ.9845743807 ಅದೃಷ್ಟ ಸಂಖ್ಯೆ:6

ಕನ್ಯಾ
ವಿಚಿತ್ರವಾದ ರೀತಿಯಲ್ಲಿ ನಿಮ್ಮ ವಿರೋಧಿಗಳೇ ನಿಮ್ಮನ್ನು ಬೆಂಬಲಿಸುವರು. ಹಾಗಾಗಿ ನಿಮ್ಮ ಯಶಸ್ಸಿನ ಹಾದಿಗೆ ಅಡ್ಡಲಾಗಿದ್ದ ಕೆಲವು ವಿಚಾರಗಳು ಅಲ್ಲಿಯೇ ಸ್ಥಗಿತಗೊಂಡು ಯಶಸ್ಸಿನ ಹಾದಿ ಸುಗಮವಾಗಲಿದೆ. ನಿರೀಕ್ಷಿತ ವಿಷಯಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲಿರಿ. ಅನಿರೀಕ್ಷಿತ ವಿಚಾರಗಳ ಬಗೆಗೂ ಗಮನವಿರಲಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವರು. ಅಂತೆಯೆ ಜೇಬಿನಲ್ಲಿರುವ ಹಣಕ್ಕೆ ತಕ್ಕಷ್ಟು ವ್ಯವಹರಿಸುವುದು ಉತ್ತಮ.9845743807 ಅದೃಷ್ಟ ಸಂಖ್ಯೆ:4

ತುಲಾ
ಮಕ್ಕಳ ತುಂಟತನ ವಿಪರೀತವಾಗುವುದು. ಮನೆಯಲ್ಲಿರುವುದು ಕಷ್ಟ ಎನಿಸಬಹುದು. ಸಂಜೆ ಪ್ರಶಾಂತ ವಾತಾವರಣದಲ್ಲಿ ಕೆಲಕಾಲ ಏಕಾಂತವಾಗಿ ಕಳೆಯಿರಿ.ಮನಸ್ಸುಪ್ರಫುಲ್ಲವಾಗುವುದು.ಉದ್ಯೋಗವನ್ನು ಉಳಿಸಿಕೊಳ್ಳುವ ಸಲುವಾಗಿ ಅನೇಕ ರೀತಿಯ ಕಸರತ್ತುಗಳನ್ನು ನಡೆಸುವಿರಿ. ಇದರಿಂದ ಕೊಂಚಮಟ್ಟಿನ ಪ್ರಯೋಜನ ಕಂಡುಬರುವುದು. ಇನ್ನು ಸ್ವಲ್ಪ ಕಾಲ ಇದ್ದ ಸ್ಥಳದಲ್ಲಿಯೇ ಕೆಲಸವನ್ನು ಮುಂದುವರೆಸುವಿರಿ.9845743807 ಅದೃಷ್ಟ ಸಂಖ್ಯೆ:2

ವೃಶ್ಚಿಕ
ನಿಮ್ಮದೇ ಆದ ಯೋಜನೆಗಳಿಗೆ ಅರ್ಥಪೂರ್ಣ ಸಿದ್ಧಿ ಇದೆಯಾದರೂ ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವಿರಿ. ಎಲ್ಲರಿಗೂ ಒಳ್ಳೆಯವರಾಗುವುದು ಅಷ್ಟು ಸುಲಭವಲ್ಲ. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಬಂದ ಜನರಿಗೆ ಸಾಂತ್ವನ ನೀಡುತ್ತಾ ಬಂದಿರುವ ನೀವು ನಿಮ್ಮನ್ನು ಪುನರ್ರೂಪಿಸಿಕೊಳ್ಳುತ್ತ ಬರುವಿರಿ. ಇದರಿಂದ ನಿಮ್ಮ ಗೌರವ ಘನತೆ ಸಮಾಜದಲ್ಲಿ ಹೆಚ್ಚಾಗುವುದು.9845743807 ಅದೃಷ್ಟ ಸಂಖ್ಯೆ:4

ಧನುಸ್ಸು
ವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣಕಾಸಿನ ಸಹಾಯ ಮಾಡದಿರಿ. ಕೊಟ್ಟ ಹಣ ನಿಮಗೆ ವಾಪಸ್ಸು ಬರದೇ ಹೋಗುವ ಸಾಧ್ಯತೆ ಇದೆ. ಯಾವುದಕ್ಕೂ ಸಂಗಾತಿಯ ಸಲಹೆಯನ್ನು ಈ ವಿಷಯದಲ್ಲಿ ಕೇಳಿ.ತೀರ ಸನಿಹದಲ್ಲೇ ಇದ್ದ ಯಶಸ್ಸು ದೂರಕ್ಕೆ ಹೋಗುತ್ತಿದೆ ಎಂದು ಅನಿಸುತ್ತದೆ. ಮನೆಯ ಹಿರಿಯರ ಸಲಹೆ ಸೂಚನೆಯಂತೆ ಮುನ್ನಡೆಯಿರಿ. ಇದರಿಂದ ಅನುಕೂಲವಾಗುವುದು. ಆಂಜನೇಯ ಸ್ಮರಣೆ ಮಾಡಿ.9845743807 ಅದೃಷ್ಟ ಸಂಖ್ಯೆ:9

ಮಕರ
ಕನಸಿನಲ್ಲಿ ಕಂಡ ವಿಚಾರಗಳಿಗೂ ಈ ದಿನ ನಡೆಯುವ ವಿಚಾರಗಳಿಗೂ ತಾಳೆ ಆಗುತ್ತಿರುವುದು ನಿಮಗೆ ಸೋಜಿಗವನ್ನುಂಟು ಮಾಡುವುದು. ಕೆಲವು ಸಂದರ್ಭದಲ್ಲಿ ಮುಂದಾಗುವ ವಿಚಾರಗಳನ್ನು ಭಗವಂತನು ಕನಸಿನ ರೂಪದಲ್ಲಿ ತೋರುವನು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಬೇಕೆಂಬ ದಿಶೆಯಲ್ಲಿ ನೀವು ಹಲವು ಷೇರು ವ್ಯವಹಾರಗಳಲ್ಲಿ ಹಣ ಹೂಡುವಿರಿ. ನಿಮ್ಮ ದೂರದೃಷ್ಟಿಯಂತೆ ಖರೀದಿಸಿದ ಷೇರುಗಳ ಮೌಲ್ಯ ಹೆಚ್ಚಾಗುವ ಸಂಭವವಿದೆ.9845743807 ಅದೃಷ್ಟ ಸಂಖ್ಯೆ:8

ಕುಂಭ
ನಿಮ್ಮ ಮುಂಗೋಪದಿಂದ ನಿಮ್ಮ ಸಂಗಾತಿ ಜತೆ ಘರ್ಷಣೆ ಉಂಟಾಗುವುದು. ತದನಂತರ ಅದು ಮನಃಸ್ತಾಪಕ್ಕೆ ತಿರುಗುವುದು. ಸಿಟ್ಟು ಮನುಜನ ಮೊದಲ ಶತ್ರು. ಅದರಿಂದ ಅನೇಕ ಅನಾಹುತಗಳು ಆಗದಂತೆ ಎಚ್ಚರ ವಹಿಸಿ.ಯಾರು ಹಿತವರು ಈ ಮೂವರೊಳಗೆ ಎಂಬ ಮಾತಿನ ಆಂತರ್ಯ ತಿಳಿಯಲು ಬಹಳ ಪ್ರಯತ್ನ ಪಡುವಿರಿ. ಆದರೆ ಯಾವುದೇ ದೃಢ ನಿರ್ಧಾರ ತಳೆಯುವಲ್ಲಿ ವಿಫಲರಾಗುವಿರಿ. ಮೂವರು ಗಣ್ಯವ್ಯಕ್ತಿಗಳ ಸಂಘರ್ಷ ನಿಮ್ಮನ್ನು ಚಿಂತೆಗೆ ಈಡು ಮಾಡುವುದು.9845743807 ಅದೃಷ್ಟ ಸಂಖ್ಯೆ:2

ಮೀನ
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ನಿಮ್ಮ ಕಚೇರಿಯಲ್ಲಿನ ದಿಗ್ಗಜರ ಭಿನ್ನಾಭಿಪ್ರಾಯ ನಿಮಗೆ ವರವಾಗಿ ಪರಿಣಮಿಸುವುದು. ಇದರಿಂದ ನಿಮ್ಮ ಕಾರ್ಯ ಸುಲಲಿತವಾಗುವುದು.ಸಿಟ್ಟಿನ ಭರದಲ್ಲಿ ಮೂಗು ಕೊಯ್ದುಕೊಂಡರೆ ಪುನಃ ಜೋಡಿಸಲು ಆಗುವುದಿಲ್ಲ. ಕೆಲಸ ಕಾರ್ಯಗಳು ನಿಮ್ಮಂತೆ ಆಗುತ್ತಿಲ್ಲ ಎಂದು ದುಡುಕಿ ಪರರನ್ನು ನೋಯಿಸದಿರಿ. ಆದಷ್ಟು ತಾಳ್ಮೆ ಇರಲಿ. ತಾಳಿದವನು ಬಾಳಿಯಾನು ಎಂಬ ಸೂತ್ರಕ್ಕೆ ಶರಣಾಗಿ.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807call/whatsapp