19-7-2019: ಶುಕ್ರವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯ�

ಶುಕ್ರವಾರದ ದಿನ ಲಕ್ಷ್ಮಿ ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಮಹಾಲಕ್ಷ್ಮಿಎಂದೂ ಕರೆಯಲಾಗುತ್ತದೆ. ಪ್ರತಿವರ್ಷ ಶುಕ್ರವಾರದಂದು ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ಆಚರಿಸುವ ಪದ್ದತಿಯಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಕೂಡ ವಿಶೇಷ ಪೂಜೆಗಳನ್ನು ಲಕ್ಷ್ಮಿಪೂಜೆ ಎಂದು ಆಚರಿಸಲಾಗುತ್ತದೆ.

"ಶ್ರೀ" ಅಕ್ಷರವನ್ನು ಸೇರಿಸಿ ಶ್ರೀ ಲಕ್ಷ್ಮಿ, ಶ್ರೀ ಮಹಾಲಕ್ಷ್ಮಿಎಂದೂ ಬಳಸಲಾಗುತ್ತದೆ. ಶ್ರೀ ಎಂಬುದು ಸಿರಿ ಪದದ ತತ್ಸಮ ರೂಪ. ಸಿರಿ ಅಂದರೆ, ಸಂಪತ್ತು, ಐಶ್ವರ್ಯದ ಅಧಿದೇವತೆ ಎಂದು ಸೂಚಿಸಲು ಇದನ್ನು ಸೇರಿಸಲಾಗುತ್ತದೆ. ಲಕ್ಷ್ಮಿಯನ್ನು ಅನಂತ ಹೆಸರುಗಳಿಂದ ಕರೆಯುತ್ತಾರೆ. ಆದಿಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ , ಗಜಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಧನಲಕ್ಷ್ಮಿ.ಲಕ್ಷ್ಮಿಯನ್ನು ಕಮಲದ (ಪದ್ಮ) ಹೂವಿಗೆ ಬಹಳವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ.

horoscope

ಆಕೆಯ ಹಲವಾರು ಹೆಸರುಗಳು ಆ ಹೂವಿಗೆ ಸಂಬಂಧಿಸಿದ್ದಾಗಿವೆ.ಪದ್ಮಪ್ರಿಯ,ಪದ್ಮ ಮಾಲಾಧಾರ ದೇವಿ, ಪದ್ಮಮುಖಿ, ಪದ್ಮಾಕ್ಷಿ, ಪದ್ಮಹಸ್ತೆ, ಪದ್ಮಸುಂದರಿ, ಭಾರ್ಗವಿ,(ಋಷಿ ಭೃಗುವಿನ ಮಗಳ ಅವತಾರ). ಶುಕ್ರವಾರದ ದೇವಿಯಾದ ಶ್ರೀ ಭಾರ್ಗವಿ ಲಕ್ಷ್ಮಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ( 19 july 2019)

ಮೇಷ( 19 july 2019)

ನಿಮಗೆ ನೀವೇ ಅಪರಿಚಿತರಾಗುವ ಸಂದರ್ಭ ಎದುರಾಗುವುದು. ಹಾಗಾಗಿ ಎಲ್ಲರನ್ನು ನಂಬುವ ಹುಂಬತನಕ್ಕೆ ಇಳಿಯದಿರಿ. ಹಣಕಾಸಿನ ತೊಂದರೆ ಇರುವುದಿಲ್ಲ.ನಿಮ್ಮ ಅನುಭವದ ಸಾರ್ಥಕತೆಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಹೊಸ ಅವಕಾಶ ಲಭ್ಯವಾಗಲಿದೆ. ಆರೋಗ್ಯದ ಕಡೆ ಗಮನ ಹರಿಸಿ. ಬೀಗರು ನಿಮ್ಮನ್ನು ಅಭಿನಂದಿಸುವರು. ಮನೆಯಲ್ಲಿ ಹರ್ಷದ ವಾತಾವರಣ ಇರುತ್ತದೆ.ನಿಮ್ಮ ಬಹುಮುಖ್ಯವಾದ ಕಾರ್ಯಕ್ಕೆ ದೂರದ ಪ್ರವಾಸವನ್ನು ಕೈಗೊಳ್ಳುವಿರಿ. ಇದರಿಂದ ಸಾಮಾಜಿಕವಾಗಿಯೂ ಸಬಲಗೊಳ್ಳುವಿರಿ. ಆಧ್ಯಾತ್ಮಿಕ ಚಿಂತನೆ ಕೂಡ ಹೆಚ್ಚಾಗುವುದು. ಕುಲದೇವರ ದರ್ಶನ ಪಡೆಯುವಿರಿ. ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಎಲ್ಲವೂ ನಿಮ್ಮ ವಿರುದ್ಧ ತಿರುಗಿ ಬೀಳುತ್ತಿದೆ ಎಂದು ಅನಿಸುವುದು. ಈ ಬೇಸರದಲ್ಲೇ ಪ್ರಯಾಣ ಕೈಗೊಳ್ಳಬೇಡಿ. ಒಂದು ವೇಳೆ ಪ್ರಯಾಣ ಕೈಗೊಂಡರೆ ಎಚ್ಚರಿಕೆ ಇರಲಿ. ನಿಮ್ಮ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯ ಆಗಲು ಸಮಯ ಬೇಕಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರನ್ನು ಗುಂಪಾಗಿ ಉತ್ತೇಜಿಸುವಿರಿ. ಇದರಿಂದ ಬಹು ಮಹತ್ತರವಾದ ಕಾರ್ಯ ನೆರವೇರಲು ಸಹಕಾರ ದೊರೆಯುವುದು. ಮನೆಯಲ್ಲಿನ ಒಗ್ಗಟ್ಟಿನ ಬಲ ಸಮಾಜದ ದುಷ್ಟ ಶಕ್ತಿಗಳನ್ನು ಎದುರಿಸಲು ಸಹಕಾರಿ ಆಗುವುದು.ಅನಿರೀಕ್ಷಿತವಾಗಿ ನಿಮ್ಮ ಹತ್ತಿರದ ಸಂಬಂಧಿಕರೇ ಮುಜುಗರವನ್ನು ಉಂಟು ಮಾಡುವ ಸಾಧ್ಯತೆ ಇದೆ. ಆದರೆ ನಿಮ್ಮ ಬುದ್ಧಿಚಾತುರ್ಯದಿಂದ ಎಲ್ಲವನ್ನೂ ಎದುರಿಸುವಿರಿ. ಅಂತಿಮ ಗೆಲುವು ನಿಮ್ಮದಾಗುವುದು. ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ನಿಮಗೆ ಅನೇಕ ಸಂಶಯ ಸಂದಿಗ್ಧತೆಗಳು ಎದುರಾದರೂ ಬರುವ ಸವಾಲನ್ನು ಗಂಭೀರವಾಗಿ ಸ್ವೀಕರಿಸಿ. ಸ್ನೇಹಿತರು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗಿ ನಿಲ್ಲುವರು. ಬಹು ಮಹತ್ತರವಾದ ಕಾರ್ಯವನ್ನು ಕೈಗೆತ್ತಿಕೊಳ್ಳಿ.ನಿಮ್ಮ ಸ್ವಂತ ಪ್ರಯತ್ನದ ಬಗ್ಗೆ ನಂಬಿಕೆ ಇರಲಿ. ಧೈರ್ಯಂ ಸರ್ವತ್ರ ಸಾಧನಂ. ನಿಮ್ಮ ಲೆಕ್ಕಾಚಾರ, ಶ್ರಮ, ಯೋಜನೆಗಳು ನಿಖರತೆಯಿಂದ ಕೂಡಿದ್ದರೂ ಕೆಲ ಕಾರ್ಯಗಳಲ್ಲಿ ವಿಘ್ನಗಳು ತೋರುವವು. ಜೀವನದ ಪ್ರತಿ ಹೆಜ್ಜೆಯೂ ಈಗ ಮಹತ್ವದ ಮೈಲುಗಲ್ಲೊಂದನ್ನು ತಲುಪುವ ಶಕ್ತಿ ನೀಡಲಿದೆ. ಯಾರು ಮಿತ್ರರು, ಯಾರು ಶತ್ರುಗಳು ಎಂದು ನಿಮಗೆ ಮನದಟ್ಟಾಗುವುದು. ಹಣಕಾಸು ವಿವಿಧ ಮೂಲಗಳಿಂದ ಬರುವುದು. ಅದೃಷ್ಟ ಸಂಖ್ಯೆ:5

ಕಟಕ

ಕಟಕ

ನಿಮ್ಮನ್ನು ಮೂರ್ಖರನ್ನಾಗಿಸುವ ಮಂದಿ ಹತ್ತಿರದಲ್ಲೇ ಸುತ್ತುವರೆದುಕೊಂಡಿದ್ದಾರೆ. ಹಾಗಾಗಿ ನೀವು ನಿಮ್ಮ ಎಚ್ಚರಿಕೆಯಿಂದ ಇರಿ. ಯಾವುದೇ ದಾಖಲಾತಿ ಪತ್ರಗಳಿಗೆ ಸಹಿ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ನಿಮ್ಮದೇ ಆದ ವಿಶಿಷ್ಟ ಮಾತಿನ ಶಕ್ತಿಯಿಂದ ಪ್ರತಿಯೊಬ್ಬರನ್ನೂ ಆಕರ್ಷಿಸುವಿರಿ. ಗಹನವಾದ ವಿಷಯದಲ್ಲಿ ಚರ್ಚೆ ಮಾಡುವಿರಿ. ಇದರಿಂದ ಮುಂದೆ ಅನುಕೂಲವಾಗುವುದು.ವೃತ್ತಿಯಲ್ಲಿ ಕೆಲವರಿಗೆ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡುಬರುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಅಗತ್ಯಕ್ಕೆ ತಕ್ಕಷ್ಟು ಹಣ ಬರುವುದು. ಅದೃಷ್ಟ ಸಂಖ್ಯೆ:8

ಸಿಂಹ

ಸಿಂಹ

ಹಲವಾರು ಯೋಜನೆಗಳನ್ನು ಹಾಕಿಕೊಳ್ಳುವ ಹಳೆಯ ಚಾಳಿ ಶುರು ಮಾಡದಿರಿ. ಅದಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ. ಸದ್ಯದರಲ್ಲಿಯೇ ಒಂದು ಮಹಾಯುದ್ಧದಲ್ಲಿ ಗೆಲ್ಲಬೇಕಿದೆ. ಆ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.ಮಕ್ಕಳಿಂದ ಸಂತೋಷದ ವಾರ್ತೆ ಕೇಳಲಿದ್ದೀರಿ. ಅವರಿಗೆ ನಿಮ್ಮ ಮಾರ್ಗದರ್ಶನ ಸೂಕ್ತವಾಗಿ ಸಿಗಲಿ. ಶ್ರೇಯಸ್ಸು ದೊರೆಯಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಮನೆ ಮಂದಿಯೆಲ್ಲಾ ಕೂಡಿ ಕುಲದೇವರನ್ನು ಪ್ರಾರ್ಥನೆ ಮಾಡಿ. ಮಾತಿನ ಚಾತುರ್ಯ ಇದ್ದರೂ ಸುಮ್ಮನೆ ಮೌನ ವಹಿಸುವುದು ಉತ್ತಮ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ. ಸಂಗಾತಿಯ ಸಲಹೆ ಪಡೆಯಿರಿ. ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಅದೃಷ್ಟ ಸಂಖ್ಯೆ:5

ಕನ್ಯಾ

ಕನ್ಯಾ

ಸುಮ್ಮನೆ ಕಾಲಹರಣ ಮಾಡಬೇಡಿ. ನಿಶ್ಚಿತವಾದ ಗುರಿ ಹಾಗೂ ಧೈರ್ಯ ನಿಮಗೆ ರಕ್ಷ ಣೆ ನೀಡುವವು. ವಾಹನ ಖರೀದಿ ಯೋಗ ಇರುತ್ತದೆ. ಸಂಸಾರದಲ್ಲಿ ಸ್ವಲ್ಪ ವಿರಸ ಮೂಡುವ ಸಾಧ್ಯತೆ ಇರುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ.ಕತ್ತಲು ಇದೆ, ಹಗಲು ಮೂಡಲಾರದು ಎಂಬ ನಿರಾಸೆ ಭಾವನೆಯು ನಿಮಗೆ ಥರವಲ್ಲ. ಧೈಯಂ ಸರ್ವತ್ರ ಸಾಧನಂ ಎಂದು ಮುನ್ನುಗ್ಗುವ ನೀವು ಇಂದೇಕೆ ಚಿಂತಿಸುವಿರಿ. ಯಾವುದನ್ನೂ ಚಿಂತಿಸುವ ಅಗತ್ಯವಿಲ್ಲ. ಚಿನ್ಮಯನಿದ್ದಾನೆ ನಿಮ್ಮನ್ನು ರಕ್ಷಿಸಲು. ಕಾದು ಸುಸ್ತಾಗುವುದು ನೋವಿನ ವಿಷಯ. ಆದರೆ ಗಾಣದಲ್ಲಿ ಎಣ್ಣೆ ಬರುವ ಸಮಯದಲ್ಲಿ ಕಣ್ಣು ಮುಚ್ಚಿಕೊಂಡರೆ ಹೇಗೆ? ಬಹುದಿನದ ಕನಸು ಈಡೇರುವ ಸುವರ್ಣ ದಿನ ಇದಾಗಿದೆ. ಕುಲದೇವರನ್ನು ಪ್ರಾರ್ಥಿಸಿ. ಕಾಲನಾಮಕ ಪರಮಾತ್ಮನನ್ನು ನೆನೆಯಿರಿ. ಅದೃಷ್ಟ ಸಂಖ್ಯೆ:6

ತುಲಾ

ತುಲಾ

ಯಾವುದೋ ದೂರದ ಊರು, ಇಲ್ಲವೇ ಪ್ರವಾಸವೇ ಆಗಬಹುದು ಅದನ್ನು ನಿರಾಕರಿಸದಿರಿ. ಸವಾಲನ್ನು ಎದುರಿಸಿ ಅದರಲ್ಲಿ ಜಯಶೀಲರಾಗುವಿರಿ. ಮನೆ ಮತ್ತು ಆಸ್ಪತ್ರೆ ಎಂದು ಅಡ್ಡಾಡುವ ಸಂದರ್ಭ ಎದುರಾಗುವುದು.ಜನರ ನಡುವೆ ನಿಂತು ನಾಯಕತ್ವ ಪ್ರದರ್ಶಿಸುವ ಸಂದರ್ಭ ಬಂದರೆ ಸವಾಲು ಸ್ವೀಕರಿಸಿ. ಒಳಿತಾಗುವುದು. ಕುಟುಂಬದ ಸದಸ್ಯರೊಡನೆ ಸೌಹಾರ್ದಯುತವಾಗಿ ವರ್ತಿಸಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.ಬರೀ ಮಾತನಾಡುವವರೇ ಬಂದು ತಲೆ ತಿನ್ನುವ ಸಂಭವ ಹೆಚ್ಚು. ಚತುರರಾದ ನೀವು ಸಹನೆಯಿಂದ ಅವರನ್ನು ದೂರ ತಳ್ಳಿ. ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ನೀವು ಆಹಾರದ ಬಗ್ಗೆ ಗಮನ ಹರಿಸಿ. ಇಲ್ಲವೆ ಉದರ ಶೂಲೆ ಬರುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ:8

ವೃಶ್ಚಿಕ

ವೃಶ್ಚಿಕ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ಅಂತೆಯೇ ಆಗಸದಲ್ಲಿ ಕಾಣುವ ಕಾಮನಬಿಲ್ಲಿನ ಬಣ್ಣಗಳನ್ನು ನೋಡಿ ಅನಂದಿಸಬೇಕೇ ಹೊರತು ಅದನ್ನು ಪಡದೇ ತೀರುವೆನೆಂಬ ಹುಚ್ಚು ವ್ಯಾಮೋಹ ಬೇಡ. ನಿಮ್ಮ ವ್ಯಕ್ತಿತ್ವದ ಸಿದ್ಧಿ ಗೆಲ್ಲುವ, ಜನರ ಪ್ರಶಂಸೆ ದೊರೆಯುವ ಕಾಲವಾಗಿದೆ. ಜಗತ್ತು ಬಹು ಸುಂದರವಾಗಿ ಕಾಣಿಸುವುದು. ಗುರು ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುವುದರಿಂದ ತೊಂದರೆ ಇಲ್ಲ. ಹೊರಗಿನವರು ಬಂದು ನಿಮಗೆ ಸಹಾಯ ಮಾಡುವರೆಂಬ ಭ್ರಮೆ ಬೇಡ. ನಿಮ್ಮ ಜೀವನದ ಶಿಲ್ಪಿ ನೀವೇ. ಹಾಗಾಗಿ ಕಠಿಣ ಪರಿಶ್ರಮ ಮಾಡದೆ ವಿಧಿಯಿಲ್ಲ. ಆದಾಗ್ಯೂ ಭಗವಂತ ನಿಮ್ಮ ಕೋರಿಕೆಯನ್ನು ಈಡೇರಿಸುವನು. ಅದೃಷ್ಟ ಸಂಖ್ಯೆ:4

ಧನುಸ್ಸು

ಧನುಸ್ಸು

ಸುಮ್ಮನೆ ನಿರೀಕ್ಷೆ ಇಟ್ಟುಕೊಂಡು ಕೂರುವುದಕ್ಕಿಂತ ಇತರೆ ಕಾರ್ಯಗಳಲ್ಲಿ ಮಗ್ನವಾಗುವುದು ಉತ್ತಮ. ತಾನು ಮಾಡುವುದು ಒಳ್ಳೆಯದು, ಮಗ ಮಾಡುವುದು ಹಾನಿ ಎಂಬ ಮಾತಿದೆ. ಹಾಗಾಗಿ ನೀವೇ ಖುದ್ದಾಗಿ ಕೆಲಸ ಕಾರ್ಯ ಮಾಡುವುದು ಒಳ್ಳೆಯದು. ಸಮುದ್ರದಲ್ಲಿ ಅಲೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಅಲೆ ನಿಂತ ಮೇಲೆ ಸಮುದ್ರ ಸ್ನಾನ ಮಾಡುತ್ತೇನೆ ಎಂದರೆ ಆಗುವುದಿಲ್ಲ. ಆ ಅಲೆಗಳ ಮಧ್ಯೆಯೇ ಸ್ನಾನ ಮಾಡುವಂತೆ ನಿತ್ಯ ಜೀವನ ಜಂಜಾಟದ ನಡುವೆ ಭಗವಂತನನ್ನು ಆರಾಧಿಸುವುದು ಒಳ್ಳೆಯದು.ಕೇವಲ ಕೃತ್ರಿಮ ಮಾತುಗಳಿಂದಲೇ ನಿಮ್ಮನ್ನು ಹಣಿಯಲು ಕೆಲವರು ಕಾದಿರುವರು. ಇದರಿಂದ ಪಾರಾಗಲು ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು. ಅದೃಷ್ಟ ಸಂಖ್ಯೆ:9

ಮಕರ

ಮಕರ

ಯಾಕಾದರೂ ಈ ಕೆಲಸಕ್ಕೆ ಕೈ ಹಾಕಿದೆನೋ ಎಂಬ ನಿರಾಸೆ ಬೇಡ. ದೈವದ ಅನುಗ್ರಹದಿಂದ ಸಿದ್ಧಿ ದೊರೆಯುವುದು. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ನಿಮ್ಮ ಮನಸ್ಸಿಗೆ ಮುದ ನೀಡುವರು.ನೀವು ಪರೋಪಕಾರಿ ಎಂದು ಹಲವಾರು ಬಾರಿ ಸಾಬೀತಾದ ವಿಷಯ. ಅಂತೆಯೆ ನೀವು ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಿಗೆ ಇತರರು ಸಹಕಾರ ನೀಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಹೊಯ್ದಾಟದ ದಾರಿಗಳೇ ಎದುರಿಗೆ ಬಂದು ನಿಲ್ಲುತ್ತವೆ. ಗಟ್ಟಿ ಮನಸ್ಸಿನಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯರೂಪಕ್ಕೆ ಬರುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ:4

ಕುಂಭ

ಕುಂಭ

ಮನಸ್ಸಿನ ಸಂತಸವನ್ನು ನಿಯಂತ್ರಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನ ಎಲ್ಲವನ್ನೂ ಹಾಳು ಮಾಡುವರು. ಶ್ರೀ ರಾಘವೆಂದ್ರ ಸ್ವಾಮಿಯನ್ನು ಮನಸಾ ಸ್ಮರಿಸಿ. ಕೆಲವು ವಿಚಾರಗಳಲ್ಲಿ ಸಹೋದರನ ಸಹಕಾರ ಬಯಸುವುದು ಒಳ್ಳೆಯದು.ಸುಮ್ಮನೆ ಗಾಳಿಗೆ ಗುದ್ದಿ ಮೈ ನೋಯಿಸಿಕೊಳ್ಳದಿರಿ. ಧನಾತ್ಮಕ ಚಿಂತನೆಗಳಿಂದ ನಿಶ್ಚಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.ಮನೆಯ ಬಂಧುಬಾಂಧವರು ಇಲ್ಲವೆ ಆತ್ಮೀಯ ಸ್ನೇಹಿತರೆ ನಿಮ್ಮನ್ನು ವಿರೋಧಿಸುವರು. ದೈವಕೃಪೆಯಿಂದ ಎಲ್ಲವೂ ಒಳಿತಾಗುವುದು. ಬಡವರಿಗೆ ಆಹಾರ ಕೊಡಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ. ಅದೃಷ್ಟ ಸಂಖ್ಯೆ:2

ಮೀನ

ಮೀನ

ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂಬಂತೆ ಸದಾ ಶ್ರೀಹರಿಯನ್ನು ನೆನೆಯಿರಿ. ಸದ್ಯದ ಪರಿಸ್ಥಿತಿಯಲ್ಲಿ ಭಗವಂತನೇ ನಿಮ್ಮ ಸಹಾಯಕ್ಕೆ ಬರುವರು. ವೃತ್ತಿಯಲ್ಲಿನ ಕಿರಿಕಿರಿ ನಿವಾರಣೆಗಾಗಿ ಮಾತಾ ದುರ್ಗಾದೇವಿಯನ್ನು ಸ್ಮರಿಸಿ. ಸಮೃದ್ಧಿಯ ದಿನಗಳನ್ನು ಕಂಡ ನಿಮಗೆ ತೊಳಲಾಟವಾಗುವುದು. ಆದರೂ ಧೈರ್ಯದಿಂದ ಎದುರಿಸಿ. ದೈವಕೃಪೆ ಅಪಾರವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಮುಂದೆ ನಿಮ್ಮಂತೆ ಮಾತನಾಡಿ ಹಿಂದುಗಡೆಯಿಂದ ನಿಮ್ಮ ಬಗ್ಗೆ ಕುಹಕ ಮಾತನಾಡುವ ಮಂದಿ ಬಗ್ಗೆ ಜಾಗೃತರಾಗಿ. ಸ್ವಂತ ಒಡಹುಟ್ಟಿದವರು ಇಲ್ಲವೆ ನಿಮ್ಮ ಮಕ್ಕಳೆ ಶತ್ರುಗಳಂತೆ ವರ್ತಿಸುವರು ತಾಳ್ಮೆ ಇರಲಿ.ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ ಬಹುದು. ಮದುವೆ, ಸಂತಾನಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp

English summary

your daily horoscope 19 July 2019

Know what astrology and the planets have in store for you today. Choose your zodiac sign and read the details..
Story first published: Friday, July 19, 2019, 4:00 [IST]
X
Desktop Bottom Promotion