Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಥಾಯ್ ಮಸಾಜ್ ನಿಂದ ಪಾರ್ಶ್ವವಾಯುವಿಗೆ ತುತ್ತಾದ ಮಹಿಳೆ
ತುಂಬಾ ದಣಿವು ಆದಾಗ, ಮೈಕೈಯಲ್ಲಿ ನೋವು ಕಾಣಿಸಿಕೊಂಡಾಗ ಹೆಚ್ಚಿನವರು ದೇಹಕ್ಕೆ ಮಸಾಜ್ ಮಾಡಿಸಿಕೊಳ್ಳಲು ಬಯಸುವರು. ಮಸಾಜ್ ನಿಂದಾಗಿ ದೇಹಕ್ಕೆ ಆರಾಮ ಸಿಗುವುದು ಮತ್ತು ಸ್ನಾಯುಗಳಲ್ಲಿನ ನೋವು ಕಡಿಮೆ ಆಗುವುದು. ಆದರೆ ಕೆಲವೊಂದು ಸಂದರ್ಭದಲ್ಲಿ ಇಂತಹ ಮಸಾಜ್ ನಿಂದಾಗಿ ಬೇರೆ ಅಡ್ಡಪರಿಣಾಮಗಳು ಉಂಟಾಗುತ್ತದೆ. ಯಾಕೆಂದರೆ ಮಸಾಜ್ ಮಾಡುವವರಿಗೆ ಸರಿಯಾದ ಅನುಭವ ಇಲ್ಲದೆ ಇದ್ದರೆ ಮತ್ತು ಯಾವ ರೀತಿಯಲ್ಲಿ ದೇಹದ ಯಾವ ಭಾಗದಲ್ಲಿ ಎಷ್ಟು ಒತ್ತಡ ಹಾಕಬೇಕು ಎಂದು ತಿಳಿಯದೆ ಇದ್ದರೆ ಆಗ ಮಸಾಜ್ ಎನ್ನುವುದು ವ್ಯತಿರಿಕ್ತ ಪರಿಣಾಮ ಬೀರಬಹುದು.

ನಮ್ಮ ದೇಹದ ನರಗಳ ಮೇಲೆ ಅತಿಯಾದ ಒತ್ತಡದ ಬಿದ್ದರೆ ಸರಿಯಾಗಿ ರಕ್ತ ಸಂಚಾರವಾಗದೆ ಪಾರ್ಶ್ವವಾಯುವಿನಂತಹ ಸಮಸ್ಯೆ ಕಾಣಿಸಬಹುದು. ಇಲ್ಲೊಬ್ಬರು ಮಹಿಳೆಗೆ ಇದೇ ರೀತಿ ಆಗಿದೆ. ಆಕೆ ಥಾಯ್ ಮಸಾಜ್ ಮಾಡಿಸಿಕೊಳ್ಳಲು ಹೋಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದಾಳೆ.
ಮಹಿಳೆಯ ಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ಇದನ್ನು ಥಾಯ್ ಮಸಾಝ್ ಮೂಕ ನಿವಾರಣೆ ಮಾಡಲು ಹೋದ ಆಕೆಗೆ ಮುಂದೆ ಏನಾಯಿತು ಎಂದು ನೀವೇ ಓದಿಕೊಳ್ಳಿ.

ಡಾ. ಹ್ಯಾಪಿಯನ್ನು ಭೇಟಿಯಾದಳು
46ರ ಹರೆಯದ ಪ್ರಾನಮ್ ಥೀಂಗ್ ಟ್ರ್ಯಾಂಗ್ ಎಂಬ ಮಹಿಳೆಯು ಡಾ. ಹ್ಯಾಪಿ ಎಂಬ ಥೆರಪಿಸ್ಟ್ ವೈದ್ಯರನ್ನು ಭೇಟಿಯಾದರು. ಯಾಕೆಂದರೆ ಆ ಮಹಿಳೆಗೆ ಕಾಲುಗಳಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಆಕೆ ಮಸಾಜ್ ಮಾಡಿಸಿಕೊಂಡು ತನ್ನ ನೋವು ನಿವಾರಿಸಿಕೊಳ್ಳಬಹುದು ಎಂದು ಭಾವಿಸಿದರು.

ಮಸಾಜ್ ವೇಳೆ
ಮಸಾಜ್ ಥೆರಾಪಿಸ್ಟ್ ಮಹಿಳೆಯ ಕಾಲುಗಳ ಮೇಲೆ ನಿಂತುಕೊಂಡಿದ್ದಾನೆ. ಇದರಿಂದಾಗಿ ಆಕೆಯ ಕಾಲುಗಳು ಮುರಿದಿದೆ ಮತ್ತು ಆಕೆ ಶಾಶ್ವತವಾಗಿ ವಿಕಲಾಂಗಕತೆಗೆ ಒಳಗಾಗಿದ್ದಾರೆ. ಈ ವಿಡಿಯೋದಲ್ಲಿ ಆಕೆಯ ಕಾಲುಗಳ ಮೇಲೆ ಥೆರಪಿಸ್ಟ್ ಯಾವ ರೀತಿಯಾಗಿ ನಿಂತುಕೊಂಡು ಮಸಾಜ್ ಮಾಡುತ್ತಿದ್ದಾನೆ ಮತ್ತು ಆಕೆಯನ್ನು ತುಂಬಾ ಆಕ್ರಮಣಕಾರಿಯಾಗಿ ಚಾಪೆಯಲ್ಲಿ ಎಳೆಯುತ್ತಿರುವುದು ಕಾಣಿಸಿದೆ.

ತುಂಬಾ ಗಡುಸಾಗಿ ನಿಭಾಯಿಸಿದ ಥೆರಪಿಸ್ಟ್
ಒಂದು ಮಗುವಿನ ತಾಯಿ ಆಗಿರುವ ಮಹಿಳೆಯು ಹೇಳುವ ಪ್ರಕಾರ ಈ ಥೆರಪಿಸ್ಟ್ ತುಂಬಾ ಗಡುಸಾಗಿ ನಿಭಾಯಿಸಿದ್ದಾನೆ ಮತ್ತು ಇದರ ಬಳಿಕ ತಾನು ಶಾಶ್ವತವಾಗಿ ವಿಕಲಾಂಗತೆಗೆ ಒಳಗಾಗಿದ್ದೇನೆ. ಕಳೆದ ಡಿಸೆಂಬರ್ ನಲ್ಲಿ ನಾನು ಮಸಾಜ್ ಮಾಡಿಸಿಕೊಂಡ ಬಳಿಕ ಹೀಗೆ ಆಗಿದೆ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ. ಈಗ ಆಕೆಗೆ ಅತ್ತಿತ್ತ ಹೋಗಲು ವೀಲ್ಹ್ ಚೇರ್ ಬೇಕಾಗಿದೆ.

ಒಂದು ಗಂಟೆಗಳ ಕಾಲ ನಡೆದ ಮಸಾಜ್
ಒಂದು ಗಂಟೆಗಳ ಕಾಲ ಮಹಿಳೆಗೆ ನೆಲದ ಮೇಲೆ ಚಾಪೆ ಹಾಕಿ ಮಲಗಿಸಲಾಗಿತ್ತು. ಈ ವೇಳೆ ಥೆರಪಿಸ್ಟ್ ಆಕೆಯ ಕಾಲುಗಳ ಮೇಲೆ ನಡೆದಾಡುತ್ತಿದ್ದ. ಮಹಿಳೆಯು ತುಂಬಾ ನೋವಿನಿಂದ ಚೀರಾಡಿ, ಮಸಾಜ್ ಮಾಡುವುದನ್ನು ನಿಲ್ಲಿಸು ಎಂದು ಹೇಳಿದರೂ ಆತ ಮಾತ್ರ ಮಸಾಜ್ ಮಾಡುವುದನ್ನು ಮುಂದುವರಿಸಿದ್ದಾನೆ. ಈ ಮಸಾಜ್ ನ ಬಳಿಕ ಆಕೆಗೆ ಪಾರ್ಶ್ವವಾಯು ಕಾಣಿಸಿಕೊಂಡಿದೆ. ಇದರಿಂದ ಆಕೆಗೆ ಯಾರದೇ ಬೆಂಬಲ ಇಲ್ಲದೆ ನಡೆದಾಡಲು ಆಗಲ್ಲ. ಥೆರಪಿಸ್ಟ್ ವಿರುದ್ಧ ಈಗ ದೂರು ದಾಖಲಾಗಿದೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications
