Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪಾರ್ಶ್ವವಾಯುವಿಗೆ ತುತ್ತಾದರೂ ಅವಳು ಆತನ ಕೈಬಿಡಲಿಲ್ಲ
ಇಂದಿನ ಆಧುನಿಕ ಯುಗದಲ್ಲಿ ಕೂಡ ನಿಜವಾದ ಪ್ರೀತಿ ಇದೆಯಾ ಎನ್ನುವ ಬಗ್ಗೆ ನಮಗೆ ಕೆಲವೊಮ್ಮೆ ಸಂಶಯ ಕಾಡುವುದು ಇದೆ. ಆದರೆ ಇಲ್ಲಿನ ಘಟನೆಯೊಂದು ಪ್ರೀತಿಸುವವರಿಗೆ ಖಂಡಿತವಾಗಿಯೂ ಪ್ರೇರಣೆಯಾಗಲಿದೆ. ಈ ಜೋಡಿಯು ತುಂಬಾ ವರ್ಷಗಳಿಂದ ಪ್ರೀತಿಸಿ, ಬಳಿಕ ಮದುವೆಯಾಗಲು ನಿರ್ಧರಿಸಿತು. ಆದರೆ ಈ ಜೋಡಿಗೆ ದೊಡ್ಡ ಆಘಾತವೊಂದು ಎದುರಾಯಿತು.
ಅದೇನೆಂದರೆ ಈ ಹುಡುಗ ವಿದ್ಯುತ್ ಆಘಾತದಿಂದಾಗಿ ತನ್ನ ದೇಹದ ಸ್ಥಿಮಿತವನ್ನೇ ಕಳೆದುಕೊಂಡ. ಒಂದು ಲೆಕ್ಕದಲ್ಲಿ ಪಾರ್ಶ್ವವಾಯುವಿಗೆ ಒಳಗಾದ. ಆದರೂ ಪ್ರೀತಿಸಿದ ಹುಡುಗಿ ಮಾತ್ರ ಆತನ ಜತೆಗೆ ಬೆಂಬಲವಾಗಿ ನಿಂತು ಮದುವೆಯಾಗಲು ನಿರ್ಧಾರ ಮಾಡಿದರು. ಇದರ ವಿವರವನ್ನು ನೀವು ಮುಂದಕ್ಕೆ ಓದುತ್ತಾ ತಿಳಿಯಿರಿ...

2007ರಲ್ಲಿ ಈ ಜೋಡಿಯು ಪ್ರೀತಿಸಲು ಆರಂಭಿಸಿತು
2007ರಲ್ಲಿ ಈ ಜೋಡಿಯು ಪ್ರೀತಿಸಲು ಆರಂಭಿಸಿತು. ಝಂಗ್ ಎನ್ನುವ ಹುಡುಗಿಯು ಮನೆಗಳ ನವೀಕರಣ ಮತ್ತು ಇತರ ಕೆಲಸಗಳನ್ನು ಮಾಡುತ್ತಿದ್ದ ಹುಡುಗನನ್ನು ಪ್ರೀತಿಸಲು ಆರಂಭಿಸಿದಳು.

ಇವರಿಬ್ಬರು ದೂರದ ಊರುಗಳಲ್ಲಿ ಇದ್ದು ಪ್ರೀತಿಸುತ್ತಿದ್ದರು
ಆ ಹುಡುಗನ ಕೆಲಸದಿಂದಾಗಿ ಆತ ದೂರದ ಊರುಗಳಿಗೆ ಹೋಗ ಬೇಕಾಗಿತ್ತು ಮತ್ತು ಇದರಿಂದಾಗಿ ಇವರು ದೂರವಾದರೂ ಪ್ರೀತಿ ಕಡಿಮೆ ಆಗಿರಲಿಲ್ಲ. ಇವರು ಫೋನ್ ಕರೆ ಮತ್ತು ಮೆಸೇಜ್ ಗಳ ಮೂಲಕ ಪರಸ್ಪರ ಹತ್ತಿರವಾಗಿದ್ದರು.

2010ರಲ್ಲಿ ಈ ಜೋಡಿಯು ಅಧಿಕೃತವಾಗಿ ಮದುವೆ ಆಯಿತು
ಈ ಜೋಡಿಯು ಅಧಿಕೃತವಾಗಿ 2010ರಲ್ಲಿ ಮದುವೆ ಆಯಿತು. ಆದರೆ ದೊಡ್ಡ ಮಟ್ಟದ ಮದುವೆ ಸಮಾರಂಭ ಮಾಡಲು ಈ ಜೋಡಿಯಲ್ಲಿ ಹಣವಿರಲಿಲ್ಲ ಮತ್ತು ಫೋಟೊಶೂಟ್ ಕೂಡ ನಡೆಸಿರಲಿಲ್ಲ. ಈ ಜೋಡಿಯು ತುಂಬಾ ಕಠಿಣವಾಗಿ ಕೆಲಸ ಮಾಡಿ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸಿತ್ತು. ಆ ಹುಡುಗ ತುಂಬಾ ಕಠಿಣ ಕೆಲಸ ಮಾಡಿ ತನ್ನದೇ ಶ್ರಮದಿಂದ ಒಂದು ಸಣ್ಣ ಮನೆ ಕೂಡ ಕಟ್ಟಿಕೊಂಡ.

ಆದರೆ ಈ ಜೋಡಿಗೆ ಆಘಾತ ಉಂಟಾಯಿತು
ಈ ದಂಪತಿ ಒಂದು ಬಯಸಿದರೆ ವಿಧಿ ಬೇರೆಯೇ ಬಯಸಿತ್ತು. ಇವರು ತಮ್ಮ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುತ್ತಲಿದ್ದರೆ ಆಗ ಆ ಹುಡುಗನಿಗೆ ವಿದ್ಯುತ್ ಆಘಾತವಾಯಿತು ಮತ್ತು ಆತನಿಗೆ ದೇಹದಲ್ಲಿ ಬಲವಿಲ್ಲದ ಸ್ಥಿತಿಗೆ ಬಂದ. ಆ ಹುಡುಗನಿಗೆ ದಿನದ ಎಲ್ಲಾ ಸಮಯದಲ್ಲೂ ಆರೈಕೆ ಬೇಕಾಗಿದ್ದ ಕಾರಣದಿಂದಾಗಿ ಈ ಜೋಡಿ ಬೇರ್ಪಡುವರು ಎಂದು ಜನರು ಭಾವಿಸಿದ್ದರು. ಆದರೆ ಆ ಹುಡುಗಿಯು ಆತನಿಗೆ ಬೆಂಬಲವಾಗಿ ನಿಂತು ಎಲ್ಲಾ ರೀತಿಯಿಂದಲೂ ಆರೈಕೆ ಮಾಡಿದಳು.

ಆದರೆ ಈ ಜೋಡಿಗೆ ಆಘಾತ ಉಂಟಾಯಿತು
ನಾಲ್ಕು ವರ್ಷಗಳ ಬಳಿಕ ಹುಡುಗನ ಆರೈಕೆ ಮಾಡಿದ ಆಕೆ ಭವಿಷ್ಯಕ್ಕಾಗಿ ಉಳಿತಾಯ ಮಾಡಿಕೊಂಡು ಅಂತಿಮವಾಗಿ ತಮ್ಮ ಕನಸನ್ನು ಈಡೇರಿಸಿಕೊಂಡರು ಮತ್ತು ಮದುವೆ ಸಮಾರಂಭದ ಫೋಟೊಶೂಟ್ ಮಾಡಿಸಿದರು. ಈ ಘಟನೆಯು ನಮಗೆ ನಿಜವಾದ ಪ್ರೀತಿ ಜೀವಂತವಾಗಿದೆ ಎಂದು ನೆನಪಿಸುತ್ತದೆ. ಆ ಹುಡುಗನು ಬೇಗನೆ ಚೇತರಿಸಿಕೊಳ್ಳಲಿ ಮತ್ತು ಉತ್ತಮ ಜೀವನ ಸಾಗಿಸಲು ಎಂದು ಹಾರೈಸುತ್ತೇವೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
