Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕದ್ದ ಬಟ್ಟೆ ಬದಲಿಸಲು ಹೋಗಿ ಕೊನೆಗೆ ಸಿಕ್ಕಿಬಿದ್ದ ಕಳ್ಳಿ!
ದೊಡ್ಡ ದೊಡ್ಡ ಮಾಲ್ ಗಳು ಹಾಗೂ ಬಟ್ಟೆ ಇತ್ಯಾದಿ ಅಂಗಡಿಗಳಲ್ಲಿ ಕೆಲವು ಮಹಿಳೆಯರು ಕಳ್ಳತನ ಮಾಡುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವಂತಹ ವಿಡಿಯೋಗಳನ್ನು ನಾವು ಹಲವಾರು ಸಲ ನೋಡಿದ್ದೇವೆ. ಇಂತಹ ಕಳ್ಳರು ಕೂಡ ಇದ್ದಾರೆಯಾ ಎಂದು ನಾವು ಅಚ್ಚರಿಗೆ ಕೂಡ ಒಳಗಾಗಿರುವುದು ಇದೆ.

ಸಿಸಿಟಿವಿ ಎಂದು ತಿಳಿದು ಕೂಡ ಕೆಲವು ಮಹಿಳೆಯರು ಕಳ್ಳತನಕ್ಕೆ ಮುಂದಾಗುವರು. ಇಲ್ಲೊಂದು ಇಂತಹ ಘಟನೆ ನಡೆದಿದೆ. ಮಹಿಳೆಯೊಬ್ಬಳು ಬಟ್ಟೆಯನ್ನು ಕದ್ದು ಹೋಗುತ್ತಾಳೆ ಮತ್ತು ಅದರ ಬಳಿಕ ಅದರ ಸೈಜ್ ಸರಿಯಿಲ್ಲ ಎಂದು ಹೇಳಿಕೊಂಡು ಬಂದು ಸಿಕ್ಕಿ ಹಾಕಿಕೊಳ್ಳುವಳು! ಇದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ಇದರ ಬಗ್ಗೆ ನೀವು ತಿಳಿಯಿರಿ.

ಚೀನಾದಲ್ಲಿ ಈ ಘಟನೆ ನಡೆದಿದೆ
53ರ ಹರೆಯದ ಕಳ್ಳಿಯೊಬ್ಬಳು ಜನರಿಂದ ತುಂಬಿರುವಂತಹ ಮಂಗೋಲಿಯಾದ ಅಂಗಡಿಯೊಂದರಲ್ಲಿ ದೊಡ್ಡ ಸೈಜ್ ನ ಟಾಪ್ ಒಂದನ್ನು ಕದ್ದು ಹೋಗುತ್ತಾಳೆ.

ಇದು ಫಿಟ್ ಆಗಲ್ಲವೆಂದು ಆಕೆಗೆ ಮನವರಿಕೆ ಆಯಿತು
ಹೆಸರನ್ನು ಗೌಪ್ಯವಾಗಿ ಇಡಲಾಗಿರುವಂತಹ ಕಳ್ಳಿಗೆ ತಾನು ಕದ್ದುಕೊಂಡು ಹೋಗಿರುವಂತಹ ಟಾಪ್ ನ ಸೈಜ್ ದೊಡ್ಡದಾಗಿದೆ ಎಂದು ತಿಳಿಯಿತು ಮತ್ತು ಕೆಲವೇ ನಿಮಿಷಗಳಲ್ಲಿ ಆಕೆ ಇದನ್ನು ಬದಲಾಯಿಸಿಕೊಳ್ಳಲು ಮರಳಿ ಅಂಗಡಿಗೆ ಬಂದಳು.

ಆಕೆಗೆ ದೊಡ್ಡ ಸಪ್ರೈಸ್ ಕಾದಿತ್ತು
ಮಹಿಳೆಯು ಅಂಗಡಿಯ ಮಾಲಕನಲ್ಲಿ ಬಂದು ಬದಲಿ ಬಟ್ಟೆ ಕೊಡುವಂತೆ ಸೂಚಿಸಿದಳು. ಈ ಬಟ್ಟೆಯನ್ನು ಆತ ಗುರುತಿಸಲು ಸ್ವಲ್ಪ ಹೊತ್ತು ತೆಗೆದುಕೊಂಡ ಮತ್ತು ಬೆಳಗ್ಗಿನಿಂದ ಈ ಬಟ್ಟೆಯನ್ನು ತಾನು ಮಾರಾಟ ಮಾಡಿಲ್ಲವೆಂದು ಹೇಳುತ್ತಾನೆ. ತಕ್ಷಣವೇ ಆತ ಪೊಲೀಸರಿಗೆ ಕರೆ ಮಾಡುತ್ತಾನೆ.

ಕೋಪಗೊಂಡ ಆಕೆ ಮಾಲಕನ ಕೆನ್ನೆಗೆ ಬಿಗಿಯುತ್ತಾಳೆ
ಕಳ್ಳಿಗೆ ತಾನು ಸಿಕ್ಕಿ ಬಿದ್ದಿದ್ದೇನೆ ಎಂದು ತಿಳಿಯುತ್ತದೆ ಮತ್ತು ಇದರಿಂದ ತುಂಬಾ ಕೋಪಗೊಂಡ ಆಕೆ ಎರಡು ಸಲ ಮಾಲಕನ ಕೆನ್ನೆಗೆ ಬಾರಿಸುತ್ತಾಳೆ. ಇದರ ಬಳಿಕ ಮಹಿಳೆಯನ್ನು ಬಂಧಿಸಲಾಗಿದೆ. ಬಟ್ಟೆಯನ್ನು ಬದಲಿಸಿಕೊಳ್ಳಲು ಆಕೆ ಅದೇ ದಿನ ಅಲ್ಲಿಗೆ ಹೋಗಬಾರದಿತ್ತು ಎಂದು ಮಹಿಳೆಯು ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ. ಕೆಲವು ದಿನ ಇನ್ನು ಕೂಡ ಕಾಯಬಹುದಿತ್ತು ಎಂದು ಹೇಳಿದ್ದಾಳೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
