Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ!
ಜ್ಯೋತಿಷ್ಯಶಾಸ್ತ್ರದ ಪ್ರಕಾರ-ಗುರುವಾರ ಜನಿಸಿದವರ ಕೆಲವು ಗುಣಗಳು ಹೀಗಿರುವುದು
ವಾರಕ್ಕೆ ಏಳು ದಿನಗಳು. ಪ್ರತೀ ದಿನಕ್ಕೂ ತನ್ನದೇ ಆಗಿರುವಂತಹ ಮಹತ್ವ ಹಾಗೂ ಪ್ರಾಮುಖ್ಯತೆಯು ಇದೆ. ಅದೇ ರೀತಿಯಾಗಿ ಗುರುವಾರಕ್ಕೆ ಕೂಡ. ಹೆಚ್ಚಿನ ಕಡೆಗಳಲ್ಲಿ ಗುರುವಾರವನ್ನು ವಾರದ ಐದನೇ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಭಾವಿ ಆಗಿರುವಂತಹ ಗುರು ಗ್ರಹವು ಅಧಿಪತಿಯಾಗಿದೆ. ಜ್ಯೋತಿಷಿಗಳು ಇದು ತುಂಬಾ ಲಾಭಕಾರಿ ಗ್ರಹವೆಂದು ನಂಬಿದ್ದು, ಇದು ಜನರ ಜೀವನದಲ್ಲಿ ತುಂಬಾ ಶುಭವನ್ನು ಉಂಟು ಮಾಡುತ್ತದೆ. ಗುರು ಗ್ರಹದ ಪ್ರಭಾವದಿಂದಾಗಿ ಅಭಿವೃದ್ಧಿ, ಸಮೃದ್ಧಿ, ಆಶಾವಾದ, ವಿಸ್ತರಣೆ, ಸಂತೋಷ, ಸರಿಯಾದ ದೃಷ್ಟಿಕೋನ, ಮತ್ತು ಹಾಸ್ಯದ ಪ್ರತಿನಿಧಿಯಾಗಿದೆ. ಗುರುವಾರ ಜನಿಸಿರುವ ಜನರು ಹೆಚ್ಚು ಉದಾರಿಯಾಗಿರುವರು. ಜೀವನ ಹಾಗೂ ಜನರ ಬಗ್ಗೆ ತುಂಬಾ ಸಂತೋಷ ಹೊಂದಿರುವರು. ಇದೇ ವೇಳೆ ಸ್ವಯಂವಂಚನೆಯು ನಿಮ್ಮಲ್ಲಿ ಇರುವುದು. ನೀವು ಜೀವನದ ಬಗ್ಗೆ ಯಾವಾಗಲೂ ಉನ್ನತ ತತ್ವಶಾಸ್ತ್ರ ಹೊಂದಿರುವಿರಿ ಮತ್ತು ನಿಮ್ಮ ವ್ಯವಹಾರಗಳ ಬಗ್ಗೆ ಹೋಗುವಿರಿ....

ಗುರುವಾರ ಜನಿಸಿರುವ ಜನರ ವ್ಯಕ್ತಿತ್ವ
ಗುರು ಗ್ರಹದ ಅಧಿಪತಿಯಾಗಿರುವಂತಹ ಗುರುವಾರದಂದು ಜನಿಸಿರುವಂತಹ ಜನರು ಯಾವಾಗಲೂ ತಮ್ಮ ಜೀವನದಲ್ಲಿ ಉನ್ನತಿ ಹಾಗೂ ಸಂಪತ್ತನ್ನು ಪಡೆಯಲು ಬಯಸುವರು. ಇವರು ಪ್ರತಿಯೊಂದರಲ್ಲೂ ದೊಡ್ಡ ಹಾಗೂ ವಿಶಾಲವಾಗಿರುವರು. ಕೆಲವೊಂದು ಸಂದರ್ಭದಲ್ಲಿ ಇವರು ತುಂಬಾ ಭಿನ್ನ ಮನಸ್ಥಿತಿಯಲ್ಲಿ ಇರುವರು. ಆದರೆ ಇವರು ಜೀವನದ ಬಗ್ಗೆ ತುಂಬಾ ಆಶಾವಾದ ಹೊಂದಿರುವರು. ಜೀವನದ ಏಳುಬೀಳುಗಳನ್ನು ಇವರು ಸಂಕಲ್ಪದಿಂದ ನೋಡುವರು. ಇವರು ಸಲಹೆ ನೀಡುವಲ್ಲಿ ಉತ್ತಮ ವ್ಯಕ್ತಿಗಳಾಗಿರುವರು. ಇವರ ಸಲಹೆ ಹಾಗೂ ತೀರ್ಪನ್ನು ಕೇಳಲು ಇವರ ಸುತ್ತಲು ಯಾವಾಗಲೂ ಜನ ಸೇರಿರುವರು. ಗುರುವಾರದಂದು ಜನಿಸಿದ ಜನರು ಜನ್ಮತಃ ಶಿಕ್ಷಕರಾಗಿರುವರು. ಮುಕ್ತವಾಗಿ ಜೀವನದಲ್ಲಿ ಮುಂದುವರಿಯಲು ಬಯಸುವಿರಿ ಮತ್ತು ಹೆಚ್ಚಿನ ಸ್ವತಂತ್ರ ಪಡೆಯುವಿರಿ. ನಿಮ್ಮ ಅದೃಷ್ಟದ ಸಂಖ್ಯೆ ಮೂರು. ಗುರುವಾರದಂದು ನೀವು ಗುರುವಿನ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಸ್ವಲ್ಪ ದಾನಧರ್ಮ ಮಾಡಿ.

ಗುರುವಾರದಂದು ಜನಿಸಿರುವ ಜನರ ವೃತ್ತಿ ಜೀವನ
ಗುರುವಾರ ಜನಿಸಿರುವ ವ್ಯಕ್ತಿಗಳು ಹುಟ್ಟಿನಿಂದಲೇ ನಾಯಕತ್ವ ಗುಣ ಪಡೆದಿರುವರು. ಇವರು ಅಧಿಪತ್ಯ ಸ್ಥಾಪಿಸಲು ಜನಿಸಿದವರು. ಇವರು ತುಂಬಾ ಆಕರ್ಷಣೀಯ ವ್ಯಕ್ತಿಗಳು ಮತ್ತು ಜನರನ್ನು ತುಂಬಾ ಸುಲಭವಾಗಿ ಸೆಳೆಯಬಲ್ಲರು ಮತ್ತು ಇವರಿಗೆ ಅದ್ಭುತವಾದ ಜನ ಬೆಂಬಲ ಕೂಡ ಇರುವುದು. ಇವರಿಗೆ ರಾಜಕೀಯ ಜೀವನವು ತುಂಬಾ ಹೊಂದಿಕೊಳ್ಳುವುದು. ಉನ್ನತ ಮಟ್ಟದ ಕಾರ್ಯನಿರ್ವಾಹಕ ಜವಾಬ್ದಾರಿಯು ಇವರಿಗೆ ಸರಿಯಾಗಿ ಹೊಂದಿಕೊಳ್ಳುವುದು. ನೀವು ವೃತ್ತಿ ಅಥವಾ ಸ್ವಯಂ ಉದ್ಯೋಗ ಮಾಡಿದರೂ ನಿಮ್ಮಲ್ಲಿರುವಂತಹ ಮಹತ್ವಾಕಾಂಕ್ಷೆಯು ನಿಮ್ಮನ್ನು ಉನ್ನತಿ ಗೇರಿಸುವುದು. ತುಂಬಾ ವೈವಿಧ್ಯಮಯವಾದ, ಪ್ರವಾಸ ಮತ್ತು ಎಲ್ಲಾ ಸಮಯದಲ್ಲೂ ಹೊಸತನ ತರಬಲ್ಲಂತಹ ಉದ್ಯೋಗವನ್ನು ನೀವು ಯಾವಾಗಲೂ ಇಷ್ಟಪಡುವಿರಿ. ನಿಮಗೆ ವಿವಿಧ ರೀತಿಯ ಜವಾಬ್ದಾರಿಗಳನ್ನು ನೀಡಿದ ವೇಳೆ ಬೇರೆಯವರಿಗಿಂತ ಅದ್ಭುತ ಸಾಧನೆ ಮಾಡುವಿರಿ. ನೀವು ದೈನಂದಿನ ದಿನಚರಿ ಮತ್ತು ಏಕಾತನತೆ ಉಂಟುಮಾಡುವ ಕೆಲಸಕ್ಕೆ ಹೊಂದಿಕೊಳ್ಳಲಾರಿರಿ.

ಗುರುವಾರ ಜನಿಸಿದ ಜನರ ಪ್ರೀತಿ
ನಿಮ್ಮ ಪ್ರೀತಿಯ ಜೀವನವನ್ನು ನಿಭಾಯಿಸುವ ವೇಳೆ ನಿಮ್ಮ ಮನಸ್ಸಿನಲ್ಲಿ ಏನು ಇದೆಯಾ ಅದನ್ನು ಮುಕ್ತವಾಗಿ ಹೇಳಿಬಿಡುವಿರಿ. ಆದರೆ ಬೇರೆಯವರು ಇದರ ಬಗ್ಗೆ ಏನು ಭಾವಿಸುತ್ತಾರೆ ಎಂದು ಯೋಚಿಸುವುದಿಲ್ಲ. ಇದರಿಂದಾಗಿ ನಿಮಗೆ ಪ್ರೀತಿಯ ಜೀವನದಲ್ಲಿ ತುಂಬಾ ಕಠಿಣ ಹಾದಿಯನ್ನು ಸವೆಸಬೇಕಾಗುತ್ತದೆ. ನೀವು ತುಂಬಾ ಭಾವೋದ್ರಿಕ್ತ ವ್ಯಕ್ತಿಯಾಗಿರುವಿರಿ. ಪ್ರೀತಿಯ ಜೀವನದ ಬಗ್ಗೆ ನೀವು ತುಂಬಾ ಆಳವಾಗಿ ಮುಳುಗಿ ಹೋಗುವಿರಿ. ನೀವು ಪ್ರೀತಿಸುವ ವ್ಯಕ್ತಿಯನ್ನು ಆಕರ್ಷಿಸಲು ನೀವು ಏನು ಬೇಕಾದರೂ ಮಾಡಲು ತಯಾರಾಗಿರುವಿರಿ. ನೀವು ತುಂಬಾ ಬೇಗನೆ ಬೇಸರಗೊಳ್ಳುವ ಕಾರಣದಿಂದಾಗಿ, ಸಂಗಾತಿಯು ಯಾವಾಗಲೂ ಪ್ರೀತಿಯಲ್ಲಿ ಹೊಸತನ ತರಬೇಕೆಂದು ಬಯಸುವಿರಿ. ಪ್ರೀತಿಯ ಜೀವನದಲ್ಲಿ ಸೌಹಾರ್ದತೆ ಮತ್ತು ಶಾಂತಿ ನೆಲೆಸಲು ನೀವು ಯಾವಾಗಲೂ ನಿಮ್ಮ ಜೀವನ ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮುಂದೆ ಸಾಗಿ.

ಗುರುವಾರ ಜನಿಸಿದ ವ್ಯಕ್ತಿಗಳ ವೈವಾಹಿಕ ಜೀವನ
ನಿಮ್ಮ ತುಂಬಾ ತೀಕ್ಷ್ಣವಾಗಿರುವಂತಹ ನಾಲಗೆಯನ್ನು ನಿಯಂತ್ರಣ ಮಾಡಿದರೆ, ಆಗ ನಿಮ್ಮ ವೈವಾಹಿಕ ಜೀವನವು ತುಂಬಾ ಸಂತೃಪ್ತಿ ಮತ್ತು ಯಶಸ್ವಿಯಾಗುವುದು. ಜಗಳ ಹಾಗೂ ವಾಗ್ವಾದವು ವೈವಾಹಿಕ ಜೀವನದ ಒಂದು ಭಾಗವಾಗಿದೆ. ಆದರೆ ನೀವು ಜೀವನ ಸಂಗಾತಿಯ ಭಾವನೆಗಳಿಗೆ ನೋವುಂಟು ಮಾಡುವಂತಹ ಮಾತುಗಳನ್ನು ಆಡಬಾರದು ಎಂದು ಗಮನಹರಿಸಿ. ನೀವು ವಿಶಾಲ ಹೃದಯಿಗಳು ಮತ್ತು ನಿಮ್ಮ ಶ್ರೇಷ್ಠವಾಗಿರುವುದನ್ನು ನೀಡಲು ಬಯಸುವಿರಿ. ಅದಾಗ್ಯೂ, ನಿಮ್ಮಲ್ಲಿ ಇರುವಂತಹ ಪರಿಶೋಧನಾ ಗುಣದಿಂದಾಗಿ ನೀವು ಕೌಟುಂಬಿಕ ಜವಾಬ್ದಾರಿಗಳನ್ನು ಮರೆತು ಹೊರಗಡೆ ಸುತ್ತಾಡಲು ಹೋಗುವಿರಿ. ನೀವು ಮತಾಂಧ ಅಥವಾ ಅತಿರಂಜಿತವಾಗಲು ಹೋಗಬೇಡಿ. ಆರ್ಥಿಕ ಸ್ಥಿರತೆ ಮತ್ತು ವೈಯಕ್ತಿಕ ಜೀವನವನ್ನು ಯಶಸ್ವಿ ಯಾಗಿಸಿಕೊಳ್ಳಲು ನೀವು ದೀರ್ಘಕಾಲದ ದೃಷ್ಟಿಕೋನವನ್ನು ಇಟ್ಟುಕೊಳ್ಳಿ.



Click it and Unblock the Notifications