Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಕಳೆದ 40 ವರ್ಷದಿಂದ ಕೂದಲಿಗೆ ಕತ್ತರಿ, ನೀರು ತೋರಿಸದ ಬಾಬಾ
ಪ್ರತಿಯೊಬ್ಬರು ತಮ್ಮ ಕೂದಲನ್ನು ದಿನನಿತ್ಯವೂ ತೊಳೆಯುವರು. ಹೀಗೆ ಮಾಡದೆ ಇದ್ದರೆ ಆಗ ವಾಸನೆ ಬಂದು ಕಿರಿಕಿರಿ ಆಗುವುದು. ಉದ್ದ ಕೂದಲು ಬಿಟ್ಟಿರುವಂತವರು ಇದನ್ನು ಸರಿಯಾಗಿ ಆರೈಕೆ ಮಾಡದೆ ಇದ್ದರೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದು. ಆದರೆ ಇಲ್ಲೊಬ್ಬರು ಬಾಬಾ ತನ್ನ ಕೂದಲಿಗೆ ಕಳೆದ 40 ವರ್ಷಗಳಿಂದ ನೀರನ್ನೇ ತೋರಿಸಿಲ್ಲ ಎಂದರೆ ನಾವು ನಂಬಲೇಬೇಕು. ಕೂದಲನ್ನು ತೊಳೆಯುವುದು ದೂರದ ಮಾತು. ಇನ್ನು ಅವರು ತನ್ನ ಕೂದಲನ್ನು ಕಳೆದ 40 ವರ್ಷಗಳಿಂದ ಕತ್ತರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಈ ವಿಚಿತ್ರ ಬಾಬಾ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.

ಬಿಹಾರದ ಸಕಲ್ ದೇವ್ ಟುಡ್ಡು ಎಂಬ 63ರ ಹರೆಯದ ಬಾಬಾ ಕಳೆದ 40 ವರ್ಷಗಳಿಂದ ಕೂದಲು ಕತ್ತರಿಸಿಕೊಂಡಿಲ್ಲ ಮತ್ತು ತೊಳೆಯಲು ಇಲ್ಲ. ಈಗ ಅವರ ಕೂದಲು ಆರು ಅಡಿ ಉದ್ದಕ್ಕೆ ಬೆಳೆದಿದೆ. ಅವರು ತನ್ನ ಕೂದಲನ್ನು ಈಗ ತಲೆಗೆ ಒಂದು ಮುಂಡಾಸಿನಂತೆ ಬಳಸಿಕೊಳ್ಳುತ್ತಿದ್ದಾರೆ. ಒಂದು ದಿನ ರಾತ್ರಿ ಮಲಗಿದ್ದಾಗಲೇ ತನ್ನ ಕೂದಲು ನೆಯ್ದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಒಂದು ರಾತ್ರಿ ದೇವರು ತನ್ನ ಕನಸಿನಲ್ಲಿ ಬಂದರು ಮತ್ತು ಈ ಕೂದಲನ್ನು ಯಾವತ್ತಿಗೂ ಕತ್ತರಿಸಬೇಡ ಮತ್ತು ತೊಳೆಯಬೇಡ ಎಂದು ಹೇಳಿದ್ದರು. ಇದರ ಬಳಿಕ 40 ವರ್ಷ ಕಳೆದಿದೆ ಎಂದು ಸಕಲ್ ಅವರು ಹೇಳುತ್ತಾರೆ.
ಸಕಲ್ ಕೂದಲನ್ನು ಕತ್ತರಿಸಿದೆ ಮತ್ತು ತೊಳೆಯದೆ ಇದ್ದರೂ ಅವರು ಬಟ್ಟೆಯಿಂದ ಅದನ್ನು ಮುಚ್ಚಿಕೊಂಡಿರುತ್ತಾರೆ. ಇದು ನಾಲ್ಕು ದಶಕಗಳಿಂದ ತೊಳೆಯದೆ ಇರುವ ಕಾರಣದಿಂದಾದಿ ಅದು ಜಡೆಯಂತೆ ಪರಿವರ್ತನೆಗೊಂಡಿದೆ. ಸ್ಥಳೀಯರು ಅವರನ್ನು ತುಂಬಾ ಗೌರವ ನೀಡಿ ಮಹಾತ್ಮ ಜೀ ಎಂದು ಕರೆಯುತ್ತಾರೆ. ಇವರು ಮಕ್ಕಳಿಲ್ಲದ ದಂಪತಿಗೆ ಮದ್ದು ನೀಡುವಂತಹ ಕೆಲಸ ಮಾಡುವರು.
ಸಂತಾನಭಾಗ್ಯವಿಲ್ಲದ ದಂಪತಿಗೆ ಔಷಧಿ ನೀಡುವ ಇವರು ಇದಕ್ಕೆ ಮೊದಲು 31 ವರ್ಷಗಳ ಕಾಲ ಅರಣ್ಯ ಇಲಾಖೆಗೆ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ ರೂಪಿಯಾ ದೇವಿ, ಮೂರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು ಹಾಗೂ ಏಳು ಮಂದಿ ಮೊಮ್ಮಕ್ಕಳಿದ್ದಾರೆ. ಇವರ ಕೂದಲಿನಿಂದ ಕುಟುಂಬದವರಿಗೆ ಯಾವುದೇ ಸಮಸ್ಯೆಯಾಗಿಲ್ಲ.
All Images courtesy: Barcroft



Click it and Unblock the Notifications




