Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆತನ ಉಸಿರಾಟಕ್ಕೆ ತೊಂದರೆ ನೀಡಿದ ಬೆಕ್ಕು!!
ಮನೆಯಲ್ಲಿ ಬೆಕ್ಕು, ನಾಯಿ ಇತ್ಯಾದಿ ಸಾಕು ಪ್ರಾಣಿಗಳು ನಮಗೆ ತುಂಬಾ ಇಷ್ಟವಾಗುವುದು. ಅವುಗಳ ಓಡಾಟ ನಮಗೆ ತುಂಬಾ ಖುಷಿ ಕೊಡುವುದು. ಸಾಕು ಪ್ರಾಣಿಗಳು ಮನುಷ್ಯನ ಒತ್ತಡ ಕೂಡ ಕಡಿಮೆ ಮಾಡುವುದು ಎಂದು ಹೇಳಲಾಗುತ್ತದೆ.
ಬೆಕ್ಕನ್ನು ಸಾಕುತ್ತಿದ್ದರೆ, ಆಗ ನಾಯಿಗೆ ಹೋಲಿಸಿದರೆ ಅದರ ನಿರ್ವಹಣೆ ಹಾಗು ಜವಾಬ್ದಾರಿಗಳು ತುಂಬಾ ಕಡಿಮೆ. ಆದರೆ ಈ ಲೇಖನದಲ್ಲಿ ಬೆಕ್ಕು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಿರುವ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಲು ತಯಾರಾಗಿ...

ಸಾಕು ಬೆಕ್ಕಿಗಾಗಿ ಸಿಸಿ ಕ್ಯಾಮರಾ ಅಳವಡಿಸಿದ್ದ
ಲೋಂಫೋಂಟೆನ್ ಎಂದು ಕರೆಯಲ್ಪಡುವ ಯುವಕನೊಬ್ಬ ಮನೆಯಲ್ಲಿ ಸಿಸಿ ಟಿವಿ ಅಳವಡಿಸಿದ್ದ ಮತ್ತು ತನ್ನ ಸಾಕು ಬೆಕ್ಕು ಏನು ಮಾಡುತ್ತದೆ ಎಂದು ನೋಡಲು ಇದನ್ನು ಅಳವಡಿಸಿದ್ದ. ಆತ ತನ್ನ ಸಾಕು ಬೆಕ್ಕನ್ನು ಆಚಿ ಎಂದು ಕರೆಯುತ್ತಿದ್ದ. ತಾನು ಕೆಲಸಕ್ಕೆ ಹೋದಾಗ ಅದು ಏನು ಮಾಡುತ್ತದೆ ಎಂದು ನೋಡಲು ಸಿಸಿ ಕ್ಯಾಮರಾ ಅಳವಡಿಸಿದ್ದ.

ಆ ಯುವಕನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು
ಆ ಯುವಕನಿಗೆ ಕೆಲವು ಸಮಯದಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳಲು ಆರಂಭವಾಗಿತ್ತು. ಇದು ತುಂಬಾ ಅಸಾಮಾನ್ಯ ವಾಗಿತ್ತು. ಯಾಕೆಂದರೆ ಆತ ತುಂಬಾ ಆರೋಗ್ಯವಂತ ವ್ಯಕ್ತಿಯಾಗಿದ್ದ.

ತನ್ನ ಅನಾರೋಗ್ಯಕ್ಕೆ ಕಾರಣವೇನೆಂದು ಪತ್ತೆ ಮಾಡಲು ಬಯಸಿದ
ಲೋಂಫೋಂಟೆನ್ ಪ್ರತಿದಿನ ಬೆಳಗ್ಗೆ ಎದ್ದಾಗ ತನ್ನ ಉಸಿರಾಟದ ಸಮಸ್ಯೆ ಹಾಗೂ ಉಸಿರು ಕಟ್ಟಿದಂತೆ ಆಗುವುದಕ್ಕೆ ಕಾರಣ ಏನು ಎಂದು ತಿಳಿಯಲು ಬಯಸಿದ. ಇದಕ್ಕಾಗಿ ಆತ ಕ್ಯಾಮರಾವನ್ನು ತಾನು ಮಲಗುವ ಕಡೆ ತಿರುಗಿಸಲು ಬಯಸಿದ. ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ನೋಡಿದ ಆತನಿಗೆ ದೊಡ್ಡ ಆಘಾತವು ಎದುರಾಯಿತು. ತನ್ನ ಮುಖದ ಬಳಿ ಸಾಕು ಬೆಕ್ಕು ಬಂದು ಕುಳಿತಿರುತ್ತಿತ್ತು.

ಬೆಕ್ಕು ಆತನ ಮುಖದ ಮೇಲೆ ಮಲಗುವುದನ್ನು ಇಷ್ಟಪಡುತ್ತಿತ್ತು
ಈ ದೃಶ್ಯಾವಳಿಗಳಲ್ಲಿ ಕಂಡುಬಂದ ದೃಶ್ಯವೆಂದರೆ ಆ ಬೆಕ್ಕು ಆತನ ಮುಖದ ಮೇಲೆ ಮಲಗುವುದನ್ನು ತುಂಬಾ ಇಷ್ಟಪಡುತ್ತಿತ್ತು. ಇದರಿಂದ ಉಸಿರಾಟಕ್ಕೆ ತೊಂದರೆ ಆಗುತ್ತಿತ್ತು. ಬೆಕ್ಕು ಸುಮಾರು ಒಂದು ಗಂಟೆಗಳ ಕಾಲ ಹಾಗೆ ಮಲಗುತ್ತಿತ್ತು ಮತ್ತು ಇದು ಪ್ರತಿದಿನ ರಾತ್ರಿ ನಡೆಯುತ್ತಿತ್ತು.

ಬೆಕ್ಕು ಆತನ ಮುಖದ ಮೇಲೆ ಮಲಗುವುದನ್ನು ಇಷ್ಟಪಡುತ್ತಿತ್ತು
ಈ ದೃಶ್ಯಗಳನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವನು ಮತ್ತು ಇದು ತುಂಬಾ ವೈರಲ್ ಕೂಡ ಆಗಿದೆ.ಇದು ತುಂಬಾ ಮುದ್ದಿನ ಬೆಕ್ಕು ಅಲ್ಲವೇ? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications
