Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವಿಷ ಸೇವಿಸಿದ ಮಹಿಳೆಯ ಬಾಯಿ ಸ್ಫೋಟ! ಅಷ್ಟಕ್ಕೂ ನಡೆದದ್ದು ಏನು ಗೊತ್ತೇ?
ಜೀವನದಲ್ಲಿ ಜಿಗುಪ್ಸೆ ಹೊಂದಿರುವ ಜನರು ಆತ್ಮಹತ್ಯೆ ಮಾಡಿಕೊಳ್ಳಲು ವಿವಿಧ ರೀತಿಯ ತಂತ್ರಗಳನ್ನು ಅನುಸರಿಸಿಕೊಳ್ಳುವರು. ಇದಕ್ಕಾಗಿ ಕೆಲವು ಮಂದಿ ಇಂಟರ್ನೆನಲ್ಲಿ ಕೂಡ ಹುಡುಕಾಡುತ್ತಾರೆ. ನೇಣು ಬಿಗಿದುಕೊಳ್ಳುವುದರಿಂದ ಹಿಡಿದು, ಬೆಂಕಿ ಹಾಕಿ ಸುಟ್ಟುಕೊಳ್ಳುವಂತಹ ಕೆಲಸಗಳನ್ನು ಜನರು ಮಾಡುವರು. ಇಲ್ಲೊಬ್ಬರು ಮಹಿಳೆಯ ಆತ್ಮಹತ್ಯೆಯ ಘಟನೆಯ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಆ ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವನೆ ಮಾಡಿದರು. ಆದರೆ ಆಕೆಯ ಜೀವನ ಇಷ್ಟು ನೋವಿನಿಂದ ಅಂತ್ಯಗೊಳ್ಳುವುದು ಎಂದು ಆಕೆ ಭಾವಿಸಿರಲಿಕ್ಕೂ ಇಲ್ಲ. ಮಹಿಳೆಯು ಸೇವಿಸಿದಂತಹ ವಿಷವು ಆಕೆಯ ಬಾಯಿಯಲ್ಲಿ ಸ್ಫೋಟಗೊಂಡಿದೆ. ಇದರ ಬಳಿಕ ಏನಾಗಿದೆ ಎಂದು ನೀವು ಮುಂದೆ ತಿಳಿಯಿರಿ.

ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು
ಉತ್ತರ ಪ್ರದೇಶದ ಅಲಿಘಡ್ ನ ಜವಾಹರ್ ಲಾಲ್ ನೆಹರೂ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆಯು ನಡೆದಿದೆ. ವಿಷ ಸೇವಿಸಿದ ಬಳಿಕ ಮಹಿಳೆ ಶೀಲಾ ದೇವಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.

ಸಂಪೂರ್ಣ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದೆ
ವರದಿಗಳು ಹೇಳುವ ಪ್ರಕಾರ, ಈ ಸಂಪೂರ್ಣ ಘಟನೆಯನ್ನು ಸಿಸಿಟಿವಿಯಲ್ಲಿ ದಾಖಲು ಮಾಡಲಾಗಿದೆ. ಆಕೆಯ ದೇಹದಲ್ಲಿ ಇರುವಂತಹ ವಿಷವನ್ನು ಹೊರಗಡೆ ಹಾಕಲು ಒಂದು ಪೈಪ್ ನ್ನು ಹಾಕಲಾಯಿತು ಮತ್ತು ಆಕೆಯ ಬಾಯಿಯು ಸ್ಫೋಟಗೊಂಡಿದೆ. ವೈದ್ಯರು ಆ ಮಹಿಳೆಯ ಹೊಟ್ಟೆಯಿಂದ ಬಂದ ಸಲ್ಫರ್ ಆಸಿಡ್ ಆಕೆಯ ಬಾಯಿಯಲ್ಲಿ ಸ್ಫೋಟಗೊಂಡಿದೆ ಎಂದು ವೈದ್ಯರು ಹೇಳಿರುವರು.

ನಿಖರ ಕಾರಣ ಹುಡುಕಲು ವೈದ್ಯರು ಪ್ರಯತ್ನಿಸುತ್ತಿರುವರು
ಮಹಿಳೆಯ ಬಾಯಿಯನ್ನು ಸ್ಫೋಟಗೊಳಿಸಿದ ಆಕಸ್ಮಿಕ ಘಟನೆಗೆ ನಿಖರ ಕಾರಣ ಏನು ಎಂದು ತಿಳಿಯಲು ಈಗ ವೈದ್ಯರು ಪ್ರಯತ್ನ ಮಾಡುತ್ತಲಿದ್ದಾರೆ. ಆಕೆ ಸೇವಿಸಿದ್ದ ಯಾವುದೋ ವಿಷವು ಹೊಟ್ಟೆಯ ಆಮ್ಲ ಅಥವಾ ಗಾಳಿಯ ಜತೆಗೆ ಸೇರಿ ಈ ಸ್ಫೋಟ ನಡೆದಿದೆ ಎಂದು ಅವರು ಭಾವಿಸಿರುವರು. ಸ್ಫೋಟದ ವೇಳೆ ಬೆಂಕಿ ಮತ್ತು ಹೊಗೆಯು ಹೊರಗೆ ಬಂದ ಬಳಿಕ ಆಕೆ ಮೃತಪಟ್ಟಳು ಎಂದು ವೈದ್ಯರು ಹೇಳಿರುವರು.

ಇದು ವೈದ್ಯಕೀಯ ಲೋಕದ ಮೊದಲ ಪ್ರಕರಣ
ವೈದ್ಯರ ಪ್ರಕಾರ ಮಹಿಳೆಯು ಅಲುಮಿನಿಯಂ ಫೋಸ್ಪೇಟ್ ನ್ನು ಸೇವಿಸಿದ್ದರು. ಇದು ಫೋಸ್ಪೈನ್ ಗ್ಯಾಸ್ ನೊಂದಿಗೆ ಅಲ್ಯುಮಿನಯಂ ಆಕ್ಸೈಡ್ ಮತ್ತು ಇತರ ಕೆಲವೊಂದು ಗ್ಯಾಸ್ ಗಳನ್ನು ಬಿಡುಗಡೆ ಮಾಡಿದೆ. ಇದು ವೈದ್ಯಕೀಯ ಲೋಕದಲ್ಲಿನ ಮೊದಲ ಪ್ರಕರಣ ಎಂದು ತಿಳಿಸಿರುವರು.



Click it and Unblock the Notifications
