Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸೌಂದರ್ಯ ವೃದ್ಧಿಸಲು ಬೊಟೊಕ್ಸ್ ಇಂಜೆಕ್ಷನ್ ತೆಗೆದುಕೊಂಡಳು, ಆದರೆ ಇದರಿಂದ ಆಕೆಯ ಪ್ರಾಣವೇ ಹೋಯಿತು!!
ದೇವರು ನೀಡಿರುವಂತಹ ಸೌಂದರ್ಯದಿಂದ ತೃಪ್ತರಾಗಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರೆ, ಆಗ ಜೀವನದಲ್ಲಿ ಯಶಸ್ಸು ಮತ್ತು ಮನಸ್ಸಿಗೆ ಶಾಂತಿಯು ಸಿಗುವುದು. ಆದರೆ ಇಂದಿನ ದಿನಗಳಲ್ಲಿ ಕೆಲವರು ತಾವು ಸುಂದರಿಯಾಗಿ ಕಾಣಬೇಕೆಂಬ ಹಂಬಲದಲ್ಲಿ ಹಲವಾರು ಕಾಸ್ಮೆಟಿಕ್ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವರು.

ಇದು ಕೆಲವೊಂದು ಸಲ ಅಪಾಯಕಾರಿಯಾಗಿರುವುದು. ಪ್ರಾಣಕ್ಕೂ ಕುತ್ತು ಉಂಟು ಮಾಡಬಹುದು. ಈ ಲೇಖನದಲ್ಲಿ ಯುವತಿಯೊಬ್ಬಳು ಬೊಟೊಕ್ಸ್ ಇಂಜೆಕ್ಷನ್ ತೆಗೆದುಕೊಳ್ಳಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ.
ಈ ದುರ್ಘಟನೆಯ ಬಗ್ಗೆ ನೀವು ಮುಂದಕ್ಕೆ ಓದುತ್ತಾ ಸಾಗಿ...

ಬೊಟೊಕ್ಸ್ ಹಾಕಿಸಿಕೊಳ್ಳಲು ಆಕೆ ಬಯಸಿದಳು!
ಸಿಂಗಾಪುರದ 32ರ ಹರೆಯದ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಲೂ ಲಿ ತಿಂಗ್ ಎಂಬ ಯುವತಿಯು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಒಂದು ಬ್ಯೂಟಿ ಕ್ಲಿನಿಕ್ ಗೆ ಹೋಗುವಳು. ತನ್ನ ಸೌಂದರ್ಯವನ್ನು ಪರಿಪೂರ್ಣವಾಗಿಸಿಕೊಳ್ಳಲು ಆಖೆ ಬೊಟೊಕ್ಸ್ ಇಂಜೆಕ್ಷನ್ ಹಾಕಿಸಿಕೊಳ್ಳಲು ಬಯಸಿದಳು.

ವೈದ್ಯರು ಇಂಜೆಕ್ಷನ್ ಚುಚ್ಚಿದ ವೇಳೆ
ಸೌಂದರ್ಯದ ವೈದ್ಯರು ಬೊಟೊಕ್ಸ್ ಇಂಜೆಕ್ಷನ್‌ನ್ನು ಆಕೆಗೆ ಚುಚ್ಚಿದ ವೇಳೆ ಆಕೆಗೆ ತುಂಬಾ ಮೈನಡುಕ ಆರಂಭವಾಯಿತು ಮತ್ತು ಕೆಲವೇ ಕ್ಷಣಗಳಲ್ಲಿ ಆಕೆ ಪ್ರಜ್ಞೆ ಕಳೆದುಕೊಂಡಳು.

ಇದನ್ನು ಆಕೆ ಮಾಡಿರುವುದು ಮೊದಲ ಸಲವಲ್ಲ!
ವರದಿಗಳು ಹೇಳುವ ಪ್ರಕಾರ ಲೂ ಬೊಟೊಕ್ಸ್ ಇಂಜೆಕ್ಷನ್ ನ್ನು ಹಾಕಿಸಿಕೊಂಡಿರುವುದು ಇದು ಮೊದಲ ಸಲವೇನಲ್ಲ. ಆಕೆಯ ಸಾವಿನ ಬಗ್ಗೆ ವೈದ್ಯರಿಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಹೃದಯಾಘಾತದಿಂದಾಗಿ ಆಕೆ ಸಾವನ್ನಪ್ಪಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಆಕೆ ಕೋಮಾಗೆ ಹೋದಳು
ಇಂಜೆಕ್ಷನ್ ಚುಚ್ಚಿಕೊಂಡ ದಿನ ಸಂಜೆ ವೇಳೆ ಆಕೆ ಕೋಮಾವಸ್ಥೆ ತಲುಪಿದಳು. ಇದರ ಬಳಿಕ ಆಕೆಗೆ ಕೃತಕ ಉಸಿರಾಟ ನೀಡಲಾಗಿತ್ತು ಮತ್ತು ಐದು ದಿನದ ಬಳಿಕ ಆಕೆ ಮೃತಪಟ್ಟಳು.
ಇತರ ಕ್ಲಿನಿಕ್‌ಗಳು ಕೂಡ ಈ ಸುದ್ದಿಯನ್ನು ಹಂಚಿಕೊಂಡವು
ಸಾವಿನ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಲು ಶುರುವಾಗುತ್ತಿದ್ದಂತೆ ಇತರ ಕೆಲವು ಕ್ಲಿನಿಕ್‌ಗಳು ಈ ಸುದ್ದಿಯನ್ನು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡವು ಮತ್ತು ಇದರಿಂದ ಅವರು ತಮ್ಮಲ್ಲಿಗ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದರು. ನೀವು ಈ ಸುದ್ದಿ ಬಗ್ಗೆ ಏನು ಹೇಳುತ್ತೀರಿ? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications
