Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ತನ್ನನ್ನು ಬಿಟ್ಟು ಹೋಗಿರುವ ತಾಯಿ ಹುಡುಕಾಟದಲ್ಲಿರುವ ಯುವತಿ-ವಿಡಿಯೋ ವೈರಲ್
ಮಕ್ಕಳು ಅನಾಥರಾಗಲು ಅವರ ತಂದೆತಾಯಿ ಮುಖ್ಯ ಕಾರಣವೆಂದು ಹೇಳಬಹುದು. ಯಾಕೆಂದರೆ ಹುಟ್ಟಿಸಿದ ಮಕ್ಕಳನ್ನು ಎಲ್ಲೋ ಎಸೆದು ಹೋಗುವುದು ಅಥವಾ ಅವರನ್ನು ಬಿಟ್ಟು ಹೋಗುವುದು ತುಂಬಾ ನೋವಿನ ವಿಚಾರ. ಇಂತಹ ಮಕ್ಕಳು ಅನಾಥವಾಗಿ ಬೆಳೆಯಬೇಕಾಗುತ್ತದೆ. ಇಂತಹ ಮಕ್ಕಳಿಗೆ ತಮ್ಮ ತಂದೆತಾಯಿ ತಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದರೆ ಆಗ ಮನಸ್ಸಿಗೆ ಎಷ್ಟು ನೋವಾಗಬಹುದು ಎಂದು ಯೋಚಿಸಿ. ಇದು ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುವುದು.

ಕೆಲವು ಅನಾಥ ಮಕ್ಕಳಿಗೆ ಒಳ್ಳೆಯ ವ್ಯಕ್ತಿಗಳ ಆಶ್ರಯ ಸಿಗುವುದು. ಇನ್ನು ಕೆಲವರನ್ನು ದತ್ತು ಪಡೆದುಕೊಂಡು ಬೆಳೆಸುವರು. ಆದರೆ ಹೆಚ್ಚಿನವರಿಗೆ ಇಂತಹ ಭಾಗ್ಯ ಇರಲ್ಲ. ಇಂತಹವರು ತುಂಬಾ ಸಂಕಷ್ಟ ಎದುರಿಸುವರು. ಇಲ್ಲೊಬ್ಬಳು ಹದಿಹರೆಯದ ಯುವತಿಯು ತನ್ನನ್ನು ತಾಯಿ ಬಿಟ್ಟು ಹೋಗಿರುವ ವಿಡಿಯೋ ನೋಡಿದ್ದಾಳೆ. ಆಗ ಅವಳ ಮನಸ್ಸಿನಲ್ಲಿ ಹೇಗಾಗಿರಬಹುದು ಮತ್ತು ಆಕೆ ಮುಂದೇನು ಮಾಡಿದಳು ಎಂದು ನೀವು ಓದುತ್ತಾ ತಿಳಿಯಿರಿ..

ಕೆಲವೇ ಗಂಟೆಗಳಲ್ಲಿ ಆಕೆಯನ್ನು ಬಿಟ್ಟು ಹೋಗಲಾಗಿತ್ತು
ಜೆಸ್ಸಿಕಾ ಬೋಡ್ ರೈಟ್ ಎಂಬ 14ರ ಹರೆಯದ ಹುಡುಗಿಯ ವಿಡಿಯೋ ಈಗ ವೈರಲ್ ಆಗಿದೆ. ಆಕೆ ತಾಯಿಯು ತನಗೆ ಜನ್ಮ ನೀಡಿದ ಕೆಲವೇ ಗಂಟೆಯಲ್ಲಿ ಆಸ್ಪತ್ರೆ ಒಳಗಡೆ ತನ್ನನ್ನು ಬಿಟ್ಟು ಹೋಗುತ್ತಿರುವ ವಿಡಿಯೋವನ್ನು ಆಕೆ ವೀಕ್ಷಿಸಿದ್ದಾಳೆ.

ಆಕೆ ಮೊದಲ ಸಲ ಈ ವಿಡಿಯೋ ವೀಕ್ಷಿಸಿದ್ದಾಳೆ
ತನ್ನನ್ನು ಬಿಟ್ಟು ತೆರಳುತ್ತಿರುವಂತಹ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಆಕೆಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ಪೊಲೀಸ್ ಅಧಿಕಾರಿಗಳ ಪ್ರಕಾರ ಆಕೆಯ ತಾಯಿ ಕಾಣೆಯಾಗಿದ್ದಾರೆ ಮತ್ತು ಆಕೆಯನ್ನು ಪತ್ತೆ ಮಾಡಲು ಅವರಿಗೆ ಇದುವರೆಗೆ ಸಾಧ್ಯವಾಗಿಲ್ಲ.

ತನ್ನನ್ನು ದತ್ತು ತೆಗೆದುಕೊಂಡ ಪೋಷಕರು ತುಂಬಾ ಬೆಂಬಲ ನೀಡುತ್ತಾರೆ
ಜೆಸ್ಸಿಕಾಳನ್ನು ಬ್ರಾಡ್ ಮತ್ತು ಅನ್ನಾ ಬೋಟ್ ರೈಟ್ ದತ್ತು ಪಡೆದುಕೊಂಡಿದ್ದಾರೆ. ಜೆಸ್ಸಿಕಾಗೆ ತನ್ನ ಮೂಲ ತಾಯಿಯನ್ನು ಪತ್ತೆ ಮಾಡಲು ಇವರು ತುಂಬಾ ಬೆಂಬಲ ನೀಡುತ್ತಿದ್ದಾರೆ. ತನ್ನನ್ನು ಐದು ವರ್ಷದ ತನಕ ಸಾಕಿ ಸಲಹಿದ ತಾಯಿಯನ್ನು ಕೂಡ ಭೇಟಿಯಾಗಲು ತಾನು ಬಯಸಿದ್ದೇನೆ ಎಂದು ಜೆಸ್ಸಿಕಾ ಹೇಳಿದ್ದಾಳೆ.

ಮೂಲ ತಾಯಿಗೆ ಜೆಸ್ಸಿಕಾ ಸಂದೇಶ
ಮೂಲ ತಾಯಿಯನ್ನು ಭೇಟಿ ಮಾಡಲು ಜೆಸ್ಸಿಕಾ ಬಯಸಿದ್ದಾಳೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ನಾನು ನಿನ್ನನ್ನು ಭೇಟಿಯಾಗದೆ ಇದ್ದರೂ ಸಹಿತ. ಆಕೆ ತನ್ನನ್ನು ಬಿಟ್ಟು ಹೋಗಿರುವ ಬಗ್ಗೆ ಪಶ್ಚಾತ್ತಾಪ ಅಥವಾ ತಪ್ಪಿತಸ್ಥ ಭಾವನೆ ಹೊಂದುವುದು ಬೇಡ ಎಂದು ನಾನು ಆಕೆಗೆ ಹೇಳುತ್ತಿದ್ದೇನೆ ಎಂದು ಜೆಸ್ಸಿಕಾ ಸಂದೇಶ ನೀಡಿದ್ದಾಳೆ. ಜೆಸ್ಸಿಕಾ ತನ್ನ ತಾಯಿ ಹುಡುಕಾಟದಲ್ಲಿ ಇದ್ದಾಳೆ. ಆಕೆಯನ್ನು ಒಂದು ದಿನ ಭೇಟಿ ಮಾಡಿ ಬಿಗಿದಪ್ಪಿಕೊಳ್ಳಬೇಕು ಎನ್ನುವುದು ಆಕೆಯ ಆಸೆ. ಜಸ್ಸಿಕಾ ತನ್ನ ತಾಯಿಯನ್ನು ಭೇಟಿಯಾಗಲಿ ಮತ್ತು ಆಕೆಗೆ ತಾಯಿಯ ಪ್ರೀತಿಯು ಸಿಗಲಿ ಎನ್ನುವುದು ನಮ್ಮ ಹಾರೈಕೆ.



Click it and Unblock the Notifications
