Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅನಾನಸ್ ಹಣ್ಣು ತಿನ್ನುವ ಸರಿಯಾದ ವಿಧಾನ ಇಲ್ಲಿದೆ ನೋಡಿ- ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಬರುವಂತಹ ಎಲ್ಲವೂ ಸತ್ಯವೆಂದು ಹೇಳಲು ಸಾಧ್ಯವಿಲ್ಲ. ಆದರೆ ಅದರಲ್ಲಿ ನಮಗೆ ಬೇಕಿರುವಂತಹ ಒಳ್ಳೆಯ ಅಂಶವನ್ನು ಆಯ್ಕೆ ಮಾಡಿಕೊಂಡು ಕೆಟ್ಟ ಅಂಶವನ್ನು ಕೈಬಿಡಬೇಕು. ಕೆಲವೊಂದು ವಿಚಾರಗಳು ನಮ್ಮ ಜೀವನದ ಮೇಲೆ ಒಳ್ಳೆಯ ಪರಿಣಾಮ ಬೀರಿದರೆ, ಇನ್ನು ಕೆಲವು ಕೆಟ್ಟ ಪರಿಣಾಮ ಉಂಟು ಮಾಡಬಹುದು. ಈ ಲೇಖನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಈ ಒಂದು ವೈರಲ್ ವಿಚಾರವನ್ನು ಓದಲೇಬೇಕು. ಯಾಕೆಂದರೆ ನಾವು ಹಣ್ಣುಗಳನ್ನು ತಿನ್ನುವಾಗ ಒಂದೊಂದು ರೀತಿಯಲ್ಲಿ ತಿನ್ನುತ್ತೇವೆ.
ಅದನ್ನು ಸುಲಭವಾಗಿ ಹೇಗೆ ತಿನ್ನಬಹುದು ಎಂದು ಆಲೋಚನೆ ಮಾಡುವುದೇ ಇಲ್ಲ. ಅದರಲ್ಲೂ ಅನಾನಸು ಹಣ್ಣು ತಿನ್ನಲು ತುಂಬಾ ಕಷ್ಟವೆಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅನಾನಸ್ ಹಣ್ಣನ್ನು ಸರಿಯಾದ ರೀತಿಯಲ್ಲಿ ತಿನ್ನುವುದು ಹೇಗೆ ಎಂದು ಬಹಿರಂಗಪಡಿಸಿದ್ದಾರೆ. ಈ ವಿಡಿಯೋವು ತುಂಬಾ ವೈರಲ್ ಆಗಿದೆ. ಚಾಕುವಿಲ್ಲದೆ ಅನಾನಸ್ ಹಣ್ಣನ್ನು ಸರಿಯಾದ ರೀತಿಯಲ್ಲಿ ಹೇಗೆ ತಿನ್ನಬಹುದು ಎನ್ನುವ ತಂತ್ರವನ್ನು ನೀವು ತಿಳಿಯಿರಿ.

ಆ ವ್ಯಕ್ತಿಯು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಬಳಿಕ ಅದು ವೈರಲ್ ಆಗಿದೆ. ಸುಮಾರು 13 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ. 44 ಸಾವಿರ ಜನರು ರೀಟ್ವೀಟ್ ಮಾಡಿದ್ದಾರೆ ಮತ್ತು 138000 ಲೈಕ್ ಬಂದಿದೆ ಮತ್ತು ಈಗಲೂ ಈ ಅಂಕಿಅಂಶಗಳು ಹೆಚ್ಚಾಗುತ್ತಲೇ ಇದೆ.
ಜನರು ಇದನ್ನು ನೋಡಿ ಅಚ್ಚರಿಯಲ್ಲಿ ಶೇರ್ ಮಾಡಿದ್ದಾರೆ. ಕೆಲವು ಜನರು ತುಂಬಾ ಕುತೂಹಲದಿಂದ ಈ ಬಗ್ಗೆ ಕಮೆಂಟ್ ಮಾಡಿರುವರು. ಅನಾನಸ್ ಹಣ್ಣನ್ನು ತಿನ್ನಲು ಇದು ತುಂಬಾ ಸುಲಭ ಹೇಗೆ ಎಂದು ನೀವು ಇಲ್ಲಿ ತಿಳಿಯಿರಿ.
ಒಬ್ಬರು ಇಲ್ಲಿ ಹೀಗೆ ವಿವರ ನೀಡಿರುವರು, ನೀವು ಇದನ್ನು ಹೀಗೆ ಮಾಡಬಹುದು. ಯಾಕೆಂದರೆ ಅನಾನಸು ಎನ್ನುವುದು ನಿಜವಾಗಿಯೂ ಬೆರ್ರಿಗಳು. ಯಾಕೆಂದರೆ ಇದು ಒಂದೊಂದೇ ಬೆರ್ರಿಗಳಂತೆ ಬೆಳೆದು ಮುಂದೆ ಅದು ಜತೆಯಾಗುವುದು. ಪ್ರತಿಯೊಂದು ಅನಾನಸಿನ ಕಣ್ಣು ಕೂಡ ಒಂದು ಬೆರ್ರಿ. ಇದು ಒಟ್ಟಿಗೆ ಇದೆ ಎಂದು ನಿಮಗೆ ಅನಿಸಬಹುದು. ಆದರೆ ಮೇಲಿನ ಭಾಗದಿಂದ ಒಂದೊಂದೇ ತೆಗೆಯಲು ಆರಂಭಿಸಿದರೆ ಆಗ ಪ್ರತಿಯೊಂದು ಕಣ್ಣನ್ನು ತೆಗೆಯಬಹುದು.''
ಈ ಬಗ್ಗೆ ನಿಮ್ಮ ಅನಿಸಿಕೆ ಏನು?
ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಲು ಮರೆಯಬೇಡಿ.



Click it and Unblock the Notifications

