Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಚಾಲಕನೊಬ್ಬ, ತನ್ನ ಕಾರಿಗೆ ಭೀತಿ ಮೂಡಿಸುವ ಸ್ಟಿಕ್ಕರ್‌ಗಳನ್ನು ಅಂಟಿಸಿದ! ಯಾಕೆ ಗೊತ್ತೇ?
ರಾತ್ರಿ ವೇಳೆ ಅಪಘಾತಗಳು ನಡೆಯುವುದು ಹೆಚ್ಚು ಎಂದು ಹೇಳಲಾಗುತ್ತದೆ. ಕೆಲವೊಂದು ವಾಹನಗಳು ಹೆಡ್ ಲೈಟ್ ಸರಿಯಾಗಿ ಬಳಸದೆ ಇರುವ ಪರಿಣಾಮ ಹಾಗೂ ಬೀದಿ ದೀಪಗಳ ಕೊರತೆ ಇತ್ಯಾದಿಗಳಿಂದ ಅಪಘಾತಗಳು ಸಂಭವಿಸುವುದು. ಆದರೆ ಎದುರಿನ ವಾಹನದ ಹೆಡ್ ಲೈಟ್ ಕಣ್ಣಿಗೆ ಬೀಳುವ ಪರಿಣಾಮವಾಗಿ ಕೆಲವೊಂದು ಸಲ ಅಪಘಾತಗಳು ಸಂಭವಿಸುತ್ತದೆ.
ಆದರೆ ಇಂತಹ ಅಪಘಾತಗಳನ್ನು ತಪ್ಪಿಸಲು ವಿವಿಧ ರೀತಿಯಲ್ಲಿ ಚಾಲಕರು ಪ್ರಯತ್ನಿಸಿವರು. ಚಾಲಕರು ಅಪಘಾತ ತಪ್ಪಿಸುವ ಸಲುವಾಗಿ ವಿವಿಧ ತಂತ್ರಗಳನ್ನು ಹೂಡುವರು. ಇದರಲ್ಲಿ ಕೆಲವು ತಂತ್ರಗಳು ತುಂಬಾ ವೈರಲ್ ಆಗುತ್ತದೆ. ಚೀನಾದ ಚಾಲಕನೊಬ್ಬ ತುಂಬಾ ಭೀತಿ ಹುಟ್ಟಿಸುವಂತಹ ತಂತ್ರವನ್ನು ಅಳವಡಿಸಿ ಕೊಂಡಿರುವುದು ಈಗ ವೈರಲ್ ಆಗಿದೆ. ಈ ತಂತ್ರದಿಂದ ಅಪಘಾತಗಳು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂದು ವರದಿಗಳು ಕೂಡ ಹೇಳಿವೆ. ಈ ಬಗ್ಗೆ ನೀವು ಲೇಖನವನ್ನು ಓದುತ್ತಾ ತಿಳಿಯಿರಿ…

ಆನ್ ಲೈನ್ ನಲ್ಲಿ ಈ ಸ್ಟಿಕ್ಕರ್ ತುಂಬಾ ಜನಪ್ರಿಯವಾಗುತ್ತಿದೆ
ಹಲವಾರು ಅಂಗಡಿಗಳು ಮತ್ತು ಈ ಕಾಮರ್ಸ್ ಸೈಟ್ ಗಳು ಭೀತಿ ಮೂಡಿಸುವ ಚಿತ್ರವಿರುವಂತಹ ಈ ಸ್ಟಿಕ್ಕರ್ ನ್ನು ಮಾರಾಟ ಮಾಡುತ್ತಿದೆ. ಇದು ಪ್ರೇತದ ಚಿತ್ರವಾಗಿದೆ ಮತ್ತು ಮಹಿಳೆಯ ಬಾಯಿಯಲ್ಲಿ ರಕ್ತ ಮತ್ತು ಕಣ್ಣುಗಳು ಹಳದಿಯಾಗಿ ಕಾಣಿಸುತ್ತಿದೆ.

ಚಾಲಕರ ಗಮನಸೆಳೆಯಲು ಇದನ್ನು ಬಳಸಲಾಗುತ್ತಿದೆ
ಈ ಸ್ಟಿಕ್ಕರ್ ಗಳನ್ನು ಹಿಂದಿನಿಂದ ಬರುವಂತಹ ವಾಹನಗಳ ಚಾಲಕನ ಗಮನ ಸೆಳೆಯಲು ಬಳಸಲಾಗುತ್ತಿದೆ. ಇದರಿಂದ ಅವರ ವಾಹನದ ಹೈಬೀಮ್ ಲೈಟ್ ಬಿದ್ದ ಕೂಡಲೇ ಈ ಸ್ಟಿಕ್ಕರ್ ಪ್ರತಿಫಲಿಸುವುದು.

ಡಿಮ್ ಲೈಟ್ ಇದ್ದರೆ ಈ ಚಿತ್ರ ಕಾಣಿಸದು!
ಈ ವಿಚಿತ್ರ ಸ್ಟಿಕ್ಕರ್ ನ ಮತ್ತೊಂದು ವಿಶೇಷ ಅಂಶವೆಂದರೆ ಇದು ಡಿಮ್ ಲೈಟ್ ಮತ್ತು ಸಾಮಾನ್ಯ ಬೆಳಕಿನಲ್ಲಿ ಕಾಣಿಸುವುದು ಕಡಿಮೆ. ಪ್ರಖರ ಬೆಳಕು ಈ ಸ್ಟಿಕ್ಕರ್ ಮೇಲೆ ಬಿದ್ದಾಗ ಅದು ಪ್ರತಿಫಲಿಸಲು ಆರಂಭವಾಗುವುದು. ಇದು ಕಾನೂನು ಬಾಹಿರ ಎಂದು ಪರಿಗಣಿಸ ಲಾಗಿದೆ. ಇದರಿಂದಾಗಿ ಹಿಂದಿನ ವಾಹನದ ಚಾಲಕ ಹೆದರಿ, ಅಪಘಾತಕ್ಕೆ ಕಾರಣವಾಗಬಹುದು. ಆದರೆ ಇದುವರೆಗೆ ಇಂತಹ ಪ್ರಕರಣ ದಾಖಲಾಗಿಲ್ಲ.

ಭೀತಿ ಹುಟ್ಟಿಸುವ ಚಿತ್ರಗಳು ಬೇಡವೆಂದರೆ ಇದನ್ನು ಬಳಸಬಹುದು!
ಭೀತಿ ಹುಟ್ಟಿಸುವಂತಹ ಸ್ಟಿಕ್ಕರ್ ಗಳನ್ನು ಬಳಸಿಕೊಂಡು ಅದರಿಂದ ದಂಡ ಕಟ್ಟಿಸಿಕೊಳ್ಳುವ ಬದಲು ಬೇರೆ ರೀತಿಯ ಸ್ಟಿಕ್ಕರ್ ಬಳಸ ಬಹುದು. ಇದು ಮೇಲಿನ ಚಿತ್ರದಲ್ಲಿ ನೀಡಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆ ನಮಗೆ ಮುಖ್ಯ. ಅದನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
