Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಹೆರಿಗೆ ವೇಳೆ ನರ್ಸ್ ಮಾಡಿದ ಎಡವಟ್ಟು- ತಾಯಿಯ ಹೊಟ್ಟೆಯಲ್ಲಿ ತಲೆ, ಉಳಿದ ಭಾಗ ಹೊರಗೆ!!
ವೈದೋ ನಾರಾಯಣೋ ಹರಿ ಎಂದು ಹೇಳಲಾಗುತ್ತದೆ. ಅಂದರೆ ವೈದ್ಯರು ಸಾಕ್ಷಾತ್ ದೇವರಿಗೆ ಸಮಾನ ಎನ್ನುವ ಅರ್ಥ. ಹೀಗಾಗಿಯೇ ಇರಬೇಕು, ಯಾವುದೇ ರೋಗಿಯಾದರೂ ವೈದ್ಯರನ್ನು ಸಂಪೂರ್ಣವಾಗಿ ನಂಬಿಕೊಂಡು ಇರುವನು. ಆದರೆ ವೈದ್ಯಕೀಯ ಲೋಕದಲ್ಲಿ ಕೆಲವೊಂದು ಅಚಾತುರ್ಯದಿಂದ ತಪ್ಪುಗಳು ನಡೆದರೆ, ಇನ್ನು ಕೆಲವು ತಪ್ಪುಗಳು ನಿರ್ಲಕ್ಷ್ಯದಿಂದಾಗಿ ಆಗುವುದು. ಹೀಗಾಗಿ ವೈದ್ಯಕೀಯ ಲೋಕದಲ್ಲಿ ಒಳ್ಳೆಯ ಅಂಶದಷ್ಟೇ ಕೆಲವೊಂದು ಕೆಟ್ಟ ಅಂಶಗಳು ಇವೆ. ವೈದ್ಯಕೀಯ ಲೋಕದಲ್ಲಿ ತಪ್ಪುಗಳು ನಡೆದರೆ ಅದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವುದು.

ಯಾಕೆಂದರೆ ಅದರಿಂದ ಆ ವ್ಯಕ್ತಿಯ ಜೀವನದ ಮೇಲೆ ಅದು ಘೋರ ಪರಿಣಾಮ ಬೀರಬಹುದು. ಇಂತಹ ಹಲವಾರು ಘಟನೆಗಳ ಬಗ್ಗೆ ನಾವು ಓದಿರಬಹುದು. ಹೀಗೆ ನಿರ್ಲಕ್ಷ್ಯದಿಂದ ಆಗಿರುವ ಘಟನೆ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿದಿಕೊಡಲಿದ್ದೇವೆ. ಹೆರಿಗೆ ವೇಳೆ ಮಗುವನ್ನು ತುಂಬಾ ಬಲಪ್ರಯೋಗ ಮಾಡಿ ನರ್ಸ್ ಎಳೆದ ಕಾರಣ ಮಗುವಿನ ಶಿರಚ್ಛೇದನವಾಗಿದೆ. ಈ ಘಟನೆ ಬಗ್ಗೆ ನೀವು ಲೇಖನವನ್ನು ಓದುತ್ತಾ ತಿಳಿದುಕೊಳ್ಳಿ.

ರಾಜಸ್ಥಾನದಲ್ಲಿ ಈ ಘಟನೆಯು ನಡೆದಿದೆ
ರಾಜಸ್ಥಾನದ ರಾಮಘಡ್ ಜಿಲ್ಲೆಯ ಆಸ್ಪತ್ರೆಯಲ್ಲಿ ಈ ಘಟನೆಯು ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯ ಹೆರಿಗೆ ವೇಳೆ ಕಾರ್ಯ ನಿರ್ವಹಿಸುತ್ತಿದ್ದ ಪುರುಷ ನರ್ಸ್ ಮಗುವನ್ನು ತುಂಬಾ ಬಲ ಪ್ರಯೋಗ ಮಾಡಿ ಎಳೆದ ಪರಿಣಾಮ ಮಗುವಿನ ಶಿರಚ್ಛೇದನವಾಗಿದೆ.

ಮಗು ಎರಡು ತುಂಡಾಯಿತು!
ನರ್ಸ್ ಮಗುವನ್ನು ಎಷ್ಟು ಬಲ ಪ್ರಯೋಗ ಮಾಡಿ ಎಳೆದನೆಂದರೆ ಅದರ ಶಿರ ಮತ್ತು ದೇಹವು ಪ್ರತ್ಯೇಕವಾಯಿತು. ಮಗು ಶಾಶ್ವತವಾಗಿ ಎರಡು ತುಂಡುಗಳಾಯಿತು. ಹೆರಿಗೆ ತುಂಬಾ ಕಷ್ಟವಾಗುತ್ತಿದ್ದ ಕಾರಣ ಮಗುವನ್ನು ಬಲ ಪ್ರಯೋಗಿಸಿ ಎಳೆದ ಪರಿಣಾಮವಿದು.

ಮಗುವಿನ ದೇಹವನ್ನು ಅಡಗಿಸಿಟ್ಟರು
ಮಗುವಿನ ಶಿರಚ್ಛೇದನವಾಗಿದೆ ಎಂದು ತಿಳಿದ ಬಳಿಕ ಮಗುವಿನ ದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಅಡಗಿಸಿಟ್ಟರು. ಹೆರಿಗೆಯು ತುಂಬಾ ಕಷ್ಟವಾಗುತ್ತಿದೆ ಎಂದು ಸರ್ಕಾರಿ ಆಸ್ಪತ್ರೆಯವರು ಹೇಳಿ, ಮಹಿಳೆಯನ್ನು ಬೇರೆ ಆಸ್ಪತ್ರೆಗೆ ಕಳುಹಿಸಿದರು.

ಬೇರೆ ಆಸ್ಪತ್ರೆಯ ಸಿಬ್ಬಂದಿಗೆ ಆಘಾತವಾಗಿತ್ತು!
ಮಹಿಳೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಲ್ಲಿ ವೈದ್ಯರು ಮಹಿಳೆಯ ಹೆರಿಗೆಗೆ ತಯಾರಿ ನಡೆಸಿದರು. ಆದರೆ ಮಗುವಿನ ತಲೆ ಮಾತ್ರ ಹೊಟ್ಟೆಯಲ್ಲಿ ಇರುವುದನ್ನು ಕಂಡು ಅಲ್ಲಿದ್ದವರು ದಂಗಾದರು.
Most Read: ಮೊಸಳೆ ಸಾವಿನ ದುಃಖದಲ್ಲಿ ಅಡುಗೆ ಮಾಡದ ಗ್ರಾಮಸ್ಥರು!

ಪ್ರಕರಣ ದಾಖಲಿಸಿಕೊಳ್ಳಲಾಯಿತು
ಈ ದುರ್ಘಟನೆಯ ಬಳಿಕ ಬಡ ಮಹಿಳೆಯ ಸ್ಥಿತಿಯು ತುಂಬಾ ಚಿಂತಾಜನಕವಾಗಿದೆ. ಈ ಘಟನೆ ಬಗ್ಗೆ ಮಹಿಳೆಯ ಮನೆಯವರು ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಬಳಿಕ ಮಗುವಿನ ಅರ್ಧ ದೇಹವನ್ನು ಮನೆಯವರಿಗೆ ಒಪ್ಪಿಸಲಾಯಿತು.
ಇಂತಹ ಘಟನೆಗಳು ಯಾವತ್ತೂ ನಡೆಯಬಾರದು ಎಂದು ನಾವು ಬಯಸುತ್ತೇವೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
