Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಸನ್ಯಾಸಿ
ಸ್ವಯಂ ಘೋಷಿತ ದೇವಮಾನವರು ಹಾಗೂ ಕೆಲವೊಂದು ಗುರುಗಳಿಂದ ನಾವು ಆಧ್ಯಾತ್ಮಿಕವಾಗಿ ದೊಡ್ಡ ಸಾಧನೆ ಮಾಡಬಹುದು ಎಂದು ಭಾವಿಸಿರಬಹುದು. ಆದರೆ ನಾವು ಇಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೇವೆ. ಸನ್ಯಾಸಿಗಳು ಎಲ್ಲವನ್ನು ತ್ಯಜಿಸಿದವರು, ಅವರಿಗೆ ಕಾಮ, ಕ್ರೋಧ, ಮದ, ಮೋಹ, ಮತ್ಸರ ಎನ್ನುವುದು ಇರುವುದಿಲ್ಲ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಖಂಡಿತವಾಗಿಯೂ ತಪ್ಪು. ಸನ್ಯಾಸಿಗಳು ಕೂಡ ಕೆಲವೊಂದು ಸಲ ದೊಡ್ಡ ಮಟ್ಟದ ತಪ್ಪು ಮಾಡುತ್ತಾರೆ. ಅದರಲ್ಲೂ ಲೈಂಗಿಕ ವಿಚಾರದಲ್ಲೇ ಸನ್ಯಾಸಿಗಳು ದೊಡ್ಡ ತಪ್ಪು ಮಾಡಿಕೊಂಡು ಶಿಕ್ಷೆ ಕೂಡ ಅನುಭವಿಸುತ್ತಾರೆ. ಹಾಂಕಾಂಗ್ ನಲ್ಲಿ ಪ್ರಸಿದ್ಧ ಸನ್ಯಾಸಿಯೊಬ್ಬ ತಾಯಿ ಹಾಗೂ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯು ನಡೆದಿದೆ.

ಈ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ
57ರ ಹರೆಯದ ಸ್ವಯಂ ಘೋಷಿತ ಸನ್ಯಾಸಿಯಾಗಿರುವಂತಹ ಯುಯೆನ್ ಮಿಂಗ್ ಕುಯೆನ್ ಎಂಬಾತ ಮಹಿಳೆ ಹಾಗೂ ಆಕೆಯ ಮಗಳಿಗೆ ಕಿರುಕುಳ ನೀಡಿದ್ದಾನೆ. ಈತ ಕೆಲವೊಂದು ಆಧ್ಯಾತ್ಮಿಕ ಶಿಬಿರಗಳನ್ನು ನಡೆಸುತ್ತಾನೆ ಮತ್ತು ಅಲ್ಲಿ ಆತ ತನ್ನ ಅನುಯಾಯಿಗಳಿಗೆ ಧಾರ್ಮಿಕ ಬೋಧನೆ ಮಾಡುತ್ತಾನೆ. ಆತನಿಂದ ಪರಿಹಾರ ಕೇಳಲು ತಾಯಿ ಹಾಗೂ ಮಗಳು ಕೂಡ ಬಂದಿದ್ದರು.

ಅವರಿಗೆ ದೆವ್ವ ಹಿಡಿದಿದೆ ಎಂದು ಹೇಳಿದ
ದೆವ್ವ ಬಿಡಿಸಲು ತನ್ನಲ್ಲಿ ಒಂದು ಒಳ್ಳೆಯ ತಂತ್ರ ಹಾಗೂ ಶಕ್ತಿ ಇದೆ ಎಂದು ಆತ ಹೇಳಿದ ಮತ್ತು ಇದರ ಪರಿಣಾಮವಾಗಿ ಆತ ದೆವ್ವಗಳೊಂದಿಗೆ ಮಾತನಾಡಿ ಅವುಗಳನ್ನು ಅವರ ದೇಹದಿಂದ ಓಡಿಸುತ್ತೇನೆ ಎಂದು ಹೇಳಿದ್ದ.

ದೆವ್ವಗಳೊಂದಿಗೆ ಮಾತನಾಡಲು ತನ್ನ ತಂತ್ರವು ತುಂಬಾ ಭಿನ್ನವಾಗಿದೆ ಎಂದು ಆತ ಹೇಳಿದ
ಸ್ವಯಂ ಘೋಷಿತ ಸನ್ಯಾಸಿಯು ದೆವ್ವಗಳನ್ನು ಓಡಿಸಲು ತನ್ನಲ್ಲಿ ವಿಶೇಷವಾದ ತಂತ್ರವಿದೆ ಎಂದು ಹೇಳುತ್ತಾನೆ ಮತ್ತು ಇದಕ್ಕಾಗಿ ಆತ ಅವರ ಸ್ತನಗಳು ಮತ್ತು ಜನನಾಂಗವನ್ನು ಮುದ್ದಾಡಬೇಕು ಎಂದು ಹೇಳುತ್ತಾನೆ.

ಆತನ ತಂತ್ರವನ್ನು ಹೀಗೆ ಹೇಳಲಾಯಿತು
ಆತ ಈ ರೀತಿಯ ತಂತ್ರವನ್ನು ಅರ್ಹಾತ್ ನಿಂದ ಕಲಿತಿರುವುದಾಗಿ ಹೇಳಿದ್ದಾನೆ. ಅರ್ಹಾತ್ ಎಂದರೆ ಒಬ್ಬ ವ್ಯಕ್ತಿಯಾಗಿದ್ದು, ಆತನು ನಿರ್ವಹನ ತಲುಪಿದ್ದಾಗಿ ಹೇಳಿದ್ದಾನೆ. ಹುಡುಗಿಯ ಸ್ತನಗಳು ಮತ್ತು ಜನನಾಂದಲ್ಲಿ ದೆವ್ವಗಳು ಮನೆ ಮಾಡಿಕೊಂಡಿದೆ ಮತ್ತು ಇವುಗಳು ಆಕೆಯನ್ನು ಅತ್ಯಾಚಾರ ಮಾಡುವ ಮೂಲಕ ಅಲ್ಲಿ ಹಾನಿಕಾರಕವಾಗಿದೆ ಎಂದು ಹೇಳಿದ್ದ.

ಆತನನ್ನು ತಪ್ಪಿತಸ್ಥನೆಂದು ಗುರುತಿಸಲಾಯಿತು
ಏಳು ತಿಂಗಳ ಕಾಲ ಮಹಿಳೆಗೆ ಆ ಸನ್ಯಾಸಿಯು ಕಿರುಕುಳ ನೀಡುತ್ತಲಿದ್ದ ಮತ್ತು ಆತನಲ್ಲಿ ನಂಬಿಕೆ ಇರಿಸಿಕೊಂಡಿದ್ದ ಕಾರಣದಿಂದಾಗಿ ಆತ ಒಂದು ಕಾರಣ ಹಿಡಿದುಕೊಂಡು ಅವರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು ತಪ್ಪಿತಸ್ಥನೆಂದು ಹೇಳಿದರು ಮತ್ತು ಆತ ಹಲವಾರು ಬಾರಿ ಈ ರೀತಿ ಮಾಡಿದ್ದಾಗಿ ಆ ತಾಯಿ ಮತ್ತು ಮಗಳು ಒಪ್ಪಿಕೊಂಡಿದ್ದರು. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಲು ಮರೆಯಬೇಡಿ.



Click it and Unblock the Notifications
