ರಾಶಿ ಭವಿಷ್ಯ: ನೋಡಿ ಈ ಮೂರು ರಾಶಿಯವರು ನಿಷ್ಠಾವಂತರಲ್ಲ!!

Posted By: Deepu
Subscribe to Boldsky

ಸಮಾಜದಲ್ಲಿ ನಮ್ಮನ್ನು ಗುರುತಿಸಬೇಕು ಎಂದರೆ ಒಂದೇ ನಮ್ಮಲ್ಲಿ ಅತಿಹೆಚ್ಚು ಒಳ್ಳೆಯ ಗುಣಗಳಿರಬೇಕು. ಇಲ್ಲವೇ ಅತಿಯಾದ ಕೆಟ್ಟ ಗುಣಗಳಿರಬೇಕು. ಆಗ ನಮ್ಮ ನಡವಳಿಕೆ ವರ್ತನೆಗಳು ಸಮಾಜದಲ್ಲಿ ಗುರುತಿಸಲಾಗುತ್ತದೆ. ಅದೇ ನಮ್ಮಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳು ಸಮ ಪ್ರಮಾಣದಲ್ಲಿ ಇದ್ದರೆ ಅವೆಲ್ಲವೂ ಅಷ್ಟಾಗಿ ಗಣನೆಗೆ ಬಾರದು. ವ್ಯಕ್ತಿಯಲ್ಲಿರುವ ಕೆಟ್ಟಗುಣಗಳು ಅಥವಾ ಕೆಟ್ಟಸಂಗತಿಗಳು ವ್ಯಕ್ತಿಗೂ ಕೆಟ್ಟದ್ದು. ಜೊತೆಗೆ ವ್ಯಕ್ತಿಯ ಸುತ್ತಲಿರುವ ವ್ಯಕ್ತಿಗಳಿಗೂ ಅದು ದುಷ್ಪರಿಣಾಮ ಬೀರುತ್ತವೆ.

ವ್ಯಕ್ತಿಯ ವ್ಯಕ್ತಿತ್ವದಲ್ಲಿ ನಿಷ್ಠತೆ ಎನ್ನುವುದು ಬಹಳ ಪ್ರಮುಖವಾದ್ದು. ಯಾವ ವ್ಯಕ್ತಿ ತಾನು ಹೇಳುವ ಮಾತಲ್ಲಿ ಹಾಗೂ ನಡವಳಿಕೆಯಲ್ಲಿ ನಿಷ್ಠತೆಯನ್ನು ತೋರುವುದಿಲ್ಲವೋ ಆತನ ಬಂಧುಗಳಿಗೆ, ಕುಟುಂಬದವರಿಗೆ ಹಾಗೂ ಸಂಗಾತಿಗಳಿಗೆ ಅದರಿಂದ ತೊಂದರೆ ಉಂಟಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ರಾಶಿ ಚಕ್ರದವರು ಸಾಮಾನ್ಯವಾಗಿ ತಮ್ಮ ನಡವಳಿಕೆಯಲ್ಲಿ ಕಡಿಮೆ ಪ್ರಮಾಣದ ನಿಷ್ಠತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರಲ್ಲಿ ಏಕೆ ನಿಷ್ಠತೆಯ ಪ್ರಮಾಣ ಕಡಿಮೆ ಇರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ....

ಧನು

ಧನು

ಈ ರಾಶಿಚಕ್ರದವರು ಸಾಮಾನ್ಯವಾಗಿ ಅತ್ಯಂತ ಸಾಹಸ ಪ್ರಿಯರು ಎಂದು ಹೇಳಬಹುದು. ನಿರಂತರವಾದ ಪರಿಶೋಧನೆಯ ಮೂಲಕ ತಮ್ಮ ಅಭಿವೃದ್ಧಿಯನ್ನು ಹೊಂದುತ್ತಾರೆ. ಇವರು ಹೊಸ ಹೊಸ ಸ್ನೇಹಿತರ ಸ್ನೇಹ ಮಾಡಲು ಇಷ್ಟಪಡುವರು. ನಿತ್ಯವೂ ಹೊಸ ಸಂಗತಿಗಳನ್ನು ಹೊಂದಲು ಇವರು ಇಷ್ಟಪಡುವವರು.

ಧನು: (ಮುಂದುವರಿದ ಭಾಗ)

ಧನು: (ಮುಂದುವರಿದ ಭಾಗ)

ಇವರು ಯಾವುದೇ ಸಂಗತಿಗಳ ಬಗ್ಗೆ ಹೆಚ್ಚು ನಿಷ್ಠತೆಯನ್ನು ತೋರುವುದಿಲ್ಲ. ಅಲ್ಲದೆ ಇವರ ಮೇಲೆ ಭರವಸೆಯನ್ನಿಟ್ಟು ಕೆಲಸ ಮಾಡುವುದು ತುಂಬಾ ಕಠಿಣ ಎಂದು ಹೇಳಬಹುದು. ಇವರು ಸಂಬಂಧದಲ್ಲಿ ಬಂಧಿಯಾಗಿರಲು ಇಷ್ಟಪಡುವುದಿಲ್ಲ. ಸದಾ ಸ್ವತಂತ್ರರಾಗಿರಲು ಬಯಸುವರು. ದೂರವಾದ ಸಂಗಾತಿಯೊಂದಿಗೆ ಪುನಃ ಹಿಂದಿರುಗಿ ಬಂದು ಸೇರಿಕೊಳ್ಳಬಹುದು.

ಕುಂಭ: ಜನವರಿ 21-ಫೆಬ್ರವರಿ 18

ಕುಂಭ: ಜನವರಿ 21-ಫೆಬ್ರವರಿ 18

ಭಾವನಾತ್ಮಕ ಅನ್ಯೋನ್ಯತೆಯ ವಿಚಾರದಲ್ಲಿ ಈ ರಾಶಿಯವರು ಅಷ್ಟು ಉತ್ತಮವಾದ ವ್ಯಕ್ತಿಗಳಾಗಿರುವುದಿಲ್ಲ. ಭಾವನಾತ್ಮಕವಾಗಿ ಇವರು ಬದ್ಧರಾಗಿದ್ದಾರೆ ಎಂದು ಇವರು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವರು. ಆಳವಾದ ಚಿಂತನೆ ಹಾಗೂ ಕ್ರಿಯಾಶೀಲತೆಯನ್ನು ಇವರಲ್ಲಿ ಕಾಣಬಹುದು. ಆದರೆ ಇವರು ತಮ್ಮ ಜೀವಿತಾವಧಿಯಲ್ಲಿ ಕೆಲವೇ ಜನರಿಗೆ ಮಾತ್ರ ನಿಷ್ಠೆಯಿಂದ ಬದ್ಧರಾಗಿರುತ್ತಾರೆ.

ಕುಂಭ: (ಮುಂದುವರಿದ ಭಾಗ)

ಕುಂಭ: (ಮುಂದುವರಿದ ಭಾಗ)

ಈ ರಾಶಿಯವರು ಬದ್ಧವಾದ ಬಂಧನಕ್ಕೆ ಅಷ್ಟು ನಿಷ್ಠಾವಂತರಾಗಿ ಇರುವುದಿಲ್ಲ. ಇವರು ತಮ್ಮ ಮಾತನ್ನು ಉಳಿಸಿಕೊಳ್ಳಲು ಅಥವಾ ತಮ್ಮನ್ನು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇವರು ಕೆಲವು ಸಂದರ್ಭದಲ್ಲಿ ಅಂದುಕೊಂಡಷ್ಟು ಪ್ರಮಾಣದಲ್ಲಿ ಬದ್ಧರಾಗಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಮಿಥುನ

ಮಿಥುನ

ಇವರ ಕೆಲವು ನಡವಳಿಕೆಗಳು ಅಷ್ಟು ಸ್ಪಷ್ಟತೆಯನ್ನು ಹೊಂದಿರುವುದಿಲ್ಲ. ಗೊಂದಲಮಯವಾದ ಇವರ ವರ್ತನೆ ಜನರಿಗೆ ಮಬ್ಬು ಕಾಣುವಂತೆ ಮಾಡುತ್ತದೆ. ಈ ಗುಣಲಕ್ಷಣವನ್ನು ನಿಷ್ಠೆಯ ಗಂಭೀರ ಉಲ್ಲಂಘನೆ ಎಂದು ಹಲವರು ಪರಿಗಣಿಸುತ್ತಾರೆ. ಈ ವ್ಯಕ್ತಿಗಳು ಸುಲಭವಾಗಿ ಪ್ರಭಾವ ಬೀರುವುದಿಲ್ಲ. ಇವರ ಸಂಬಂಧವನ್ನು ಮಾಡುವಾಗ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಮಿಥುನ: (ಮುಂದುವರಿದ ಭಾಗ)

ಮಿಥುನ: (ಮುಂದುವರಿದ ಭಾಗ)

ಈ ರಾಶಿಯವರು ತಮ್ಮ ಜಗತ್ತು ಪರಿಪೂರ್ಣವಾಗಿದೆ ಎಂದು ನಂಬುತ್ತಾರೆ. ಎಲ್ಲರಲ್ಲೂ ಬೆರೆಯಲು, ಸಾಮಾಜಿಕ ಸಭೆಯಲ್ಲಿ ಪಾಲ್ಗೊಳ್ಳಲು ಹಾಗೂ ಸಂಪರ್ಕವನ್ನು ಬೆಳೆಸಲು ಹೆಚ್ಚು ಗಮನವನ್ನು ಹರಿಸುತ್ತಾರೆ. ಇವರನ್ನು ನಂಬಿಕೊಂಡು ಯಾವುದಾದರೂ ಕೆಲಸವನ್ನು ಮುಂದುವರಿಸಿದರೆ ಅದನ್ನು ಅವರು ನಿರಾಶೆಗೊಳಿಸುವ ಸಾಧ್ಯತೆಗಳಿರುತ್ತವೆ.

English summary

zodiac-signs-which-are-the-least-loyal

According to astrology, there are 3 zodiac signs that can take you by surprise. These zodiac signs are believed to be the least loyal zodiac signs. Check out the details and traits of the individuals of these signs who are said to be capable of having a personality of fierce, uncompromising integrity in their relationships. Find out about these least loyal zodiac signs. These zodiacs are listed as per their ranking of being not so honest in their relationships.
Story first published: Wednesday, March 7, 2018, 7:01 [IST]