ರಾಶಿ ಭವಿಷ್ಯ: ಈ ಮೂರು ರಾಶಿಯವರ ವೃತ್ತಿಜೀವನ ಉನ್ನತಿಯಾಗಲಿದೆ

Posted By: Deepu
Subscribe to Boldsky

ಈಗಾಗಲೇ ನೀವು 2018ರಲ್ಲಿ ನಿಮ್ಮ ರಾಶಿಗೆ ಆಗುವಂತಹ ಲಾಭ ನಷ್ಟಗಳು, ಕಷ್ಟಕಾರ್ಪಣ್ಯಗಳು, ರೋಗರುಜಿನಗಳ ಬಗ್ಗೆ ತಿಳಿದುಕೊಂಡಿದ್ದೀರಿ. ಇದೇ ವಿಭಾಗದಲ್ಲಿ ನೀವು ಅವುಗಳನ್ನು ಓದಿಕೊಂಡಿರುವಿರಿ. ಈ ವರ್ಷ ಯಾವ ರಾಶಿಯವರ ವೃತ್ತಿಜೀವನವು ಉತ್ತಮವಾಗಿರಲಿದೆ ಎಂದು ಓದಿಕೊಳ್ಳಿ.

ಜ್ಯೋತಿಷಿಗಳ ಪ್ರಕಾರ ಕೆಲವೊಂದು ರಾಶಿಯವರ ವೃತ್ತಿಜೀವನವು ಈ ವರ್ಷ ಹೆಚ್ಚು ಅಭಿವೃದ್ಧಿ ಕಾಣಲಿದೆ ಮತ್ತು ಕೆಲವರಿಗೆ ಕಠಿಣ ಸವಾಲುಗಳು ಉದ್ಯೋಗದಲ್ಲಿ ಕಂಡುಬರಲಿದೆ. ಈ ಲೇಖನದಲ್ಲಿ ಮೂರು ಅದೃಷ್ಟವಂತ ರಾಶಿಗಳು ತಮ್ಮ ವೃತ್ತಿಜೀನದಲ್ಲಿ ಏಳಿಗೆ ಕಂಡುಕೊಳ್ಳುವ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ರಾಶಿಗಳು ಯಾವುದು ಎಂದು ತಿಳಿದುಕೊಳ್ಳಲು ಮುಂದೆ ಓದಿ....

ಮೇಷ: (ಮಾರ್ಚ್21-ಏಪ್ರಿಲ್19)

ಮೇಷ: (ಮಾರ್ಚ್21-ಏಪ್ರಿಲ್19)

ಮುಂದಿನ ಎರಡು ವರ್ಷಗಳು ಈ ರಾಶಿಯವರ ಪರವಾಗಿರಲಿದೆ. ಶನಿಗ್ರಹದ ಸ್ಥಾನಪಲ್ಲಟದಿಂದ ಹೀಗೆ ಆಗಲಿದೆ. ಈ ರಾಶಿಯ ಹತ್ತನೇ ಮನೆಯಾಗಿರುವಂತಹ ಮಕರ ರಾಶಿಯಲ್ಲಿ ಶನಿಯು ಎರಡುವರೆ ವರ್ಷಗಳ ಕಾಲ ಉಳಿಯಲಿದ್ದಾನೆ. ಇದರಿಂದ ಗೌರವ, ಪ್ರಶಸ್ತಿ ಮತ್ತು ಸಾಧನೆಗಳು ಈ ರಾಶಿಯವರಿಗೆ ಒಲಿದು ಬರಲಿದೆ.

ಮೇಷ: (ಮಾರ್ಚ್21-ಏಪ್ರಿಲ್19)

ಮೇಷ: (ಮಾರ್ಚ್21-ಏಪ್ರಿಲ್19)

ತಮ್ಮ ವಿರುದ್ಧ ಮತ್ತು ಪರವಾಗಿರುವ ಬಗ್ಗೆ ಈ ರಾಶಿಯವರು ಹೆಚ್ಚಿನ ಗಮನ ನೀಡಬೇಕು. ವ್ಯತ್ಯಾಸವನ್ನು ಕಂಡುಕೊಂಡಾಗ ಈ ವರ್ಷ ಅವರು ತಿದ್ದಿಕೊಂಡು ಮುಂದಕ್ಕೆ ಸಾಗಬೇಕು. ಯಶಸ್ಸಿನ ಮೆಟ್ಟಿಲೇರಲು ತಯಾರಾಗಿರಬೇಕು. ಜೀವನವನ್ನು ಇಷ್ಟಪಡುತ್ತಿದ್ದರೂ ಇದಕ್ಕೆ ಸ್ವಲ್ಪ ಕಡಿಮೆ ಪ್ರಾಮುಖ್ಯತೆ ನೀಡಿ.

ಧನು (23 ನವೆಂಬರ್–21 ಡಿಸೆಂಬರ್)

ಧನು (23 ನವೆಂಬರ್–21 ಡಿಸೆಂಬರ್)

ಶನಿಯು ಎರಡನೇ ಮನೆಯಲ್ಲಿ ಇರುವ ಪರಿಣಾಮ ಈ ರಾಶಿಯವರು ಈ ವರ್ಷ ತಮ್ಮ ಖರ್ಚುವೆಚ್ಚದ ಬಗ್ಗೆ ಖಂಡಿತವಾಗಿಯೂ ಪಾಠ ಕಲಿಯುವರು. ಇವರು ಹಣದ ವಿಚಾರದಲ್ಲಿ ತುಂಬಾ ವಾಸ್ತವವಾದ ಭಾವ ಹೊಂದುವರು. ಇದುವರೆಗೆ ಅವರು ಕಲ್ಪನೆ ಮಾಡಿರದಂತಹ ವಿಧಾನಗಳ ಮೂಲಕ ಹಣವನ್ನು ಹೇಗೆ ಹೂಡಿಕೆ ಮಾಡುವುದು ಎಂದು ಅವರು ಕಲಿತುಕೊಳ್ಳುವರು.

ಧನು (23 ನವೆಂಬರ್–21 ಡಿಸೆಂಬರ್)

ಧನು (23 ನವೆಂಬರ್–21 ಡಿಸೆಂಬರ್)

ಅವರಲ್ಲಿ ಏನು ಇದೆಯೋ ಅದರ ಬಳಕೆ ಮಾಡಿಕೊಂಡು ಆರ್ಥಿಕ ಸ್ವತಂತ್ರದಿಂದ ಅವರು ಶ್ರೀಮಂತರಾಗುವಂತಹ ಸಾಧ್ಯತೆಗಳು ತುಂಬಾ ಇದೆ. ಅವರು ಹಣ ಮಾಡಲು ತಮ್ಮ ಕ್ರಿಯಾತ್ಮಕತೆ ಬಳಸಿಕೊಳ್ಳಬೇಕು.

ಮೀನ

ಮೀನ

ಪ್ರಸಿದ್ಧಿ ಹಾಗೂ ಗೌರವದ 10ನೇ ಮನೆಯನ್ನು ಶನಿಯು ತ್ಯಜಿಸುವ ಕಾರಣದಿಂದ ಈ ರಾಶಿಯವರು ತಮ್ಮ ವೈಯಕ್ತಿಕ ಪ್ರತಿಷ್ಠೆ ಹಾಗೂ ವೃತ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸಲಿರುವರು. ಇದರೊಂದಿಗೆ ಅವರಿಗೆ ತುಂಬಾ ಅಗತ್ಯವಾಗಿರುವಂತಹ ಕೆಲಸಗಳ ಕಡೆ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಕೆಲವೊಂದು ಸಣ್ಣ ಸಣ್ಣ ವಿಚಾರಗಳ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟುಬಿಡಬೇಕು.

ಮೀನ

ಮೀನ

ಈ ವರ್ಷದ ಆರಂಭವು ತುಂಬಾ ನಿಧಾನವಾಗಿದೆ ಎಂದು ಈ ರಾಶಿಯವರು ಭಾವಿಸಬಹುದು. ಎಪ್ರಿಲ್ ವೇಳೆಗೆ ಇವರಿಗೆ ಎಲ್ಲವೂ ಭಿನ್ನವಾಗಿರಲಿದೆ. ಇದನ್ನು ಹೊರತುಪಡಿಸಿ ತಳಮಟ್ಟದಲ್ಲಿ ಇವರ ಜನಸಂಪರ್ಕದ ಮೇಲಿನ ಆಸಕ್ತಿಯು ಕಳಕೊಳ್ಳಲಿದೆ. ಕ್ರಿಯಾತ್ಮಕವಾಗಿ ಹೊಂದಿಕೊಳ್ಳುವಂತಹ ವ್ಯಕ್ತಿಗಳತ್ತ ಹೆಚ್ಚು ಗಮನಹರಿಸುವರು.

English summary

zodiac-signs-that-will-have-the-best-year-of-their-careers-in-2018

There have been various predictions that are made for the year 2018. One such prediction is about having the best phase of career. According to astrologers, there are certain zodiac signs which will see a significant career growth and there are those who would face the worst career phase this year too. Here, in this article, we revealing to you about the 3 lucky zodiac signs which will experience the best time in the career phase of the individuals belonging to the signs. So, check on to find out if your zodiac sign is also mentioned here.