ಈ ನಾಲ್ಕು ರಾಶಿಯವರನ್ನು ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ!!

Posted By: Deepu
Subscribe to Boldsky

ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ? ಎನ್ನುವುದನ್ನು ತಿಳಿದುಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಆ ವ್ಯಕ್ತಿ ತಾನು ಹೇಳುತ್ತಿರುವ ಮಾತು ಹಾಗೂ ವರ್ತನೆಗಳು ವಾಸ್ತವಕ್ಕೆ ಹತ್ತಿರವಾಗಿರುವಂತೆ ನಟಿಸಬಹುದು. ಅಂತಹ ಸಂದರ್ಭದಲ್ಲಿ ಅವರ ಭಾವನೆಗಳು ಹಾಗೆಯೇ ಇರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ ಅದು ಆ ವ್ಯಕ್ತಿಯ ನಿಜ ಭಾವನೆಗಳು ಆಗದೆ ಇರಬಹುದು. ವ್ಯಕ್ತಿಯಲ್ಲಿ ಎಷ್ಟು ಆತ್ಮ ಶಕ್ತಿ ಹಾಗೂ ನಾಟಕೀಯ ಸ್ವಭಾವ ಬಹಳ ಗಾಢವಾಗಿರುತ್ತದೆಯೋ ಅಲ್ಲಿಯ ವರೆಗೂ ಅವರ ನಿಜ ಸ್ವರೂಪವನ್ನು ನಾವು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.

ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಹಾಗೆ ಕೆಲವು ವ್ಯಕ್ತಿಗಳು ತಮ್ಮ ಭಾವನೆಯನ್ನು ಅತ್ಯುತ್ತಮ ಹಿಡಿತವನ್ನು ಹೊಂದಿರುತ್ತಾರೆ. ರಾಶಿ ಚಕ್ರದ ಪ್ರಭಾವದಿಂದ ಅವರಿಗೆ ಅದು ಸಾಧ್ಯವಾಗುತ್ತದೆ ಎನ್ನಲಾಗುವುದು. 12 ರಾಶಿಚಕ್ರದವರಲ್ಲಿ ನಾಲ್ಕು ರಾಶಿಚಕ್ರದ ಜನರು ತಮ್ಮ ಭಾವನೆಯನ್ನು ಬಹಳ ಗೌಪ್ಯವಾಗಿ ಇಡುತ್ತಾರೆ. ಇವರು ಎಂದಿಗೂ ಇತರರ ಮುಂದೆ ತಮ್ಮ ಭಾವನೆಯನ್ನು ತೋರಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು ಎನ್ನುವುದನ್ನು ತಿಳಿಯಲು ಮುಂದೆ ಓದಿ...  

ಕರ್ಕ

ಕರ್ಕ

ಈ ರಾಶಿಚಕ್ರದವರು ಅತ್ಯಂತ ಭಾವನಾ ಜೀವಿಗಳು. ಆದರೆ ಇವರ ಎಲ್ಲಾ ಭಾವನೆಗಳನ್ನು ಅಷ್ಟು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದು ಅಥವಾ ತೋರಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಂದು ಹೇಳಲಾಗುವುದು. ತಮಗೆ ಎಷ್ಟೇ ನೋವಾದರೂ ಅದನ್ನು ಅವರು ತೋರ್ಪಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಅನೇಕ ವಿಚಾರಗಳನ್ನು ಬಹಳ ಹಗುರವಾಗಿ ತೆಗೆದುಕೊಂಡು ನಿಭಾಯಿಸುತ್ತಾರೆ. ಇವರು ತಮ್ಮ ಭಾವನೆಯಿಂದ ತಮ್ಮ ಪ್ರೀತಿ ಪಾತ್ರರು ನೋವನ್ನು ಅನುಭವಿಸಬಾರದು ಎಂದು ಭಾವಿಸುತ್ತಾರೆ. ಹಾಗಾಗಿ ಇವರನ್ನು ಮೂಕ ರೋಗಿಗಳು ಎಂದು ಕರೆಯಬಹುದು.

ಕರ್ಕ

ಕರ್ಕ

ಇನ್ನು ಈ ರಾಶಿಯವರಲ್ಲಿ ಅನೇಕ ಧನಾತ್ಮಕ ಗುಣಗಳಿರುತ್ತವೆ. ಇವರಲ್ಲಿ ಕಡಿಮೆ ಪ್ರಮಾಣದ ಸ್ವಾಭಿಮಾನ ಇರುವುದರಿಂದ ಜನರಲ್ಲಿ ಬಹುಬೇಗ ಬೆರೆಯುತ್ತಾರೆ. ಅಂತ್ಯವಿಲ್ಲದೆ ಕಾಳಜಿಯ ಸ್ವಭಾವ, ಭಾವಪರವಶತೆ, ನಿಷ್ಠತೆ, ಆಳವಾದ ಭಾವನೆಗಳು ಇವರಲ್ಲಿ ನೈಸರ್ಗಿಕವಾಗಿಯೇ ಬಂದಿರುತ್ತದೆ. ಉತ್ತಮ ಕೇಳುಗರಾದ ಇವರು ಸೃಜನಾತ್ಮಕ ಸ್ವಭಾವದವರೂ ಹೌದು. ಪ್ರಾಮಾಣಿಕರಾಗಿರುವ ಇವರು ಸೂಕ್ಷ್ಮ ಮತ್ತು ಸುಂದರವಾದ ವ್ಯಕ್ತಿಗಳು ಆಗಿರುವರು.

ಕನ್ಯಾ

ಕನ್ಯಾ

ಈ ರಾಶಿಯವರು ಯಾವಾಗಲೂ ತಮ್ಮದೆ ಆದ ನಿರ್ಣಯಗಳನ್ನು ಹೊಂದಿರುತ್ತಾರೆ. ಇವರು ತಮ್ಮ ಬಾಧಕಗಳನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಇವರು ಅಷ್ಟು ಸುಲಭವಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಇವರು ತಾವು ಎಷ್ಟೇ ಸಂತೋಷ ಅಥವಾ ದುಃಖವನ್ನು ಹೊಂದಿದ್ದರೂ ಸಹ ಅದನ್ನು ಅದನ್ನು ವ್ಯಕ್ತಪಡಿಸುವುದಿಲ್ಲ. ತಮ್ಮ ಮನಸ್ಸಿನಲ್ಲಿ ನಡೆಯುವ ನಿಜವಾದ ಆಲೋಚನೆಯನ್ನು ಬಹಿರಂಗಪಡಿಸದೆ ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ.

ಕನ್ಯಾ

ಕನ್ಯಾ

ಹೆಚ್ಚು ಭಾವನಾತ್ಮಕ ವ್ತಕ್ತಿಗಳಾದ ಇವರು ಹೆಚ್ಚಿನ ವಿಶ್ಲೇಷಣೆಗೆ ಒಳಗಾಗುತ್ತಾರೆ. ಅವರು ವಿಷಯಗಳನ್ನು ಕ್ರಮಬದ್ಧವಾದ, ವಿಶ್ಲೇಷಣಾತ್ಮಕವಾದ ಮತ್ತು ತಾರ್ಕಿಕ ರೀತಿಯಲ್ಲಿ ನೋಡುತ್ತಾರೆ. ಇವರು ಸಮಸ್ಯೆಗಳ ನಿವಾರಣೆಗೆ ತ್ಯುತ್ತಮ ಪರಿಹಾರಕರು ಮತ್ತು ಕೇಳುಗರಾಗಿರುತ್ತಾರೆ.

ತುಲಾ ರಾಶಿ

ತುಲಾ ರಾಶಿ

ಈ ರಾಶಿಯವರ ಆಂತರ್ಯದಲ್ಲಿ ಚಂಡಮಾರುತವೇ ಇರುತ್ತದೆ ಎಂದು ಹೆಳಲಾಗುವುದು. ಈ ಚಂಡಮಾರುತ ಎನ್ನುವುದು ನಕಾರಾತ್ಮಕ ಭಾವನೆಗಳಾಗಿವೆ. ಅವುಗಳಲ್ಲಿ ಅನೇಕವು ಬಗೆಹರಿಯಲಾರದ ಭಾವನೆಗಳು ಇರುತ್ತವೆ. ಈ ವ್ಯಕ್ತಿಗಳು ಬಹಳ ಆರಾಮದಾಯಕವಾಗಿ ಇರುವಂತೆ ಹಾಗೂ ಹೊಂದಿಕೊಳ್ಳುವಂತೆ ಕಾಣುತ್ತಾರೆ. ಆದರೆ ಇವರ ನಿಜವಾದ ಸ್ವಭಾವ ಮತ್ತು ಭಾವನೆ ಅದಾಗಿರುವುದಿಲ್ಲ.

ತುಲಾ ರಾಶಿ

ತುಲಾ ರಾಶಿ

ಈ ವ್ಯಕ್ತಿಗಳು ಅತ್ಯಂತ ಗೌರವ ಹಾಗೂ ದಯೆಯ ಸ್ವಭಾವದಿಂದ ಕೂಡಿರುತ್ತಾರೆ. ಜೀವನದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವ ಜಾಣ್ಮೆಯನ್ನು ಹೊಂದಿದ್ದಾರೆ. ಇವರಲ್ಲಿ ನೈಸರ್ಗಿಕವಾಗಿಯೇ ಮಾನವೀಯತೆಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರು ಇತರರನ್ನು ಅರಿತುಕೊಳ್ಳಲು ಬಹಳಷ್ಟು ಕಲಿತುಕೊಳ್ಳಬೇಕಾಗುವುದು. ನಂಬಿಕೆ ಎನ್ನುವುದು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಇವರು ತಮ್ಮ ಭಾವನೆಯನ್ನು ಇತರರ ಮುಂದೆ ತೋರಿಸಿಕೊಳ್ಳುವುದಿಲ್ಲ ಎನ್ನಲಾಗುವುದು. ತಮ್ಮ ಭಾವನೆಯನ್ನು ಬಹಳ ಗೌಪ್ಯವಾಗಿ ಇಡಲು ಬಯಸುವರು. ಜೊತೆಗೆ ತಮ್ಮ ವರ್ತನೆಯನ್ನೂ ಸಹ ಹಾಗೆಯೇ ಇಡುತ್ತಾರೆ. ಇವರು ತಮ್ಮ ವೈಯಕ್ತಿಕ ಜೀವನದ ಸಂತೋಷ ಹಾಗೂ ದುಃಖವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ಇವರು ಸನ್ನಿವೇಶವನ್ನು ನಿಭಾಯಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ.

ವೃಶ್ಚಿಕ

ವೃಶ್ಚಿಕ

ಇನ್ನು ಈ ರಾಶಿಯವರಲ್ಲಿ ತ್ವರಿತವಾದ ಮತ್ತು ಚುರುಕಾದ ಬುದ್ಧಿ ಶಕ್ತಿಯಿರುತ್ತದೆ. ಹಾಸ್ಯದ ಸ್ವಭಾವವನ್ನೂ ಹೊಂದಿರುವ ಇವರು ಭಾವನಾತ್ಮಕವಾಗಿಯೂ ಇರುತ್ತಾರೆ. ತಮ್ಮ ಭಾವನೆಗಳನ್ನು ಬಳಸಿಕೊಂಡು ಯಾವುದೇ ಲಾಭವನ್ನು ಪಡೆಯುವುದಿಲ್ಲ. ಭಾವೋದ್ರಿಕ್ತ, ಸಂಘಟಿತ ಮತ್ತು ಸ್ವತಂತ್ರ ಪ್ರಿಯರು ಎನ್ನಬಹುದು.

English summary

zodiac-signs-that-never-reveal-their-emotions

There are times that you cannot understand on what is going on an individual's mind. This may be because of the zodiac signs!Well, our astrology experts reveal about the zodiac signs that are known to hide their emotions. These zodiac signs create curiosity as what they are thinking, but eventually surprise others by sharing their thoughts! We have listed the 4 zodiac signs which top the list of not expressing their emotions. Check them out…