Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಶಿ ಭವಿಷ್ಯ: ಈ ರಾಶಿಚಕ್ರದ ಗಂಡ ಸಿಕ್ಕರೆ, ಅವರೇ ಅದೃಷ್ಟವಂತರು!
ಹೆಣ್ಣಿನ ಭಾವನೆಯ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ, ಆಕೆಯ ಬೇಕು ಬೇಡಗಳನ್ನು ಅರಿತು ಸುಂದರ ಜೀವನ ನಡೆಸಲು ಆಸರೆಯಾಗುವವನು ಪತಿ. ವಿವಾಹದ ನಂತರ ಹೆಣ್ಣಿನ ಜೀವನದಲ್ಲಿ ಪತಿಯೇ ಸರ್ವಸ್ವ ವಾಗಿರುತ್ತಾನೆ. ಗಂಡನ ಆಸೆಗಳನ್ನು ಪೂರೈಸುತ್ತಾ, ಜೀವನದಲ್ಲಿ ಸಾಕ್ಷಾತ್ಕಾರ ಕಾಣುವಳು ಹೆಣ್ಣು. ಹಾಗಾಗಿಯೇ ಹಿಂದೂ ಧರ್ಮದಲ್ಲಿ ವಿವಾಹ ಮತ್ತು ಪತಿ-ಪತ್ನಿಯ ಸಂಬಂಧಕ್ಕೆ ಪವಿತ್ರ ಸ್ಥಾನವನ್ನು ನೀಡಿದ್ದಾರೆ. ಎಲ್ಲೋ ಹುಟ್ಟಿ, ಇನ್ನೇಲ್ಲೋ ಬೆಳೆದು, ಜೀವನದಲ್ಲಿ ತನ್ನವರು ಎಂದು ಅಂದುಕೊಂಡು ಎರಡು ಜೀವ ಬೆರೆತು ಬಾಳುವುದು ಒಂದು ವಿಸ್ಮಯ. ಈ ಸಂಬಂಧವನ್ನು ಮುಂದುವರಿಸುವಾಗ ಅದಕ್ಕಾಗಿಯೇ ಕುಂಡಲಿ ಹಾಗೂ ರಾಶಿಚಕ್ರದ ಫಲಾನುಫಲವನ್ನು ಮೊದಲು ನೋಡುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಗುಣಗಳು ರಾಶಿಚಕ್ರವನ್ನು ಅನುಸರಿಸಿರುತ್ತದೆ. ಹಾಗಾಗಿ ಬದುಕಿನ ಪ್ರತಿಯೊಂದು ನಿರ್ಣಯವನ್ನು ಎಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ನೋಡಬೇಕಾಗುತ್ತದೆ. ಪತಿ ಎನ್ನುವ ವ್ಯಕ್ತಿ ವಿವಾಹ ಬಂಧನದ ನಂತರ ತನ್ನ ಹುಡುಗಾಟಗಳನ್ನು ಬಿಟ್ಟು ಜವಾಬ್ದಾರಿ ಎನ್ನುವ ಹೊರೆಯನ್ನು ಸೂಕ್ತವಾಗಿ ನಿರ್ವಹಿಸಬೇಕಾಗುತ್ತದೆ. ಆದರೆ ಕೆಲವು ರಾಶಿಚಕ್ರದ ಪುರುಷರು ಪತಿಯ ಸ್ಥಾನಕ್ಕೆ ಸಂಪೂರ್ಣವಾಗಿ ಬದ್ಧರಾಗಿರುವುದಿಲ್ಲ. ಹಾಗಾಗಿ ಯಾವೆಲ್ಲಾ ರಾಶಿಚಕ್ರದವರು ಅತ್ಯುತ್ತಮ ಪತಿಯಾಗಿ ಸಂಬಂಧವನ್ನು ನಿರ್ವಹಿಸುತ್ತಾರೆ ಎನ್ನುವುದನ್ನು ಬೋಲ್ಡ್ ಸ್ಕೈ ಇಂದು ನಿಮಗೆ ಪರಿಚಯಿಸಿಕೊಡಲಿದೆ...

ವೃಷಭ: 21 ಏಪ್ರಿಲ್ -21 ಮೇ
ಈ ರಾಶಿಯ ಪುರುಷರು ಬಹಳ ಗಟ್ಟಿಮುಟ್ಟಾದವರು. ನಂಬಿಗಸ್ತ ವ್ಯಕ್ತಿ ಯಾಗಿರುತ್ತಾರೆ. ಇವರು ಮೋಸ ಮಾಡಲು ಇಷ್ಟಪಡುವುದಿಲ್ಲ. ಸ್ಥಿರ ಸಂಬಂಧವನ್ನು ಹೊಂದಲು ಅವರು ಇಷ್ಟಬಡುತ್ತಾರೆ. ಈ ವ್ಯಕ್ತಿಯೊಂದಿಗೆ ನೀವು ಸಂಬಂಧದಲ್ಲಿದ್ದರೆ ಅವರ ಪ್ರೀತಿ ಮತ್ತು ಗೌರವದ ವಿಚಾರದಲ್ಲಿ ನೀವು ಅದೃಷ್ಟವಂತರು. ಬಹಳ ಆತ್ಮೀಯ ಹಾಗೂ ಸುಲಭವಾಗಿ ಮಾತನಾಡುವ ಇವರು ಬಹಳ ನಿಷ್ಠಾವಂತ ಪತಿಯಾಗುವರು.

ಧನು: 23 ನವೆಂಬರ್ -22 ಡಿಸೆಂಬರ್
ಇವರು ಅತ್ಯಂತ ಪ್ರಣಯ ಭಾವವನ್ನು ಹೊಂದಿರುವವರು. ತಮ್ಮ ಸಂಗಾತಿಯನ್ನು ಖುಷಿ ಪಡಿಸಲು ತಮ್ಮದೇ ಆದ ವಿಶೇಷ ಮಾರ್ಗದಲ್ಲಿ ಹೋಗುತ್ತಾರೆ. ಇವರು ತಮ್ಮ ಸಂಗಾತಿಯ ವಿಚಾರದಲ್ಲಿ ಮತ್ತು ಪ್ರೀತಿಯ ವಿಷಯದ ಬಗ್ಗೆ ಅತ್ಯಂತ ನಿಷ್ಠಾವಂತರಾಗಿರುತ್ತಾರೆ. ಇವರಲ್ಲಿ ಸ್ವಲ್ಪ ಅಸೂಯೆಯ ಗುಣಗಳಿದ್ದರೂ ಸಂಬಂಧವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ.

ಮೀನ: 20 ಫೆಬ್ರವರಿ -20 ಮಾರ್ಚ್
ಈ ರಾಶಿಯ ಪುರುಷರು ಆಹ್ಲಾದಕರವಾದ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರೀತಿ ಪಾತ್ರರೊಂದಿಗೆ ಅಥವಾ ಸಂಗಾತಿಯೊಂದಿಗೆ ಬಹಳ ಗಂಭೀರವಾಗಿ ಇರುತ್ತಾರೆ. ಇವರು ತಮ್ಮ ಸಂಗಾತಿಯ ಎಲ್ಲಾ ಭಾವನೆಗಳನ್ನು ಅರಿತು ಕೊಳ್ಳುತ್ತಾರೆ. ಆರ್ಥಿಕ ಅಗತ್ಯತೆಗಳನ್ನು ಪೂರೈಸುತ್ತಾರೆ. ಈ ವ್ಯಕ್ತಿಗಳು ಉತ್ತಮ ಗಂಡನಾಗಿ ಜವಾಬ್ದಾರಿಯನ್ನು ನಿರ್ವಹಿಸುವರು.

ಮಕರ: ಡಿಸೆಂಬರ್ 23-ಜನವರಿ 20
ಈ ರಾಶಿಯ ಪುರುಷರು ಸರಿಯಾದ ಕಾಳಜಿ ವಹಿಸುತ್ತಾರೆ. ಸಂಭವನೀಯ ರೀತಿಯಲ್ಲಿ ಸಂಗಾತಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಇವರು ಹಣಕಾಸು ಮತ್ತು ಖರ್ಚಿನ ಬಗ್ಗೆ ಹೆಚ್ಚು ವಾದ ಮಾಡುತ್ತಾರೆ. ನಿಷ್ಠೆಯ ವಿಚಾರದಲ್ಲಿ ಇವರು ಅತ್ಯುತ್ತಮ ಪತಿಯಾಗಿ ಇರುತ್ತಾರೆ.

ಸಿಂಹ: ಜುಲೈ 23-ಆಗಸ್ಟ್ 23
ಈ ವ್ಯಕ್ತಿಗಳು ವಿನೋದದ ಗುಣವನ್ನು ಹೊಂದಿರುವ ಪರಿಪೂರ್ಣ ವ್ಯಕ್ತಿಗಳಾಗಿರುತ್ತಾರೆ. ಸಂಬಂಧಗಳ ವಿಚಾರದಲ್ಲಿ ಅತ್ಯಂತ ನಿಷ್ಠಾವಂತರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಇವರಲ್ಲಿ ಸ್ವಲ್ಪ ಉಗ್ರವಾದ ಸ್ವಭಾವಗಳಿದ್ದರೂ ಪತಿಯಾಗಿ ಅತ್ಯುತ್ತಮ ರಕ್ಷಕನಾಗಿ ಇರಬಲ್ಲರು.

ಕರ್ಕ: ಜೂನ್ 21-ಜುಲೈ 22
ಇವರು ಅತ್ಯುತ್ತಮ ಸಂಗಾತಿಯಾಗಬಲ್ಲರು. ಮನೆ ಕೆಲಸ ಸೇರಿದಂತೆ ಅನೇಕ ವಿಚಾರದಲ್ಲೂ ಪತ್ನಿಗೆ ಸಹಾಯ ಮಾಡುತ್ತಾರೆ. ಸಂಗಾತಿಯ ಜೊತೆಗೆ ಒಂದಿಷ್ಟು ಸಮಯವನ್ನು ಕಳೆಯುತ್ತಾರೆ. ಇವರು ತನ್ನ ಸಂಗಾತಿಗೆ ಅತ್ಯುತ್ತಮ ಪ್ರೀತಿಪಾತ್ರರಾಗಿರಲು ಬಯಸುತ್ತಾರೆ. ಜೊತೆಗೆ ಸಂಗಾತಿಗೆ ಉತ್ತಮ ಪ್ರೀತಿ ಹಾಗೂ ಗೌರವನ್ನು ನೀಡಲು ಬಯಸುವರು.

ಮಿಥುನ: ಮೇ 21 ಜೂನ್ 20
ಈ ರಾಶಿಯ ಪುರುಷರು ಪ್ರಕೃತಿಯ ಅದ್ಭುತಗಳಾಗಿರುತ್ತಾರೆ. ಇವರು ತಮ್ಮ ಸಂಗಾತಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸೂಕ್ಷ್ಮ ಸ್ವಭಾವದವರಾದ ಇವರು ಸಂಗಾತಿಯ ಕೆಲವು ವಿಚಾಋಗಳನ್ನು ಅತ್ಯುತ್ತಮ ರೀತಿಯಲ್ಲಿ ಪರಿಗಣಿಸುತ್ತಾರೆ. ತಾವು ಏನನ್ನು ಪಡೆದುಕೊಂಡಿರುತ್ತಾರೋ ಅದನ್ನು ಅದೇ ರೀತಿಯಲ್ಲಿ ಹಿಂತಿರುಗಿಸಲು ಇಷ್ಟ ಪಡುತ್ತಾರೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಈ ರಾಶಿಯವರ ಉತ್ತಮ ನೋಟ ಹಾಗೂ ಪ್ರಲೋಭನೆಯ ಭರವಸೆಗಳು ತಮ್ಮ ಸಂಗಾತಿಯನ್ನು ಆಕರ್ಷಿಸುವಂತೆ ಮಾಡುತ್ತದೆ. ಇವರು ಅತ್ಯಂತ ಪ್ರಣಯ ಪೂರ್ವಕರಾಗಿರಬಹುದು. ನಿಮ್ಮ ನಂಬಿಗಸ್ತ ಪಾಲುದಾರರಾಗಿ ಸಂಪೂರ್ಣ ಸುರಕ್ಷತೆಯನ್ನು ನೀಡುವರು.

ಮೇಷ: 28 ಮಾರ್ಚ್ -20 ಏಪ್ರಿಲ್
ಈ ರಾಶಿಚಕ್ರದ ಪುರುಷರು ಹೆಚ್ಚು ಸುರಕ್ಷಿತರು ಮತ್ತು ಆರ್ಥಿಕವಾಗಿ ಸಭಲರಾಗಿರುತ್ತಾರೆ. ಇವರು ನಿಮಗೆ ನಂಬಿಗಸ್ತರಾಗಿ ಇರುತ್ತಾರೆ ಎಂದು ಊಹಿಸಿಕೊಳ್ಳಬಹುದು. ಈ ಚಿಹ್ನೆಯ ಪುರುಷರು ಕಠಿಣ ಪ್ರಯತ್ನಗಳನನು ಮಾಡುತ್ತಾರೆಯಾದರೂ ಕೆಲವು ಜಿಗುಟಾದ ಸಂದರ್ಭದಲ್ಲಿ ಅಲ್ಲಿಂದ ಪಾರಾಗುತ್ತಾರೆ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23
ಇವರು ತಮ್ಮ ಕನಸನ್ನು ಪೂರೈಸುವ ಉದ್ದೇಶಗಳನ್ನು ಹೊಂದಿರುತ್ತಾರೆ. ಅಲ್ಲದೆ ತಮ್ಮ ಸಂಗಾತಿಯು ಅತ್ಯುತ್ತಮವಾದವರು ಎಂದು ನಂಬುತ್ತಾರೆ. ಹಾಗಾಗಿ ಒತ್ತಡದ ಸಂದರ್ಭಗಳಲ್ಲಿ ಅಥವಾ ಕೆಲವು ತೀರ್ಮಾನಗಳನ್ನು ಕೈಗೊಳ್ಳುವ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಇರುತ್ತವೆ ಎನ್ನಬಹುದು.

ಕುಂಭ: ಜನವರಿ 20-ಫೆಬ್ರವರಿ 18
ಈ ರಾಶಿಯ ಪುರುಷರು ಕನಸುಗಾರರಾಗಿರುತ್ತಾರೆ. ಇವರ ವಿಚಾರಗಳು ವಾಸ್ತವಿಕಕ್ಕೆ ದೂರವಾಗಿದ್ದಾಗಿರುತ್ತದೆ. ಇವರು ತಮ್ಮ ವಿವಾಹದ ಜೀವನದ ಬಗ್ಗೆ ಯಾವ ಕಲ್ಪನೆ ಹೊಂದಿದ್ದಾರೆ ಎನ್ನುವುದು ಮುಖ್ಯವಾಗಿರುತ್ತದೆ. ಇವರು ವೈವಾಹಿಕ ಜೀವನದ ಬಗ್ಗೆ ಎಲ್ಲೂ ಮುಕ್ತವಾದ ಚರ್ಚೆಯನ್ನು ಕೈಗೊಳ್ಳುವುದಿಲ್ಲ. ಸಮಸ್ಯೆಗಳನ್ನು ಚರ್ಚಿಸಲು ಇಚ್ಛಿಸದ ಕಾರಣ ಅವರೊಂದಿಗೆ ಸಂಭಾಷಣೆ ನಡೆಸುವುದು ಕಷ್ಟವಾಗುವುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ಇವರು ಅತ್ಯಂತ ಮುಕ್ತ ಹಾಗೂ ಬಹಳ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಇವರ ಸ್ನೇಹ ಭಾವದ ಸ್ವಭಾವವು ಅವರನ್ನು ಉತ್ತಮ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇವರು ತಮ್ಮ ಸಂಗಾತಿಗೆ ಅತ್ಯುತ್ತಮ ಒಲವು ತೋರುತ್ತಾರೆ. ಇವರು ತೋರುವ ಪ್ರೀತಿ ಹಾಗೂ ಕಾಳಜಿಯು ಇತರರಿಗೆ ತಪ್ಪಾದ ಅರ್ಥ ನೀಡುವ ಸಾಧ್ಯತೆಗಳೂ ಇವೆ.



Click it and Unblock the Notifications











