ಈ ಐದು ರಾಶಿಯವರು ಒಳ್ಳೆಯ ವೀಕ್ಷಕರು ಹಾಗೂ ಆಲಿಸುವವರು

Posted By: Hemanth
Subscribe to Boldsky

ನೀವು ಕೆಲವರನ್ನು ಗಮನಿಸಿರಬಹುದು. ಏನೇ ಸಣ್ಣ ವಿಚಾರವಾದರೂ ಅವರು ಅದನ್ನು ತದೇಕಚಿತ್ತದಿಂದ ಗಮನಿಸುತ್ತಾರೆ ಮತ್ತು ಜನರನ್ನು ಬೇಗನೆ ಅರಿತುಕೊಳ್ಳುವರು. ಇಂತಹ ಗುಣ ಪ್ರತಿಯೊಬ್ಬರಿಗೂ ಬರುವುದಿಲ್ಲ. ಯಾಕೆಂದರೆ ಇದು ಕಠಿಣ ಕೂಡ. ಆದರೆ ಕೆಲವರು ತಮ್ಮ ರಾಶಿಚಕ್ರದಿಂದಾಗಿಯೇ ಒಳ್ಳೆಯ ವೀಕ್ಷಕರು ಹಾಗೂ ಆಲಿಸುವವರಾಗಿರುವರು. ಇವರಿಂದ ಆ ಗುಣಗಳು ಅವರ ರಾಶಿಚಕ್ರದಿಂದಲೇ ಬಂದಿರುವುದು. ಇಂತಹ ಗುಣಗಳು ಹೊಂದಿರುವ ರಾಶಿಚಕ್ರಗಳು ಯಾವುದು ಎಂದು ಈ ಲೇಖನದ ಮೂಲಕ ನೀವು ತಿಳಿದುಕೊಳ್ಳಿ.... 

ಕನ್ಯಾ(ಆಗಸ್ಟ್ 24-ಸಪ್ಟೆಂಬರ್ 23)

ಕನ್ಯಾ(ಆಗಸ್ಟ್ 24-ಸಪ್ಟೆಂಬರ್ 23)

ರಾಶಿಚಕ್ರಗಳಲ್ಲಿ ಕನ್ಯಾ ರಾಶಿಯವರು ತುಂಬಾ ಒಳ್ಳೆಯ ವೀಕ್ಷಕರು. ಇವರು ಒಳ್ಳೆಯ ಆಲಿಸುವವರು ಮತ್ತು ಸ್ನೇಹಿತರಾಗಿರುವರು. ಅವರು ನೈಸರ್ಗಿಕವಾಗಿ ನಿಮ್ಮ ಬಗ್ಗೆ ಪ್ರತಿಯೊಂದನ್ನು ತಿಳಿದಿರುವರು. ಆದರೆ ಇದೇ ಕಲ್ಪನೆ ಮೇಲೆ ನೀವು ಮೂರ್ಖರಾಗಬೇಡಿ. ಬೇರೆಯವರಿಗೆ ತಿಳಿಯದೆ ಇರುವಂತಹ ಹಲವಾರು ತಂತ್ರಗಳು ಇವರಿಗೆ ತಿಳಿದಿದೆ. ತಮ್ಮ ಸುತ್ತಲಿನ ವಿಷಯಗಳ ಬಗ್ಗೆ ಕೆಲವೊಂದು ಸುಳಿವುಗಳಿಗಾಗಿ ಹುಡುಕುತ್ತಾ ಇರುವರು. ಇವರು ತುಂಬಾ ಸಣ್ಣದಿಂದ ಸಣ್ಣ ವಿಷಯಗಳನ್ನು ತುಂಬಾ ಏಕಾಗ್ರತೆಯಿಂದ ವೀಕ್ಷಿಸುವರು. ಇದರಿಂದ ಇವರು ಇತರರನ್ನು ಪುಸ್ತಕದಂತೆ ಓದುವರು.

ವೃಶ್ಚಿಕ (ಅ.24-ನವಂಬರ್ 22)

ವೃಶ್ಚಿಕ (ಅ.24-ನವಂಬರ್ 22)

ಇವರು ಇತರರಿಂದ ವೀಕ್ಷಣೆಗೆ ಒಳಪಡುವುದಕ್ಕಿಂತ ತಾವೇ ವೀಕ್ಷಿಸುವರು. ವ್ಯಕ್ತಿಯೊಬ್ಬರ ಬಗ್ಗೆ ತಿಳಿದುಕೊಳ್ಳುವುದರಲ್ಲಿ ತಮ್ಮ ಕೈ ಮೇಲಾಗಬೇಕೆಂದು ಅವರು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವರು. ಇವರು ಯಾವತ್ತೂ ತಮ್ಮ ಬಗ್ಗೆ ನಿಮಗೆ ಹೇಳುವುದಿಲ್ಲ. ಈ ರಾಶಿಯವರು ನಿಮ್ಮ ಮೇಲೆ ಕಳ್ಳ ಕಣ್ಣಿಟ್ಟಿರುತ್ತಾರೆ. ಇದರಿಂದ ನಿಮ್ಮ ಮುಂದಿನ ಹೆಜ್ಜೆ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಸಾಧ್ಯವಾಗುವುದು ಮತ್ತು ನಿಮ್ಮನ್ನು ಅವರು ಪುಸ್ತಕದಂತೆ ಓದುವರು.

ಮಕರ (ಡಿ.23-ಜ.20)

ಮಕರ (ಡಿ.23-ಜ.20)

ಇತರ ರಾಶಿಚಕ್ರಗಳಿಗಿಂತ ಈ ರಾಶಿಯವರು ತುಂಬಾ ಬಿಗುಮಾನದವರು. ಇದರಿಂದಾಗಿ ಇವರಿಗೆ ಬೇರೆ ಜನರನ್ನು ವೀಕ್ಷಿಸಲು ಸುಲಭವಾಗುವುದು. ಇವರು ತುಂಬಾ ಮೌನ, ಅಂತಮುರ್ಖಿಯಿಂದಾಗಿ ಇವರು ಸುಮ್ಮನೆ ಕುಳಿತುಕೊಂಡು ತಮ್ಮ ಸುತ್ತಲು ಆಗುವಂತಹ ಘಟನೆಗಳನ್ನು ಚೆನ್ನಾಗಿ ವೀಕ್ಷಿಸುವರು. ಇವರಿಗೆ ನಿಮ್ಮ ದೇಹಭಾಷೆಯನ್ನು ಅರಿತುಕೊಳ್ಳಲು ಹೆಚ್ಚಿನ ಸಮಯವಿರುವುದು.

ಕುಂಭ (ಜ.21-ಫೆ.18)

ಕುಂಭ (ಜ.21-ಫೆ.18)

ಈ ರಾಶಿಯು ತುಂಬಾ ಕುತೂಹಲದ್ದಾಗಿರುವುದು. ಇವರು ಯಾವಾಗಲೂ ಹೊಸ ಜನರು ಹಾಗೂ ಹೊಸ ಅನುಭವ ಪಡೆದುಕೊಳ್ಳಲು ಬಯಸುವರು. ಇವರು ಜನರೊಂದಿಗೆ ಬೆರೆತುಕೊಂಡು ಅವರ ಬಗ್ಗೆ ತಿಳಿಯುವರು. ಒಳ್ಳೆಯ ವೀಕ್ಷಕರಾಗಿರುವ ಇವರು ಬೇರೆಯವರ ದೇಹಭಾಷೆಯಿಂದ ಅವರ ಮನಸ್ಸನ್ನು ಅರಿತುಕೊಳ್ಳುವರು. ಬೇರೆಯವರು ನಿಮ್ಮನ್ನು ನೋಡುವುದಕ್ಕಿಂತ ಹೆಚ್ಚಾಗಿ ಇವರು ನಿಮ್ಮನ್ನು ವೀಕ್ಷಿಸುವರು.

ಮೀನ (ಫೆ.19-ಮಾ.20)

ಮೀನ (ಫೆ.19-ಮಾ.20)

ಇವರು ಬೇರೆಯವರ ಬಗ್ಗೆ ಅನುಭೂತಿ ತೋರಿಸುವರು ಮತ್ತು ಅವರ ಭಾವನೆಯನ್ನು ಬೇಗನೆ ನಿರೀಕ್ಷಿಸುವರು. ಇವರು ಬೇರೆಯವರಿಗೆ ತುಂಬಾ ಸೂಕ್ಷ್ಮವಾಗಿರುವರು. ಆದರೆ ತಮ್ಮ ಭಾವನೆಗಳ ಬಗ್ಗೆ ಕಠಿಣವಾಗಿರುವರು. ಮೀನ ರಾಶಿಯವರು ನಿಮ್ಮನ್ನು ಒಂದು ಪುಸ್ತಕದಂತೆ ಓದುತ್ತಾರೆ ಮತ್ತು ಅವರೊಂದಿಗೆ ಒಳ್ಳೆಯ ಸ್ನೇಹಿತರಾದಾಗ ನಿಮ್ಮ ಮನಸ್ಸನ್ನು ಅರಿತು ಕೊಳ್ಳುವರು. ರಾಶಿಚಕ್ರಗಳ ಬಗ್ಗೆ ಇನ್ನಷ್ಟು ಕುತೂಹಲಕಾರಿ ಅಂಶಗಳು ತಿಳಿಯಬೇಕಾಗಿದೆಯಾ? ಹಾಗಿದ್ದರೆ ಈ ಸೆಕ್ಷನ್ ಅನ್ನು ಯಾವಾಗಲೂ ಓದುತ್ತಲಿರಿ.

English summary

Zodiac Signs That Are Ranked To Be The Best Observers

Being observant can be really tough for most of us. But if you are a keen observer, then you are a blessed individual, as there are a few individuals who are considered to be the best observers! According to astrology, there are certain zodiac signs, the individuals of which pay total attention to the slightest of things. Check on the details of these zodiac signs which are ranked according to their observation and grasping skills. Do note, these individuals will never miss out on anything! Check them out.
Story first published: Saturday, March 10, 2018, 7:01 [IST]