Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 6 ರಾಶಿಚಕ್ರದವರು ಅಧಿಕಾರ ಚಲಾಯಿಸುವ ಸ್ವಭಾವ ಹೊಂದಿರುತ್ತಾರೆ!
ಕೆಲವರು ಹುಟ್ಟಿನಿಂದಲೇ ಅತ್ಯುತ್ತಮ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಸಮಸ್ಯೆಗಳನ್ನು ಸುಲಭವಾಗಿ ಎದುರಿಸುವುದು, ನಿರ್ಣಯವನ್ನು ತೆಗೆದುಕೊಳ್ಳುವುದು ಹಾಗೂ ಪ್ರಭಾವಿತ ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅಂತಹ ನಾಯಕತ್ವ ಗುಣಗಳು ವ್ಯಕ್ತಿ ಹುಟ್ಟಿ ಬೆಳೆದ ವಾತಾವರಣದಿಂದಷ್ಟೇ ಅಲ್ಲ ಅವನ ರಾಶಿ ಚಕ್ರದ ಪ್ರಭಾವದಿಂದಲೂ ನಾಯಕತ್ವದ ಗುಣಗಳು ಸ್ವಭಾವದಲ್ಲಿ ತೋರ್ಪಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ನಾಯಕತ್ವ ಗುಣವೆಂದರೆ ಒಂದು ಸಮೂಹವನ್ನು ನಿಯಂತ್ರಣದಲ್ಲಿ ಇಡುವುದು ಹಾಗೂ ಸೂಕ್ತ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿರಬೇಕು. ಸನ್ನಿವೇಶಕ್ಕೆ ತಕ್ಕಂತೆ ಯೋಗ್ಯವಾದ ನಿರ್ಣಯ ಕೈಗೊಳ್ಳುವುದರ ಮೂಲಕ ಉತ್ತಮ ನಡವಳಿಕೆಯನ್ನೂ ಸಹ ನಿರ್ಧರಿಸಬೇಕಾಗುತ್ತದೆ. ಆದರೆ ಕೆಲವರು ದಬ್ಬಾಳಿಕೆ ಹಾಗೂ ದೌರ್ಜನ್ಯದ ಮೂಲಕವೂ ಅಧಿಕಾರವನ್ನು ಚಲಾಯಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಚಕ್ರದವರು ಹುಟ್ಟಿನಿಂದಲೇ ನಾಯಕತ್ವ ಗುಣಗಳನ್ನು ಹೊಂದಿರುತ್ತವೆ ಎಂದು ಹೇಳುತ್ತದೆ. ನಿಮಗೂ ನಿಮ್ಮ ರಾಶಿಚಕ್ರ ಅಥವಾ ನಿಮ್ಮವರ ರಾಶಿಚಕ್ರ ನಾಯಕತ್ವ ಸ್ವಭಾವದಿಂದ ಕೂಡಿದೆಯೇ ಎನ್ನುವುದನ್ನು ಅರಿಯಲು ಬೋಲ್ಡ್ ಸ್ಕೈ ನೀಡಿರುವ ಸೂಕ್ತ ವಿವರಣೆಯನ್ನು ಅರಿಯಿರಿ....

ಮೇಷ (Mar 29 - Apr 19)
ಈ ರಾಶಿಯವರು ವೈಯಕ್ತಿಕವಾಗಿ ಅಧಿಕಾರ ಚಲಾಯಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಸದಾ ಎಲ್ಲರಿಗಿಂತಲೂ ಮೇಲಿರಲು ಅಥವಾ ಅಧಿಕಾರ ಚಲಾಯಿಸಲು ಬಯಸುತ್ತಾರೆ. ಜೊತೆಗೆ ತಾವು ಹೇಳಿದಂತೆಯೇ ಜನರು ನಡೆದುಕೊಳ್ಳುತ್ತಿದ್ದಾರೆಯೇ ಎನ್ನುವುದನ್ನು ಗಮನಿಸುತ್ತಿರುತ್ತಾರೆ. ಇವರು ಅತ್ಯುತ್ತಮ ನಾಯಕತ್ವ ಅಥವಾ ಮೇಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನಲಾಗುವುದು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ಈ ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ಅಧಿಕಾರ ಅಥವಾ ಆಡಳಿತವನ್ನು ನಿರ್ವಹಿಸುತ್ತಾರೆ. ಇವರ ಈ ಸ್ವಭಾವವು ಕೆಲಸಕ್ಕೆ ಸಂಬಂಧಿಸಿದ್ದಾಗಿರುವುದಿಲ್ಲ. ಬದಲಿಗೆ ಸೌಂದರ್ಯ ಹಾಗೂ ಪರಿಪೂರ್ಣತೆಯ ಬಗ್ಗೆ ಆಗಿರುತ್ತದೆ. ವಿವಾಹ ಅಥವಾ ಕಲಾ ಪ್ರದರ್ಶನಕ್ಕಾಗಿ ತಯಾರಾಗುತ್ತಿರುವ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡಲು ಇವರು ಉತ್ಸುಕರಾಗಿರುತ್ತಾರೆ. ಇಂತಹ ವಿಚಾರದಲ್ಲಿ ಇವರು ಪರಿಪೂರ್ಣತೆಯನ್ನು ಬಯಸುತ್ತಾರೆ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23
ಈ ರಾಶಿಚಕ್ರದವರು ಅರ್ಥವಿಲ್ಲದ ವಿಚಾರಗಳಿಗೆ ಅರ್ಥವಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ನಂತರ ಅಂದರೆ ಕೊನೆಯಲ್ಲಿ ಕಠಿಣವಾದ ರೀತಿಯಲ್ಲಿ ನಿರ್ಣಾಯಕ ಹಂತವನ್ನು ತಲುಪುತ್ತದೆ. ಇವರ ಈ ವರ್ತನೆಗಳು ಇವರನ್ನು ದೊಡ್ಡ ನಾಯಕತ್ವ ಸ್ವಭಾವ ಹೊಂದಿದವರಂತೆ ತೋರಿಸುತ್ತದೆ. ಮೇಷ ರಾಶಿಯವರು ಕೆಲಸ ಮಾಡುವಂತೆ ಹಾಗೂ ಅಧಿಕಾರ ತೋರಿಸುವಂತೆ ಕನ್ಯಾರಾಶಿಯವರು ಸಹ ಕೆಲಸ ನಿರ್ವಹಿಸುತ್ತಾರೆ ಎಂದು ಹೇಳಲಾಗುವುದು.

ಮೀನ: 20 ಫೆಬ್ರವರಿ -20 ಮಾರ್ಚ್
ಈ ವ್ಯಕ್ತಿಗಳು ಅಧಿಕಾರವನ್ನು ನಿರ್ವಹಿಸಲು ಮತ್ತು ನಾಯಕತ್ವವನ್ನು ನಿರ್ವಹಿಸುವ ಗುಣವನ್ನು ಹೊಂದಿರುತ್ತಾರೆ. ಇವರ ನಿರ್ಧಾರ ಹಾಗೂ ಆಡಳಿತ ಗುಣಗಳು ಅರ್ಥಗರ್ಭಿತವಾಗಿರುತ್ತದೆ. ಇತರರು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಸೂಕ್ತ ರೀತಿಯಲ್ಲಿ ನಿರ್ಧರಿಸುತ್ತಾರೆ. ಇತರ ಮೇಲೆ ತಮ್ಮ ಪ್ರಭಾವ ಬೀರುವುದರ ಮೂಲಕ ಕೆಲಸವನ್ನು ಅವರು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಮಾಡುತ್ತಾರೆ. ಹಾಗಾಗಿ ಇವರೊಬ್ಬ ಅತ್ಯುತ್ತಮ ಅಧಿಕಾರ ಶಾಹಿ ವ್ಯಕ್ತಿಗಳು ಎಂದು ಹೇಳಲಾಗುವುದು.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಈ ರಾಶಿಚಕ್ರದವರ ಗೀಳಿನ ಸ್ವಭಾವ ಹಾಗೂ ಮೂರ್ಖತನದ ವ್ಯಕ್ತಿತ್ವವು ಇವರನ್ನು ಅಧಿಕಾರ ಚಲಾಯಿಸುವ ಗುಣವನ್ನು ಹೊರಹೊಮ್ಮುವಂತೆ ಮಾಡುತ್ತದೆ. ಇವರು ತಮ್ಮ ಎಣಿಕೆಯಂತೆ ಕೆಲಸ ನಿರ್ವಹಿಸುತ್ತಿಲ್ಲ ಅಥವಾ ತಮ್ಮ ಚಿಂತನೆಗೆ ಸರಿಯಾಗಿ ಕೆಲಸ ನಡೆಯುತ್ತಿಲ್ಲ ಎಂದು ಭಾವಿಸಿದರೆ ಬಹುಬೇಗ ಎಲ್ಲರನ್ನೂ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಮಾಡುತ್ತಾರೆ. ಯಾವುದೇಕಾರಣಕ್ಕೂ ತಮ್ಮ ಅಧಿಕಾರದ ಗುಣವನ್ನು ಮರೆಮಾಚುವುದಿಲ್ಲ ಎಂದು ಹೇಳಲಾಗುತ್ತದೆ.

ಸಿಂಹ: ಜುಲೈ 23-ಆಗಸ್ಟ್ 23
ಈ ರಾಶಿಚಕ್ರದವರು ಕೆಲಸವನ್ನು ಹೇಗೆ ಮಾಡಬಹುದು ಎನ್ನುವುದನ್ನು ಕಲ್ಪನೆಯ ಮೂಲಕವೇ ತಿಳಿದುಕೊಳ್ಳುತ್ತಾರೆ. ಹಾಗಾಗಿಯೇ ಇವರು ಅಧಿಕಾರ ನಿರ್ವಹಿಸುವವರ ಪಟ್ಟಿಯಲ್ಲಿ ಸೇರಿಕೊಳ್ಳುತ್ತಾರೆ ಎನ್ನಲಾಗುವುದು. ಈ ರಾಶಿಚಕ್ರದವರು ಗಂಭೀರ ಸ್ವಭಾವವನ್ನು ಹೊಂದಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ. ಕೆಲವು ವಿಚಾರದಲ್ಲಿ ಇವರು ಅತ್ಯಂತ ಅಧಿಕಾರ ಶಾಹಿಯ ವರ್ತನೆಯನ್ನು ತೋರುವರು.



Click it and Unblock the Notifications











