ರಾಶಿ ಭವಿಷ್ಯ: ಈ ಆರು ರಾಶಿಯವರು ಕೆಟ್ಟ ವ್ಯಸನಗಳಿಗೆ ಬಲಿಯಾಗುತ್ತಾರೆ!

Posted By: Deepu
Subscribe to Boldsky

ಮನುಷ್ಯನಿಗೆ ಒಂದಲ್ಲಾ ಒಂದು ರೀತಿಯ ಹವ್ಯಾಸ ಇದ್ದೇ ಇರುತ್ತದೆ. ಅದು ಒಳ್ಳೆಯದ್ದೂ ಆಗಿರಬಹುದು ಅಥವಾ ಕೆಟ್ಟದ್ದೇ ಆಗಿರಬಹುದು. ಒಳ್ಳೆಯದ್ದು ವ್ಯಕ್ತಿಯ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಜೊತೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಕಲ್ಪಿಸಿ ಕೊಡುತ್ತದೆ. ಅದೆ ಕೆಟ್ಟ ಚಟಗಳು ಮನುಷ್ಯನ ಹಾದಿಯನ್ನು ತಪ್ಪಿಸುತ್ತದೆ. ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಸಮಾಜದಲ್ಲಿ ಕೆಟ್ಟ ಹೆಸರನ್ನು ನೀಡುತ್ತದೆ. ಮನುಷ್ಯನು ಈ ಚಟಗಳು ಕೇವಲ ಅವನ ಅಭ್ಯಾಸ ಬಲದಿಂದ ರೂಢಿಗೆ ಬಂದಿರುವುದಾಗಿರುವುದಿಲ್ಲ. ಬದಲಿಗೆ ರಾಶಿಚಕ್ರಗಳ ಬದಲಾವಣೆಯಿಂದ ಕಾಣಿಸಿಕೊಳ್ಳುತ್ತದೆ ಎನ್ನಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿ ಚಕ್ರಗಳಲ್ಲಿ 6 ರಾಶಿಚಕ್ರದವರು ತೀವ್ರವಾದ ವ್ಯಸನಕಾರರಾಗಿರುತ್ತಾರೆ. ಈ ವ್ಯಸನಗಳೇ ಇವರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ವ್ಯಸನಗಳು ಯಾವವು? ಅದು ಅವರ ಜೀವನದಲ್ಲಿ ಹೇಗೆ ಆಡುತ್ತದೆ? ನೀವು ಆ ರಾಶಿಕ್ರದ ಪ್ರಭಾವಕ್ಕೆ ಒಳಗಾಗಿದ್ದೀರಾ? ಎನ್ನುವ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಹವಣಿಕೆಯಲ್ಲಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.....

ಮಿಥುನ

ಮಿಥುನ

ಈ ರಾಶಿಚಕ್ರದವರು ಬಹು ಬೇಗ ವ್ಯಸನಗಳಿಗೆ ಒಳಗಾಗುತ್ತಾರೆ. ಇವರ ವ್ಯಸನವು ಸ್ವಲ್ಪ ವಿಲಕ್ಷಣವಾಗಿದ್ದಾಗಿರಬಹುದು. ಯಾವುದೇ ಉದ್ದೇಶ ಅಥವಾ ಬಳಕೆ ಇಲ್ಲದಿರುವ ವಸ್ತುಗಳ ಸಂಗ್ರಹ ಮಾಡುತ್ತಾರೆ. ಈ ವ್ಯಸನವನ್ನು ಅವರು ಮುಂದುವರಿಸುವುದರಿಂದ ಒಳ್ಳೆಯ ಫಲಿತಾಂಶವನ್ನು ಕಾಣುವರು. ಅವರ ವ್ಯಸನವು ನಿರುಪದ್ರವ ಮತ್ತು ಅನುಪಯುಕ್ತವಾಗಿರುವುದರಿಂದ ಅವರ ಪಾಲುದಾರರಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ.

ವೃಶ್ಚಿಕ

ವೃಶ್ಚಿಕ

ಇವರು ತಮ್ಮ ವ್ಯಸನದ ಬಗ್ಗೆ ಅರ್ಥಮಾಡಿಕೊಳ್ಳುವುದಿಲ್ಲ. ಇವರು ತಮ್ಮ ವ್ಯಸನದಿಂದ ಒಂದಿಷ್ಟು ಹಾನಿಯನ್ನುಂಟು ಮಾಡಬಹುದು. ಇದರಿಂದ ಉಂಟಾಗುವ ಸಮಸ್ಯೆಯನ್ನು ಅವರು ಅರಿಯುವುದಿಲ್ಲ. ಇವರು ಒಳಗಾದ ಚಟದಿಂದ ಹೊರ ಬರಲು ತುಂಬಾ ಕಷ್ಟ ಎನ್ನಬಹುದು. ವ್ಯಸನವನ್ನು ತೊರೆಯುವುದು ಹಾಗೂ ಹೊಂದಿರುವ ವಿಚಾರದ ಬಗ್ಗೆ ತಮ್ಮದೇ ಆದ ಹೇಳಿಕೆಯನ್ನು ನೀಡುತ್ತಾರೆ.

ತುಲಾ

ತುಲಾ

ಈ ರಾಶಿಯ ವ್ಯಕ್ತಿಗಳು ವಿಭಿನ್ನ ವಿಷಯಗಳಲ್ಲಿ ವ್ಯಸನಿಗಳಾಗಿರುತ್ತಾರೆ. ಇವರ ವ್ಯಸನ ವಸ್ತು ಮತ್ತು ವಿಷಯಗಳನ್ನು ಆಧಾರಿತವಾಗಿರುತ್ತದೆ. ಇವರು ವಸ್ತುನಿಷ್ಠವಾಗಿ ಇರಲು ಒಲವು ತೋರುತ್ತಾರೆ. ಇವರು ಇಷ್ಟ ಪಡುವ ವಿಚಾರಗಳ ಕುರಿತು ಸಾಕಷ್ಟು ಗಂಭೀರವಾಗಿ ತಿಳಿದುಕೊಳ್ಳುತ್ತಾರೆ. ಇವರ ಗೀಳು ಇತರ ರಾಶಿಚಕ್ರ ಚಿಹ್ನೆಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳು ಭಾವನೆಗಳಿಗೆ ಮತ್ತು ಭಾವಗಳಿಗೆ ವ್ಯಸನಿಯಾಗುತ್ತಾರೆ. ಇವರು ಯಾವಾಗಲೂ ಭಾವನಾತ್ಮಕ ಬೆಂಬಲವನ್ನು ಹುಡುಕುತ್ತಿರುತ್ತಾರೆ. ಇವರು ಕೇವಲ ಭಾವನೆಗಳಿಗೆ ವ್ಯಸನಿಯಾಗಿರುತ್ತಾರೆ ಎನ್ನುವುದು ಬೆಸ ವಿಷಯವಾಗಿರುತ್ತದೆ. ಇತರರಲ್ಲಿ ಯಾವಾಗಲೂ ಕೆಲವು ಬಗೆಯ ಭಾವನೆಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ.

English summary

zodiac-sign-reveals-the-list-of-highly-addictive-personalities

Zodiac signs are known to be the most telling indicators of our personality, behaviour and characteristics. They reveal the untold facts about our own personality.According to astrology, there are 6 zodiac signs which are known to be highly addictive. These zodiac signs can tell you a lot about the addictive behaviour that people exhibit.