For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿ ಚಕ್ರವು ಶ್ರೇಷ್ಠ ಸ್ಥಾನ ಪಡೆದಿದೆ ಎಂಬುದನ್ನು ತಿಳಿಯಿರಿ

By Deepu
|

ಖಗೋಳ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಚಂದ್ರನಿಗೆ ಸಂಬಂಧಿಸಿದಂತೆ ವ್ಯಕ್ತಿಯ ಜನನದ ಸಮಯದ ಆಧಾರದ ಮೇಲೆ ರಾಶಿಚಕ್ರವನ್ನು ನಿರ್ಧರಿಸಲಾಗುತ್ತದೆ. ಈ ರಾಶಿಚಕ್ರಗಳು ನಮ್ಮ ವ್ಯಕ್ತಿತ್ವ ಹಾಗೂ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿಯೇ ಇಂದಿಗೂ ಜ್ಯೋತಿಷ್ಯ ಶಾಸ್ತ್ರ ಜನಮನ್ನಣೆ ಪಡೆದುಕೊಂಡಿದೆ ಎಂದು ಹೇಳಬಹುದು. ಜ್ಯೋತಿಷ್ಯ ಶಾಸ್ತ್ರದ ಆಧಾರದಿಂದಲೇ ತಮ್ಮ ಜೀವನದಲ್ಲಿ ನಡೆಯಬಹುದಾದ ಸಂಗತಿಗಳನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಅದಕ್ಕೆ ಸೂಕ್ತ ಪರಿಹಾರ ಮಾಡಿಕೊಳ್ಳುವ ಮೂಲಕ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಚಕ್ರಗಳಿಗೆ ಅನುಗುಣವಾಗಿ ವ್ಯಕ್ತಿಯು ಒಂದು ಸೂಕ್ತ ರಾಶಿಚಕ್ರದ ಪ್ರಭಾವಕ್ಕೆ ಒಳಗಾಗಿರುತ್ತಾನೆ. ಈ ರಾಶಿಚಕ್ರದ ಮೇಲೆ ಉಂಟಾಗುವ ಗ್ರಹಗತಿಗಳ ಪ್ರಭಾವದಿಂದಲೇ ಭವಿಷ್ಯ ನಿರ್ಣಯವಾಗುವುದು. ಈ 12 ರಾಶಿಚಕ್ರಗಳು ಕೆಲವು ಪ್ರಮುಖ ಚಿಹ್ನೆಗಳನ್ನು ಒಳಗೊಂಡಿರುತ್ತವೆ. ಕೆಲವು ಚಿಹ್ನೆಗಳು ಹಾಗೂ ಗ್ರಹಗತಿಗಳ ಪ್ರಭಾವವ ಅಧಿಕವಾಗಿರುವುದರಿಂದ ವ್ಯಕ್ತಿಯ ಸ್ವಭಾವ ಹಾಗೂ ಅದೃಷ್ಟಗಳು ನಿರ್ಧರಿತವಾಗಿರುತ್ತದೆ. ಇದರಂತೆಯೇ ಕೆಲವು ರಾಶಿಚಕ್ರಗಳು ಹೆಚ್ಚಿನ ಮನ್ನಣೆ ಪಡೆದುಕೊಳ್ಳುತ್ತವೆ. ಹಾಗಾದರೆ ಆ ಮನ್ನಣೆ ಪಡೆದುಕೊಳ್ಳುವ ರಾಶಿಗಳು ಯಾವವು? ಯಾವ ರಾಶಿಚಕ್ರ ಮನ್ನಣೆಯ ವಿಚಾರದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎನ್ನುವುದನ್ನು ಈ ಮುಂದಿನ ವಿವರಣೆಯಲ್ಲಿ ವಿವರಿಸಲಾಗಿದೆ....

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಮೇ 21 ರಿಂದ ನೂನ್ 20ರ ಒಳಗೆ ಜನಿಸಿದ ವ್ಯಕ್ತಿಗಳು ಮಿಥುನ ರಾಶಿಗೆ ಸೇರಿದವರಾಗಿರುತ್ತಾರೆ ಎನ್ನಲಾಗುವುದು. ಈ ರಾಶಿಯವರಲ್ಲಿ ಕ್ಷಮಿಸುವ ಗುಣ ಉತ್ತಮವಾಗಿರುತ್ತದೆ. ತಪ್ಪು ಮಾಡಿದ ವ್ಯಕ್ತಿಗೆ ಕ್ಷಮೆಯನ್ನು ದಯಪಾಲಿಸಿ, ಇನ್ನೊಮ್ಮೆ ಅವಕಾಶ ನೀಡುತ್ತಾರೆ. ಇವರ ದಯೆಯ ಸ್ವಭಾವ ಇತರರಿಗೆ ಅನುಕೂಲವನ್ನು ತಂದುಕೊಡುತ್ತದೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಜುಲೈ 23 ಮತ್ತು ಆಗಸ್ಟ್ 22ರ ನಡುವೆ ಜನಿಸಿದ ಜನರು ಸಿಂಹ ರಾಶಿಗೆ ಸೇರಿದವರಾಗಿರುತ್ತಾರೆ. ಚಿಕ್ಕ ಮಕ್ಕಳಂತಹ ಮುಗ್ಧ ಮನಸ್ಸನ್ನು ಹೊಂದಿರುವ ಇವರು ತಮ್ಮವರನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ. ಇವರು ಮಾಡುವ ಕೆಲಸದಲ್ಲಿ ಹೆಚ್ಚು ಪ್ರಾಮಾಣಿಕತೆ ಇರುತ್ತದೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಇವರು ಇತರರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಸಪ್ಟೆಂಬರ್ 23 ರಿಂದ ಅಕ್ಟೋಬರ್ 23ರ ಒಳಗೆ ಜನಿಸಿದವರು ತುಲಾರಾಶಿ ಚಕ್ರದ ಪ್ರಭಾವಕ್ಕೆ ಒಳಗಾಗಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಸ್ವಭಾವತಹ ಹೆಚ್ಚು ಶಾಂತ ಪ್ರವೃತ್ತಿಯವರಾಗಿರುತ್ತಾರೆ. ಇತರರಿಗೆ ಒಳ್ಳೆಯದಾದರೆ ಇವರು ಸಂತೋಷ ಪಡುತ್ತಾರೆ. ಇತರರಿಗೆ ತಮ್ಮ ಸಹಾಯದ ಅಗತ್ಯವಿದ್ದರೆ ಸಹಾಐ ಮಾಡಲು ಮುಂದಾಗುತ್ತಾರೆ. ಇವರು ಘರ್ಷಣೆಯನ್ನು ಇಷ್ಟ ಪಡದವರು ಎನ್ನಬಹುದು. ಹಾಗೊಮ್ಮೆ ಘರ್ಷಣೆ ನಡೆಯುತ್ತಿದ್ದರೆ ಅದನ್ನು ತಡೆಯಲು ಮುಂದಾಗುತ್ತಾರೆ. ಕೆಲವು ವಿಚಾರದ ಬಗ್ಗೆ ನಿರ್ಣಯ ನೀಡಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ನವೆಂಬರ್ 22 ರಿಂದ ಡಿಸೆಂಬರ್ 21ರ ಒಳಗೆ ಜನಿಸಿದ ವ್ಯಕ್ತಿಗಳು ಧನು ರಾಶಿಯವರಾಗಿರುತ್ತಾರೆ. ಇವರು ಬಹಳ ಸಕಾರಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಭವಿಷ್ಯ ಮತ್ತು ಭೂತ ಕಾಲದ ಚಿಂತನೆಗೆ ಒಳಗಾಗದೆ ಪ್ರಸ್ತುತ ದಿನಗಳ ಆಧಾರದ ಮೇಲೆ ಬದುಕಲು ಇಚ್ಛಿಸುತ್ತಾರೆ. ಇವರು ನಿರಾತಂಕದಿಂದ ಪ್ರೀತಿಯಿಂದ ಕೂಡಿರುವ ಜೀವನವನ್ನು ನಡೆಸುತ್ತಾರೆ. ಕಷ್ಟದ ಕಾಲದಲ್ಲೂ ಭರವಸೆಯ ಜೀವನವನ್ನು ನಡೆಸಬಲ್ಲರು.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಫೆಬ್ರವರಿ 19 ರಿಂದ ಮಾರ್ಚ್ 20ರ ಒಳಗೆ ಜನಿಸಿದ ವ್ಯಕ್ತಿಗಳು ಮೀನ ರಾಸಿಗೆ ಸೇರಿದವರಾಗಿರುತ್ತಾರೆ. ಇವರು ಇತರರಿಗೆ ಬಹಳ ಸಹಾನುಭೂತಿಯನ್ನು ತೋರುತ್ತಾರೆ. ಇತರರ ಸಹಾಯದ ವಿಚಾರವಾಗಿ ಎಷ್ಟು ಕಷ್ಟ ಎದುರಾದರೂ ಅದನ್ನು ಎದುರಿಸಲು ಮುಂದಾಗುತ್ತಾರೆ. ಇವರು ತಮ್ಮ ಕಲ್ಪನೆಯ ಪ್ರಕಾರವೇ ಪ್ರಕೃತಿಯಲ್ಲಿ ಬಹಳ ಕಾಲ್ಪನಿಕ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಜನವರಿ 20 ರಿಂದ ಫೆಬ್ರವರಿ 18ರ ಒಳಗೆ ಜನಿಸಿದ ವ್ಯಕ್ತಿಗಳು ಕುಂಭ ರಾಶಿಗೆ ಸೇರಿದವರಾಗಿರುತ್ತಾರೆ. ಇವರಿಗೆ ಸರಿ ತಪ್ಪುಗಳ ಸಂಪೂರ್ಣ ಅರಿವು ಇರುತ್ತದೆ. ನ್ಯಾಯದ ಪರವಾಗಿ ಇರುತ್ತಾರೆ. ಇವರ ವಿನೋಧ ಸ್ವಭಾವವನ್ನು ಇತರರು ಬಳಸಿಕೊಳ್ಳುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಇವರು ತಮ್ಮ ನಿರ್ಧಾರವನ್ನು ಬದಲಿಸಬಹುದು.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಜೂನ್ 21 ರಿಂದ ಜುಲೈ 22ರ ಒಳಗೆ ಜನಿಸಿದ ವ್ಯಕ್ತಿಗಳು ಕರ್ಕ ರಾಶಿಗೆ ಸೇರಿದವರಾಗಿರುತ್ತಾರೆ. ಇವರು ತಮ್ಮ ನಿಕಟವರ್ತಿ ಜನರನ್ನು ಅಧಿಕವಾಗಿ ಪ್ರೀತಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ಇವರು ಸರಳವಾಗಿ ತಮ್ಮ ಪ್ರೀತಿಯನ್ನು ಇತರರಿಗೆ ಪ್ರದರ್ಶಿಸುತ್ತಾರೆ. ಇವರ ಒಂದು ಸಮಸ್ಯೆಯೆಂದರೆ ಇತರರು ತೋರುವ ಪ್ರೀತಿಗೆ ಅದೇ ರೀತಿಯ ಪ್ರತಿಕ್ರಿಯೆಯನ್ನು ನೀಡುವುದಿಲ್ಲ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಏಪ್ರಿಲ್ 20 ರಿಂದ ಮೇ 20ರ ಒಳಗೆ ಜನಿಸಿದವರು ವೃಷಭ ರಾಶಿಯವರಾಗಿರುತ್ತಾರೆ. ಇವರು ಇತರರೊಂದಿಗೆ ಅತ್ಯಂತ ತಾಳ್ಮೆಯಿಂದ ವರ್ತಿಸುತ್ತಾರೆ. ಸುತ್ತಲಿನ ಜನರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡುತ್ತಾರೆ. ಇತರರಿಗೆ ತಮ್ಮನ್ನು ಹೋಲಿಸಿದಾಗ ಕೀಳರಿಮೆ ಹೊಂದುವ ಸಾಧ್ಯತೆಗಳಿವೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಡಿಸೆಂಬರ್ 22ರಿಂದ ಜನವರಿ 19ರ ಒಳಗೆ ಜನಿಸಿದ ವ್ಯಕ್ತಿಗಳು ಮಕರ ರಾಶಿಗೆ ಒಳಗಾಗಿರುತ್ತಾರೆ. ಇವರು ತಮ್ಮ ಪ್ರೀತಿ ಪಾತ್ರರ ಜೊತೆಗೆ ಜೀವನ ಪೂರ್ತಿ ನಿಷ್ಠರಾಗಿ ಇರುತ್ತಾರೆ. ಒಳ್ಳೆಯ ವಿಚಾರಗಳಿಗೆ ಇವರು ತಮ್ಮ ಹೋರಾಟವನ್ನು ನಿಲ್ಲಿಸರು. ಇತರರ ಅಭಿಪ್ರಾಯವನ್ನು ಕೇಳಲು ಇವರು ಇಷ್ಟ ಪಡುವುದಿಲ್ಲ. ಆದರೆ ಇವರ ನಂಬಿಕೆ ವಿಚಾರದಲ್ಲಿ ಶ್ಲಾಘಿಸಲೇ ಬೇಕು.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಆಗಸ್ಟ್ 23 ರಿಂದ ಸಪ್ಟೆಂಬರ್22ರ ಒಳಗೆ ಜನಿಸಿದ ವ್ಯಕ್ತಿಗಳು ಕನ್ಯಾ ರಾಶಿಯವರಾಗಿರುತ್ತಾರೆ. ಇವರು ತಮ್ಮ ಪ್ರವೃತ್ತಿಯಲ್ಲಿ ನಿರ್ಣಾಯಕ ಗುಣವನ್ನು ಹೊಂದಿರುತ್ತಾರೆ. ಇವರು ಅಷ್ಟು ಸುಲಭವಾಗಿ ಸಂತಸದ ಕ್ಷಣಗಳನ್ನು ಸ್ವೀಕರಿಸದವರಾಗಿರುತ್ತಾರೆ. ಹಾಗಾಗಿ ಇವರಿಗೆ ತೃಪ್ತಿಕರ ಭಾವನೆಯನ್ನು ಹೊಂದಲು ಕಷ್ಟವಾಗುತ್ತದೆ.

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಮಾರ್ಚ್ 21 ರಿಂದ ಏಪ್ರಿಲ್ 19ರ ಒಳಗೆ ಜನಿಸಿದ ವ್ಯಕ್ತಿಗಳು ಮೇಷ ರಾಶಿಗೆ ಸೇರಿದವರಾಗಿರುತ್ತಾರೆ. ಇವರು ಇತರರಿಗೆ ನೀಡುವ ಭರವಸೆಗಳಿಗೆ ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ. ಇವರು ಸತ್ಯವನ್ನು ಹೇಳಲು ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಹಾಗಾಗಿಯೇ ಜನರು ಇವರ ಸ್ವಭಾವವನ್ನು ಬಹಳ ಸುಲಭವಾಗಿ ಅರಿಯಬಹುದು. ಇವರು ಎಂದಿಗೂ ನಾಟಕ ಮತ್ತು ತಪ್ಪಾದ ವಿಚಾರವನ್ನು ಹೇಳಲು ಮುಂದಾಗುವುದಿಲ್ಲ.

ವೃಶ್ಚಿಕ: 26 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 26 ಅಕ್ಟೋಬರ್ -22 ನವೆಂಬರ್

ಅಕ್ಟೋಬರ್ 23 ರಿಂದ ನವೆಂಬರ್ 21ರ ಒಳಗೆ ಜನಿಸಿದ ವ್ಯಕ್ತಿಗಳು ವೃಶ್ಚಿಕ ರಾಶಿಯವರಾಗಿರುತ್ತಾರೆ. ಇವರು ಸದಾ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ತಮಗೆ ಬೇಕಾದ ವಸ್ತುವನ್ನು ಪಡೆದುಕೊಳ್ಳಲು ಮೊಂಡುತನವನ್ನು ತೋರುವರು. ಇವರು ಯಾವುದೇ ಮುಂದಾಲೋಚನೆ ಇಲ್ಲದೆ ಇತರರ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಂದಾಗುತ್ತಾರೆ.

English summary

zodiac-revelations-from-being-down-to-earth

The zodiac signs are determined according to the positions of the planets related to the sun and moon, at the time of the birth of a person. Though astrology is an ancient branch of science, it still holds immense respect in the minds of all educated people of the modern world. There are twelve zodiac signs as per astrology, which states that the zodiac signs have great effects on the nature of the people, leading to the incidents of their lives. Hence, the zodiac sign of a person can express some basic qualities of his/her nature and his/her ability of dealing with other persons and situations in life.
Story first published: Saturday, January 27, 2018, 18:15 [IST]
X
Desktop Bottom Promotion