For Quick Alerts
ALLOW NOTIFICATIONS  
For Daily Alerts

ರಾಶಿ ಭವಿಷ್ಯ: ಯಾವ್ಯಾವ ರಾಶಿಯವರಿಗೆ ಏನೆಲ್ಲಾ ಆಸೆಗಳಿರುತ್ತದೆ ನೋಡಿ...

By Deepu
|

ಆಸೆ ಎನ್ನುವುದು ಮನುಷ್ಯನ ಒಂದು ದೌರ್ಬಲ್ಯವೂ ಹೌದು, ದೀರ್ಘವಾದ ಬದುಕಿನ ಭರವಸೆಯೂ ಹೌದು. ಆಸೆ ಎನ್ನುವುದು ಇಲ್ಲದೆ ಇದ್ದಿದ್ದರೆ ಮನುಷ್ಯರ ನಡುವೆ ಜಗಳ, ವೈಮನಸ್ಸು, ಸ್ವಾರ್ಥ, ಅಸೂಯೆ ಎನ್ನುವುದು ಇರುತ್ತಿರಲಿಲ್ಲ. ಅಂತೆಯೇ ಬದುಕಬೇಕು ಎನ್ನುವ ಆಸೆಯೂ ಇರುತ್ತಿರಲಿಲ್ಲ. ಆಸೆ ಎನ್ನುವ ಎರಡು ಅಕ್ಷರವು ಮನುಷ್ಯನಿಗೆ ಧನಾತ್ಮಕ ಹಾಗೂ ಋಣಾತ್ಮಕವಾದ ಎರಡೂ ಫಲಿತಾಂಶವನ್ನು ನೀಡುತ್ತದೆ.

ಹಾಗಾಗಿ ವ್ಯಕ್ತಿ ಹೇಗೆ ಬದುಕಬೇಕು ಎನ್ನುವುದುನ್ನು ನಿರ್ಧರಿಸಿ, ಸಮತೋಲನದ ಜೀವನ ನಡೆಸಬೇಕಾಗುವುದು. ಬೇರೆಯವರ ಜೀವನದ ಪ್ರಮುಖ ಆಸೆ ಏನು ಎನ್ನುವುದನ್ನು ತಿಳಿದುಕೊಂಡರೆ ಅವರನ್ನು ಸ್ನೇಹಿತರನ್ನಾಗಿ, ಆಪ್ತರನ್ನಾಗಿ ಅಥವಾ ಸಂಗಾತಿಯನ್ನಾಗಿ ಪಡೆದು ಉತ್ತಮ ರೀತಿಯ ಜೀವನ ನಡೆಸಬಹುದು. ಜೊತೆಗೆ ಸೂಕ್ತ ರೀತಿಯ ಹೊಂದಾಣಿಕೆಯೊಂದಿಗೆ ಸಾರ್ಥಕ ಬದುಕನ್ನು ಕಾಣಬಹುದು.

ಆದರೆ ಅವರ ಆಸೆಯನ್ನು ತಿಳಿದುಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗೆ ಬೋಲ್ಡ್ ಸ್ಕೈ ಈ ಮುಂದಿನ ವಿವರಣೆಯಲ್ಲಿ ವಿವರಿಸಿದೆ. ನಿಮಗೆ ನಿಮ್ಮ ಆಸೆ ಹಾಗೂ ನಿಮ್ಮವರ ಅಂತರಾಳದ ಆಸೆಯನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದ್ದರೆ ಈ ಮುಂದೆ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವೆಲ್ಲಾ ಗಾಢವಾದ ಆಸೆ ವ್ಯಕ್ತಿಗೆ ಇರುತ್ತದೆ ಎನ್ನುವುದನ್ನು ವಿವರಿಸಲಾಗಿದೆ....

ಮೇಷ

ಮೇಷ

ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ಜೀವನದಲ್ಲಿ ಎಲ್ಲಾ ಹಂತದಲ್ಲೂ ಮುಕ್ತ ಹಾಗೂ ಪ್ರಾಮಾಣಿಕವಾಗಿರಲು ಇಷ್ಟಪಡುತ್ತಾರೆ. ಇವರು ತಮ್ಮ ಸಂಗಾತಿಯನ್ನು ಶೇ. 10ಕ್ಕೆ ಶೇ.11ರಷ್ಟು ತಿಳಿದುಕೊಳ್ಳುವುದನ್ನು ಇಷ್ಟಪಡುವರು. ಇವರು ಬಹುಬೇಗ ಬೇಸರಕ್ಕೆ ಒಳಗಾಗುವರು. ಇವರು ಬಯಸಿದ ಫಲಿತಾಂಶ ತಕ್ಷಣ ದೊರೆಯದಿದ್ದರೆ ಬಹುಬೇಗ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಇವರು ತಮ್ಮ ಪಾಲುದಾರರು ತಮ್ಮ ಕಾಲಮೇಲೆ ನಿಂತಿರಬೇಕು ಎಂದು ಬಯಸುತ್ತಾರೆ.

ವೃಷಭ

ವೃಷಭ

ಈ ರಾಶಿಯ ವ್ಯಕ್ತಿಗಳು ಮೊಂಡುತನ ಮತ್ತು ಸಂವೇದನಾಶೀಲತೆಯ ವಿಲಕ್ಷಣ ಸಂಯೋಜನೆಯ ಗುಣವನ್ನು ಹೊಂದಿರುವ ವ್ಯಕ್ತಿಗಳು. ಸ್ವಭಾವದಲ್ಲಿ ಮೊಂಡುತನವಿದ್ದರೂ ಸಾಧನೆಯ ಛಲ ಹಾಗೂ ಆಸೆಯ ಮೂಲಕ ತಮ್ಮ ಗುರಿಯನ್ನು ಸಾಧಿಸುತ್ತಾರೆ. ಇವರು ಒಬ್ಬ ಸಂಗಾತಿಯಾಗಿ ಜವಾಬ್ದಾರಿಯನ್ನು ನಿಭಾಯಿಸುವಾಗ ಸೂಕ್ತ ಹೊಂದಾಣಿಕೆ ಜೀವನ ನಡೆಸುತ್ತಾರೆ. ಹಾಗೆಯೆ ಉತ್ತಮ ಭದ್ರತೆಯನ್ನು ನೀಡುವ ಆಸೆಯನ್ನು ಹೊಂದಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಮಿಥುನ

ಮಿಥುನ

ಈ ರಾಶಿಯವರು ಬಹಳ ಸಾಹಸಮಯ ಹಾಗೂ ಕುತೂಹಲಕಾರಿ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಅತ್ಯಂತ ಸೃಜನಾತ್ಮಕ ವ್ಯಕ್ತಿಗಳು ಎಂದು ಕರೆಯಲಾಗುವುದು. ಇವರು ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುತ್ತಾರೆ. ಇವರಿಗೆ ಶಿಕ್ಷಣ ಮತ್ತು ಮಾಹಿತಿಯ ಬಗ್ಗೆ ಹೆಚ್ಚು ಬಾಯಾರಿಕೆ ಇರುತ್ತದೆ. ಇವರು ಅನುಭವದಿಂದ ಕಲಿಯಲು ಮತ್ತು ಅವುಗಳಿಂದ ಲಾಭ ಪಡೆಯಲು ಇಷ್ಟಪಡುತ್ತಾರೆ.

ಕರ್ಕ

ಕರ್ಕ

ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ವ್ಯಕ್ತಿಗಳು ಉತ್ಕøಷ್ಟವಾದ ಮತ್ತು ಸ್ವತಂತ್ರ ವ್ಯಕ್ತಿಗಳು. ಇವರ ಅತಿದೊಡ್ಡ ಆಸೆ ಎಂದರೆ ವಿರೋಧಿಸದಿರುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇವರು ಮಹತ್ತರವಾದ ಗುರಿಯನ್ನು ಹೊಂದಿರುತ್ತಾರೆ. ಅದನ್ನು ಸೂಕ್ತ ಸಮಯದಲ್ಲಿ ನೆರವೇರಿಸಲು ಬಯಸುತ್ತಾರೆ ಎಂದು ಹೇಳಲಾಗುತ್ತದೆ. ಇವರು ತಾವು ಸಮರ್ಪಕವಾಗಿ ಮತ್ತು ಸ್ಥಿತಿಸ್ಥಾಪಕತ್ವದಲ್ಲಿ ಇರುತ್ತಾರೆ ಎಂದು ನಂಬುತ್ತಾರೆ.

ಸಿಂಹ

ಸಿಂಹ

ಬಹಳ ಸಂವೇದನಾಶೀಲ ಪ್ರವೃತ್ತಿಯನ್ನು ಹೊಂದಿರುವ ಈ ವ್ಯಕ್ತಿಗಳು ಕರುಣಾಜನಕ ಮತ್ತು ಕಾಳಜಿ ವಹಿಸುತ್ತಾರೆ. ಇವರು ನಿಯಂತ್ರಣದಲ್ಲಿ ಇರಲು ಹಾಗೂ ನಿಯಂತ್ರಣವನ್ನು ಹೊಂದಲು ಬಯಸುವರು. ಮೆಚ್ಚುಗೆಗಾಗಿ ಕೆಲವೊಮ್ಮೆ ಗೌರವಾನ್ವಿತರಾಗಿರಲು ಇಷ್ಟಪಡುತ್ತಾರೆ. ತಾವು ಬಯಸಿದ್ದನ್ನು ಪಡೆಯಲು ತಮ್ಮದೇ ಆದ ಮಾರ್ಗವನ್ನು ಬಿಟ್ಟುಹೋಗುವ ಸಾಧ್ಯತೆಗಳು ಇರುತ್ತವೆ.

ಕನ್ಯಾ

ಕನ್ಯಾ

ಇವರು ಬಹಳ ಮೃದು ಸ್ವಭಾವದವರು. ಜೊತೆಗೆ ಪ್ರೀತಿಯಿಂದ ವರ್ತಿಸುತ್ತಾರೆ. ಕೆಲವೊಮ್ಮೆ ಬಹಳ ದುಃಖದಿಂದಲೂ ವರ್ತಿಸುತ್ತಾರೆ. ಆದರೆ ಇವರ ಉದ್ದೇಶಗಳು ಸದಾ ಒಳ್ಳೆಯದೇ ಆಗಿರುತ್ತದೆ. ಸಣ್ಣ ವಿಷಯಗಳ ಬಗ್ಗೆ ಬಹಳ ದುರ್ಬಲರಾಗುವರು. ಸಾಮಾನ್ಯವಾಗಿ ಹೊಂದಾಣಿಕೆಯ ಗುಣ ಇವರಲ್ಲಿರುತ್ತದೆ.

ತುಲಾ

ತುಲಾ

ಇವರು ರಾಜತಾಂತ್ರಿಕ ಮತ್ತು ಶಾಂತಿಯುತವಾದ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಜೀವನದಲ್ಲಿ ಘರ್ಷಣೆಯಿಂದ ಇರುವುದನ್ನು ತಪ್ಪಿಸುತ್ತಾರೆ. ಸಮತೋಲನ ಮತ್ತು ಸ್ಪಷ್ಟತೆಗಿಂತ ಹೆಚ್ಚಿನದನ್ನು ಇವರು ಬಯಸುವುದಿಲ್ಲ. ಇವರು ಯಾವುದೇ ವಿಚಾರದಲ್ಲೂ ಗಡಿಬಿಡಿಯಿಂದ ವರ್ತಿಸುವುದಿಲ್ಲ. ಸಂಗಾತಿಯೊಂದಿಗೂ ಉತ್ತಮ ರೀತಿಯಲ್ಲಿ ಇರಲು ಬಯಸುತ್ತಾರೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಚಕ್ರದವರು ಅತ್ಯಂತ ಮಹತ್ವಾಕಾಂಕ್ಷೆ ಉಳ್ಳ ಜನರು. ಇವರು ಭಾವೋದ್ರಿಕ್ತ ಮತ್ತು ಸ್ವತಂತ್ರರಾಗಿರುತ್ತಾರೆ. ಅವರು ಯಶಸ್ಸಿನ ಬಯಕೆಯಲ್ಲಿ ಏಕಮನಸ್ಸಿನವರಾಗಿರುತ್ತಾರೆ. ತಮ್ಮ ಗುರಿಯನ್ನು ಸಾಧಿಸಲು ಸಮರ್ಥರಾಗಿರುತ್ತಾರೆ.

ಧನು

ಧನು

ಈ ರಾಶಿಯವರು ನಿರ್ಮಾಪಕರು ಮತ್ತು ಉತ್ತಮ ಕ್ರಿಯಾಶಿಲರಾಗಿರುತ್ತಾರೆ. ಹೊಸ ವಿಚಾರವನ್ನು ಅನ್ವೇಷಿಸಲು ಮತ್ತು ಅದನ್ನು ಪರಿಗಣಿಸಲು ಪ್ರೀತಿಸುತ್ತಾರೆ. ಹೊಸ ವಿಚಾರಗಳನ್ನು ತಿಳಿಯುವುದು ಹಾಗೂ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರಲು ಬಯಸುತ್ತಾರೆ.

ಮಕರ

ಮಕರ

ಈ ವ್ಯಕ್ತಿಗಳು ಬಹಳ ಜವಾಬ್ದಾರರು ಹಾಗೂ ಕರ್ತವ್ಯ ನಿಷ್ಟರು ಆಗಿರುತ್ತಾರೆ. ಸಿಂಹ ರಾಶಿಯವರಂತೆ ಇವರು ಸಹ ಸದಾ ಮೇಲಿರಲು ಬಯಸುತ್ತಾರೆ. ಇವರು ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಕುಟುಂಬಗಳ ಗೌರವ ಮತ್ತು ಮೆಚ್ಚುಗೆಯನ್ನು ಪಡೆಯಲು ಬಯಸುತ್ತಾರೆ.

ಕುಂಭ

ಕುಂಭ

ಈ ರಾಶಿಯವರು ಉತ್ತಮ ಸೃಜನಾತ್ಮಕ ಹಾಗೂ ಹಾಸ್ಯದ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಗುರಿಯನ್ನು ಸಾಧಿಸಲು ಒಂದೇ ಮನಃಸ್ಥಿತಿಯನ್ನು ಹೊಂದುವುದು ಇವರ ಬಯಕೆಯಾಗಿರುತ್ತದೆ. ಇವರ ಈ ವಿಶಿಷ್ಟತೆಯನ್ನು ಸಂಪರ್ಕಿಸಲು ಸಾಧ್ಯವಾಗದೆ ಇರುವುದರಿಂದ ಇತರರು ಇವರನ್ನು ಸಂವೇದನಾ ಶೀಲರು ಎಂದು ಪರಿಗಣಿಸುವರು.

ಮೀನ

ಮೀನ

ಈ ರಾಶಿಯವರು ಸಹಾನುಭೂತಿ ಹಾಗೂ ಕಲ್ಪನಾಶೀಲರಾಗಿರುತ್ತಾರೆ. ಪೆಟ್ಟಿಗೆಯ ಹೊರಗಿನ ಪರಿಹಾರಕ್ಕಾಗಿ ಇವರು ಹುಡುಕುತ್ತಾರೆ. ಹಾಗಾಗಿ ಇವರು ತಮ್ಮ ಜೀವನವನ್ನು ಬಹಳ ಸುಲಭವಾಗಿ ನಿರ್ವಹಿಸುತ್ತಾರೆ. ಇವರ ಕನಸನ್ನು ವಾಸ್ತವಕ್ಕೆ ಪರಿವರ್ತಿಸುವುದು ಇವರ ಮಹಾನ್ ಕನಸು ಅಥವಾ ಆಸೆಯಾಗಿರುತ್ತದೆ. ಇವರು ತಮ್ಮ ಕಲ್ಪನೆಯಂತೆ ಪ್ರಪಂಚವನ್ನು ಕಾಣಲು ಬಯಸುತ್ತಾರೆ.

English summary

zodiac-reveals-the-dark-desires-each-sign

Understanding what are the needs and desires of your partner is important. According to astrology, there are certain needs and desires that each person has based on his/her zodiac sign. Here, in this article, we are about to share details of the dark desires and needs based on each zodiac sign. Read on to know more about these desires and needs that are defined according to each of the zodiac signs.
X
Desktop Bottom Promotion