For Quick Alerts
ALLOW NOTIFICATIONS  
For Daily Alerts

  2018 ಫೆಬ್ರವರಿ ತಿಂಗಳ ರಾಶಿ ಭವಿಷ್ಯ

  By Deepu
  |

  ಪ್ರತಿಯೊಂದು ಕ್ಷಣ, ಪ್ರತಿಯೊಂದು ದಿನ ಹಾಗೂ ಪ್ರತಿಯೊಂದು ತಿಂಗಳಲ್ಲೂ ನಮ್ಮ ಭವಿಷ್ಯಗಳು ಬದಲಾವಣೆಯನ್ನು ಕಾಣುತ್ತಲೇ ಇರುತ್ತವೆ. ಭವಿಷ್ಯದಲ್ಲಿ ಹೀಗೆ ಆಗುವುದು ಎನ್ನುವ ಮುನ್ಸೂಚನೆ ಸಿಕ್ಕಾಗ ಆಗುವ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು ಅಥವಾ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಂತಹ ಒಂದು ಉತ್ತಮ ಪ್ರಯತ್ನವೇ ರಾಶಿ ಭವಿಷ್ಯ, ದಿನ ಭವಿಷ್ಯ, ಮಾಸ ಭವಿಷ್ಯ ಹಾಗೂ ವರ್ಷ ಭವಿಷ್ಯವಾಗಿದೆ.

  ಹೊಸ ವರ್ಷ ಆರಂಭದ ಎರಡನೇ ತಿಂಗಳಾದ ಫೆಬ್ರವರಿ ಕೆಲವರ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುವ ಸಾಧ್ಯತೆಗಳಿವೆ. ಹಾಗಾದರೆ ಆ ಬದಲಾವಣೆಗಳು ಯಾವವು? ಈ ತಿಂಗಳ ಪೂರ್ತಿ ಯಾವೆಲ್ಲಾ ಅನುಭವಗಳು ನಮ್ಮ ಪಾಲಿಗೆ ಸೇರಿಕೊಳ್ಳುತ್ತದೆ ಎನ್ನುವಂತಹ ವಿವರಣೆಯನ್ನು ನೀವು ತಿಳಿದುಕೊಳ್ಳಬೇಕು ಎಂದಾಗಿದ್ದರೆ ಈ ಮುಂದಿರುವ ಫೆಬ್ರವರಿ ತಿಂಗಳ ಭವಿಷ್ಯವನ್ನು ಅರಿಯಿರಿ...

  ಮೇಷ: 28 ಮಾರ್ಚ್ -20 ಏಪ್ರಿಲ್

  ಮೇಷ: 28 ಮಾರ್ಚ್ -20 ಏಪ್ರಿಲ್

  ಫೆಬ್ರವರಿ ತಿಂಗಳಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಷ್ಟು ಗಂಭೀರವಾಗಿ ತೊಡಗಿಸಿಕೊಳ್ಳುವುದಿಲ್ಲ. ಕಾರಣ ಅವರ ವೃತ್ತಿ ಜೀವನದಲ್ಲಿ ಇರುವ ಒತ್ತಡ ಹಾಗೂ ತಲ್ಲೀನತೆ ಕಾರಣವಾಗಬಹುದು. ಯಾರು ಇವೆರಡನ್ನು ಸಮತೋಲನದ ರೀತಿಯಲ್ಲಿ ನಿಭಾಯಿಸುತ್ತಾರೋ ಅಂತಹವರು ಸ್ವಲ್ಪ ನೆಮ್ಮದಿಯನ್ನು ಕಾಣಬಹುದು.

  ವೃಷಭ: ಏಪ್ರಿಲ್ 26-ಮೇ 20

  ವೃಷಭ: ಏಪ್ರಿಲ್ 26-ಮೇ 20

  ಈ ವ್ಯಕ್ತಿಗಳ ನಿರೀಕ್ಷೆಯಂತೆ ತಿಂಗಳ ಸುಖಾನುಭವನ್ನು ಕಾಣುವುದಿಲ್ಲ. ಇವರ ಸುತ್ತಲಿನ ವಿಷಯಗಳೊಂದಿಗೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳಿವೆ. ತಿಂಗಳ ಮಧ್ಯಂತರದ ಸಮಯದಲ್ಲಿ ವಿಚಾರಗಳ ನಡುವೆ ಅಥವಾ ಕೆಲಸದ ನಡುವೆ ಮುಳುಗುತ್ತಾರೆ. ತಿಂಗಳ ಕೊನೆಯಲ್ಲಿ ಫಲಿತಾಂಶವನ್ನು ಪಡೆದುಕೊಳ್ಳಲು ಯಶಸ್ವಿಯಾಗುತ್ತಾರೆ.

  ಮಿಥುನ: ಮೇ 21 ಜೂನ್ 20

  ಮಿಥುನ: ಮೇ 21 ಜೂನ್ 20

  ತಿಂಗಳ ಮಧ್ಯಂತರದ ಅವಧಿಯವರೆಗೂ ಇವರಿಗೆ ತಂಗಾಳಿಯಂತಹ ಅನುಭವಗಳು ದೊರೆಯುತ್ತವೆ. ಪ್ರಣಯದ ಭಾವಕ್ಕೆ ಹೊರಹೊಮ್ಮುತ್ತಾರೆ. ಇವರ ಬಗ್ಗೆ ಇತರರು ವಿರೋಧಿಸುವ ಸಾಧ್ಯತೆಗಳೇ ಇರುವುದಿಲ್ಲ. ತಿಂಗಳ ಕೊನೆಯ ವಾರದಲ್ಲಿ ಒಂದಿಷ್ಟು ಗೊಂದಲಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇವರು ತಮ್ಮ ಕೆಲಸದ ಮಾರ್ಗವನ್ನು ಹಾಗೂ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕಾಗುವುದು.

  ಕರ್ಕ: ಜೂನ್ 21-ಜುಲೈ 22

  ಕರ್ಕ: ಜೂನ್ 21-ಜುಲೈ 22

  ತಿಂಗಳ ಮಧ್ಯಂತರದ ವರೆಗೂ ಉದ್ವಿಘ್ನತೆಗಳು ಕೆಲಸದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಹಣದ ಸಮಸ್ಯೆಗಳಿಗೆ ಗಮನ ನೀಡಬೇಕಾಗುವುದು. ನಿಮ್ಮ ಮಾತುಗಳು ಸಂಬಂಧದಲ್ಲಿ ವಾದವನ್ನು ಉಂಟುಮಾಡುವ ಸಾಧ್ಯತೆಗಳಿವೆ. ತಿಂಗಳ ಅಂತ್ಯದಲ್ಲಿ ನಿಮ್ಮ ನಿರೀಕ್ಷೆಯಂತೆ ವೃತ್ತಿ ಕ್ಷೇತ್ರದಲ್ಲಿ ಅವಕಾಶಗಳು ದೊರೆಯುವುದು.

  ಸಿಂಹ: ಜುಲೈ 23-ಆಗಸ್ಟ್ 23

  ಸಿಂಹ: ಜುಲೈ 23-ಆಗಸ್ಟ್ 23

  ಇವರಿಗೆ ಈ ತಿಂಗಳಿಂದ ನಿಮಗೆ ಶುಭ ದಿನಗಳ ಆರಂಭವಾಗುವುದು. ಅದೃಷ್ಟ ಮತ್ತು ಪ್ರೀತಿ ನಿಮ್ಮೆಡೆಗೆ ತಿರುಗುವುದು. ತಿಂಗಳ ಎರಡನೇ ವಾರವು ಕೆಲವು ಸಂವಹನ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ ಎನ್ನುವುದನ್ನು ಬಿಟ್ಟರೆ ತಿಂಗಳು ಉಳಿದಂತೆ ಸುಗಮವಾಗಿ ಸಾಗುವುದು.

  ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

  ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

  ನಿಮಗೆ ಈ ತಿಂಗಳು ಪ್ರೀತಿ ಮತ್ತು ಪ್ರಯಣಕ್ಕಾಗಿ ಉತ್ತಮ ತಿಂಗಳಾಗಲಿದೆ. ಈ ತಿಂಗಳಲ್ಲಿ ನೀವು ನಿಮ್ಮ ಅಗತ್ಯಗಳನ್ನು ಮತ್ತು ಪ್ರೀತಿಯಯನ್ನು ಉತ್ತಮ ಸಂವಹನಗಳ ಮೂಲಕ ಪಡೆದುಕೊಳ್ಳುವಿರಿ. ಸ್ನೇಹಿತರು ನಿಮ್ಮ ಭುಜದ ಮೇಲೆ ಒರಗುವಂತಹ ಬಯಕೆಯನ್ನು ವ್ಯಕ್ತಪಡಿಸುವ ಸಮಯವೂ ಆಗಿರುತ್ತದೆ. ಕೆಲವು ವಾದಗಳು ಉತ್ತಮ ಗ್ರಹಿಕೆಗೆ ಕಾರಣವಾಗುವುದು.

  ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

  ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

  ಈ ತಿಂಗಳು ನಿಮ್ಮ ಪ್ರೀತಿಯ ಜೀವನ ಬಹಳ ಉತ್ತಮವಾಗಿರುತ್ತದೆ. ಏರಿಳಿತಗಳು ಸಮ ಪ್ರಮಾಣದಲ್ಲಿ ಇರುತ್ತವೆ. ನಿಮ್ಮ ಸಹ ಕೆಲಸಗಾರರೊಂದಿಗೆ ಹೊಸ ಯೋಜನೆಯೊಂದಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಲು ಈ ತಿಂಗಳು ದೊಡ್ಡ ತಿಂಗಳಾಗಿರುವುದು. ಜ್ವರದ ಸಮಸ್ಯೆಯು ನಿಮಗೆ ಅನಾನುಕೂಲವನ್ನುಂಟು ಮಾಡುವ ಸಾಧ್ಯತೆಗಳಿವೆ.

  ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

  ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

  ಈ ತಿಂಗಳಲ್ಲಿ ಕೆಲವು ವಿಚಾರಕ್ಕೆ ನೀವು ಅಂಟಿಕೊಂಡು ಕೆಲಸ ಮಾಡುವ ಸಾಧ್ಯತೆಗಳಿರುತ್ತವೆ. ತಾವು ಹುಟ್ಟಿದ್ದೇ ಕೆಲಸ ಮಾಡಲು ಎನ್ನುವಂತಹ ಮನಃಸ್ಥಿತಿಯನ್ನು ಹೊಂದುವ ಸಾಧ್ಯತೆಗಳಿವೆ. ವೈಯಕ್ತಿಕ ಸಂಬಂಧದ ಮುಂಭಾಗದಲ್ಲಿ ಇವರು ಅಧಿಕ ಕೆಲಸವನ್ನು ಮಾಡುತ್ತಾರೆ. ತಿಂಗಳ ಕೊನೆಯಲ್ಲಿ ಫಲಿತಾಂಶವನ್ನು ನಿರೀಕ್ಷಿಸುತ್ತಾರೆ. ಅದರಂತೆಯೇ ಸಂತೃಪ್ತಿಯನ್ನು ಪಡೆದುಕೊಳ್ಳುವರು. ಇವರು ತಮ್ಮ ಜೀವನವನ್ನು ಸುಧಾರಿಸಲು ಆರೋಗ್ಯಕರ ಬದಲಾವಣೆಯನ್ನು ಮಾಡಬೇಕಿದೆ.

  ಧನು: 23 ನವೆಂಬರ್ -22 ಡಿಸೆಂಬರ್

  ಧನು: 23 ನವೆಂಬರ್ -22 ಡಿಸೆಂಬರ್

  ನಿಮಗೆ ಈ ತಿಂಗಳಲ್ಲಿ ಹೃದಯ ಮತ್ತು ಆತ್ಮದ ನಡುವೆ ನಿರ್ಧರಿಸುವ ಕಠಿಣ ಸಮಯವಿರುತ್ತದೆ. ಈ ತಿಂಗಳು ನೀವು ಪ್ರೇಮದ ವಿಚಾರದಲ್ಲಿ ನಕ್ಷತ್ರಗಳಾಗುವ ಸಾಧ್ಯತೆಗಳಿವೆ. ಇವರು ಸೃಜನಾತ್ಮಕ ಮತ್ತು ದೈಹಿಕ ಆಕ್ತಿಯಿಂದ ತುಂಬಿರುತ್ತಾರೆ. ಕೆಲವು ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುವುದು. ಕ್ರೀಡಾ ಸಂಬಂಧಿತ ವಿಚಾರದಲ್ಲಿ ಗಮನಹರಿಸಬೇಕು.

  ಮಕರ: ಡಿಸೆಂಬರ್ 23-ಜನವರಿ 20

  ಮಕರ: ಡಿಸೆಂಬರ್ 23-ಜನವರಿ 20

  ಹಣದ ವಿಚಾರದಲ್ಲಿ ಕೊಂಚ ಗಮನ ಇರಿಸಬೇಕಾಗುವುದು. ಇದರಿಂದ ಕೊಳಕು ಹಾಗೂ ಕೆಟ್ಟದ್ದನ್ನು ಕೊಂಡುಕೊಳ್ಳಬಹುದು. ಇವರು ತಮ್ಮ ಸಂಬಂಧವನ್ನು ಮೌಲೀಕರಿಸಿದರೆ ಹಣವನ್ನು ಉಳಿಸಿಕೊಳ್ಳಬಹುದು. ಅಲ್ಲದೆ ಇವರು ತಮ್ಮ ವೃತ್ತಿ ಜೀವನದಲ್ಲಿ ಬೋನಸ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

  ಕುಂಭ: ಜನವರಿ 20-ಫೆಬ್ರವರಿ 18

  ಕುಂಭ: ಜನವರಿ 20-ಫೆಬ್ರವರಿ 18

  ಈ ತಿಂಗಳು ನಿಮಗೆ ಸಾಮಾಜಿಕ ಮತ್ತು ಪ್ರೀತಿಯ ಜೀವನದಲ್ಲಿ ವಿನೋದ ಮತ್ತು ಆಶ್ಚರ್ಯವು ತುಂಬಿರುತ್ತದೆ. ನಿಮಗೆ ನೀಲಿ ಬಣ್ಣದ ಉಡುಗೊರೆ ದೊರೆಯುವ ಸಾಧ್ಯತೆಗಳಿವೆ. ವೃತ್ತಿ ಕ್ಷೇತ್ರದಲ್ಲಿ ಹೊಳೆಯುವ ತಾರೆಯಾಗಬಲ್ಲಿರಿ. ನೀವು ನಿರ್ವಹಿಸುವ ಯೋಜನೆಗಳು ಯಶಸ್ವಿಯಾಗುವುದು. ಸ್ವಲ್ಪ ಕಾಲ ವಿಳಂಬವಾಗಿದ್ದ ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ.

  ಮೀನ: 20 ಫೆಬ್ರವರಿ -20 ಮಾರ್ಚ್

  ಮೀನ: 20 ಫೆಬ್ರವರಿ -20 ಮಾರ್ಚ್

  ಇವರು ವೈಯಕ್ತಿಕವಾಗಿ ಹೊಸ ಆರಂಭವನ್ನು ಗುರುತಿಸುತ್ತಾರೆ. ಕೆಲಸ ಮತ್ತು ಶಾಲೆಯಲ್ಲಿ ಹೆಚ್ಚು ಗಮನ ನೀಡಲು ಕಂಡುಕೊಳ್ಳುತ್ತಾರೆ. ಅವರ ಸೃಜನಾತ್ಮಕತೆಯು ಈ ತಿಂಗಳಲ್ಲಿ ಬೆಳಕಿಗೆ ಬರುವುದು. ಪ್ರೀತಿಯ ಜೀವನದಲ್ಲಿ ಕಳವಳ ಉಂಟಾಗುವ ಸಾಧ್ಯತೆಗಳಿವೆ. ಪ್ರೀತಿಯ ಗೋಡೆಯು ಸದ್ಯದಲ್ಲೇ ಕುಸಿಯುವ ಸಾಧ್ಯತೆಗಳಿವೆ.

  English summary

  Zodiac Predictions For The Month Of February

  With zodiac predictions about personality traits to the daily horoscope, we bring to you the list of predictions based on your zodiac sign for the entire month of February. These are the predictions that are based on your zodiac signs. So, find out on what your zodiac sign holds in store for you in the month of February, 2018.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more