ನಮ್ಮಲ್ಲಿರುವ ದುರ್ಬಲತೆಗೆ ನಾವು ಜವಾಬ್ದಾರರಲ್ಲ....ಅದಕ್ಕೆ ರಾಶಿಚಕ್ರಗಳೇ ಕಾರಣ!

By Deepu
Subscribe to Boldsky

ಕೆಲವೊಮ್ಮೆ ನಮಗೆ ತಿಳಿದೋ ತಿಳಿದೆಯೋ ಇನ್ನೊಬ್ಬರ ಮನಸ್ಸನ್ನು ನೋಯಿಸುತ್ತೇವೆ. ನಮ್ಮ ಯಾವುದೋ ಒಂದು ವರ್ತನೆ ನಮಗೆ ಅರಿವಿಲ್ಲದೆಯೇ ಇತರರಿಗೆ ನೋವುಂಟು ಮಾಡುತ್ತದೆ. ಹಾಗಾದರೆ ಇದಕ್ಕೆ ಹೊಣೆಯಾರು ಎನ್ನುವ ಪ್ರಶ್ನೆ ಕೆಲವೊಮ್ಮೆ ನಿಮಗೂ ಕಾಡಬಹುದು. ಹೌದು, ಮನುಷ್ಯ ಎಂದ ಮೇಲೆ ತಪ್ಪು ಮಾಡುತ್ತಾನೆ. ಅದನ್ನು ತಿದ್ದಿಕೊಂಡು ಮುಂದೆಂದೂ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದು ಜಾಣತನ. ಆದರೆ ಪ್ರತಿಯೊಬ್ಬರಲ್ಲೂ ಕೆಲವು ಸಮಸ್ಯೆ ಇದ್ದೇ ಇರುತ್ತದೆ. ಆ ಗುಣಗಳು ಪದೇ ಪದೇ ಇನ್ನೊಬ್ಬರಿಗೆ ಕಿರಿಕಿರಿ ಉಂಟುಮಾಡಬಹುದು.

ನಮ್ಮಲ್ಲಿರುವ ಒಂದು ದೌರ್ಬಲ್ಯವನ್ನು ನಾವು ತಿದ್ದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಪದೇ ಪದೇ ಇತರರಿಗೂ ಮತ್ತು ನಮಗೂ ಇರಿಸುಮುರಿಸು ಉಂಟಾಗುವಂತೆ ಮಾಡುತ್ತದೆ ಎಂದರೆ ಅದು ನಮ್ಮ ರಾಶಿಚಕ್ರದ ಪ್ರಭಾವದ ಫಲವಾಗಿರುತ್ತದೆ. ನಿಮಗೂ ನಿಮ್ಮ ರಾಶಿ ಚಕ್ರದ ಪ್ರಭಾವದಿಂದ ಯಾವ ದೌರ್ಬಲ್ಯವನ್ನು ಹೊಂದಿದ್ದೀರಿ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ: (ಮಾರ್ಚ್ 21-ಏಪ್ರಿಲ್ 19)

ಮೇಷ: (ಮಾರ್ಚ್ 21-ಏಪ್ರಿಲ್ 19)

ನಿಮ್ಮ ಸುತ್ತಲಿನ ವಸ್ತು ಹಾಗೂ ವ್ಯಕ್ತಿಯ ಮೇಲೆ ನಿಯಂತ್ರಣ ಸಾಧಿಸಲು ಇಷ್ಟಪಡುವಿರಿ. ಯಾರ ಮನಸ್ಸಿಗೂ ನೋವು ಉಂಟಾಗುವುದನ್ನು ನೀವು ಬಯಸುವುದಿಲ್ಲ. ನೀವು ಹುಟ್ಟಿನಿಂದಲೇ ನಾಯಕತ್ವ ಗುಣವನ್ನು ಹೊಂದಿರುವುದರಿಂದ ಇದು ನಿಮ್ಮ ಸಾಮಾನ್ಯ ಗುಣಲಕ್ಷಣವಾಗಿದೆ. ನೀವು ನಿಮ್ಮ ಪಾಡಿಗೆ ಮುಂದೆ ಸಾಗಬೇಕು. ಇತರರ ಅಭಿಪ್ರಾಯದ ಬಗ್ಗೆ ಹೆಚ್ಚು ಗಮನ ನೀಡದಿರಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇವರು ವಿಶ್ವಾಸಾರ್ಹ ಮತ್ತು ಸ್ಥಿರವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಕೆಲವು ಸೋಲಿನಿಂದಾಗಿ ನೀವು ಹೊಸತನ್ನು ಪ್ರಯತ್ನಿಸಲು ನಿರಾಕರಿಸುವಿರಿ. ನಿಮ್ಮ ನಿತ್ಯದ ದಿನಚರಿಯಲ್ಲಿ ಕೆಲವೊಮ್ಮೆ ಸಿಲುಕಿಕೊಳ್ಳುವುದರಿಂದ ಹೊಸ ಅವಕಾಶಗಳು ಹಾದು ಹೋಗುವ ಸಾಧ್ಯತೆಗಳಿರುತ್ತವೆ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಕೆಲವು ವಿಚಾರಕ್ಕೆ ಅನ್ವಯಿಸಿದಂತೆ ನೀವು ಮನಸ್ಸು ಮಾಡುವುದೇ ಕಷ್ಟ. ಒಂದೇ ವಿಷಯದ ಬಗ್ಗೆ ನೀವು ಅಂಟಿಕೊಳ್ಳುವುದಿಲ್ಲ. ಅದು ಒಂದು ಕೆಲಸ, ಹವ್ಯಾಸ ಅಥವಾ ಕಲ್ಪನೆಯ ವಿಷಯವಾಗಿರಬಹುದು. ದೀರ್ಘಾವಧಿಯವರೆಗೆ ಅಂಟಿಕೊಳ್ಳುವುದಿಲ್ಲ. ನೀವು ಜೀವನದಲ್ಲಿ ಬೇಕಾದ್ದನ್ನು ಪಡೆದಿದ್ದೀರಿ ಎನ್ನುವ ಸಮಾಧಾನವನ್ನು ಹೊಂದುವುದಿಲ್ಲ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ನಿಮ್ಮ ಭಾವನೆಗಳು ಕೆಲವೊಮ್ಮೆ ನಿಮ್ಮ ನಾಶ ಮಾಡುವ ಸಾಧ್ಯತೆಗಳಿವೆ. ನಿಮಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಮನವರಿಕೆ ಬೇಕಾಗುತ್ತದೆ. ಏಕೆಂದರೆ ನೀವೊಬ್ಬ ಸ್ವಾಭಿಮಾನದ ವ್ಯಕ್ತಿಗಳಾಗಿರುತ್ತೀರಿ. ನಿಮ್ಮ ಭಾವನೆಯಲ್ಲಿ ಆಗಾಗ ಬದಲಾವಣೆ ಆಗುವುದಕ್ಕೆ ಆತಂಕ ಮತ್ತು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ. ಕೆಲವೊಮ್ಮೆ ನೀವು ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ನಿಮ್ಮ ಹೆಮ್ಮೆಯನ್ನು ಸೊಕ್ಕೆಂದು ಪರಿಗಣಿಸಲಾಗುತ್ತದೆ. ಜನರನ್ನು ನೀವು ತಪ್ಪು ರೀತಿಯಲ್ಲಿ ಪರಿಗಣಿಸುವ ಸಾಧ್ಯತೆಗಳಿರುತ್ತವೆ. ನಿಮಗೆ ಯಾವುದು ಅತ್ಯುತ್ತಮ ಎನ್ನುವುದು ತಿಳಿಯುತ್ತದೆ. ಅದರಂತೆಯೇ ನೀವು ನಡೆದುಕೊಳ್ಳುವುದು ಉತ್ತಮ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ನಿಮ್ಮ ವಿಶ್ಲೇಷಣಾತ್ಮಕ ಮನಸ್ಸು ನಿಮಗೆ ಶಕ್ತಿ ಅಥವಾ ದೌರ್ಬಲ್ಯವಾಗಬಹುದು. ಎಲ್ಲಕ್ಕಿಂತಲೂ ಆಳವಾದ ಅರ್ಥವನ್ನು ಕಂಡುಹಿಡಿಯಲು ನೀವು ಪ್ರೀತಿಸುತ್ತೀರಿ. ಆದರೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಸಮಯಗಳು ಆತಂಕಕ್ಕೆ ಕಾರಣವಾಗಬಹುದು. ಆದ್ದರಿಂದ ನೀವು ಶಾಂತ ಮನಸ್ಸಿನಿಂದ ನಿಮ್ಮ ಸಮಸ್ಯೆಯನ್ನು ಬಗೆಹರಿಸಬೇಕು.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ನೈಸರ್ಗಿಕವಾಗಿ ನೀವು ಶಾಂತಿಯುತವಾದ ಮನಸ್ಸನ್ನು ಹೊಂದಿರುತ್ತೀರಿ. ಇತರರು ನಿಮ್ಮ ಮನಸ್ಸಿಗೆ ನೋವುಂಟು ಮಾಡಿದರೆ ಅಥವಾ ನಿಮ್ಮ ಮನಸ್ಸಿಗೆ ಅಹಿತಕರವಾಗಿ ವರ್ತಿಸಿದರೆ ನೀವು ಬಹು ಬೇಗ ಪ್ರತಿಕ್ರಿಯೆಯನ್ನು ತೋರುವಿರಿ. ನಿಮ್ಮ ಆಕ್ರಮಣಕಾರಿ ವರ್ತನೆಯಿಂದ ನೀವು ಸ್ನೇಹವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ನಿಮ್ಮ ಅಸೂಯೆಯ ಮನೋಭಾವ ರೊಮ್ಯಾಂಟಿಕ್ ಸಂಬಂಧವನ್ನು ಒತ್ತಡಕ್ಕೆ ತಳ್ಳಬಹುದು. ಟ್ರಸ್ಟ್ ಸಮಸ್ಯೆಗಳ ಕಾರಣದಿಂದ ನೀವು ಹೆಚ್ಚಾಗಿ ನಿಮ್ಮನ್ನು ಕಾಪಾಡಿಕೊಳ್ಳುತ್ತೀರಿ. ನಿಮ್ಮ ತಪ್ಪನ್ನು ನೀವು ಪರಿಗಣಿಸುವುದಿಲ್ಲ. ಅದು ನಿಮಗೆ ಕೆಲವೊಮ್ಮೆ ಅಹಿತಕರವಾದ ಸನ್ನಿವೇಶವನ್ನು ತಂದೊಡ್ಡಬಹುದು.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ನೀವು ಸುಲಭವಾಗಿ ಬೇಸರಕ್ಕೆ ಒಳಗಾಗುವಿರಿ. ಹಾಗಾಗಿ ನಿಮಗೆ ವಿಷಯವನ್ನು ಪೂರ್ಣಗೊಳಿಸಲು ಕಷ್ಟವಾಗುತ್ತದೆ. ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಲು ನಿಮಗೆ ಕಷ್ಟವಾಗುವುದು. ಇನ್ನೊಂದೆಡೆ ಕೆಲವು ವಿಚಾರಕ್ಕೆ ಅಧಿಕ ತಾಳ್ಮೆಯನ್ನು ಹೊಂದುವುದರಿಂದಲೂ ತೊಂದರೆ ಉಂಟಾಗುವುದು.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ನಿಮಗೆ ಹಣ ಮತ್ತು ಶ್ರೀಮಂತಿಕೆಯ ಬಗ್ಗೆ ಅಧಿಕ ಗೀಳನ್ನು ಹೊಂದಿರುವಿರಿ. ಇದು ನಿಮ್ಮನ್ನು ಹೆಚ್ಚೆಚ್ಚು ಕೆಲಸ ಮಾಡುವಂತೆ ಪ್ರೋತ್ಸಾಹಿಸುತ್ತದೆ. ಕೆಲಸ ಮತ್ತು ಒತ್ತಡದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ನಿಮಗೆ ಕಷ್ಟವಾಗುವುದು. ಇನ್ನೊಂದೆಡೆ ನೀವು ನಿಮ್ಮ ಸಾಧನೆಯ ಬಗ್ಗೆ ಸಹಾನುಭೂತಿ ತೋರುವಿರಿ. ಇದರಿಂದ ಜನರು ನಿಮ್ಮಿಂದ ದೂರಾಗಬಹುದು ಎನ್ನುವುದನ್ನು ನೆನಪಿಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ನಿಮಗೆ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲು ಕಷ್ಟವಾಗುವುದು. ನೀವು ಯಾವಾಗಲು ಸಾಹಸ ಮತ್ತು ಪ್ರಯಾಣಕ್ಕಾಗಿ ಹಂಬಲಿಸುವಿರಿ. ನೀವು ನಿಮ್ಮ ಸುತ್ತಲು ಏನಾಗುತ್ತಿದೆ ಎನ್ನುವುದರ ಬಗ್ಗೆ ಹೆಚ್ಚು ಗಮನ ನೀಡಬೇಕು. ಆಗ ನಿಮಗೆ ಎಲ್ಲರೊಂದಿಗೂ ಬೆರೆಯಲು ಅನುಕೂಲವಾಗುವುದು.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ನಿಮ್ಮ ಭಾವನೆಗಳನ್ನು ನೀವು ಅತ್ಯುತ್ತಮವಾಗಿ ವ್ಯಕ್ತಪಡಿಸುವಿರಿ. ನೀವು ಕೆಲವು ವಿಚಾರವನ್ನು ಎದುರಿಸುವ ಬದಲು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಿರಿ. ಕೆಲವೊಮ್ಮೆ ನೀವು ಸಂಗತಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಅಲ್ಲದೆ ಭಯದ ಸ್ವಭಾವವು ನಿಮಗೆ ಅಪಾಯವನ್ನು ತಂದೊಡ್ಡುವುದು.

For Quick Alerts
ALLOW NOTIFICATIONS
For Daily Alerts

    English summary

    Your Zodiac Sign Can Reveal Your Weakest Trait

    Can you imagine why you get hurt so easily or even trust people quickly? Well, according to astrology, these can be the traits that define our particular zodiac sign. Our personality traits can be linked to our zodiac signs and these traits help us in understanding the weaknesses of each zodiac sign.
    Story first published: Saturday, February 3, 2018, 18:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more