ಮುಖದ ಮೇಲಿನ ಮಚ್ಚೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ!

Posted By: Arshad Hussain
Subscribe to Boldsky

ಮುಖದ ಮೇಲಿರುವ ಮಚ್ಚೆಗಳು ತಮ್ಮದೇ ಆದ ಅರ್ಥ ಹಾಗೂ ಭವಿಷ್ಯವಾಣಿಯನ್ನು ಹೊಂದಿರುತ್ತವೆ. ವಿವಿಧ ಭಾಗದಲ್ಲಿರುವ ವಿವಿಧ ಮಚ್ಚೆಗಳ ಅರ್ಥವೂ ಬೇರೆಬೇರೆಯೇ ಆಗಿರುತ್ತದೆ. ಪ್ರತಿ ಮಚ್ಚೆಯೂ ತನ್ನದೇ ಆದ ನಿಗೂಢಾರ್ಥವನ್ನು ಹೊಂದಿರುತ್ತದೆ.

ಇಂದು ನಾವು ಮುಖದ ಮೇಲಿರುವ ಮಚ್ಚೆಗಳ ನಿಗೂಢಾರ್ಥವನ್ನು ಅರ್ಥಮಾಡಿಕೊಳ್ಳಲೆಂದು ಸುಮಾರು ಇಪ್ಪತ್ತೈದು ವಿವಿಧ ಸ್ಥಳಗಳ ಮಚ್ಚೆಗಳನ್ನು ಆಯ್ದುಕೊಂಡಿದ್ದೇವೆ. ಬನ್ನಿ, ನಿಮ್ಮ ಮುಖದ ಮೇಲಿರುವ ಮಚ್ಚೆ ಏನು ಹೇಳುತ್ತಿದೆ ಎಂಬುದನ್ನು ಪರಿಶೀಲಿಸಿ:

ಒಂದು ವೇಳೆ ನಿಮ್ಮ ಮುಖದಲ್ಲಿ 1ರಿಂದ - 3ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 1ರಿಂದ - 3ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಓರ್ವ ವ್ಯಕ್ತಿಯಾಗಿ ನೀವು ಅನ್ಯಾಯದ ವಿರುದ್ದ ಬಂಡಾಯವೇಳುವ ವ್ಯಕ್ತಿತ್ವ ಹಾಗೂ ಸ್ವತಂತ್ರ ಸ್ವಭಾವವನ್ನು ಹೊಂದಿದ್ದೀರಿ. ನೀವು ಕ್ರಿಯಾತ್ಮಕರಾಗಿದ್ದು ನಿಮ್ಮನ್ನು ಯಾವುದೇ ಬಂಧನದಲ್ಲಿ ಬಂಧಿಸದೇ ಇದ್ದಾಗ ನಿಮ್ಮ ಕ್ರಿಯಾತ್ಮಕತೆ ಗರಿಷ್ಟವಾಗಿರುತ್ತದೆ. ನೀವು ಸ್ವತಂತ್ರರಾಗಿ ಕಾರ್ಯನಿರ್ವಹಿಸಲು ಬಯಸುವ ವ್ಯಕ್ತಿಯಾಗಿದ್ದೀರಿ ಹಾಗೂ ನಿಮ್ಮ ಅದೃಷ್ಟದ ಪ್ರಕಾರ ನೀವೇ ನಿಮ್ಮ ಯಜಮಾನನಾಗುವ ಎಲ್ಲಾ ಸಾಧ್ಯತೆಗಳಿವೆ.

ಒಂದು ವೇಳೆ ನಿಮ್ಮ ಮುಖದಲ್ಲಿ 4ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 4ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಓರ್ವ ವ್ಯಕ್ತಿಯಾಗಿ ನೀವು ಇತರರನ್ನು ಪ್ರೇರೇಪಿಸುವ ಗುಣ ಹೊಂದಿದ್ದೀರಿ ಮತ್ತು ಆಕರ್ಷಕ ವ್ಯಕ್ತಿತ್ವ ಪಡೆದಿದ್ದೀರಿ.ಇನ್ನೊಂದು ಕಡೆಯಿಂದ, ನಿಮ್ಮ ಭಾವನೆಯನ್ನು ಎದುರಿನವರು ಅರ್ಥಮಾಡಿಕೊಳ್ಳದೇ ಇದ್ದರೆ ಇದನ್ನು ಸರಿ ಎಂದು ಸಾಧಿಸಲು ವಾದಿಸಲು ಹಿಂದೇಟು ಹಾಕುವುದಿಲ್ಲ. ಆದರೆ ನೀವು ಇದಕ್ಕಾಗಿ ಸೇಡಿನ ಮನೋಭಾವವನ್ನು ನೀವು ಉಳಿಸಿಕೊಳ್ಳುವುದಿಲ್ಲ. ಇದರ ಹೊರತಾಗಿ, ಈ ಮಚ್ಚೆ ನಿಮ್ಮಲ್ಲಿ ಸುಪ್ತವಾಗಿರುವ ಕೋಪ ಎಂದಾದರೊಮ್ಮೆ ಸ್ಪೋಟಗೊಳ್ಳುವುದನ್ನೂ ಪ್ರಕಟಿಸುತ್ತದೆ. ಹಾಗಾಗಿ ನೀವು ನಿಮ್ಮ ಏಳ್ಗೆಗಾಗಿ ಈ ಭಾವನೆಯನ್ನು ತೊರೆಯುವುದು ಅವಶ್ಯ.

ಒಂದು ವೇಳೆ ನಿಮ್ಮ ಮುಖದಲ್ಲಿ 5ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 5ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ಈ ಸ್ಥಾನದಲ್ಲಿ ನೀವು ಮಚ್ಚೆಯನ್ನು ಹೊಂದಿದ್ದರೆ ನಿಮ್ಮ ಜೀವನದಲ್ಲಿ ಧನಲಾಭವಿದೆ! ಆದರೆ ಇದನ್ನು ಪಡೆಯಲು ಇತರರಿಗಿಂತ ಹೆಚ್ಚೇ ಕಷ್ಟಪಡಬೇಕಾಗುತ್ತದೆ. ಇನ್ನೊಂದು ಕಡೆಯಿಂದ ನೀವು ನಿಮ್ಮ ಅರ್ಥಿಕ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಕೆಲವು ದುರುಳರು ನಿಮ್ಮ ದುರ್ಬಲ ಮನೋಭಾವವನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ನಿಮಗೆ ಮೋಸ ಮಾಡಬಹುದು.

ಒಂದು ವೇಳೆ ನಿಮ್ಮ ಮುಖದಲ್ಲಿ 6ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 6ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದಲ್ಲಿ ಮಚ್ಚೆಯುಳ್ಳ ವ್ಯಕ್ತಿಗಳು ಬುದ್ದಿವಂತರೂ, ಕ್ರಿಯಾತ್ಮಕರೂ ಹಾಗೂ ಕಲಾತ್ಮಕ ಕೌಶಲ್ಯವುಳ್ಳವರೂ ಆಗಿರುತ್ತಾರೆ. ಇವರ ಕಲೆ ಮತ್ತು ಕೌಶಲದಿಂದ ಹಣ, ಪ್ರಸಿದ್ದಿ ಮತ್ತು ಯಶಸ್ಸು ದೊರಕುತ್ತದೆ. ಇನ್ನೊಂದು ಕಡೆಯಲ್ಲಿ ಈ ಯಶಸ್ಸು ಸುಖಾಸುಮ್ಮನೇ ಸಿಗುವುದಿಲ್ಲ, ಬದಲಿಗೆ ಇದು ದೊರಕುವವರೆಗೆ ಧೈರ್ಯದಿಂದ ಮುನ್ನುಗ್ಗಬೇಕಾಗುತ್ತದೆ.

ಒಂದು ವೇಳೆ ನಿಮ್ಮ ಮುಖದಲ್ಲಿ 7ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 7ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ದುರಾದೃಷ್ಟವನ್ನು ತರಬಹುದು. ಮನೆಯವರೊಂದಿಗೆ ನಡೆಸುವ ವಾಗ್ವಾದ ದುಃಖ ಮತ್ತು ಅಸಂತೋಷಗಳನ್ನು ತರಬಹುದು. ಈ ಮಚ್ಚೆ ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿಯೂ ಪ್ರಭಾವ ಬೀರಬಹುದು.

ಒಂದು ವೇಳೆ ನಿಮ್ಮ ಮುಖದಲ್ಲಿ 8ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 8ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಏಳನೆಯ ಸ್ಥಾನದಂತೆಯೇ ಈ ಸ್ಥಾನವೂ ಅಷ್ಟೊಂದು ಅದೃಷ್ಟಶಾಲಿಯಲ್ಲ. ಇಲ್ಲಿನ ಮಚ್ಚೆ ನಿಮ್ಮನ್ನು ಸತತವಾಗಿ ಆರ್ಥಿಕ ಖರ್ಚುಗಳಿಗೆ ದಾರಿ ಮಾಡಿಕೊಡುತ್ತದೆ. ಇನ್ನೊಂದು ಕಡೆಯಲ್ಲಿ, ಈ ವ್ಯಕ್ತಿಗಳು ಪುರುಷರೊಂದಿಗೂ ಮಹಿಳೆಯರೊಂದಿಗೂ ಸೋಗಲಾಟದ ಮಾತುಗಳ ಮೂಲಕ ಸಮಯ ಕಳೆಯುವವರಾಗಿರುತ್ತಾರೆ.

ಒಂದು ವೇಳೆ ನಿಮ್ಮ ಮುಖದಲ್ಲಿ 9ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 9ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ಲೈಂಗಿಕ ಜೀವನದಲ್ಲಿ ನಿಜವಾಗಿಯೂ ದುರಾದೃಷ್ಟಕರವಾಗಿದೆ. ಆದ್ದರಿಂದ ಈ ಸ್ಥಾನದ ಮಚ್ಚೆಯನ್ನು ಆದಷ್ಟೂ ಬೇಗನೇ ತೆಗೆಸಿಬಿಡಬೇಕು. ಏಕೆಂದರೆ ಈ ಮಚ್ಚೆಯಿಂದ ದುರಾದೃಷ್ಟವಲ್ಲದೇ ಬೇರೇನೂ ಸಿಗಲಾರದು ಹಾಗೂ ಸಮಯ ಕಳೆದಂತೆ ಸಮಸ್ಯೆಗಳೂ ಹೆಚ್ಚುತ್ತಾ ಹೋಗುತ್ತವೆ.

ಒಂದು ವೇಳೆ ನಿಮ್ಮ ಮುಖದಲ್ಲಿ 10ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 10ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ಹೊಂದಿರುವ ವ್ಯಕ್ತಿಗಳು ವಂಶಪಾರಂಪರ್ಯವಾಗಿ ಅದೃಷ್ಟಶಾಲಿಗಳಾಗಿರುತ್ತಾರೆ. ಇವರಿಗೆ ಸದಾ ಕುಟುಂಬದ ಸದಸ್ಯರ ಬೆಂಬಲ ಇರುತ್ತದೆ ಹಾಗೂ ಮನೆತುಂಬಾ ಮಕ್ಕಳು, ಮರಿಮಕ್ಕಳು ಇದ್ದು ಸುಖಸಂಸಾರ ನಡೆಸುತ್ತಾರೆ.

ಒಂದು ವೇಳೆ ನಿಮ್ಮ ಮುಖದಲ್ಲಿ 11ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 11ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ನಿಮಗೆ ಅನಾರೋಗ್ಯ ಕಾಡಲಿರುವ ಸೂಚನೆಯಾಗಿದೆ. ಆದ್ದರಿಂದ ಆದಷ್ಟು ಬೇಗನೇ ಈ ಮಚ್ಚೆಯನ್ನು ತೆಗೆಸಿಬಿಡುವ ಮೂಲಕ ಅನಾರೋಗ್ಯ ಮತ್ತು ದುರಾದೃಷ್ಟದಿಂದ ರಕ್ಷಣೆ ಪಡೆಯಬಹುದು.

ಒಂದು ವೇಳೆ ನಿಮ್ಮ ಮುಖದಲ್ಲಿ 12ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 12ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ನಿಮ್ಮ ಜೀವನ ಸಮತೋಲನದಲ್ಲಿದೆ ಹಾಗೂ ಯಶಸ್ವಿಯಾಗಿರುತ್ತದೆ ಎಂದು ತಿಳಿಸುತ್ತದೆ. ಈ ಸ್ಥಾನದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಯಶಸ್ವೀ ಹಾಗೂ ಪ್ರಸಿದ್ಧರೂ ಆಗಿರುತ್ತಾರೆ.

ಒಂದು ವೇಳೆ ನಿಮ್ಮ ಮುಖದಲ್ಲಿ 13ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 13ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ಇರುವ ವ್ಯಕ್ತಿಗಳಿಗೆ ಒಂದು ವೇಳೆ ಮಕ್ಕಳಿದ್ದರೆ ದುರಾದೃಷ್ಟಕರವಾಗಿದೆ. ಈ ಮಚ್ಚೆ ಇರುವವರೆಗೂ ನಿಮ್ಮ ತಾಳ್ಮೆಯ ಮಟ್ಟ ಇಲ್ಲಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಈ ವ್ಯಕ್ತಿಗಳು ಅಪಾರವಾದ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ನಿಮ್ಮ ಮುಖದಲ್ಲಿ 14ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 14ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ನಿಮ್ಮ ಆಹಾರದ ಬಗ್ಗೆ ನಿಮಗಿರುವ ದೌರ್ಬಲ್ಯವನ್ನು ಬಿಂಬಿಸುತ್ತದೆ ಹಾಗೂ ಜೀವನದಲ್ಲಿ ತೊಂದರೆಗೂ ಕಾರಣವಾಗಬಹುದು. ಕೆಲವು ಆಹಾರಗಳ ವಿರುದ್ದ ನಿಮಗೆ ಅಲರ್ಜಿಯೂ ಎದುರಾಗಬಹುದು.

ನೋಡಿ, ಇಂತಹ ಮನೆಮದ್ದು ಪ್ರಯತ್ನಿಸಿದರೆ ಮಚ್ಚೆ ಶೀಘ್ರ ಮಾಯವಾಗುವುದು

ಒಂದು ವೇಳೆ ನಿಮ್ಮ ಮುಖದಲ್ಲಿ 15ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 15ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ನೀವು ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲಿದ್ದೀರಿ ಹಾಗೂ ಹೊಸ ಸ್ಥಳಗಳನ್ನು ನೋಡಲಿದ್ದೀರಿ ಎಂಬುದನ್ನು ತಿಳಿಸುತ್ತದೆ. ನೀವು ಒಂಟಿಯಾಗಿರಲು ಬಯಸುವುದಿಲ್ಲ ಹಾಗೂ ಪ್ರಯಾಣ ನಿಮ್ಮ ನೆಚ್ಚಿನ ಚಟುವಟಿಕೆಯಾಗಿದೆ.

ಒಂದು ವೇಳೆ ನಿಮ್ಮ ಮುಖದಲ್ಲಿ 16ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 16ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ನೀವು ಪ್ರೇಮವನ್ನು ಹೆಚ್ಚು ಬಯಸುವ ವ್ಯಕ್ತಿ ಎಂದು ತಿಳಿಸುತ್ತದೆ. ಕೆಲವೊಮ್ಮೆ ನಿಮ್ಮ ಪ್ರೇಮವನ್ನು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೀರಿ. ನಿಮಗೆ ಸ್ಥೂಲಕಾಯದ ತೊಂದರೆ ಎದುರಾಗುತ್ತದೆ ಹಾಗೂ ಇದೇ ನಿಮ್ಮ ಮಾನಸಿಕ ಖಿನ್ನತೆಗೆ ಕಾರಣವಾಗಬಹುದು.

ಒಂದು ವೇಳೆ ನಿಮ್ಮ ಮುಖದಲ್ಲಿ 17ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 17ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ನೀವು ಸಾಮಾಜಿಕವಾಗಿ ಕ್ರಿಯಾತ್ಮಕರಾಗಿದ್ದು ನಾಲ್ವರು ಮೆಚ್ಚುವಂತೆ ಮಾತನಾಡಬಲ್ಲವರಾಗಿದ್ದೀರಿ. ಇನ್ನೊಂದು ಕಡೆಯಿಂದ ನಾಲ್ವರು ಜನರ ನಡುವೆ ದೊಡ್ಡಮನುಷ್ಯನಾಗಲು ನಡೆಸುವ ಯತ್ನಗಳೇ ನಿಮ್ಮನ್ನು ಕೆಳನೂಕಲು ಕಾರಣವಾಗಬಹುದು. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಿ

ಒಂದು ವೇಳೆ ನಿಮ್ಮ ಮುಖದಲ್ಲಿ 18ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 18ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ನೀವು ವಿದೇಶಗಳಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯನ್ನು ಪ್ರಕಟಿಸುತ್ತದೆ. ಆದರೆ ಇದಕ್ಕಾಗಿ ನಿಮ್ಮ ಆರೋಗ್ಯ ಹಾಗೂ ಹಣಕಾಸಿನ ಬಗ್ಗೆ ಎಚ್ಚರ ವಹಿಸಬೇಕು. ಈ ಪ್ರಯಾಣದಿಂದ ನೀವು ಇವೆರಡನ್ನೂ ಕಳೆದುಕೊಳ್ಳಬಹುದು.

ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?

ಒಂದು ವೇಳೆ ನಿಮ್ಮ ಮುಖದಲ್ಲಿ 19ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 19ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದಲ್ಲಿ ಮಚ್ಚೆ ಇರುವವರಿಗೆ ಹೆಚ್ಚಿನ ಸ್ನೇಹಿತರು ಹಾಗೂ ಹಣದ ಅದೃಷ್ಟವಿರುತ್ತದೆ. ಇದೊಂದು ಅದೃಷ್ಟಕಾರಕ ಚಿಹ್ನೆಯಾಗಿದೆ. ಇನ್ನೊಂದು ಕಡೆಯಿಂದ ನೀವು ಭಿನ್ನಲಿಂಗಿಗಳ ಎದುರು ತೀರಾ ದುರ್ಬಲರಾಗುವುದನ್ನೂ ಈ ಮಚ್ಚೆ ತಿಳಿಸುತ್ತದೆ.

ಒಂದು ವೇಳೆ ನಿಮ್ಮ ಮುಖದಲ್ಲಿ 20ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 20ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ಅದೃಷ್ಟವನ್ನೂ ದುರಾದೃಷ್ಟವನ್ನೂ ಸಮನಾಗಿ ತರಬಹುದು. ನೀವು ಒಂದೇ ಅತಿ ಪ್ರಸಿದ್ದರಾಗುತ್ತೀರಿ ಅಥವಾ ಕುಪ್ರಸಿದ್ದರಾಗುತ್ತೀರಿ. ನಿಮ್ಮ ಜಾಣ್ಮೆ ಒಳ್ಳೆಯ ಅಥವಾ ಕೆಟ್ಟ ಕೆಲಸಕ್ಕೂ ಬಳಕೆಯಾಗಬಹುದು. ನೀವು ಕ್ರಿಯಾತ್ಮಕರೂ ಅತಿ ಬುದ್ದಿವಂತರೂ ಆಗಿದ್ದೀರಿ.

ಒಂದು ವೇಳೆ ನಿಮ್ಮ ಮುಖದಲ್ಲಿ 21ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 21ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದಲ್ಲಿ ಮಚ್ಚೆ ಇರುವ ವ್ಯಕ್ತಿಗಳಿಗೆ ಉತ್ತಮ ಆರೋಗ್ಯ ಹಾಗೂ ಅದೃಷ್ಟ ಸದಾ ಇವರ ಕಡೆಗೇ ಇರುತ್ತದೆ. ಅಲ್ಲದೇ ಈ ಮಚ್ಚೆ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನೂ ತರುತ್ತದೆ.

ಒಂದು ವೇಳೆ ನಿಮ್ಮ ಮುಖದಲ್ಲಿ 22ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 22ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಹುಬ್ಬುಗಳ ತುದಿಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಅಧಿಕಾರ ಮತ್ತು ಶಕ್ತಿಯನ್ನು ಪಡೆದಿರುತ್ತಾರೆ. ಈ ವ್ಯಕ್ತಿಗಳು ವ್ಯಾಪಾರರಂಗದಲ್ಲಿ ಹೆಚ್ಚಿನ ಸಾಧನೆ ಪಡೆಯುತ್ತಾರೆ. ಇನ್ನೊಂದು ಕಡೆಯಿಂದ ಈ ವ್ಯಕ್ತಿಗಳ ಜೀವನ ಸದಾ ಸುಖಮಯವಾಗಿರುತ್ತದೆ ಹಾಗೂ ಎಲ್ಲಾ ಸಂಗತಿಗಳು ಸುಲಲಿತವಾಗಿ ಮುಂದುವರೆಯುತ್ತವೆ.

ಒಂದು ವೇಳೆ ನಿಮ್ಮ ಮುಖದಲ್ಲಿ 23ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 23ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದ ಮಚ್ಚೆ ಇರುವ ವ್ಯಕ್ತಿಗಳು ಯಾವುದೇ ಸಂದರ್ಭದಲ್ಲಿ ಗಟ್ಟಿಯಾಗಿ ನೆಲೆಯೂರುವ ಸಹಜ ಪ್ರವೃತ್ತಿಯನ್ನು ಹೊಂದಿರುತ್ತಾರೆ ಹಾಗೂ ಅರ್ಥಪೂರ್ಣ ಮತ್ತು ದೀರ್ಘಜೀವನ ಪಡೆಯುತ್ತಾರೆ. ಇನ್ನೊಂದು ಕಡೆಯಲ್ಲಿ ಈ ವ್ಯಕ್ತಿಗಳು ತೀರಾ ವೃದ್ದಾಪ್ಯ ಆವರಿಸುವವರೆಗೂ ಚಟುವಟಿಕೆಯಿಂದಿರುತ್ತಾರೆ.

ಒಂದು ವೇಳೆ ನಿಮ್ಮ ಮುಖದಲ್ಲಿ 24ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 24ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಜೀವನದಲ್ಲಿ ಪ್ರಸಿದ್ಧಿ ಮತ್ತು ಹೆಚ್ಚಿನ ಧನಲಾಭವನ್ನು ಪಡೆಯುತ್ತಾರೆ. ಅಲ್ಲದೇ ಈ ವ್ಯಕ್ತಿಗಳಿಗೆ ಜೀವನ ಮುಂದುವರೆಯುತ್ತಿದ್ದಂತೆಯೇ ಹೆಚ್ಚು ಹೆಚ್ಚು ಕಷ್ಟಗಳು ಎದುರಾಗುತ್ತಾ ಹೋಗುತ್ತವೆ.

ಒಂದು ವೇಳೆ ನಿಮ್ಮ ಮುಖದಲ್ಲಿ 25ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಒಂದು ವೇಳೆ ನಿಮ್ಮ ಮುಖದಲ್ಲಿ 25ರ ಸ್ಥಾನದಲ್ಲಿ ಮಚ್ಚೆ ಇದ್ದರೆ

ಈ ಸ್ಥಾನದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಅದೃಷ್ಟ ಮತ್ತು ಸಮೃದ್ಧಿಯನ್ನು ಸದಾ ಪಡೆಯುತ್ತಿರುತ್ತಾರೆ. ಇದೇ ಹೊತ್ತಿಗೆ ಈ ವ್ಯಕ್ತಿಗಳು ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದೆ. ನಿಮ್ಮ ಜೀವನ ಆದಷ್ಟೂ ಸಾಂಪ್ರಾದಾಯಿಕವಾಗಿದ್ದರೆ ಜೀವನದಲ್ಲಿ ಅತ್ಯುತ್ತಮವಾದುದನ್ನು ನೀವು ಸಾಧಿಸಬಹುದು.

ದೇಹದ ಈ 8 ಸ್ಥಳಗಳಲ್ಲಿ ಮಚ್ಚೆ ಇದ್ದವರಿಗೆ, ಸ್ವಲ್ಪ ಹಣದ ಸಮಸ್ಯೆ ಕಾಡುತ್ತೆ!

English summary

Your Face Moles Reveal About Your Personality

Moles on different parts of your face have their own meaning and predictions. Different moles have different meanings. The moles have a hidden meaning. Here we are enlightening you about the moles on your face and their deep meaning. We have picked up 25 different spots on your face that have their own meaning. Check out on what moles in different positions of your face reveal.