For Quick Alerts
ALLOW NOTIFICATIONS  
For Daily Alerts

  ಮದುವೆಗೆ ಈ ಐದು ರಾಶಿಯ ಮಹಿಳೆಯರು ಸಿಕ್ಕರೆ ಅವರೇ ಪುಣ್ಯವಂತರು

  By Hemanth
  |

  ವಿಚ್ಛೇದನಗಳು ಹೆಚ್ಚಾಗುತ್ತಾ ಇದ್ದರೆ ಅದಕ್ಕೆ ಮುಖ್ಯ ಕಾರಣ ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲದೆ ಇರುವುದು. ಹೊಂದಾಣಿಕೆ ಎನ್ನುವುದು ವೈವಾಹಿಕ ಜೀವನದಲ್ಲಿ ಪ್ರಮುಖ ಅಂಶ. ಹೊಂದಾಣಿಕೆ ಇಲ್ಲದೆ ಇದ್ದರೆ ವೈವಾಹಿಕ ಜೀವನವು ಸುಗಮವಾಗಿ ಸಾಗಲು ಸಾಧ್ಯವಿಲ್ಲ. ಹಿಂದೂ ಸಂಪ್ರದಾಯದಲ್ಲಿ ಜಾತಕ ನೋಡಿ ಮದುವೆಯನ್ನು ನಿರ್ಧರಿಸುತ್ತಾರೆ.

  ಆದರೆ ಇದು ಮೂಢನಂಬಿಕೆಯಂದು ಇಂದಿನ ಜನ ಭಾವಿಸಿದರೂ ಪರಸ್ಪರರ ಹೊಂದಾಣಿಕೆಯಲ್ಲಿ ರಾಶಿಯ ಪರಿಣಾಮ ಮಹತ್ವದ್ದಾಗಿದೆ. ತನ್ನ ಸಂಗಾತಿಗೆ ಸರಿಯಾಗಿ ಹೊಂದಿಕೊಂಡು ಹೋಗುವಂತಹ ಐದು ರಾಶಿಗಳ ಮಹಿಳೆಯರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಮದುವೆಯಾಗದವರು ಓದಿದರೆ ಮುಂದೆ ನಿಮಗೆ ಹುಡುಗಿ ಹುಡುಕುವಾಗ ಹೆಚ್ಚು ಕಷ್ಟವಾಗದು.... 

  ಕರ್ಕಾಟಕ: ಜೂನ್ 21-ಜುಲೈ22

  ಕರ್ಕಾಟಕ: ಜೂನ್ 21-ಜುಲೈ22

  ಈ ರಾಶಿಯ ಮಹಿಳೆಯರು ಒಳ್ಳೆಯ ಪತ್ನಿಯರಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಇವರು ಸಂಪೂರ್ಣ ಭಾವನೆ ಹಾಗೂ ಬದ್ಧತೆ ಹೊಂದಿರುವರು. ಇವರ ಸ್ವಭಾವ ನಿಷ್ಪ್ರಯೋಜಕವಲ್ಲ. ಇವರು ಸ್ಥಿರ ಮತ್ತು ದೀರ್ಘಕಾಲದ ಸಂಬಂಧ ಬಯಸುವರು. ಇವರು ತುಂಬಾ ಪ್ರೀತಿಸುವ ಸ್ವಭಾವದವರು ಮತ್ತು ತಮ್ಮ ಸಂಗಾತಿಯ ವಿಚಾರಕ್ಕೆ ಬಂದಾಗ ತುಂಬಾ ಸ್ವಾರ್ಥಿಯಾಗಿರುವರು. ಇವರ ಪ್ರಾಮಾಣಿಕ ಮತ್ತು ಪರಿಶುದ್ಧ ಗುಣವು ಇವರ ದೊಡ್ಡ ಸಾಧನವಾಗಿದೆ. ತಮ್ಮ ಪತಿಯು ಯಾವಾಗಲೂ ಸಂತೋಷ ಹಾಗೂ ತೃಪ್ತಿಯಿಂದ ಇರಬೇಕೆಂದು ಬಯಸುವರು.

  ಮೀನ: ಫೆ.19-ಮಾರ್ಚ್ 20

  ಮೀನ: ಫೆ.19-ಮಾರ್ಚ್ 20

  ಈ ರಾಶಿಯ ಮಹಿಳೆಯರು ತುಂಬಾ ನಿಷ್ಠ ಹಾಗೂ ನಂಬಿಕೆಗೆ ಅರ್ಹರು. ಹೆಚ್ಚಿನ ಪುರುಷರು ತಮ್ಮ ಸಂಗಾತಿಯಲ್ಲಿ ಇದನ್ನೇ ಬಯಸುವರು. ಜನರಿಗೆ ನಿರಾಶೆಯಾಗದಿರುವಂತೆ ಕೆಲಸ ಮಾಡುವರು. ಇವರಲ್ಲಿ ಕ್ಷಮೆನೀಡುವ ಗುಣವಿದೆ. ಇದರಿಂದ ಜನರಿಗೆ ಇವರು ಎರಡನೇ ಅವಕಾಶ ನೀಡುವರು. ಇವರು ತಮ್ಮ ಸಂಗಾತಿಯನ್ನು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುವರು. ಆರಂಭದಲ್ಲಿ ಸ್ವಲ್ಪ ಹಿಂಜರಿದರೂ ಬಳಿಕ ಜೀವನಪೂರ್ತಿ ತಮ್ಮ ಸಂಗಾತಿಗೆ ಪ್ರೀತಿ ನೀಡುವರು.

  ತುಲಾ: ಸಪ್ಟೆಂಬರ್ 24-ಅ.23

  ತುಲಾ: ಸಪ್ಟೆಂಬರ್ 24-ಅ.23

  ಈ ರಾಶಿಯ ಮಹಿಳೆಯರು ತುಂಬಾ ಆತ್ಮೀಯ ಹಾಗೂ ಭಾವನಾತ್ಮಕವಾಗಿರುವರು. ಇವರು ತುಂಬಾ ಖುಷಿಯಾಗಿರುವ ವ್ಯಕ್ತಿಗಳಾಗಿರುವರು ಮತ್ತು ಇವರ ಸುತ್ತಲು ಧನಾತ್ಮಕವಾಗಿರುವ ಜನರು ತುಂಬಿರುವರು. ಇವರಿಗೆ ಜೀವನದಲ್ಲಿ ಶಾಂತಿ ಬೇಕಾಗಿದೆ. ಇದರಿಂದಾಗಿ ಇವರು ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಬಗೆಹರಿಸುವರು. ಈ ರಾಶಿಯ ಮಹಿಳೆಯರು ದೊಡ್ಡ ಚಿಂತಕರು ಮತ್ತು ತಮ್ಮ ಸಂಗಾತಿಗೆ ಜೀವನದಲ್ಲಿ ಪ್ರೇರಣೆ ನೀಡುವರು. ಇವರು ಪ್ರೀತಿ ನೀಡುವವರು ಮತ್ತು ಅವರ ಶಕ್ತಿಯು ರೋಮ್ಯಾನ್ಸ್‌ನಲ್ಲಿ ಅಡಗಿದೆ. ಇವರು ಸಂಗಾತಿ ಜತೆಗೆ ರೋಮ್ಯಾನ್ಸ್ ಮಾಡಲು ಬಯಸುವರು ಮತ್ತು ಸಂಗಾತಿಯ ಜೀವನ ಸಂತೋಷದಿಂದ ಇಡಲು ಬಯಸುವರು.

  ವೃಷಭ: ಎಪ್ರಿಲ್ 20-ಮೇ 20

  ವೃಷಭ: ಎಪ್ರಿಲ್ 20-ಮೇ 20

  ಈ ರಾಶಿಯ ಮಹಿಳೆಯರು ತುಂಬಾ ಬದ್ಧತೆ ಹೊಂದಿರುವವರು ಮತ್ತು ತಮ್ಮ ಸಂಗಾತಿಗೆ ಎಲ್ಲಕ್ಕಿಂತಲೂ ಹೆಚ್ಚಿನ ಮಹತ್ವ ನೀಡುವರು. ಇವರು ತಮ್ಮ ಸಂಗಾತಿಗೆ ಮೀಸಲಾಗಿರುವ ಮಹಿಳೆಯಾಗಿರುವ ಕಾರಣದಿಂದ ತಮ್ಮನ್ನು ಬದಲಾಯಿಸಿಕೊಳ್ಳಲು ಏನು ಬೇಕಾದರೂ ಮಾಡುವರು. ಇವರು ತುಂಬಾ ಜಾಣ್ಮೆಯ ಮಹಿಳೆಯರು ಮತ್ತು ತಮ್ಮ ಸಂಗಾತಿ ಜತೆಗೆ ಉನ್ನತ ಮಟ್ಟದಲ್ಲಿ ಸಂಪರ್ಕದಲ್ಲಿರಲು ಬಯಸುವರು. ಇವರು ತುಂಬಾ ನಿಷ್ಠೆಯುಳ್ಳವರು. ಇಷ್ಟು ಮಾತ್ರವಲ್ಲದೆ ತಮ್ಮ ಕುಟುಂಬ ಹಾಗೂ ಹತ್ತಿರದ ವ್ಯಕ್ತಿಗಳನ್ನು ತುಂಬಾ ರಕ್ಷಣಾತ್ಮಕವಾಗಿ ನೋಡಿಕೊಳ್ಳುವರು.

  ಕುಂಭ: ಜನವರಿ 21-ಫೆಬ್ರವರಿ 18

  ಕುಂಭ: ಜನವರಿ 21-ಫೆಬ್ರವರಿ 18

  ಈ ರಾಶಿಯ ಮಹಿಳೆಯರು ತುಂಬಾ ಹಠಾತ್ ಪ್ರವೃತ್ತಿ ಹಾಗೂ ಬೇಸರಗೊಳ್ಳುವುದನ್ನು ಇಷ್ಟಪಡಲ್ಲ. ಇವರು ಸ್ವಹಿತಾಸಕ್ತಿಗೆ ಹೆಚ್ಚಿನ ಸಮಯ ಮೀಸಲಿಡುವರು. ಆದರೆ ಇದನ್ನು ಹೊರತುಪಡಿಸಿ ತುಂಬಾ ಆಹ್ಲಾದಕರ ಮತ್ತು ಕೊಡುವ ಸ್ವಭಾವದವರು. ಇದರಿಂದಾಗಿ ಅವರ ಜೀವನ ತುಂಬಾ ಸುಲಭವಾಗುವುದು. ಸಂಗಾತಿಯಾಗಿ ಈ ಮಹಿಳೆಯರು ತುಂಬಾ ಕ್ರಿಯಾತ್ಮಕ ಹಾಗೂ ಜಾಣ್ಮೆಯವರು. ಇವರು ರೂಪಕ್ಕಿಂತ ಹೆಚ್ಚು ಜಾಣ್ಮೆಗೆ ಮಹತ್ವ ನೀಡುವರು ಮತ್ತು ಮಾನಸಿಕವಾಗಿ ತಮಗೆ ಸವಾಲೊಡ್ಡುವ ಸಂಗಾತಿಯ ಬಯಸುವರು. ತುಂಬಾ ಬೇಸರ ಹಾಗೂ ನೀರಸ ಸಂಬಂಧದಲ್ಲಿ ಇರಲು ಇವರು ಬಯಸುವುದಿಲ್ಲ.

  English summary

  Women Of These Zodiac Signs Make The Best Partners

  Compatibility between two people is the primary ingredient that makes a marriage long-lasting, prosperous and happy! Understanding the compatibility of individuals, based on zodiac signs, makes life way better. Do you know that compatibility in a way can be found using astrology? We can know how two people will bond with each other in the future by knowing their signs.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more